Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CM Kumaraswmay and former MLA Madhubangarappa at press confrence JP bhavan in Bengaluru on Monday. Express photo Nagaraja Gadekal

ವೈಯಕ್ತಿಕ ದ್ವೇಷಗಳನ್ನು ಬದಿಗಿಟ್ಟು ಬಿಜೆಪಿ ಸೋಲಿಸಲು ಕೆಲಸ ಮಾಡಿ: ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಎಂ ಕರೆ

India

ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ತಂಡ ಆಯ್ಕೆ: ಮೂರನೇ ಓಪನರ್, ಎರಡನೇ ವಿಕೆಟ್ ಕೀಪರ್‏ದೇ ಚಿಂತೆ!

ಪೃಥ್ವಿ ಶಾ-ಇಯಾನ್ ಗೌಲ್ಡ್

ಪೃಥ್ವಿ ಶಾಗೆ ಜೀವದಾನ: ಮುಜುಗರ ಪಟ್ಟು ಹೋಲ್ಡರ್ ಬಳಿ ಕ್ಷಮೆಯಾಚಿಸಿದ ಅಂಪೈರ್, ವಿಡಿಯೋ ವೈರಲ್!

Vizag temple deity gets Rs 4 crore in cash and Rs 2 crore worth gold

ಕರೆನ್ಸಿಮಯ ಕನ್ನಿಕಾ ಪರಮೇಶ್ವರಿ, ಅಲಂಕಾರಕ್ಕೆ 4 ಕೋಟಿ ನಗದು, 2 ಕೋಟಿ ಮೌಲ್ಯದ ಚಿನ್ನಾಭರಣ ಬಳಕೆ!

Tarana Burke

ಗಣ್ಯರ ನಿದ್ರಾಭಂಗಕ್ಕೆ ಕಾರಣವಾದ #MeToo ಚಳವಳಿಯನ್ನು ಹುಟ್ಟಿಹಾಕಿದವರಾರು ಗೊತ್ತೆ?

Shashi Tharoor

ಒಳ್ಳೆಯ ಹಿಂದುಗಳು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಬಯಸುವುದಿಲ್ಲ: ಶಶಿ ತರೂರ್

China meddled in US elections too, says President Donald Trump

ಅಮೆರಿಕ ಚುನವಾಣೆಯಲ್ಲಿ ಚೀನಾ ಹಸ್ತಕ್ಷೇಪ ಮಾಡಿದೆ: ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ

6 sixes in an over: Afghanistan’s Hazratullah Zazai ‘does a Yuvraj Singh’, watch video

6 ಎಸೆತದಲ್ಲಿ ಆರು ಸಿಕ್ಸರ್, ಒಂದೇ ಓವರ್ ನಲ್ಲಿ 37 ರನ್, 12 ಎಸೆತದಲ್ಲಿ ಅರ್ಧಶತಕ!

ಇಮ್ರಾನ್ ಖಾನ್

ಸರ್ಕಾರ ನಡೆಸೋಕೆ ದುಡ್ಡಿಲ್ಲ, ಆದರೆ ಪಾಕ್ ಆಟೋ ಡೈವರ್ 300 ಕೋಟಿ, ಬೀದಿ ವ್ಯಾಪಾರಿ 200 ಕೋಟಿ ವಹಿವಾಟು!

Watch: Cristiano Ronaldo Jr Follows Father

ತಂದೆಯನ್ನೇ ಮೀರಿಸುವಂತಿದೆ ಜೂನಿಯರ್ ರೊನಾಲ್ಡೋ ಕಾಲ್ಚೆಳಕ!

Anitha Kumaraswamy and LR Shivaramegowda

ಉಪ ಚುನಾವಣೆ: ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ, ಮಂಡ್ಯದಲ್ಲಿ ಶಿವರಾಮೇಗೌಡ ನಾಮಪತ್ರ ಸಲ್ಲಿಕೆ

Representational image

ಸೊಳ್ಳೆಬತ್ತಿಯಿಂದ ಬೆಡ್ ಶೀಟ್ ಗೆ ಹೊತ್ತಿಕೊಂಡ ಬೆಂಕಿ: ವೃದ್ಧೆ ಸಾವು

One Nation, One Driving License: Uniform Smart Driving Licenses across India in 2019

ಒಂದು ದೇಶ -ಒಂದು ಡ್ರೈವಿಂಗ್ ಲೈಸೆನ್ಸ್: ದೇಶಾದ್ಯಂತ ಏಕರೂಪದ ಚಾಲನಾ ಪರವಾನಗಿಗೆ ಕೇಂದ್ರ ಚಿಂತನೆ

ಮುಖಪುಟ >> ಅಂಕಣಗಳು

'ಏರಿದ್ದು ಇಳಿಯಲೇಬೇಕು' ಎನ್ನುವುದು ಪ್ರಕೃತಿ ನಿಯಮ. !

ಹಣಕ್ಲಾಸು-36
Hanaclassu: Statistician Nassim Nicholas Taleb

'ಏರಿದ್ದು ಇಳಿಯಲೇಬೇಕು' ಎನ್ನುವುದು ಪ್ರಕೃತಿ ನಿಯಮ. !

ಇದು ಹೇಳಿ ಕೇಳಿ ಚುನಾವಣೆ ಸಮಯ. ಏನೇ ಬರೆಯಲಿ ಅದಕ್ಕೊಂದು ಹೆಸರಿಟ್ಟು ಯಾವುದಾದರೊಂದು ಗುಂಪಿಗೆ ಸೇರಿಸಿ ಬಿಡುವುದು ಸಾಮಾನ್ಯ. ಆದರೆ ಹಿಂದೆ ಹಲವು ಬಾರಿ ಹೇಳಿರುವಂತೆ 'ಹಣಕ್ಲಾಸು' ಅಂಕಣ ಬರಹದಲ್ಲಿ ರಾಜಕೀಯಕ್ಕೆ ಪ್ರವೇಶವಿಲ್ಲ. ಹೀಗಿದ್ದೂ ಇಂದಿನ ಬರಹ ಒಮ್ಮುಖ ಎನ್ನುವ ಭಾವನೆ ಬಂದರೆ ಅದಕ್ಕೆ ನಾನು ಜವಾಬ್ದಾರನ್ನಲ್ಲ. ಇವತ್ತು ನಾನು ಹೇಳಲು ಹೊರಟ ವ್ಯಕ್ತಿ ಕೂಡ ವ್ಯಕ್ತಿನಿಷ್ಠೆಗಿಂತ ವಸ್ತುನಿಷ್ಠೆ ಬಗ್ಗೆ ಹೆಚ್ಚು ನಿಲುವು ಹೊಂದಿರುವವರು. 'ಹಣಕ್ಲಾಸು' ವಿನಲ್ಲಿ ಕೂಡ ವಸ್ತುನಿಷ್ಠೆಗೆ ಮನ್ನಣೆ. ಇರಲಿ. ಬನ್ನಿ ಇಂದಿನ ವ್ಯಕ್ತಿ ವಿಷಯದ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ. 

ನಸ್ಸಿಂ ನಿಕೋಲಸ್ ತಲೇಬ್, ಲೆಬಾನಿಸ್ ಮೂಲದ ಅಮೆರಿಕನ್, ಸಂಖ್ಯಾಶಾಸ್ತ್ರಜ್ಞ, ಅಪಾಯ ವಿಶ್ಲೇಷಕ (risk analyst) ಲೇಖಕ ಹಾಗೂ ಪ್ರಾಧ್ಯಾಪಕ. ಇಷ್ಟೇ ಅಲ್ಲ ಮ್ಯಾಥಮೆಟಿಕಲ್ ಫೈನಾನ್ಸ್ ಎನ್ನುವ ವಿಭಾಗದಲ್ಲೂ ಇತನದು ಎತ್ತಿದ ಕೈ, ಹೆಡ್ಜೆ ಫಂಡ್ ಮ್ಯಾನೇಜರ್, ಡಿರೈವೇಟಿವ್ ಟ್ರೇಡರ್ ಆಗಿ ಕೆಲಸ ಮಾಡಿದ ಅನುಭವ ಕೂಡ ಇತನಿಗಿದೆ. ಸದ್ಯಕ್ಕೆ ಯುನಿವರ್ಸ ಇನ್ವೆಸ್ಟ್ ಎನ್ನುವ ಕಂಪನಿಗೆ ಸೈಂಟಿಫಿಕ್ ಅಡ್ವೈಸೆರ್ ಆಗಿ ಕೆಲಸ.  ಇತ 2007 ರಲ್ಲಿ ಬರೆದ 'ದಿ ಬ್ಲಾಕ್ ಸ್ವಾನ್' ಪುಸ್ತಕ ಎರಡನೇ ಮಹಾ ಯುದ್ಧದ ನಂತರದ ಹನ್ನೆರಡು ಅತ್ಯಂತ ಪ್ರಭಾವ ಬೀರುವ ಪುಸ್ತಕಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. 

ಇದಿಷ್ಟು ಈತನ ಪ್ರವರ, ಸದ್ಯ ಈತನ ಉಲ್ಲೇಕ ಏಕೇ? ಮೋದಿ ಗೆದ್ದು ಪ್ರಧಾನಿ ಆಗುವುದಕ್ಕೆ ಮುಂಚೆ ಭಾರತಕ್ಕೆ ಬಂದಿದ್ದ ಈತ ಮೋದಿಯ ಮೋಡಿಗೆ ಯಾವ ಪರಿಗೆ ಸಿಲುಕಿದ್ದನೆಂದರೆ  "ನಾನು ಭಾರತೀಯನಾಗಿದ್ದರೆ, ಮೋದಿ ಅವರಿಗೆ ವೋಟು ಮಾಡುತಿದ್ದೆ" ಎನ್ನುವ ಹೇಳಿಕೆ ಕೊಡುವಷ್ಟು, ಕೆಲವು ತಿಂಗಳುಗಳ ಹಿಂದೆ ಮತ್ತೆ ಭಾರತಕ್ಕೆ ಬಂದಿರುವ ಇವರನ್ನು ಪ್ರೆಸ್ ನವರು ಕೇಳಿದ ಮೊದಲ ಪ್ರಶ್ನೆ  "ಕಳೆದ ಬಾರಿ ಭಾರತಿಯನಾಗಿದ್ದರೆ ಮೋದಿ ಅವರಿಗೆ ವೋಟು ಮಾಡುತಿದ್ದೆ  ಎಂದಿರಿ, ನಿಮ್ಮ ಇಂದಿನ ನಿಲುವೇನು?" 

ಯಾವುದೇ ಸಂಕೋಚ, ತಡವರಿಕೆ ಇಲ್ಲದೆ ತಕ್ಷಣ ಬಂದ ಉತ್ತರ, 'ಖಂಡಿತ ಮೋದಿ ಆಶಾಭಂಗ ಮಾಡಿಲ್ಲ, ಅವರೊಬ್ಬ ತಪಸ್ವಿ (ascetic), ಕಳೆದ ವರ್ಷದ ಅಂಕಿ ಸಂಖ್ಯೆ ನೋಡಿದರೆ ನಿಮಗೆ ತಿಳಿಯುತ್ತದೆ, ಎಲ್ಲಕ್ಕೂ ಮುಖ್ಯ ಆತನ ಪ್ರಯತ್ನ (effort ) ,ಬದ್ದತೆ ಪ್ರಶ್ನಿಸುವಂತಿಲ್ಲ,  ಕೆಲವೊಮ್ಮೆ ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯದೇ ಹೋಗಬಹುದು, ಎಲ್ಲಾ ನಮ್ಮ ಹಿಡಿತದಲ್ಲಿ ಇಲ್ಲವಲ್ಲ? "ಎಂದು ಮುಂದುವರಿದು ಮತ್ತೊಮ್ಮೆ ಹೇಳುತ್ತೇನೆ ಆತನೊಬ್ಬ ತಪಸ್ವಿ, ಮತ್ತು ನಾನು ತಪಸ್ವಿಯ ನಂಬುತ್ತೇನೆ. 

ಮೋದಿಯನ್ನು ಸರ್ವಾಧಿಕಾರಿ ಎಂದು ಹಲವರು ಹೇಳುತ್ತಾರೆ, ನಿಮ್ಮ ನಿಲುವೇನು ಎನ್ನುವ ಮಾಧ್ಯಮದ ಪ್ರಶ್ನೆಗೆ ಮೊಟ್ಟೆಯನ್ನು ಒಡೆಯದೆ ನೀವು ಆಮ್ಲೆಟ್ ತಯಾರಿಸಬಲ್ಲಿರೆ? ಎಂದು ಮರು ಪ್ರಶ್ನಿಸಿ, ಮಹಾನ್ ಕಾರ್ಯ ಸಾಧನೆಗೆ ಹಲವೊಮ್ಮೆ ಕಠಿಣ ನಿಲುವು ತೆಗೆದು ಕೊಳ್ಳುವುದು ಅವಶ್ಯಕ ಎನ್ನುವ ಖಡಕ್ ಉತ್ತರ. ಮೋದಿ ಅಧಿಕಾರ ವಹಿಸಿಕೊಂಡ ನಂತರ ಭಾರತದಲ್ಲಿ ಧರ್ಮ ಆಧಾರಿತ ಅಸಹಿಷ್ಣುತೆ ಹೆಚ್ಚಾಗಿದೆ ಎನ್ನುವ ಕೂಗು ಎದ್ದಿದೆ, ನಿಮ್ಮ ಗಮನಕ್ಕೆ ಅದು ಬಂದಿದೆಯೇ ಎನ್ನುವ ಪ್ರಶ್ನೆಗೆ ' "ಹುಟ್ಟಿನಿಂದ ಹಲವು ದೈವಗಳ ಆರಾಧಿಸಿಕೊಂಡು ಬಂದಿರುವ ನಿಮ್ಮ ವಿಶಾಲ ಮನೋಭಾವ ಒಂದೇ ದೈವ ಎನ್ನುವ ಸಿದ್ದಾಂತಕ್ಕೆ ಕಟ್ಟು ಬಿದ್ದ ಬೇರೆ ಯಾವುದೇ ಧರ್ಮದಲ್ಲೂ ಇಲ್ಲ" ಎನ್ನುವ ಉತ್ತರ ನಮ್ಮ ಚಿಂತಕರ ಕಿವಿಗೆ ಬಿದ್ದಿತೆ? ಅಥವಾ ಜಾಣ ಕಿವುಡೆ? 

ಚೀನಾದ ಮಾರುಕಟ್ಟೆ ಕುಸಿತ ಜಗತ್ತಿನ ಮೇಲೆ ಬೀರುವ ಪರಿಣಾಮದ ಕುರಿತ ಪ್ರಶ್ನೆಗೆ, ಸಾಮಾನ್ಯವಾಗಿ ಎಲ್ಲರೂ ಅದರಿಂದ ಆಗುವ ನಕಾರಾತ್ಮಕ ಅಂಶಗಳನ್ನೇ ಹೇಳುತ್ತಾರೆ, ನಿಕೋಲಸ್ ಅದಕ್ಕೆ ತದ್ವಿರುದ್ದ  'ಏರಿದ್ದು ಇಳಿಯಲೇಬೇಕು' ಎನ್ನುವುದು ಪ್ರಕೃತಿ ನಿಯಮ, ಇಳಿಕೆಯೇ ಮತ್ತೊಂದು ಮಹಾನ್ ಏರಿಕೆಗೆ ಕಾರಣ ಅಲ್ಲವೇ?  ಎಲ್ಲವೂ ಏರುತ್ತಲೇ ಇರುವುದಕ್ಕೆ ಹೇಗೆ ಸಾಧ್ಯ? ಇಳಿಕೆ ಮಾರುಕಟ್ಟೆಗೆ ಅವಶ್ಯವಾಗಿ ಬೇಕಾದ ಟಾನಿಕ್, ನೋಡಿ ಇಳಿಕೆಯ ಸಮಯದಲ್ಲಿ ಸಟ್ಟಾ ವ್ಯಾಪಾರಿ (speculator ) ಓಡಿ ಹೋಗುತ್ತಾನೆ, ನಿಜವಾದ ಹೂಡಿಕೆದಾರ(Investor) ನೆಲ ಕಚ್ಚಿ ನಿಲ್ಲುತ್ತಾನೆ, ಹಾಲಿನಿಂದ ನೀರನ್ನು ಬೇರ್ಪಡಿಸುವುದು ಇದರಿಂದ ಸಾಧ್ಯ. ಇಳಿಕೆ ಎಲ್ಲಾ ಸಮಯದಲ್ಲೂ ಕೆಟ್ಟದ್ದೇ ಆಗಿರಬೇಕು ಎಂದೇನು ಇಲ್ಲ ಎನ್ನುವುದು ಈತನ ನಿಲುವು. 

ಕುಸಿದ  ಕಚ್ಚಾ ತೈಲ ಬೆಲೆಯಿಂದ 100 ಬಿಲಿಯನ್ ಅಮೆರಿಕನ್ ಡಾಲರ್ ರಿಸೆರ್ವ್ ಕಳೆದು ಕೊಂಡಿರುವ ಸೌದಿ ಅರೇಬಿಯಾ ಈ ವರ್ಷ ಒಂದಷ್ಟು ಸುಧಾರಣೆ ಕಾಣಲಿದೆ, ಕುಸಿದ ತೈಲ ಬೆಲೆಯ ಹೆಚ್ಚು ಲಾಭ ಪಡೆದದ್ದು  ಭಾರತ! ಏರಿಕೆ ಮತ್ತು ಇಳಿಕೆ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಸದ್ಯದ ಪರಿಸ್ಥಿತಿಯಲ್ಲಿ ಏರುತ್ತಿರುವ ತೈಲ ಬೆಲೆ ಭಾರತಕ್ಕೆ ಒಳ್ಳೆಯದಲ್ಲ. ಜಾಗತಿಕ ರಾಜಕೀಯ ಚದುರಂಗದಲ್ಲಿ ಯಾವುದೊ ಒಂದು ದೇಶವನ್ನ ಗಮದಲ್ಲಿ ಇರಿಸಿಕೊಂಡು ತೆಗೆದುಕೊಂಡ ನಿರ್ಧಾರ ಹತ್ತಾರು ದೇಶಗಳಿಗೆ ಪ್ರತಿಕೂಲವಾಗಿ ಮತ್ತು ಇನ್ನೊಂದಷ್ಟು ದೇಶಗಳಿಗೆ ಅನುಕೂಲವಾಗಿ ಬದಲಾಗುತ್ತದೆ. 

ಸರಕಾರ ಹಾಗು ಭಾರತೀಯ ರಿಸರ್ವ್ ಬ್ಯಾಂಕ್ ನಡುವಿನ ಸಂಬಂಧ, ಫಿಸ್ಕಲ್ ಟಾರ್ಗೆಟ್, ಇನ್ಫ್ಲೇಶನ್ ಟಾರ್ಗೆಟ್ ಗಳ ನಡುವಿನ ತಿಕ್ಕಾಟ ದ ಬಗ್ಗೆ ಗಮನ ಸೆಳೆದಾಗ, ಇನ್ಫ್ಲೇಶನ್ ಗುರಿಯಾಗಿರಬೇಕೆ ಹೊರತು ಫಿಸ್ಕಲ್ ಅಲ್ಲ ಎನ್ನುವುದು ಇವರ ನೇರ ನುಡಿ. ಇತ್ತೀಚಿನ ದಿನಗಳಲ್ಲಿ ಫಿಸ್ಕಲ್ ಡೆಫಿಸಿಟ್ ಎನ್ನುವುದು ಯಾವುದೇ ಕಾರಣಕ್ಕೂ ಅಭಿವೃದ್ಧಿ ಕುಂಠಿತವಾಗಲು ಬಳಕೆಯಾಗಬಾರದು ಎನ್ನುವ ಹೊಸ ಕೂಗು ಜಾಗತಿಕ ಮಟ್ಟದಲ್ಲಿ ಎದ್ದಿದೆ. ಅಂದರೆ ಉದಾಹರಣೆ ನೋಡಿ ಸರಕಾರದ ಒಟ್ಟು ಆದಾಯ ನೂರು ರೂಪಾಯಿ ಎಂದುಕೊಳ್ಳಿ, ಸರಕಾರದ ಖರ್ಚು ನೂರಿಪತ್ತು ರೂಪಾಯಿ ಎಂದುಕೊಳ್ಳಿ. ಇಲ್ಲಿ ಆದಾಯಕ್ಕಿಂತ ಖರ್ಚು ಇಪತ್ತು ರೂಪಾಯಿ ಜಾಸ್ತಿಯಿದೆ. ಜಗತ್ತಿನ ಎಲ್ಲಾ ಸರಕಾರಗಳು ಇಂತಹ ಸಂದರ್ಭದಲ್ಲಿ ಆದಾಯದ ಜೊತೆ ಖರ್ಚನ್ನ ಸರಿದೂಗಿಸಲು ಖರ್ಚನ್ನ ಕಡಿತಗೊಳಿಸುತ್ತಾರೆ. ಹೀಗೆ ಕಡಿತವಾಗುವುದು ವಿಜ್ಞಾನ ಶೋಧನೆ, ವೈದ್ಯಕೀಯ ಶೋಧನೆಗಳು ಅಥವಾ ಶೈಕ್ಷಣಿಕ ಅನುದಾನದಲ್ಲಿ ಕಡಿತ ಮಾಡುತ್ತವೆ. ಮಿಲಿಟರಿ ಮತ್ತು ಶಸ್ತ್ರಾಸ್ತ ಖರೀದಿಗೆ ಮೀಸಲಿಟ್ಟ ಒಂದು ರೂಪಾಯಿ ಕೂಡ ಕಡಿತವಾಗುವುದಿಲ್ಲ. ಅರ್ಥ ಇಷ್ಟೇ ಜಗತ್ತಿನ ಎಲ್ಲಾ ದೇಶಗಳು ಹಣವಿಲ್ಲ ಎಂದ ತಕ್ಷಣ ಕಡಿಮೆ ಮಾಡುವುದು ಸಂಶೋಧನೆಗೆ ಮೀಸಲಿಟ್ಟ ಹಣವನ್ನ, ನಂತರ ಪಾರ್ಕು ರಸ್ತೆಗೆ ಇಟ್ಟ ಹಣ ಕಡಿತಗೊಳ್ಳುತ್ತದೆ. ಈಗಿನ ಹೊಸ ಕೂಗು ಏನೆಂದರೆ ಕಡಿಮೆಯಾಗಿರುವ ಆ ಇಪ್ಪತ್ತು ರೂಪಾಯಿಯನ್ನ ಮುದ್ರಿಸಿ ಎನ್ನುವುದು! ಪಪೆರ್ನಲ್ಲಿ ಮುದ್ರಿತ ಮೌಲ್ಯ ಹೊಂದಿರುವ ಹಣವಿಲ್ಲ ಎನ್ನುವ ಕಾರಣಕ್ಕೆ ಕೆಲಸ ನಿಲ್ಲಬಾರದು ಎನ್ನುವುದು ಇವರ ಕೂಗು. ಇದು ಅಷ್ಟು ಸುಲಭವೂ ಅಲ್ಲ ಏಕೆಂದರೆ ಹೀಗೆ ಹಣವನ್ನ ಮುದ್ರಿಸುತ್ತಾ ಹೋದರೆ ನಮ್ಮ ಹಣದ ಮೌಲ್ಯ ಕುಸಿಯುತ್ತ ಹೋಗುತ್ತದೆ. ಜೊತೆಗೆ ಹಣದುಬ್ಬರ ಹೆಚ್ಚಾಗುತ್ತದೆ. ಅದಕ್ಕೆ ಫಿಸ್ಕಲ್ ಡೆಫಿಸಿಟ್ ಬಗ್ಗೆ ತೆಲೆಕೆಡಿಸಿ ಕೊಳ್ಳುವುದಕ್ಕಿಂತ ಇನ್ಫ್ಲೇಶನ್ ಅಥವಾ ಹಣದುಬ್ಬರದ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಳ್ಳ ಬೇಕಾಗಿದೆ. 2019 ಕೇಂದ್ರದ ಚುನಾವಣೆ ವರ್ಷ. ಈ ನಿಟ್ಟಿನಲ್ಲಿ ಹಣದುಬ್ಬರ ಕಡಿಮೆ ಮಾಡುವುದು ಮತ್ತು ಅದನ್ನ ಹಿಡಿತದಲ್ಲಿ ಇಟ್ಟು ಕೊಳ್ಳುವುದು ಬಹಳ ಮುಖ್ಯ.

ನಸ್ಸಿಂ ನಿಕೋಲಸ್ ತಲೇಬ್ ಸಂಘ ಪರಿವಾರದವರಲ್ಲ, ಭಕ್ತನೂ ಅಲ್ಲ, ಅವರೊಬ್ಬ ವಿಶ್ಲೇಷಕ, ಕಪ್ಪನ್ನು ಕಪ್ಪೆಂದು, ಬಿಳಿಯನ್ನು ಬಿಳಿ ಎಂದು ಹೇಳಲು ಸಂಕೊಚಿಸದ ವ್ಯಕ್ತಿ, ನಮ್ಮಲ್ಲಿ ಹಲವರಿಗೆ ಮಾತ್ರ ಎಲ್ಲವನ್ನೂ ಕಾಮಾಲೆ ಕಣ್ಣಿಂದ ನೋಡುವ ಬುದ್ದಿ! ಬದಲಾವಣೆ ಜಗದ ನಿಯಮ, ಅವರೂ ಬದಲಾಗುತ್ತಾರೆ ಎಂದು ಆಶಿಸೋಣ. 

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
ಸಂಬಂಧಿಸಿದ್ದು...

ಲೇಖಕರ ಕುರಿತು : ಕಳೆದ ಎರಡು ದಶಕದಿಂದ ಆಂತರಿಕ ಲೆಕ್ಕ ಪರಿಶೋಧಕರಾಗಿ ದುಬೈ ಮತ್ತು ಯೂರೋಪಿನ ವಿತ್ತ ಪ್ರಪಂಚದಲ್ಲಿ ಬದುಕು ಕಂಡು ಕೊಂಡಿರುವ ಶ್ರೀ. ರಂಗಸ್ವಾಮಿ ಮೂಕನಹಳ್ಳಿಯವರು ಹವ್ಯಾಸಿ ಬರಹಗಾರರು. ವೃತ್ತಿ ಮತ್ತು ಪ್ರವೃತ್ತಿಯ ಸಲುವಾಗಿ ಐವತ್ತಕ್ಕೂ ಹೆಚ್ಚು ದೇಶಗಳ ಸುತ್ತಿರುವ ಲೇಖಕರು ತಾವು ಕಂಡ ದೇಶಗಳಷ್ಟೇ ಅಲ್ಲದೆ ಜಗತ್ತಿನ ಆರ್ಥಿಕ ಸ್ಥಿತಿಗತಿ ಬಗ್ಗೆ ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿಗೆ ಲೇಖನಗಳ ಬರೆದಿದ್ದಾರೆ. ಇವರು ಕಂಡ ದೇಶಗಳ ಪ್ರವಾಸಿ ಕಥನ ತರಂಗ, ವಿಜಯ ನೆಕ್ಸ್ಟ್ ಮತ್ತು ಡಿಜಿಟಲ್ ಕನ್ನಡದಲ್ಲಿ ಲೇಖನ ಮತ್ತು ಸರಣಿ ರೂಪದಲ್ಲಿ ಪ್ರಕಟವಾಗಿವೆ. ಹಣಕ್ಲಾಸು ಕನ್ನಡಪ್ರಭ.ಕಾಮ್ ನಲ್ಲಿ ಪ್ರತಿ ಗುರುವಾರ ಪ್ರಕಟವಾಗುವ ಅಂಕಣ ಬರಹ.
Posted by: SBV | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Hanaclassu, Nassim Nicholas Taleb, Modi, ಹಣಕ್ಲಾಸು, ನಸ್ಸಿಂ ನಿಕೋಲಸ್ ತಲೇಬ್, ಮೋದಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS