Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Utkal Express train derails in Muzaffarnagar, rescue operations on

ಉತ್ತರ ಪ್ರದೇಶ: ಹಳಿ ತಪ್ಪಿದ ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲು, 20 ಮಂದಿ ಸಾವಿನ ಶಂಕೆ, 70 ಪ್ರಯಾಣಿಕರಿಗೆ ಗಾಯ

Prime Minister Narendra Modi and Bihar chief minister Nitish Kumar (File photo)

ಎನ್ ಡಿಎ ಮೈತ್ರಿಕೂಟ ಸೇರುವ ಕುರಿತು ನಿರ್ಣಯ ಅಂಗೀಕರಿಸಿದ ಜೆಡಿ(ಯು)

Denotification case: Yeddyurappa moves High court to quash ACB FIR

ಎಸಿಬಿ ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಬಿಎಸ್‌ವೈ ಅರ್ಜಿ

H D Devegowda says, CM has reduced National Congress to Siddaramaiah Congress

ನಮ್ಮ ಮುಖ್ಯಮಂತ್ರಿಗಳು ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸಿದ್ದರಾಮಯ್ಯ ಕಾಂಗ್ರೆಸ್ ಮಾಡಿದ್ದಾರೆ: ದೇವೇಗೌಡ

Pahalaj Nihalani

ಸ್ಮೃತಿ ಇರಾನಿಯ ಕಾರಣದಿಂದ ನನ್ನನ್ನು ವಜಾಗೊಳಿಸಲಾಯಿತು: ಪಹ್ಲಾಜ್ ನಿಹ್ಲಾನಿ

ಜಿಜೆಎಂ ಮುಖ್ಯಸ್ಥ ಗುರುಂಗ್‌

ಡಾರ್ಜಿಲಿಂಗ್ ನಲ್ಲಿ ಬಾಂಬ್ ಸ್ಫೋಟ: ಜಿಜೆಎಂ ಮುಖ್ಯಸ್ಥ ಗುರುಂಗ್‌ ವಿರುದ್ಧ ಪ್ರಕರಣ ದಾಖಲು

YouTube

ಬ್ರೇಕಿಂಗ್ ನ್ಯೂಸ್ ಈಗ ಯೂಟ್ಯೂಬ್ ನಲ್ಲಿಯೂ ಲಭ್ಯ

BJP screams foul at Congress over cases against Yeddyurappa

ರಾಜಕೀಯ ದ್ವೇಷದಿಂದ ಯಡಿಯೂರಪ್ಪ ವಿರುದ್ಧ ಕೇಸ್ ದಾಖಲು: ಬಿಜೆಪಿ

FIR against former Kerala DGP Senkumar for allegedly forging documents

ನಕಲಿ ದಾಖಲೆ ಸೃಷ್ಟಿಸಿದ ಆರೋಪ: ಕೇರಳ ಮಾಜಿ ಡಿಜಿಪಿ ವಿರುದ್ಧ ಎಫ್ಐಆರ್ ದಾಖಲು

Jammu and Kashmir

ಪಿಡಿಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ ಉಗ್ರರು

A sign board in the Infosys campus at the Electronics City IT district in Bengaluru

ಸಿಕ್ಕಾ ರಾಜಿನಾಮೆ ಎಫೆಕ್ಟ್: ಗ್ರಾಹಕರಿಂದ ಷೇರು ಖರೀದಿಗೆ ಮುಂದಾದ ಇನ್ಫೋಸಿಸ್

ಮಗು-ವಿರಾಟ್ ಕೊಹ್ಲಿ ಚಿತ್ರ

ಕಲಿಕೆ ವೇಳೆ ಮಗುವಿನ ಮೇಲೆ ಮಹಿಳೆಯ ಮೃಗೀಯ ವರ್ತನೆ ಖಂಡಿಸಿದ ಕೊಹ್ಲಿ

The police is also taking help of volunteers to teach citizens how to pay proper respects to the national anthem

ಈ ನಗರದಲ್ಲಿ ಜನರ ದಿನದ ಕೆಲಸ ಪ್ರಾರಂಭವಾಗುವುದೇ ರಾಷ್ಟ್ರಗೀತೆಯಿಂದ!

ಮುಖಪುಟ >> ಕ್ರಿಕೆಟ್

1985ರ ದುಸ್ವಪ್ನದಿಂದ ಹೊರ ಬರುತ್ತದೆಯೇ ಪಾಕ್?: ಇಷ್ಟಕ್ಕೂ ಅಂದಿನ ಸರಣಿಯಲ್ಲಿ ಏನಾಗಿತ್ತು?

ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತಿದ್ದ ಪಾಕಿಸ್ತಾನ ಫೈನಲ್ ಸೋತಿತ್ತು, ಇತಿಹಾಸ ಮರುಕಳಿಸುತ್ತದೆಯೇ?
1985 Nightmare: Pressure on Pakistan to change history vs India

ಸಂಗ್ರಹ ಚಿತ್ರ

ನವದೆಹಲಿ: ಐಸಿಸಿ ಟೂರ್ನಮೆಂಟ್ ಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಜೇಯ ಸಾಧನೆ ಹೊಂದಿದ್ದು, 1985ರಲ್ಲಿ ಪಾಕಿಸ್ತಾನ ಅನುಭವಿಸಿದ್ದ ಅಘಾತ ಮತ್ತೆ ಮರುಕಳಿಸುತ್ತದೆ ಎಂಬ ಅಭಿಪ್ರಾಯವ್ಯಕ್ತವಾಗುತ್ತಿದೆ.

ಐಸಿಸಿ ಟೂರ್ನಮೆಂಟ್ ಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ದಾಖಲೆ ಅತ್ಯುತ್ತಮವಾಗಿದ್ದು, ಇಂದೂ ಕೂಡ ಭಾರತವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹೀಗಿದ್ದೂ ಪಾಕಿಸ್ತಾನ ಕೂಡ ಇತಿಹಾಸ ಬದಲಿಸುವ ಪಣತೊಟ್ಟಿದ್ದು,  ಇಂದು ಶತಾಯಗತಾಯಗತಾಯ ಗೆಲುವಿಗಾಗಿ ಸೆಣಸಲಿದೆ. ಇನ್ನು ಪ್ರಸಕ್ತ ಸಾಲಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ 1985ರ ಸರಣಿಯನ್ನೇ ಹೋಲುತ್ತಿದ್ದು, ಅಂದಿನ ಸರಣಿಯಲ್ಲೂ ಕೂಡ ಭಾರತ ತನ್ನ ಮೊದಲ ಪಂದ್ಯದಲ್ಲಿ  ಪಾಕಿಸ್ತಾನದ ವಿರುದ್ಧ ಜಯಭೇರಿ ಭಾರಿಸಿತ್ತು. ಅಂತೆಯೇ ಮತ್ತದೇ ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯದಲ್ಲೂ ರೋಚಕ ಜಯಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು.

1985ರ ವಿಶ್ವ ಚಾಂಪಿಯನ್ ಷಿಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಿತ್ತು. 1985 ಫೆಬ್ರವರಿ 20ರಂದು ಮೆಲ್ಬೋರ್ನ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೊದಲ ಪಂದ್ಯ ಆಯೋಜನೆಯಾಗಿತ್ತು.  ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಖಾಸಿಮ್ ಒಮರ್ ಅವರ ಅರ್ಧ ಶತಕದ ನೆರವಿನಿಂದಾಗಿ 50 ಓವರ್ ಗಳಲ್ಲಿ 183 ರನ್ ಗಳಿಸಿತ್ತು. ಭಾರತದ ರೋಜರ್ ಬಿನ್ನಿ 35 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು.

ಪಾಕಿಸ್ತಾನ ನೀಡಿದ್ದ 184 ರನ್ ಗಳ ಬೆನ್ನು ಹತ್ತಿದ ಭಾರತ 4 ವಿಕೆಟ್ ನಷ್ಟಕ್ಕೆ 45.5 ಓವರ್ ಗಳಲ್ಲಿ 184 ರನ್ ಸೇರಿಸಿ ಗೆಲುವು ಸಾಧಿಸಿತ್ತು. ಭಾರತದ ಪರ ಮಹಮದ್ ಅಜರುದ್ದೀನ್ ಅಜೇಯ 93 ರನ್ ಗಳಿಸಿದ್ದರೆ, ಸುನಿಲ್ ಗವಾಸ್ಕರ್  54 ರನ್ ಸಿಡಿಸಿದ್ದರು. ಪಾಕ್ ಪರ ಇಮ್ರಾನ್ ಖಾನ್ 27 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. 6 ವಿಕೆಟ್ ಗಳ ಅಂತರದಿಂದ ಭಾರತ ತನ್ನ ಮೊದಲ ಪಂದ್ಯವನ್ನು ಜಯಿಸಿ ಮುಂದಿನ ಹಂತಕ್ಕೆ ನಡೆದಿತ್ತು.

ಇನ್ನು ಉಭಯ ತಂಡಗಳು ಅದೇ ಸರಣಿಯಲ್ಲಿ ಫೈನಲ್ ತಲುಪಿದ್ದವು. 1985 ಮಾರ್ಚ್ 10 ರಂದು ಎಂಸಿಜಿ ಮೈದಾನದಲ್ಲಿ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆದಿತ್ತು. ಮೊದಲ ಪಂದ್ಯದಂತೆಯೇ ಫೈನಲ್ ನಲ್ಲೂ ಮೊದಲು  ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತ್ತು. ಪಾಕ್ ಪರ ಜಾವೆದ್ ಮಿಯಾಂದಾದ್ ಗಳಿಸಿದ್ದ 48 ರನ್ ಗಳೇ ವೈಯುಕ್ತಿಕ ಗರಿಷ್ಛ ಮೊತ್ತವಾಗಿತ್ತು. ಕಪಿಲ್ ದೇವ್ 23 ರನ್ ನೀಡಿ  3 ವಿಕೆಟ್ ಪಡೆದಿದ್ದರು.

ಪಾಕ್ ನೀಡಿದ 177 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 47.1 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು. ಕ್ರಿಸ್ ಶ್ರೀಕಾಂತ್ ಅವರು 67 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ  ಪಾತ್ರವಹಿಸಿದ್ದರು. ಪಾಕ್ ಪರ ಇಮ್ರಾನ್ ಖಾನ್ 28 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಅಂದು ಭಾರತ ಭರ್ಜರಿ 8 ವಿಕೆಟ್ ಗಳ ಅಂತರದಿಂದ ಫೈನಲ್ ಪಂದ್ಯ ಜಯಿಸಿ ವಿಶ್ವ ಚಾಂಪಿಯನ್ ಷಿಪ್ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಕ್ರಿಸ್  ಶ್ರೀಕಾಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಸರಣಿ ಕೂಡ ಅದೇ ಇತಿಹಾಸವನ್ನು ನೆನಪಿಸುವಂತಿದ್ದು, ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ್ದು, ಈ ಎರಡು ತಂಡಗಳೇ ಮತ್ತೆ ಫೈನಲ್ ತಲುಪಿವೆ.

ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : London, Cricket Offbeat, ICC Champions Trophy, Final Match, India, Pakistan, ಲಂಡನ್, ಕ್ರಿಕೆಟ್ ಸ್ವಾರಸ್ಯ, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಫೈನಲ್ ಪಂದ್ಯ, ಭಾರತ, ಪಾಕಿಸ್ತಾನ
English summary
Pakistan are ready to change the course of history in a clash that's "bigger than the Ashes" when they face arch-rivals India in the Champions Trophy final. Some estimates suggest Sunday's match between the sub-continental cricket giants at the Oval in south London could attract a worldwide television audience of more than a billion viewers.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement