Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
O Panneerselvam

ಉಪಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ ವಚನ ಸ್ವೀಕಾರ, ಶಶಿಕಲಾ ಉಚ್ಚಾಟನೆ ಸಾಧ್ಯತೆ

VK Sasikala jail perk row: Former DIG submits evidence to ACB showing Sasikala entering jail in civilian attire

ಕೈದಿ ಶಶಿಕಲಾ ಜೈಲಿನಿಂದ ಹೊರ ಹೋಗಿದ್ದ ಸಿಸಿಟಿವಿ ದೃಶ್ಯಾವಳಿ ಬಹಿರಂಗ!

Union Home Minister Rajnath Singh

ಡೋಕ್ಲಾಮ್ ವಿವಾದ: ಭಾರತ ಶಾಂತಿ ಬಯಸುತ್ತದೆ, ಯುದ್ಧವನ್ನಲ್ಲ- ರಾಜನಾಥ ಸಿಂಗ್

Malegaon blast case accused Lt Col Prasad Purohit

ಮಾಲೆಗಾಂವ್ ಸ್ಫೋಟ: ಲೆ.ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಗೆ ಷರತ್ತುಬದ್ಧ ಜಾಮೀನು

Axar Patel-Jasprit Bumrah

2019ರ ವಿಶ್ವಕಪ್ ಅನ್ನು ಟೀಂ ಇಂಡಿಯಾ ಖಂಡಿತವಾಗಿಯೂ ಗೆಲ್ಲುತ್ತದೆ: ಅಕ್ಷರ್ ಪಟೇಲ್

Beijing is back with a new anti-India video, wants to

ಚೀನಾದಿಂದ ಮತ್ತೊಂದು ವಿಡಿಯೋ: ವಿಶ್ವದ ಪುರಾತನ ನಾಗರಿಕತೆ, ಅದ್ಭುತ ಸಂಸ್ಕೃತಿ ಎಂದು ಹೊಗಳಿಕೆ

Shikhar Dhawan becomes first Indian batsman to hit 6 consecutive 50-plus scores against any team in ODIs

ಲಂಕಾ ವಿರುದ್ಧ ಮತ್ತೆ ಸಿಡಿದ ಶಿಖರ್ ಧವನ್, ವಿಶ್ವ ದಾಖಲೆ ನಿರ್ಮಾಣ!

Survey - Congress 120-132 seats in polls

ಸಿ-ಫೋರ್ ಸಮೀಕ್ಷೆ: 2019 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 120-132 ಸ್ಥಾನ

Uttar Pradesh Chief Minister Yogi Adityanath

ಪ್ರಜಾಪ್ರಭುತ್ವದಲ್ಲಿ 'ವಿಐಪಿ'ಯಂತಹ ಸಂಸ್ಕೃತಿಗೆ ಜಾಗವಿರುವುದಿಲ್ಲ: ಯೋಗಿ ಆದಿತ್ಯನಾಥ್

Rohit Sharma

ಲಂಕಾ ವಿರುದ್ಧ ರೋಹಿತ್ ಶರ್ಮಾ 'ಅದ್ಭುತ ರನ್ ಔಟ್': ಟ್ವೀಟರಿಗರ ಹಾಸ್ಯಾಸ್ಪದ ಟ್ವೀಟ್

Darshan-Aditi Arya

ಕುರುಕ್ಷೇತ್ರದಲ್ಲಿ 'ಉತ್ತರೆ'ಯಾಗಿ ಅದಿತಿ ಆರ್ಯ

I Want To Be A hero, Not A heroine, in this Industry: Rashmika mandanna

ಚಿತ್ರರಂಗದಲ್ಲಿ ನಾನು ಹೀರೋ ಆಗಲು ಇಷ್ಟಪಡುತ್ತೇನೆ, ಹಿರೋಯಿನ್ ಆಗಿ ಅಲ್ಲ: ರಶ್ಮಿಕಾ ಮಂದಣ್ಣ

File photo

ಕಾಂಗ್ರೆಸ್ ಸಂಸದೆ ರಂಜಿತ್ ರಂಜನ್ ಬೆಂಗಾವಲು ವಾಹನ ಡಿಕ್ಕಿ: ಮೂವರು ಸಾವು

ಮುಖಪುಟ >> ಕೃಷಿ-ಪರಿಸರ

ರೈತರ ಆತ್ಮಹತ್ಯೆ, ಬ್ಯಾಂಕ್ ನಲ್ಲಿ ಸುಸ್ತಿದಾರರಲಿಲ್ಲದ ಕರ್ನಾಟಕದ ಏಕೈಕ ಗ್ರಾಮ !

Representational image

ಸಾಂದರ್ಭಿಕ ಚಿತ್ರ

ಯಚೇನಹಳ್ಳಿ(ಮೈಸೂರು): ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ, ಇಲ್ಲವೇ ಬೆಳೆ ನಷ್ಟ, ಅಥವಾ ಸಾಲಬಾಧೆ, ಸಾಲಮನ್ನಾ ವಿಷಯದಲ್ಲಿ ರಾಜಕೀಯ ಮೇಲಾಟಗಳಿಗೆ ಸಿಲುಕಿ ದೇಶದ ಹಲವು ಭಾಗಗಳಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲದೇ ರೈತರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಮೈಸೂರಿನಿಂದ 30 ಕಿಮೀ ದೂರದಲ್ಲಿರುವ ಟಿ. ನರಸಿಪುರ ತಾಲೂಕಿನ ಯಚೇನಹಳ್ಳಿ ಗ್ರಾಮದಲ್ಲಿ  ಕಳೆದ 8 ವರ್ಷಗಳಲ್ಲಿ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ, ಅಥವಾ ಸಾಲಬಾದೆಯಿಂದ ಸಾವಿಗೆ ಶರಣಾಗಿಲ್ಲ, 

ಕೃಷಿಕ ಗ್ರಾಮವಾಗಿರುವ ಯಚೇನಹಳ್ಳಿಯಲ್ಲಿ ಕಳೆದ 3 ವರ್ಷದಿಂದ  ಯಾವುದೇ ಸಮಸ್ಯೆಯಿಲ್ಲದೇ 5 ಸಾವಿರ ಮಂದಿ ಬೇಸಾಯದಲ್ಲಿ ತೊಡಗಿದ್ದಾರೆ. 450 ಕುಟುಂಬದಲ್ಲಿ ಶೇ.90 ಕ್ಕೂ ಹೆಚ್ಚಿನ ರೈತರು ಬಹು-ಬೆಳೆಗಾರಿಕೆ ಪದ್ಧತಿ ಅನುಸರಿಸುತ್ತಿದ್ದಾರೆ. ಹೀಗಾಗಿ ಈ ರೈತರು ಸಮಸ್ಯೆಗಳಿಂದ ದೂರವೇ ಉಳಿದಿದ್ದಾರೆ.

ಗ್ರಾಮದಲ್ಲಿರುವ  1.500 ಹೇಕ್ಟೇರ್ ಜಮೀನಿನನಲ್ಲಿ ಶೇ.50 ರಷ್ಟು ನೀರಾವರಿಯಿಂದ ಕೂಡಿದೆ. ಶೇ. 40ರಷ್ಟು ಪಂಪ್ ಸೆಟ್, ಶೇ. 10 ರಷ್ಟು ಮಾತ್ರ ಒಣ ಭೂಮಿಯಾಗಿದೆ. ಈ ಗ್ರಾಮದ ರೈತರು ಭತ್ತ, ಕಬ್ಬು, ರಾಗಿ, ಜೋಳ, ಹಾಗೂ ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.

ಬಹುತೇಕ ರೈತರು ಕಡಿಮೆ ಅವಧಿಯತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಸರಿಯಾದ ಸಮಯದಲ್ಲಿ ಬಾಕಿ ಪಾವತಿಸದ ಕಾರಣ, ಈ ಗ್ರಾಮದಲ್ಲಿ ಬೆಳೆಯುವ ಕಬ್ಬನ್ನು ರೈತರು ಪಕ್ಕದಲ್ಲೇ ಇರುವ ದಾಸೇಗೌಡನ ಕೊಪ್ಪಲು ಮತ್ತು ಕೆಂಪೇಗೌಡನ ಕೊಪ್ಪಲದ ಬೆಲ್ಲದ ತಯಾರಿಕಾ ಘಟಕಕ್ಕೆ ಕಬ್ಬನ್ನು ಮಾರುತ್ತಾರೆ.

ಹಲವು ವರ್ಷಗಳಿಂದ ನಾವು ಯಾವುದೇ ಸಮಸ್ಯೆಗೆ ಸಿಲುಕಿಲ್ಲ, ನಾವು ಯಾವುದೇ ರೀತಿಯ ಬೆಳೆಸಾಲ ತೆಗೆದುಕೊಳ್ಳುವುದಿಲ್ಲ, ಕಠಿಣ ಶ್ರಮ ಮತ್ತು ಉತ್ತಮ ತಂತ್ರಜ್ಞಾನ ಅಳವಡಿಕೆಯಿಂದಾಗಿ ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ರೈತ ಯತಿರಾಜ್ ಎಂಬುವರ ಅಭಿಪ್ರಾಯವಾಗಿದೆ.

2009 ರಲ್ಲಿ ಯಾಚೇನಹಳ್ಳಿ ಪ್ರಾಥಮಿಕ ಕೃಷಿ-ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಆರಂಭವಾಯಿತು. ಈ ಬ್ಯಾಂಕ್ ನ ವಾರ್ಷಿಕ ವಹಿವಾಟು ಸುಮಾರು 13 ಕೋಟಿ ರು ಇದೆ. ಸುಮಾರು 4 ಕೋಟಿಗೂ ಅಧಿಕ ಕೃಷಿ ಸಾಲ ನೀಡಿದೆ. ಆದರೆ ಇದುವರೆಗೂ ಒಬ್ಬನೇ ಒಬ್ಬ ಸುಸ್ತಿದಾರ ಈ ಬ್ಯಾಂಕ್ ಗಿಲ್ಲ, 

ಮೈಸೂರಿನಲ್ಲಿ 250 ಪ್ರಾಥಮಿಕ ಕೃಷಿ ಕೋ-ಆಪರೇಟಿವ್  ಸೊಸೈಟಿ ಗಳಿವೆ. ಅದರಲ್ಲಿ 4 ರಿಂದ 5 ಬ್ಯಾಂಕ್ ಗಳು ಮಾತ್ರ ಎ ದರ್ಜೆ ಪಡೆದಿವೆ. ಅದರಲ್ಲಿ ಯಾಚೇನಹಳ್ಳಿ ಬ್ಯಾಂಕ್ ಕೂಡ ಒಂದಾಗಿದೆ.

ಬ್ಯಾಂಕ್ ಸಾಲ ನೀಡುತ್ತಿದೆ, ಪಂಚಾಯಿತಿ ಉತ್ತಮ ರೀತಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಹಾಯ ಹಾಗೂ ಬೆಂಬಲ ನೀಡುತ್ತಿದೆ . ಹೀಗಾಗಿ ಈ ಗ್ರಾಮದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂದು ರೈತರೊಬ್ಬರು ತಿಳಿಸಿದ್ದಾರೆ.  ಸಾವಯವ ಕೃಷಿ ಉತ್ಪನ್ನಗಳ ಮೇಲೆ ದೃಷ್ಟಿ ಹರಿಸಿರುವ ಈ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಆ ಪದ್ಧತಿ ಅನುಸರಿಸಲು ಯೋಜಿಸುತ್ತಿದ್ದಾರೆ. 
Posted by: SD | Source: TNIE

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Mysuru, farmer suicide, loan default , Yachenahalli, ಮೈಸೂರು, ರೈತರ ಆತ್ಮಹತ್ಯೆ , ಬ್ಯಾಂಕ್ ಸುಸ್ತಿದಾರ, ಯಚೇನಹಳ್ಳಿ
English summary
While agrarian crisis is driving farmers to suicide in several parts of the country and farm loan waiver tops the political discourse, here is a village that has been scripting an impeccable success story in agriculture without any complaints.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement