Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Amritsar train accident: PM Narendra Modi approves financial relief of Rs 2 lakh to kin of dead in tragedy

ಅಮೃತಸರ್ ರೈಲು ದುರಂತ: ಮೃತ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರಕ್ಕೆ ಪ್ರಧಾನಿ ಅನುಮೋದನೆ

ಸಂಗ್ರಹ ಚಿತ್ರ

ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿ ತೆರೆ

Two Women Agree To Return Amid Priests

'ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ಮುಚ್ಚಿ ಬಿಡುತ್ತೇವೆ'; ಅರ್ಚಕರ ಪ್ರತಿಭಟನೆಗೆ ಮಣಿದ ಪತ್ರಕರ್ತೆಯರು ಕೊನೆಗೂ ವಾಪಸ್!

DV Sadananda Gowda

#MeToo ಸುಳಿಯಲ್ಲಿ ಸದಾನಂದಗೌಡ? ಇದಕ್ಕೆ ಕೇಂದ್ರ ಸಚಿವರ ಪ್ರತಿಕ್ರಿಯೆ!

amitabh bachchan

ಉತ್ತರ ಪ್ರದೇಶದ 850 ರೈತರ ಸಾಲ ತೀರಿಸಲಿದ್ದಾರೆ 'ಬಾಲಿವುಡ್ ಬಿಗ್ ಬಿ' ಅಮಿತಾಬ್ ಬಚ್ಚನ್!

Azhar Ali

ಪಾಕ್‌ನ ಅಜರ್ ಫನ್ನಿ ರನೌಟ್ ಬಳಿಕ ಮತ್ತೊಂದು ಫನ್ನಿ ರನೌಟ್, ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

File Image

ಗಿಡ ಬೆಳೆಸಿ ಅಂಕ ಗಳಿಸಿ! ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಲು ಅರಣ್ಯ ಇಲಾಖೆ ಹೊಸ ಯೋಜನೆ

The Villain

ಕನ್ನಡ ಚಿತ್ರರಂಗದ ದಾಖಲೆಗಳೆಲ್ಲಾ ಧೂಳಿಪಟ ಮಾಡಿದ ದಿ ವಿಲನ್, ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತ?

File Image

ಬೆಂಗಳೂರು: ಸ್ನೇಹಿತೆಯನ್ನು ಕೆಣಕಿದ್ದಕ್ಕೆ ವಿರೋಧ, ಬಿಯರ್ ಬಾಟಲಿಯಿಂದ ಕತ್ತು ಸೀಳಿ ಯುವಕನ ಬರ್ಬರ ಹತ್ಯೆ!

Mahesh Babu

ಟಾಲಿವುಡ್‍ ಪ್ರಿನ್ಸ್ ಮಹೇಶ್ ಬಾಬುಗೆ ಕನ್ನಡ, ಕನ್ನಡಿಗರೆಂದರೆ ಅಷ್ಟೊಂದು ತಿರಸ್ಕಾರವೇಕೆ?

Vishalakshidevi

ರಾಜಮಾತೆ ಪ್ರಮೋದಾದೇವಿ ಒಡೆಯರ್ ನಾದಿನಿ ವಿಶಾಲಾಕ್ಷಿದೇವಿ ನಿಧನ

Prime Minister Modi at Shirdi Sai Baba Mandir

ಸಾಯಿಬಾಬಾ ಸಮಾಧಿಸ್ಥರಾಗಿ 100 ವರ್ಷ: ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದ ಪ್ರಧಾನಿ

Amy Jackson

'ಸ್ಯಾಂಡಲ್ವುಡ್' ಬದಲಿಗೆ 'ಕಾಲಿವುಡ್' ಎಂದು ಟ್ವೀಟಿಸಿ ಕನ್ನಡಿಗರಿಂದ ಮಂಗಳಾರತಿ ಮಾಡಿಸಿಕೊಂಡ ಆ್ಯಮಿ ಜಾಕ್ಸನ್!

ಮುಖಪುಟ >> ಅಂಕಣಗಳು

ರಾಮನ ಪಟ್ಟಾಭಿಷೇಕದ ಸುದ್ದಿ ಕೇಳಿ ಸಂತಸಗೊಂಡಿದ್ದಳು ಕೈಕೆ!

ರಾಮಾಯಣ ಅವಲೋಕನ-130
Kaikeyi-Manthara

ಕೈಕೆ-ಮಂಥರೆ

(ವಾಲ್ಮೀಕಿ ಮಹರ್ಷಿಗಳೇ ಹಾಗೆ; ಪರಿಚಯ ಮಾಡಿಸುವಾಗಲೇ ಆ ಪಾತ್ರದ ಯೋಗ್ಯತೆ ನಿರ್ಣಯವಾಗಿಬಿಡುತ್ತದೆ. ತಮ್ಮ ಕಾವ್ಯದ ಮೊದಲ ಪದಗಳೆರಡರಿಂದಲೇ ಶ್ರೀಮದ್ರಾಮಾಯಣದ ಔನ್ನತ್ಯವನ್ನು, ಭಾರತೀಯ ಸಂಸ್ಕೃತಿಯ ಸಂದೇಶವನ್ನು ಅರ್ಧ ಶ್ಲೋಕದಲ್ಲಿ "ತಪಃ ಸ್ವಾಧ್ಯಾಯ ನಿರತಂ" ಎಂದು ಹೇಳಿ ಬೆಳಗಿದ್ದರು! ಹದಿನಾರು ಗುಣಗಳ ಪಟ್ಟಿ ಮಾಡಿ ಅಂತಹ ಷೋಡಶ ಗುಣ ಗಂಭೀರ, ಅಷ್ಟು ಸುಲಭವಲ್ಲ; ಬಹು ವಿರಳ; ಬಹಳ ಕಷ್ಟಸಾಧ್ಯ ("ಬಹವೋ ದುರ್ಲಭಾಶ್ಚೈವ ಯೇ ತ್ವಯಾ ಕೀರ್ತಿತಾ ಗುಣಾಃ") ಎಂದು ಹೇಳಿ ಶ್ರೀರಾಮರ ಪಾತ್ರಕ್ಕೆ ದೃಢ ಬುನಾದಿಯನ್ನು ಹಾಕಿ, ಅಂತಹ ಅತ್ಯಂತ ವಿರಳ ಪಾತ್ರ, ಭವ್ಯ ಪಾತ್ರ, ಗುಣಗಣಿಯೆಂದರೆ ದಶರಥ ಪುತ್ರ ಶ್ರೀರಾಮ 
(ಇಕ್ಷ್ವಾಕು ವಂಶ ಪ್ರಭವೋ ರಾಮೋ ನಾಮ ಜನೈಃ ಶ್ರುತಃ) 
ಎಂದು ಹೇಳಿ, ತಮ್ಮ ನಾಯಕನನ್ನು ಪರಿಚಯಿಸಿದ್ದರು. ಇದು ಆದಿಕವಿಯ ಪಾತ್ರ ಚಿತ್ರ ಪ್ರಾವೀಣ್ಯತೆ! ಇದೀಗ ಮೊಂಕಾಗಿ ಪ್ರವೇಶಿಸಿ, ಭೂತ ನೃತ್ಯ ಮಾಡಿ, ಪ್ರಶಾಂತ ಕೊಳವನ್ನು ಕಲಕಿ, ನಷ್ಟ-ಕಷ್ಟಗಳಿಗೆ ನೂಕಿ, ತಾನೂ ಹತಭಾಗ್ಯಳಾಗಿ, ಬಂದಂತೇ ಹೆಸರು ಹಾಳು ಮಾಡಿಕೊಂಡು ಹೋದ, ಯುಗ-ಯುಗಗಳಿಂದ ಜನಪದರ ಹೀಯ್ಯಾಳಿಕೆಗೆ, ಭರ್ತ್ಸ್ಯನೆಗೆ ತುತ್ತಾಗಿರುವ, ಪೋಷಕ ಪಾತ್ರವಾದರೂ ಪಿಶಾಚಿಯ ಲಂಗತೊಟ್ಟ ಕರಾಳಿಯ ಪ್ರವೇಶ ಮಾಡಿಸುತ್ತಿದ್ದಾರೆ! ಹೇಗೆ? ಮಧ್ಯಾನಃವಾದರೂ ಮಂಚದ ಮೇಲೆ ಮಲಗಿರುವ, ದಾಸಿಯಿಂದಲೇ ಬೈಸಿಕೊಳ್ಳುವ ರಾಣಿಯನ್ನು; ಕಿರಿರಾಣಿಯನ್ನು; ಮುದ್ದಿನ ರಾಣಿಯನ್ನು!!!)

ಅರಮನೆಯೇ ಹೊತ್ತಿ ಉರಿಯುತ್ತಿದ್ದರೆ ಇವಳಿನ್ನೂ ಹಗಲುಗನಸು ಕಾಣುತ್ತಿದ್ದಾಳಲ್ಲಾ! ಹೊಟ್ಟೆ ಉರಿದುಕೊಂಡ ಮಂಥರೆ ಕೈಕೆಯನ್ನು ಅಲುಗಿಸಿ ಕಿರುಚಿದಳು; "ಏನೇ ಮೂರ್ಖಳೇ! ಏಕೇ! ಏಕೆ ಮಲಗಿದ್ದೀಯೇ?! ಅಯ್ಯೋ ಭಯಾನಕ ಪರಿಸ್ಥಿತಿ ನಿನ್ನನ್ನು ಸುತ್ತುಗಟ್ಟಿರುವುದು ಗೊತ್ತಾಗುತ್ತಿಲ್ಲವೆ? ಅಯ್ಯೋ! ಅನಿಷ್ಠಳೇ! ಆ ಗಂಡ ನಿನ್ನ ಸೌಭಾಗ್ಯ ಎಂದು ಕೊಚ್ಚಿಕೊಳ್ಳುತ್ತಿದ್ದೆಯಲ್ಲಾ, ಆ ಭಾಗ್ಯ ಅತ್ಯಂತ ಚಂಚಲ; ವೈಶಾಖದಲ್ಲಿ ಒಣಗಿ ಹೋಗುವ ನದಿಯಂತೆ!" 
(ಉತ್ತಿಷ್ಠ ಮೂಢೇ ಕಿಂ ಶೇಷೇ ಭಯಂ ತ್ವಾಂ ಅಭಿವರ್ತತೇ
ಉಪಪ್ಲುತ ಮಘೌಘೇನ ಕಿಂ ಆತ್ಮಾನಂ ನ ಬುದ್ಧ್ಯಸೇ
ಅನಿಷ್ಠೇ ಸುಭಗಾಕಾರೇ ಸೌಭಾಗ್ಯೇನ ವಿಕತ್ಥಸೇ
ಚಲಂಹಿ ತವಸೌಭಾಗ್ಯಂ ನದ್ಯಾಃ ಸ್ರೋತ ಇವ ಉಷ್ಮಗೇ)
ಕೈಕೆ ಹೊರಳಿದಳು. ಮೊದಲೇ ವಿಕಾರ ಕುಬ್ಜೆ, ಈಗ ಮತ್ತಷ್ಟು ಕೆಟ್ಟದಾಗಿದ್ದಾಳೆ. ಈಗ ಅವಳ ಮಾತು ಮತ್ತೂ ಗಬ್ಬೆದ್ದಿದೆ. ಹೊದಿಕೆಯನ್ನೆಳೆದುಕೊಳ್ಳುತ್ತ ಕೇಳಿದಳು; "ಏಕೆ? ಯಾಕೆ ನಿನ್ನ ಮುಖದಲ್ಲಿ ನೋವು ಕಾಣುತ್ತಿದೆ! ಏಕೋ ಅಳುತ್ತಿರುವಂತಿದೆ!" 
(ವಿಷಣ್ಣ ವದನಾಂ ಹಿ ತ್ವಾಂ ಲಕ್ಷಯೇ ಭೃಶ ದುಃಖಿತಾಂ)
’ಒಡತಿ (?) ತನ್ನ ನೋವು ಗಮನಿಸಿದಳಲ್ಲ ಸಧ್ಯ!’ ಎಂದುಕೊಳ್ಳುತ್ತ ಹೊದಿಕೆಯನ್ನೆಳೆದು ಕಿತ್ತು ಹಾಕಿ, ಅಳುವುದಕ್ಕೇ ಆರಂಭ ಮಾಡಿ ಮಂಚದ ಕೆಳಗೆ ಕುಸಿದು ಬಿದ್ದು, ತನ್ನ ನೋವನ್ನೆಲ್ಲ ಮಾತಿಗೆ ತುಂಬಿದಳು. "ಅಯ್ಯೋ ಹುಡುಗಿ. ನೀನು ಇನ್ನು ಎಂದೆಂದಿಗೂ ಏಳದಂತೆ ಭಾರಿ ಹಂಚಿಕೆ ನಡೆಯುತ್ತಿದೆ. ಗೊತ್ತಾ ನಿನಗೆ? ನಿನ್ನ ಗಂಡ ರಾಮನನ್ನ ಯುವರಾಜನನ್ನಾಗಿ ಮಾಡ್ತಾನಂತೆ! ಅದನ್ನ ಕೇಳ್ತಿದ್ದ ಹಾಗೆ ನನಗೆ ಹೆದರಿಕೆ, ಸಂಕಟ, ನೋವು, ಎಲ್ಲಾ ಒಟ್ಟಿಗೆ ಆಯ್ತು. ಮೈಯಲ್ಲಾ ಉರೀತಾ ಇದೆ. ನಿನಗೇನಾದರೂ ಒಳ್ಳೇದು ಮಾಡೋಣ ಅಂತ ಇಲ್ಲಿಗೆ ಬಂದೆ." 
(ಅಕ್ಷಯ್ಯಂ ಸುಮಹದ್ದೇವಿ ಪ್ರವೃತ್ತಂ ತದ್ವಿನಾಶನಂ
ರಾಮಂ ದಶರಥೋ ರಾಜ ಯೌವ್ವರಾಜ್ಯೇ ಅಭಿಷೇಕ್ಷ್ಯತಿ
ಸಾಸ್ಮ್ಯಗಾಧೇ ಭಯೇ ಮಗ್ನಾ ದುಃಖಶೋಕ ಸಮನ್ವಿತಾ
ದಹ್ಯಮಾನ ಅನಲೇನ ಇವ ತ್ವತ್ ಹಿತಾರ್ಥಂ ಇಹ ಆಗತಾ) 
ಲಗುಬಗೆಯಿಂದ ಎದ್ದಳು ಕೈಕೆ! ’ಈಗಾಗಲೇ ಒಳ್ಳೆಯದೇ ಆಗಿರುವಾಗ ಇವಳೇಕೆ ಹೀಗೆ ಭಯಪಡುತ್ತಿದ್ದಾಳೆ?! ’ಕೈಕೆಗೆ ಅರ್ಥವೇ ಆಗಲಿಲ್ಲ! ಕೈಕೆಯ ಕೈಯನ್ನು ಹಿಡಿದುಕೊಂಡು, " ಅಯ್ಯೋ! ಎಂಥ ಒಳ್ಳೆಯವಳು ನೀನು. ನಿನ್ನ ಗಂಡನೋ! ಮಾತನಾಡುವುದು ಧರ್ಮ. ಒಳಗೆ ಮಹಾ ಮೋಸಗಾರ. ನಿನ್ನ ಮುಂದೆ ಮೃದುವಾಗಿ ಮಾತಾಡುತ್ತಲೇ ಒಳಗೆ ಕ್ರೂರಿಯಾಗಿದ್ದಾನೆ. ಅವನು ನಿನ್ನ ಹತ್ತಿರ ಸಿಹಿ ಸಿಹಿ ಮಾತಾಡುತ್ತಲೇ ಕೌಸಲ್ಯೆಗೆ ಒಳ್ಳೆಯದು ಮಾಡಿದ್ದಾನೆ. ಅವನು ನಿನ್ನ ಮಗನನ್ನ ಸೋದರಮಾವನ ಮನೇಗೆ ಕಳಿಸಿ, ಅವನಿಲ್ಲದಾಗ ರಾಮನಿಗೆ ನಾಳೆ ಬೆಳಿಗ್ಗೆ ಪಟ್ಟ ಕಟ್ತಾ ಇದಾನೆ. ಅಯ್ಯೋ ಮುಗ್ಧೆ, ನಿನ್ನ ವೈರಿಯನ್ನ ಗಂಡ ಅಂದ್ಕೊಂಡೆಯಲ್ಲೇ! ಕೃಷ್ಣ ಸರ್ಪಾನ ತೊಡೆ ಮೇಲೆ ಮಲಗಿಸಿಕೊಂಡೆಯಲ್ಲೇ! ಕಾಲ ಮೀರೋಕೆ ಮುಂಚೆ ಏನಾದರೂ ಬೇಗ ಮಾಡು. ನಿನ್ನನ್ನ, ನಿನ್ನ ಮಗನ್ನಾ, ನನ್ನನ್ನಾ ಕಾಪಾಡಿಕೋ! . .. .. .. ಯಾಕೆ ನನ್ನ ಮಾತು ನಿನಗೆ ಆಶ್ಚರ್ಯ ಆಗ್ತಾ ಇದೆಯಾ?" 
(ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧ ಭಾವೇ ನ ಜಾನೀಷೇ ತೇನೈವ ಮತಿಸಂಧಿತಾ
ಉಪಸ್ಥಿತಂ ಪ್ರಯುಂಜಾನಸ್ತ್ವಯಿ ಸಾಂತ್ವಮನರ್ಥಕಂ
ಅರ್ಥೇ ನೈವಾದ್ಯತೇ ಭರ್ತಾ ಕೌಸಲ್ಯಾಂ ಯೋಜಯಿಷ್ಯತಿ
ಅಪವಾಹ್ಯ ಸದುಷ್ಟಾತ್ಮಾ ಭರತಂ ತವ ಬಂಧುಷು
ಕಾಲ್ಯೇ ಸ್ಥಾಪಯಿತ್ವಾ ರಾಮಂ ರಾಜ್ಯೇ ನಿಹತಕಂಟಕೇ 
ಶತ್ರುಂ ಪತಿ ಪ್ರವಾದೇನ ಮಾತ್ರೇವ ಹಿತಕಾಮ್ಯಯಾ
ಅಹೀ ವಿಷ ಇವಾಂಕೇನ ಬಾಲೇ ಪರಿಹೃತಸ್ತ್ವಯಾ
ಸಾ ಪ್ರಾಪ್ತ ಕಾಲಂ ಕೈಕೇಯೀ ಕ್ಷಿಪ್ರಂ ಕುರುಹಿತಂ ತವ
ತ್ರಾಯಸ್ವ ಪುತ್ರಮಾತ್ಮಾನಂ ಮಾಂ ಚ ವಿಸ್ಮಯ ದರ್ಶನೇ )
ಮಂಚ ಇಳಿದ ಕೈಕೆ ಕೊಳಕು ಮಂಥರೆಯನ್ನು ಅಪ್ಪಿಕೊಂಡೇ ಬಿಟ್ಟಳು. ಸಂತೋಷ ಅರಳಿತು! ಕೊರಳಲ್ಲಿದ್ದ ಹಾರ ತೆಗೆದು ಮಂಥರೆಯ ಕೊರಳಿಗೆ ಹಾಕಿದಳು. ಓಹ್! ಮಂಥರೆ ಎಂಥ ಒಳ್ಳೆ ಸುದ್ದಿ ಹೇಳಿದೆ! ಎಂಥ ಆನಂದದ ಸುದ್ದಿ ತಿಳಿಸಿದೆ! ನಿನಗೆ ಬೇಕಾದ ಯಾವ ಬಹುಮಾನ ಕೊಡಲಿ ಹೇಳು! ನನಗೆ ರಾಮನಲ್ಲೂ, ಭರತನಲ್ಲೂ ವ್ಯತ್ಯಾಸವೇ ಇಲ್ಲ! ಯಜಮಾನರು ರಾಮನಿಗೆ ಪಟ್ಟಾಭಿಷೇಕ ಮಾಡುವುದು ಕೇಳಿ ನನಗೆ ಪರಮ ಸಂತೋಷವಾಗಿದೆ. ಏನಾದರೂ ವರ ಬೇಕಿದ್ದರೆ ಕೇಳಿಕೋ! ಕೊಡ್ತೀನಿ! " 
(ಇದಂತು ಮಂಥರೇ ಮಹ್ಯಮಾಖ್ಯಾಸಿ ಪರಮಂ ಪ್ರಿಯಂ
ಏತನ್ಮೇ ಪ್ರಿಯಂ ಆಖ್ಯಾತಂ ಭೂಯಃ ಕಿಂ ವಾ ಕರೋಮಿತೇ
ರಾಮೇ ವಾ ಭರತೇವಾ ಅಹಂ ವಿಶೇಷಂ ನ ಉಪಲಕ್ಷ್ಯತೇ
ತಸ್ಮಾತ್ ತುಷ್ಟೋಸ್ಮಿ ಯತ್ ರಾಜಾ ರಾಮಂ ರಾಜ್ಯೇ ಅಭಿಷೇಕ್ಷ್ಯತಿ 
ಪರಂ ವರಂ ತೇ ಪದದಾಮಿ ತಂ ವೃಣು)
-------೦೦೦೦೦------

-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com 

ಲೇಖಕರ ಕುರಿತು : ವಿದ್ವಾನ್ ಡಾ.ಪಾವಗಡ ಪ್ರಕಾಶ್ ರಾವ್ ಪ್ರಸಿದ್ಧ, ಬಹುಶೃತ ವಿದ್ವಾಂಸರು. 2003 ರಿಂದ ಚಂದನ ವಾಹಿನಿಯಲ್ಲಿ ಇವರು ನಡೆಸಿಕೊಡುತ್ತಿದ್ದ 'ಸತ್ಯದರ್ಶನ' ಕಾರ್ಯಕ್ರಮ 1,111 ಸಂಚಿಕೆಗಳನ್ನು ಪೂರೈಸಿ ಮುಕ್ತಾಯಗೊಂಡಿದ್ದು ಧರ್ಮ, ಧರ್ಮ ಗ್ರಂಥ, ಆಚರಣೆಗಳಿಗೆ ಸಂಬಂಧಿಸಿದಂತೆ ಜನರ ಸಂಶಯಗಳ ನಿವಾರಣೆಗೆ ಅಪಾರ ಜನಪ್ರಿಯತೆ ಗಳಿಸಿದೆ. ಸತ್ಯದರ್ಶನದೊಂದಿಗೆ ಭಗವದ್ಗೀತೆಯ 712 ಉಪನ್ಯಾಸಗಳು ಸೇರಿ ಒಟ್ಟು ದಾಖಲೆಯ 1823 ಉಪನ್ಯಾಸಗಳನ್ನು ನೀಡಿದ್ದು, ನಾಡಿದ ಪ್ರಸಿದ್ಧ ಸಂಸ್ಥೆಗಳು ಜ್ಞಾನ ಪ್ರಕಾಶ, ವಿದ್ಯಾ ವಿಶಾರದ, ಜ್ಞಾನ ಭಾಸ್ಕರ ಎಂಬ ಬಿರುದುಗಳನ್ನು ನೀಡಿ ಗೌರವಿಸಿವೆ. ತುಮಕೂರು ಹಾಗೂ ಮೈಸೂರು ವಿಶ್ವ ವಿದ್ಯಾನಿಲಯಗಳಿಂದ ಪಿಹೆಚ್ ಡಿ ಪದವಿ (ಡಾಕ್ಟೊರೇಟ್ ಗಳನ್ನು) ಗಳಿಸಿದ್ದಾರೆ.
Posted by: SBV | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Ramayana Avalokana, Kaikeyi, Rama's anointment, ರಾಮಾಯಣ ಅವಲೋಕನ, ರಾಮ ಪಟ್ಟಾಭಿಷೇಕ, ಕೈಕೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS