Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Terrorists kill all three cops abducted in Shopian

ಅಪಹರಣ ಮಾಡಿದ್ದ ಮೂವರು ಪೊಲೀಸ್ ಸಿಬ್ಬಂದಿಗಳ ಹತ್ಯೆಗೈದ ಉಗ್ರರು!

11 Lions Found Dead In Gujarat

ಗುಜರಾತ್: ಗಿರ್ ಅರಣ್ಯ ಪ್ರದೇಶದಲ್ಲಿ ಕ್ರೂರ ಕಾದಾಟಕ್ಕೆ 11 ಸಿಂಹಗಳ ಸಾವು!

Pakistan Foreign Minister Shah Mehmood Qureshi (Left) and Indian External Affairs minister Sushma Swaraj (Right)

ಶಾಂತಿ ಮಾತುಕತೆ: ಪಾಕಿಸ್ತಾನ ಪ್ರಧಾನಿ ಪ್ರಸ್ತಾವನೆಗೆ ಭಾರತ ಒಪ್ಪಿಗೆ!

Hima Das

ರೈತನ ಮಗಳ ಪ್ರಸಿದ್ಧಿ, ಚಿನ್ನದ ಹುಡುಗಿ 'ಹಿಮಾದಾಸ್' ಹೆಸರು ಅಡಿಡಾಸ್ ಶೂ ಮೇಲೆ: ಫೋಟೋ ವೈರಲ್

Dinesh Gundu Rao

ಕೆಲ ಚಾನೆಲ್ ಗಳು ಬಿಜೆಪಿ ವಕ್ತಾರರಂತೆ ಕೆಲಸ ಮಾಡುತ್ತಿವೆ: ದಿನೇಶ್ ಗುಂಡೂರಾವ್ ಕಿಡಿ

Cristiano Ronaldo

ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲೇ ಗೋಳಾಡಿ, ಕಣ್ಣೀರಿಟ್ಟಿದ್ದೇಕೆ?

Nivedith Alva

ಅಕ್ಟೋಬರ್ 4 ರಂದು ವಿಧಾನ ಪರಿಷತ್ ಚುನಾವಣೆ: ಮುಂಚೂಣಿಯಲ್ಲಿ ನಿವೇದಿತ್ ಆಳ್ವ ಎಂ,ಸಿ ವೇಣುಗೋಪಾಲ್

Mirabai Chan, Virat Kohli

ಕ್ರೀಡಾಕ್ಷೇತ್ರದ ಪ್ರಶಸ್ತಿ: ವಿರಾಟ್ ಕೊಹ್ಲಿ, ಮೀರಾಬಾಯಿ 'ಖೇಲ್ ರತ್ನ', ನೀರಜ್ ಚೋಪ್ರಾ, ಹಿಮಾ ದಾಸ್ ಗೆ ಅರ್ಜುನ ಪುರಸ್ಕಾರ!

Asia Cup 2018: Mashrafe Mortaza disappointed with Super Four schedule

ಏಷ್ಯಾಕಪ್ 2018: ಸೂಪರ್ 4 ಹಂತದ ವೇಳಾಪಟ್ಟಿಗೆ ಬಾಂಗ್ಲಾ ತೀವ್ರ ಅಸಮಾಧಾನ

Asia Cup 2018: Afghanistan beat Bangladesh by 136 run

ಏಷ್ಯಾಕಪ್: ಬಾಂಗ್ಲಾ ವಿರುದ್ಧ ಆಫ್ಘಾನಿಸ್ತಾನಕ್ಕೆ 136 ರನ್ ಬೃಹತ್ ಜಯ

ನನ್ನ ಪಕ್ಕದಲ್ಲಿ ಕುಳಿತ ವ್ಯಕ್ತಿಯ ಮೂಗಿನಲ್ಲಿ ರಕ್ತ ಬರುತ್ತಿತ್ತು: ಜೆಟ್ ಏರ್ ವೇಸ್ ಪ್ರಯಾಣಿಕ

Sadashiva Brahmavar

ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ವಿಧಿವಶ

Fuike Image

ಬೆಂಗಳೂರು: ಪೋಲೀಸ್ ಠಾಣೆ ಕಟ್ಟಡದಿಂದ ಬಿದ್ದು ಆರೋಪಿ ಸಾವು!

ಮುಖಪುಟ >> ವಾಣಿಜ್ಯ

ಷೇರುಪೇಟೆಯಲ್ಲಿ ದಾಖಲೆ: 34 ಸಾವಿರ ಗಡಿ ದಾಟಿದ ಸೆನ್ಸೆಕ್ಸ್

ಇಂಧನ ವಿಭಾಗದ ಷೇರುಗಳ ಮೌಲ್ಯ ಬಾರಿ ಪ್ರಮಾಣದಲ್ಲಿ ಏರಿಕೆ, ಕಚ್ಚಾತೈಲ ಬೇಡಿಕೆ ಹೆಚ್ಚಳ, ದರ ಏರಿಕೆ
Sensex creates a record at 34,087, oil stocks jump

ಸಂಗ್ರಹ ಚಿತ್ರ

ಮುಂಬೈ: ಸತತ ಎರಡನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಏರುಗತಿಯಲ್ಲಿ ಸಾಗಿದ್ದು, ಬುಧವಾರ ಸೆನ್ಸೆಕ್ಸ್ ದಾಖಲೆ ಪ್ರಮಾಣದ 34 ಸಾವಿರ ಅಂಕಗಳ ಗಡಿ ದಾಟಿದೆ.

ಇಂದಿನ ವಹಿವಾಟು ಆರಂಭವಾಗುತ್ತಿದ್ದಂತೆಯೇ ಇಂಧನ ವಿಭಾಗದ ಷೇರುಗಳ ಮೌಲ್ಯ ಭಾರಿ ಪ್ರಮಾಣದ ಏರಿಕೆ ಕಂಡಿದ್ದು, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯೇ ಸೆನ್ಸೆಕ್ಸ್ ಏರಿಕೆಗೆ ಕಾರಣ  ಎನ್ನಲಾಗಿದೆ. ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಇಂದು 76.71 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 34,087 ಅಂಕಗಳಿಗೆ ಏರಿಕೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆ ಎಂದು ಹೇಳಲಾಗುತ್ತಿದೆ. ಇಂದಿನ  ವಹಿವಾಟಿನಲ್ಲಿ ಪ್ರಮುಖವಾಗಿ ವೈದ್ಯಕೀಯ ಮತ್ತು ಇಂಧನ ವಿಭಾಗದ ಷೇರುಗಳ ಮೌಲ್ಯ ಏರಿಕೆ ಕಂಡಿವೆ. ಕಳೆದೆರಡು ವಹಿವಾಟಿನ ಅವಧಿಯಲ್ಲಿ ಸೆನ್ಸೆಕ್ಸ್ ಒಟ್ಟು 254.33 ಅಂಕಗಳನ್ನು ಏರಿಕೆ ಮಾಡಿಕೊಂಡಿದೆ.

ಇನ್ನು ಲಿಬಿಯಾದಲ್ಲಿ ಮಂಗಳವಾರ ಸಂಭವಿಸಿದ ಆಯಿಲ್ ಪೈಪ್ ಸ್ಫೋಟದಿಂದಾಗಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಗೆ ರಫ್ತಾಗುತ್ತಿದ್ದ ತೈಲ ಪ್ರಮಾಣದಲ್ಲಿ ಭಾರಿ ವ್ಯತ್ಯಯ ಕಂಡುಬಂದಿದ್ದು, ಇದರಿಂದ ತೈಲ ರಫ್ತು  ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಅಂತೆಯೇ ಕಚ್ಚಾತೈಲ ಬೇಡಿಕೆ ಹೆಚ್ಚಳವಾದ ಪರಿಣಾಮ ಕಚ್ಛಾತೈಲ ದರ ಕೂಡ ಏರಿಕೆಯಾಗಿದೆ. 205ರಿಂದೀಚೆಗೆ ಇದೇ ಮೊದಲ ಬಾರಿಗೆ ಕಚ್ಛಾ ತೈಲದರ ಭಾರಿ ಪ್ರಮಾಣದಲ್ಲಿ  ಏರಿಕೆಯಾಗಿದೆ ಎಂದು ಹೇಳಲಾಗಿದೆ.

ಈ ಹಿಂದೆ 50 ಡಾಲರ್ ಗಳ ಆಸುಪಾಸಿನಲ್ಲಿದ್ದ ಪ್ರತೀ ಬ್ಯಾರೆಲ್ ಕಚ್ಛಾ ತೈಲ ಇದೀಗ ಏಕಾಏಕಿ 60 ಡಾಲರ್ ಗಳಿಗೆ ಏರಿಕೆಯಾಗಿದೆ.

ಇನ್ನು ನಿಫ್ಟಿಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಇಂದಿನ ವಹಿವಾಟಿನಲ್ಲಿ ನಿಫ್ಟಿ 1.75 ಅಂಕ ಕುಸಿತ ಕಾಣುವ ಮೂಲಕ 10,533.25 ಅಂಕಗಳಿಗೆ ಇಳಿಕೆಯಾಗಿದೆ. ಪ್ರಮುಖವಾಗಿ ಇಂದಿನ ವಹಿವಾಟಿನಲ್ಲಿ ಸನ್ ಫಾರ್ಮಾ,  ಎನ್ ಟಿಪಿಸಿ, ಒಎನ್ ಜಿಸಿ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ.2.88 ರಷ್ಟು ಏರಿಕೆಯಾಗಿದೆ. ವರ್ಷಾಂತ್ಯದ ಸಂದರ್ಭದಲ್ಲಿ ಸ್ಟಾಕ್ ಕ್ಲಿಯರೆನ್ಸ್ ಗಾಗಿ ಸಂಸ್ಥೆಗಳು ನೀಡುತ್ತಿರುವ ರಿಯಾಯಿತಿಗಳು  ಹೂಡಿಕೆದಾರರಿಗೆ ಮತ್ತು ಗ್ರಾಹಕರಿಗೆ ವರವಾಗಿ ಪರಿಣಮಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶೀಯ ಸಾಂಸ್ಥಿಕ ಹೂಡಿಕೆದಾರರು ಸುಮಾರು 544.50 ಕೋಟಿ ಮೌಲ್ಯದ ಷೇರುಗಳ ಖರೀದಿ ಮಾಡಿದ್ದು, ನಿನ್ನೆ ಒಂದೇ ದಿನದಲ್ಲಿ ವಿದೇಶಿ ಹೂಡಿಕೆದಾರರು 44.07 ಕೋಟಿ ಮೌಲ್ಯದ ದೇಶೀಯ ಷೇರುಗಳನ್ನು ಖರೀದಿ ಮಾಡಿದ್ದಾರೆ  ಎಂದು ಪ್ರಸ್ತುತ ಲಭ್ಯವಾಗಿರುವ ದತ್ತಾಂಶಗಳಿಂದ ತಿಳಿದುಬಂದಿದೆ.
Posted by: SVN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Mumbai, Indian stock Market, Sensex, Libya oil Pipeline Blast, ಮುಂಬೈ, ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್, ಲಿಬಿಯಾ ಆಯಿಲ್ ಪೈಪ್ ಲೈನ್ ಸ್ಫೋಟ
English summary
The benchmark Sensex today achieved yet another record by scaling 34,087 on the back of a rally in healthcare, power and oil stocks. Oil prices surged to the highest level since mid-2015, breaching above the USD 60 a barrel, after a pipeline blast in Libya restricted Opec production. The 30-share Sensex was up 76.71 points, or 0.22 per cent, to scale a new high of 34,087.32, breaching its previous intra-day record of 34,061.88 hit yesterday.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS