Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Sridevi

ಶ್ರೀದೇವಿ ಪಾರ್ಥಿಕ ಶರೀರ ಭಾರತಕ್ಕೆ ತರಲು ಕುಟುಂಬಕ್ಕೆ ಯುಎಇಯಲ್ಲಿರುವ ರಾಯಭಾರಿ ಕಚೇರಿ ನೆರವು

ಪ್ರಮೋದಾ ದೇವಿ, ಮೊಮ್ಮಗ

ಸರಳವಾಗಿ ನಡೆದ ನಾಮಕರಣ; ಮೈಸೂರು ಯದುವಂಶದ ಯುವರಾಜನ ಹೆಸರೇನು ಗೊತ್ತಾ?

Sridevi

4ನೇ ವರ್ಷಕ್ಕೆ ಸಿನಿಮಾರಂಗಕ್ಕೆ ಪಾದಾರ್ಪಣೆ: ಕನ್ನಡದ 6 ಚಿತ್ರಗಳಲ್ಲಿ ಶ್ರೀದೇವಿ ನಟನೆ

Team India

ಟಿ20 ತ್ರಿಕೋನ ಸರಣಿ: ಕೊಹ್ಲಿ, ಧೋನಿಗೆ ವಿಶ್ರಾಂತಿ, ಯುವ ಪಡೆ ಆಯ್ಕೆ

Congress tweet

ಶ್ರೀದೇವಿ ಕುರಿತ ಕಾಂಗ್ರೆಸ್ ಟ್ವೀಟ್ ಗೆ ಉರಿದುಬಿದ್ದ ಜಾಲತಾಣಿಗರು!

ಮ್ಯಾರಾಥಾನ್ ಗೆ ಚಾಲನೆ ನೀಡಿದ ರಾಹುಲ್ ಗಾಂಧಿ ಚಿತ್ರ

ವಿಜಯಪುರ: ವೃಕ್ಷಾಥನ್ 2018ಕ್ಕೆ ರಾಹುಲ್ ಗಾಂಧಿ ಚಾಲನೆ

BJP

2019 ರ ಲೋಕಸಭಾ ಚುನಾವಣೆಗೆ ಸಿದ್ಧತೆ: ಫೆ.28 ರಂದು ಸಭೆ ನಡೆಸಲಿರುವ ಬಿಜೆಪಿ

Rahul Gandhi

ಬಸವಣ್ಣನವರ ವಚನವನ್ನು ಅಸ್ಪಷ್ಟವಾಗಿ ಉಚ್ಛರಿಸಿದ ರಾಹುಲ್ ಗಾಂಧಿ; ವಿಡಿಯೋ ವೈರಲ್

AICC PRESIDENT RAHULGANDHI PHOTO

ಜಮಖಂಡಿ:ರಾಹುಲ್ ಜನಾರ್ಶೀವಾದ ಯಾತ್ರೆ :ಪ್ರಧಾನಿ ವಿರುದ್ಧ ಟೀಕೆ

Narendra Modi

ವಿಜ್ಞಾನಕ್ಕೆ ಭಾರತದ ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

Samsung Galaxy S9

ಬಿಡುಗಡೆಗೂ ಮುನ್ನವೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ರೋಮೋ ಲೀಕ್

Sridevi

ದೇವರನ್ನು ಹೆಚ್ಚಾಗಿ ದ್ವೇಷಿಸುತ್ತೇನೆ: ಶ್ರೀದೇವಿ ನಿಧನಕ್ಕೆ ಆರ್ ಜಿ ವಿ ಶಾಕ್

Representational image

ಕೆಎಸ್ ಆರ್ ಟಿಸಿ ಬಸ್- ಒಮ್ನಿ ಕಾರು ಡಿಕ್ಕಿ: ಮಳವಳ್ಳಿಯಲ್ಲಿ ಮೂವರ ದುರ್ಮರಣ

ಮುಖಪುಟ >> ವಾಣಿಜ್ಯ

ದೆಹಲಿ: ಬೆಳೆ ಹುಲ್ಲು ಸುಟ್ಟು ಮಾಲಿನ್ಯ ತಡೆ ಯೋಜನೆಗೆ 230 ದಶಲಕ್ಷ ಡಾಲರ್ ಸಾಲದು ಎಂದ ಅಧಿಕಾರಿಗಳು

A man walks through a field amidst smog in New Delhi, India, February 7, 2018.

ದಟ್ಟ ಹೊಗೆಯಿಂದ ಆವೃತವಾದ ದೆಹಲಿಯ ಜಮೀನಿನಲ್ಲಿ ರೈತರೊಬ್ಬರು ನಡೆದುಕೊಂಡು ಹೋಗುತ್ತಿರುವ ದೃಶ್ಯ

ನವದೆಹಲಿ: ರೈತರ ಜಮೀನಿನಲ್ಲಿ ಬೆಳೆಗಳನ್ನು ಕಟಾವು ಮಾಡಿದ ನಂತರ ಅವುಗಳನ್ನು ಸುಟ್ಟುಹಾಕಿ ದೆಹಲಿ ಸುತ್ತಮುತ್ತಲ ಭಾಗಗಳಲ್ಲಿ ವಾಯುಮಾಲಿನ್ಯ ಹೆಚ್ಚುವುದನ್ನು ತಡೆಗಟ್ಟಲು ಬೆಳೆ ಶೇಷ ಯೋಜನೆಗೆ ಎರಡು ವರ್ಷಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಮೊತ್ತ 230 ದಶಲಕ್ಷ ಡಾಲರ್ ಯೋಜನಾ ಸಲಹೆಗಾರರ ಅಂದಾಜು ವೆಚ್ಚಕ್ಕಿಂತ ಕಡಿಮೆಯಾಗಿದೆ ಮತ್ತು  ದೆಹಲಿ ಸುತ್ತಮುತ್ತ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟುವಲ್ಲಿ ಇದರಿಂದ ಹೆಚ್ಚಿನ ಪ್ರಯೋಜನವಾಗದು  ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

 ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸಚಿವ ಸಂಪುಟ ಈ ತಿಂಗಳಲ್ಲಿಯೇ ಯೋಜನೆಗೆ ಸಹಿ ಹಾಕುವ ಯೋಜನೆ ಹೊಂದಿದೆ ಎಂದು ಮೂವರು ಸರ್ಕಾರಿ ಅಧಿಕಾರಿಗಳು ರಾಯ್ಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಟಾವಿನ ನಂತರ ಗದ್ದೆಗಳಿಗೆ ಹಾಕುವ ಬೆಂಕಿಯಿಂದ ವಾಯುಮಾಲಿನ್ಯ ಹೆಚ್ಚಾಗುವುದನ್ನು  ತಡೆಯಲು ಕಳೆದ ನವೆಂಬರ್ ನಲ್ಲಿ ಸರ್ಕಾರದ ಸಲಹಾ ಗುಂಪು ನೀತಿ ಆಯೋಗ ಪ್ರತಿ ವರ್ಷ 600 ದಶಲಕ್ಷ ಡಾಲರ್  ವೆಚ್ಚ ಮಾಡಬೇಕೆಂದು ಯೋಜಿಸಿತ್ತು. ಆದರೆ ಇದೀಗ ಸರ್ಕಾರ ಬಿಡುಗಡೆ ಮಾಡುತ್ತಿರುವ ಮೊತ್ತ ಅಂದಾಜಿಗಿಂತ ತುಂಬಾ ಕಡಿಮೆಯಾಗಿದೆ. ಹಣವನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಟಾವಿನ ನಂತರ ಬೆಳೆಗಳಿಗೆ ಬೆಂಕಿ ಹಾಕಿದ್ದರಿಂದ ಕಳೆದ ನವೆಂಬರ್ ನಲ್ಲಿ ವಾಯುಮಾಲಿನ್ಯಕ್ಕೆ ಕಾಲುಭಾಗದಷ್ಟು ಕಾರಣವಾಗಿತ್ತು ಎಂದು ಕೇಂದ್ರ ಪರಿಸರ ಸಚಿವಾಲಯ ಕಳೆದ ವಾರ ಸಂಸತ್ತಿಗೆ ಹೇಳಿತ್ತು.  ಬೆಂಕಿ ಬಿದ್ದು ಬೆಳೆನಾಶವಾಗುವುದರ ಜೊತೆ ಕೈಗಾರಿಕೆಗಳ ಮಾಲಿನ್ಯ, ವಾಹನಗಳಿಂದ ಹೊರಬರುವ ಹೊಗೆ, ಧೂಳು ಇತ್ಯಾದಿಗಳು ದೆಹಲಿ ನಗರಗಳನ್ನು ಸುತ್ತುವರಿದು ಇನ್ನಷ್ಟು ಮಾಲಿನ್ಯಕ್ಕೆ ಕಾರಣವಾಗುತ್ತದೆ.  

ಕೇಂದ್ರ ಸರ್ಕಾರದ ಉದ್ದೇಶಿತ ಯೋಜನೆಯಲ್ಲಿ ದೆಹಲಿ, ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶಗಳ ರೈತರಿಗೆ ಪರಿಹಾರದ ಹಣ ನೀಡುವುದಾಗಿದೆ. ಇದರಲ್ಲಿ ಬೆಳೆನಾಶಕ್ಕೆ ಶೇಕಡಾ 80ರಷ್ಟು ಪರಿಹಾರದ ಮೊತ್ತವನ್ನು ಹೊಂದಿರುತ್ತದೆ.

ಆದರೆ ಈ ಪರಿಹಾರದ ಮೊತ್ತವನ್ನು ಚಳಿಗಾಲ ಆರಂಭಕ್ಕೆ ನೀಡಬೇಕೆಂಬುದು ಅಧಿಕಾರಿಗಳ ಅಭಿಪ್ರಾಯ. ಬೆಳೆ ಶೇಷ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತಂದರೂ ಕೂಡ ಶೇಕಡಾ 20ರಿಂದ 25ರಷ್ಟಕ್ಕಿಂತ ಹೆಚ್ಚು ವಾಯುಮಾಲಿನ್ಯವನ್ನು ಕಡಿಮೆಮಾಡಬಹುದು ಎಂಬ ಭರವಸೆ ನಮಗಿಲ್ಲ. ದೆಹಲಿಯ ವಾಯುಮಾಲಿನ್ಯ ದಟ್ಟಣೆಯನ್ನು ಕಡಿಮೆ ಮಾಡಲು 5 ವರ್ಷಗಳಾದರೂ ಸಮಯ ಹಿಡಿಯಬಹುದು ಎನ್ನುತ್ತಾರೆ ಅಧಿಕಾರಿಗಳು.

ಈ ಬಗ್ಗೆ ಪ್ರಧಾನಿಯವರ ಕಚೇರಿಯನ್ನು ಇಮೇಲ್  ಮೂಲಕ ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲಿಲ್ಲ. ಪರಿಸರ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Posted by: SUD | Source: Reuters

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Delhi, Pollution, Crop residue scheme, Farmers, Government, ಸರ್ಕಾರ, ದೆಹಲಿ, ಮಾಲಿನ್ಯ, ಬೆಳೆ ಶೇಷ ಯೋಜನೆ,

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement