Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Five more deaths at Gorakhpur hospital; toll since Aug 7 reaches 71

ಗೋರಖ್ ಪುರ ಆಸ್ಪತ್ರೆ ದುರಂತ: ಬಿಆರ್ ಡಿ ಆಸ್ಪತ್ರೆಯಲ್ಲಿ ಮತ್ತೆ 5 ಮಕ್ಕಳ ಸಾವು, ಸಾವಿನ ಸಂಖ್ಯೆ 71ಕ್ಕೆ ಏರಿಕೆ

File photo

ಡೋಕ್ಲಾಮ್ ವಿವಾದ: ಟಿಬೆಟ್ ನಲ್ಲಿ ಚೀನಾ ಭಾರೀ ಸಮರಾಭ್ಯಾಸ

Government plans to get 1,000 Sedan electric cars for Union Ministers

ಕೇಂದ್ರ ಸಚಿವರಿಗೆ ಇನ್ನು "ಮಾಲಿನ್ಯ ರಹಿತ" ಎಲೆಕ್ಟ್ರಿಕ್ ಸೆಡಾನ್ ಕಾರುಗಳು!

Syed Salahuddin

ಹಿಜ್ಬುಲ್ ಮುಜಾಹಿದ್ದೀನ್ 'ವಿದೇಶಿ ಉಗ್ರ ಸಂಘಟನೆ': ಅಮೆರಿಕ ಘೋಷಣೆ

Home minister Rajnath Singh

ಸ್ವಾತಂತ್ರ್ಯ ದಿನ ಭಾಷಣದ ಮೂಲಕ ಮೋದಿ ಉತ್ತಮ ಆಡಳಿತಕ್ಕೆ ಮಂತ್ರಗಳನ್ನು ನೀಡಿದ್ದಾರೆ: ರಾಜನಾಥ ಸಿಂಗ್

Pakistan and India flag

ಸ್ನೇಹಿತೆಗೆ ಸರಸ್ವತಿ ದೇವಿಯ ವಿಗ್ರಹದ ಉಡುಗೊರೆಯೊಂದಿಗೆ ಸ್ವದೇಶಕ್ಕೆ ಮರಳಿದ ಪಾಕ್ ಯುವತಿ

Chaya Sing

9 ವರ್ಷಗಳ ನಂತರ 'ಮುಫ್ತಿ' ಮೂಲಕ ಛಾಯಾಸಿಂಗ್ ಕನ್ನಡಕ್ಕೆ ಮರು ಎಂಟ್ರಿ

Rahul Gandhi spoke in Sarthak Samavesh in Bengaluru yesterday

ರೈತರ ಸಾಲವನ್ನು ಕಾಂಗ್ರೆಸ್ ಸರ್ಕಾರ ಕೇವಲ 5 ನಿಮಿಷದಲ್ಲಿ ಮನ್ನಾ ಮಾಡಿದ್ದರೆ, ಬಿಜೆಪಿ ತಿಂಗಳೇ ತೆಗೆದುಕೊಂಡಿತು: ರಾಹುಲ್ ಗಾಂಧಿ

Rahul Gandhi

ನಿರುದ್ಯೋಗ, ಡೋಕ್ಲಾಮ್, ಗೋರಖ್ ಪುರ ವಿಷಯಗಳಲ್ಲಿ ಪ್ರಧಾನಿ ಮೌನಕ್ಕೆ ರಾಹುಲ್ ಟೀಕೆ

Jammu-Kashmir

ಪುಲ್ವಾಮ ಎನ್ ಕೌಂಟರ್: ಲಷ್ಕರ್ ಎ ತೊಯ್ಬಾ ಕಮಾಂಡರ್ ಅಯೂಬ್ ಲೆಲ್ಹರಿ ಹತ್ಯೆ

Supreme Court

1984 ನರಮೇಧ: 199 ಪ್ರಕರಣಗಳ ವಜಾಕ್ಕೆ ಎಸ್ ಐಟಿ ರಚಿಸಿದ ಸುಪ್ರೀಂ ಕೋರ್ಟ್

Rahul Gandhi

ಇಂದಿರಾ ಕ್ಯಾಂಟೀನ್ ಎನ್ನುವ ಬದಲು ಅಮ್ಮಾ ಕ್ಯಾಂಟೀನ್ ಎಂದ ರಾಹುಲ್ ಗಾಂಧಿ

ಮುಖಪುಟ >> ಭವಿಷ್ಯ-ಆಧ್ಯಾತ್ಮ

ವರಮಹಾ ಲಕ್ಷ್ಮಿ ವ್ರತ ವಿಶೇಷ: ಅಷ್ಟ ಐಶ್ವರ್ಯ ಅಂದರೇನು? ಇಲ್ಲಿದೆ ಅಷ್ಟಲಕ್ಷ್ಮಿಯನ್ನು ಸಿದ್ಧಿಸುವ ಕನಕಧಾರಾ ಸ್ತೋತ್ರದ ಮಹತ್ವ!

lakshmi

ಲಕ್ಷ್ಮಿ

ಶ್ರಾವಣ ಮಾಸದಲ್ಲಿ ಬರುವ ವ್ರತಗಳಲ್ಲಿ ವರಮಹಾಲಕ್ಷ್ಮಿ ವ್ರತ ಪ್ರಮುಖವಾದದ್ದು, ಸಮಸ್ತ ಸಂಪತ್ತಿಗೂ ಅಧಿದೇವತೆಯಾಗಿರುವ ಈ ದಿನದಂದು ಲಕ್ಷ್ಮಿಯನ್ನು ಪೂಜಿಸಿದರೆ, ಅಷ್ಟ ಐಶ್ವರ್ಯವೂ ಪ್ರಾಪ್ತಿಯಾಗುತ್ತದೆ. 

ಸಂಪತ್ತು ಮತ್ತು ಏಳಿಗೆಯ ಪ್ರತೀಕವಾದ ಲಕ್ಷ್ಮಿ ದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮಿಯ ಲಕ್ಷಣಗಳೆಂದು ಹೇಳಲಾಗಿದ್ದು  ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಅರ್ಥಾತ್ 8 ವಿಧಗಳ ಐಶ್ವರ್ಯ ಎಂದು ಹೇಳಲಾಗಿದೆ.  ಎಂಟೂ ರೀತಿಯ ಐಶ್ವರ್ಯಗಳು ಪ್ರಾಪ್ತಿಯಾಗಲಿವೆ ಎಂಬ ನಂಬಿಕೆ ಇದೆ. 

ಶ್ರಾವಣ ಮಾಸದಲ್ಲಿನ ಹಲವು ಪೂಜೆಗಳು ಅಥವಾ ದೇವರ ಆರಾಧನೆಗೆ ಸಂಬಂಧಪಟ್ಟಿರುವ ಸಂಗತಿಗಳು ಸಮುದ್ರಮಂಥನದ ಹಿನ್ನೆಲೆಯನ್ನೊಳಗೊಂಡಿದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿ ಸಹ ಸಮುದ್ರಮಂಥನದಿಂದಲೇ ಆವಿರ್ಭವಿಸಿದ್ದು, ಕ್ಷೀರಸಾಗರದಿಂದ ಅವತರಿಸಿದಳೆಂದು ಹೇಳಲಾಗಿದೆ. ಹಾಗಾಗಿಯೇ ಲಕ್ಷ್ಮಿಯನ್ನು ಕ್ಷೀರಸಾಗರತನಯೆ ಎಂದೂ ಹೇಳಲಾಗುತ್ತದೆ. 

ಲಕ್ಷ್ಮಿ ದೇವಿ ಕ್ಷೀರಸಾಗರದಲ್ಲಿ ಶ್ವೇತವರ್ಣದಲ್ಲಿ ಅವತರಿಸಿದ್ದಳಾದ್ದರಿಂದ ವರಮಹಾಲಕ್ಷ್ಮಿ ವ್ರತದಂದು ಲಕ್ಷ್ಮಿಗೆ ಶ್ವೇತ ವರ್ಣದ ಕೆಂಪು ಅಂಚಿನ ಸೀರೆಯನ್ನುಡಿಸುವ ಪದ್ಧತಿ ಇದೆ. ಕುಂಕುಮಾರ್ಚನೆ ಮಾಡುವುದರೊಂದಿಗೆ ಲಕ್ಷ್ಮಿದೇವಿಯನ್ನು  ಆವಾಹನೆ ಮಾಡಿ 12 ಗಂಟಿನ ದಾರವನ್ನು ದೇವರ ಮುಂದಿಟ್ಟು ಪೂಜಿಸಿ ಸುಮಂಗಲಿಯರು ಅದನ್ನು ಕೈಗೆ ಕಟ್ಟಿಕೊಳ್ಳುತ್ತಾರೆ. 

ಅಷ್ಟಲಕ್ಷ್ಮಿಯನ್ನು ಸಿದ್ಧಿಸುವ ಕನಕಧಾರಾ ಸ್ತೋತ್ರದ ಮಹತ್ವ

ಲಕ್ಷ್ಮಿಯನ್ನು ಒಲಿಸಿಕೊಳ್ಳುವುದಕ್ಕೆ ಅಥವಾ ಉಪಾಸನೆ ಮಾಡುವುದಕ್ಕೆ ಹಲವು ಸ್ತೋತ್ರಗಳಿದ್ದು, ಕನಕಧಾರಾ ಸ್ತೋತ್ರ ಮಹತ್ವದ್ದಾಗಿದೆ. ಕನಕಧಾರಾ ಸ್ತೋತ್ರವನ್ನು ಆದಿ ಶಂಕರಾಚಾರ್ಯರು ರಚಿಸಿದ್ದು, ಈ ಸ್ತೋತ್ರದಲ್ಲಿ ಅಷ್ಟ ಲಕ್ಷ್ಮಿಯರನ್ನೂ ಸ್ತುತಿಸಿದ್ದಾರೆ. 

ಬಾಲ ಬ್ರಹ್ಮಚಾರಿಯಾಗಿದ್ದ ಶಂಕರಾಚಾರ್ಯರು ಭಿಕ್ಷಾಟನೆ ತೆರಳುತ್ತಾರೆ. ಹೋಗುವ ದಾರಿಯಲ್ಲಿ ಒಬ್ಬ ಬಡವನ ಮನೆ ಸಿಗುತ್ತದೆ. ಬಡತನವಿದ್ದರೂ ಬಾಲಕ ಶಂಕರ ಬಂದಾಗ ಆ ಮನೆಯ ಮಹಿಳೆಯ ಬಳಿ ಒಣಗಿದ ನೆಲ್ಲಿಕಾಯಿ ಹೊರತುಪಡಿಸಿ ತಿನ್ನಬಹುದಾದ ವಸ್ತು ಏನೂ ಇರುವುದಿಲ್ಲ. ಭಕ್ತಿಯಿಂದ ಪ್ರಾರ್ಥಿಸಿ ಅದನ್ನೇ ಶಂಕರರಿಗೆ ನೀಡುತ್ತಾರೆ. ಆಕೆಯ ಬಡತನವನ್ನು ನೋಡಲಾಗದೇ ಶಂಕರರು ಕನಕಧಾರಾ ಸ್ತೋತ್ರವನ್ನು ರಚಿಸುತ್ತಾರೆ. ಕನಕಧಾರಾ ಸ್ತೋತ್ರ’ವನ್ನು ಪಠಿಸಿ ಸಾಕ್ಷಾತ್ ಲಕ್ಷ್ಮಿದೇವಿಯಿಂದ ಬಂಗಾರದ ನಾಣ್ಯಗಳ ಮಳೆಯನ್ನು ಸುರಿಸಿದ್ದರು ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಕನಕಧಾರಾ ಸ್ತೋತ್ರವನ್ನು ಪಠಿಸಿದರೆ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ.  
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Varamahalakshmi vrata, Types of wealth, Kanakadhara Stotra, ವರಮಹಾಲಕ್ಷ್ಮಿ ವ್ರತ, ಅಷ್ಟ ಐಶ್ವರ್ಯ, ಕನಕಧಾರಾ ಸ್ತೋತ್ರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement