Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Army chief General Bipin Rawat

ಗಂಭೀರ ಸಮಸ್ಯೆ ಇಲ್ಲ, ಆದರೆ ಸೇನಾ ಪಡೆ ಸನ್ನದ್ಧವಾಗಿದೆ: ಡೋಕ್ಲಾಮ್ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್

Virat Kohli

ಟೆಸ್ಟ್ ಸರಣಿ ಸೋಲು: ಪತ್ರಿಕಾ ಗೋಷ್ಠಿಯಲ್ಲಿ ತಾಳ್ಮೆ ಕಳೆದುಕೊಂಡ ವಿರಾಟ್ ಕೊಹ್ಲಿ

Police seized demonetized currency worth 100 crores from a residential premises in Kanpur, UP

ಕಾನ್ಪುರ: ಬೀಗ ಹಾಕಿದ್ದ ಮನೆಯಲ್ಲಿ ಕೈ ಹಾಕಿದಲ್ಲೆಲ್ಲಾ ರಾಶಿ-ರಾಶಿ ದುಡ್ಡಿನ ಕಂತೆಗಳು!

Goonda act against who instigate communal violence warns CM Siddaramaiah

ಕೋಮು ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಗೂಂಡಾ ಕಾಯ್ದೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Israeli PM Benjamin Netanyahu and PM Modi

ಗಾಳಿಪಟ ಹಾರಿಸಿ ಸಂಭ್ರಮಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು

Kamal Haasan-Rajinikanth

ಕಮಲ್ ಹಾಸನ್ ಅವರೊಂದಿಗಿನ ರಾಜಕೀಯ ಮೈತ್ರಿಗೆ ಕಾಲವೇ ಉತ್ತರಿಸುತ್ತದೆ: ರಜಿನಿಕಾಂತ್

Casteist remarks: Application filed in Mumbai court against Salman Khan, Shilpa Shetty

ಅವಹೇಳನಕಾರಿ ಭಾಷೆ ಬಳಕೆ: ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿ ವಿರುದ್ಧ ಕೋರ್ಟ್ ಗೆ ಅರ್ಜಿ

India suffer 135-run defeat in Centurion Test, lose series to South Africa

ಸೆಂಚುರಿಯನ್ ನಲ್ಲಿ ವಿಶ್ವದ ನಂ.1 ತಂಡಕ್ಕೆ ಮುಖಭಂಗ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಸೋಲು

Government accommodations for Ex PMs, Presidents and former CMs: Supreme Court asks views from Centre and states

ಮಾಜಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿಗಳಿಗೆ ಸರ್ಕಾರಿ ನಿವಾಸ: ಕೇಂದ್ರ, ರಾಜ್ಯಗಳ ಅಭಿಪ್ರಾಯ ಕೇಳಿದ ಸುಪ್ರೀಂ

No location on earth more beautiful, monumental than woman

ಹೆಣ್ಣಿನ ದೇಹದಷ್ಟು ಸುಂದರವಾದುದು ಈ ಭೂಮಿಯಲ್ಲಿ ಮತ್ತೊಂದಿಲ್ಲ: ರಾಮ್ ಗೋಪಾಲ್ ವರ್ಮಾ

Representational image

ಯೂಟ್ಯೂಬ್ ಚಾನೆಲ್ ಹಣಗಳಿಕೆ ನಿಯಮ 10,000 ವೀಕ್ಷಣೆಯಿಂದ ವರ್ಷಕ್ಕೆ 4 ಸಾವಿರ ಗಂಟೆ ವೀಕ್ಷಣೆಗೆ ಬದಲು

Manjunath and Bhagya

ಹಾಸನ: ದಶಕದ ಬಳಿಕ ಒಂದಾದ ಅಣ್ಣ-ತಂಗಿ, ಸಿನಿಮಾ ಕಥೆಯಂತಿದೆ ಇವರ ಜೀವನಗಾಥೆ

Man strangled after he finds wife with paramour

ಬೆಂಗಳೂರು: ಕಾಮಕೇಳಿ ವೇಳೆ ಸಿಕ್ಕಿಬಿದ್ದ ಪತ್ನಿಯಿಂದ ಪತಿಯ ಹತ್ಯೆ

ಮುಖಪುಟ >> ಕ್ರಿಕೆಟ್

ಬಾಂಗ್ಲಾ ಸೋಲಿಗೆ "ಮಾಸ್ಟರ್ ಮೈಂಡ್ ಧೋನಿ" ಕಾರಣ?; ಕೊಹ್ಲಿ ಹೇಳಿದ್ದೇನು!

ಜಾದವ್ ಗೆ ಓವರ್ ನೀಡುವಂತೆ ಕೊಹ್ಲಿಗೆ ಸಲಹೆ ನೀಡಿದ್ದ ಧೋನಿ, 25ನೇ ಓವರ್ ಬಳಿಕ ಬಾಂಗ್ಲಾ ರನ್ ವೇಗ ಕುಸಿತ
ICC Champions Trophy: Bowling Kedar Jadhav was MS Dhoni

ಧೋನಿ-ಕೊಹ್ಲಿ (ಸಂಗ್ರಹ ಚಿತ್ರ)

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಸೆಮಿ ಫೈನಲ್ ಪಂದ್ಯದಲ್ಲಿ ಕೇದಾರ್ ಜಾದವ್ ಗೆ ಬಾಲ್ ನೀಡುವಂತೆ ಧೋನಿ ಸಲಹೆ ನೀಡಿದ್ದರು. ಧೋನಿ ಸಲಹೆ ವರ್ಕೌಟ್ ಆಗಿ ಬಾಂಗ್ಲಾದೇಶದ ರನ್ ವೇಗಕ್ಕೆ ಕಡಿವಾಣ  ಬಿದ್ದಿತ್ತು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಒಂದು ಹಂತದಲ್ಲಿ ನಮ್ಮಿಂದ ಕೈ ಜಾರುತ್ತಿದ್ದ ಪಂದ್ಯವನ್ನು ಪುನಃ ನಮ್ಮ ಕಡೆ ವಾಲುವಂತೆ ಮಾಡಿದ್ದು, ಮಾಜಿ ನಾಯಕ ಎಂ.ಎಸ್‌. ಧೋನಿ ತೋರಿದ ಚಾಣಾಕ್ಷ ನಿರ್ಧಾರ. ಈ ಬದಲಾವಣೆಯಿಂದ ನಾವು ಬಾಂಗ್ಲಾ ವಿರುದ್ಧ ಸುಲಭ  ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಕೊಹ್ಲಿ ಹೇಳಿದ್ದಾರೆ. "ಬಾಂಗ್ಲಾ ಬ್ಯಾಟ್ಸ್‌ಮನ್‌ ಗಳಾದ ತಮೀಮ್‌ ಇಕ್ಬಾಲ್‌ ಮತ್ತು ಮುಷ್ಫೀಕರ್‌ ರಹೀಮ್‌ ತಲಾ ಅರ್ಧಶತಕ ಗಳಿಸಿ ಮೈದಾನದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು. ಈ  ಹಂತದಲ್ಲಿ ಅಂದರೆ ಇನ್ನಿಂಗ್ಸ್ ನ 25ನೇ ಓವರ್ ನಲ್ಲಿ ಧೋನಿ ಜಾದವ್ ಗೆ ಓವರ್ ಮಾಡುವಂತೆ ಹೇಳು ಎಂದು ಸಲಹೆ ನೀಡಿದರು. ಒಂದಷ್ಟು ಹೊತ್ತು ನಾನು ಮತ್ತು ಧೋನಿ ಈ ಬಗ್ಗೆ ಚರ್ಚಿಸಿ ಬಳಿಕ ಇಬ್ಬರೂ ಜೊತೆಗೂಡಿ ಜಾದವ್  ಓವರ್ ನೀಡಲು ಮುಂದಾದೆವು.

ಅದರಂತೆ ಬೌಲಿಂಗ್‌ ಮಾಡಿದ ಜಾಧವ್‌ ಮೈದಾನದಲ್ಲಿ ಭರ್ಜರಿಯಾಗಿ ಆಡುತ್ತಿದ್ದ ತಮೀಮ್‌ ಹಾಗೂ ರಹೀಮ್‌ ವಿಕೆಟ್‌ ಪಡೆದು ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸುವಂತೆ ಮಾಡಿದ್ದರು. ಪಂದ್ಯದ ಮೇಲೆ ನಾವು ಹಿಡಿತ  ಸಾಧಿಸಲು ಜಾಧವ್‌ ತೆಗೆದುಕೊಂಡ ಆ ಎರಡು ವಿಕೆಟ್‌ಗಳು ಕಾರಣ. ಜಾಧವ್‌ ಗೆ ಈ ಸಮಯದಲ್ಲಿ ಬೌಲಿಂಗ್‌ ನೀಡುವ ನಿರ್ಧಾರ ಕೈಗೊಂಡಿದ್ದು ನಾನು ಮತ್ತು ಧೋನಿ. ಈ ಯಶಸ್ಸಿನ ಸಂಪೂರ್ಣ ಕ್ರೆಡಿಟ್‌ ಧೋನಿಗೆ ಸಲ್ಲಬೇಕು.  ನೆಟ್ಸ್‌ನಲ್ಲಿ ಕೇದಾರ್‌ ಅಷ್ಟೊಂದು ಒಳ್ಳೆಯ ಬೌಲರ್‌ ಅಲ್ಲ, ಆದರೆ ಆತ ಓರ್ವ ಸ್ಮಾರ್ಟ್‌ ಕ್ರಿಕೆಟರ್‌. ಬ್ಯಾಟ್ಸ್‌ಮನ್‌ಗಳನ್ನು ಹೇಗೆ ಗೊಂದಲಕ್ಕೀಡು ಮಾಡಬೇಕೆಂಬುದು ಆತನಿಗೆ ಚೆನ್ನಾಗಿ ಗೊತ್ತಿದೆ ಎಂದು ಕೊಹ್ಲಿ ಹೇಳಿದ್ದಾರೆ.

ನಿನ್ನೆ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ರನ್ ಕಲೆ ಹಾಕುತ್ತಿತ್ತು. ಇನ್ನಿಂಗ್ಸ್ ನ 25 ನೇ ಓವರ್ ವರೆಗೂ ಭರ್ಜರಿ ಬ್ಯಾಟಿಂಗ್ ಮಾಡಿದ   ಬಾಂಗ್ಲಾದೇಶ 5.68 ಸರಾಸರಿಯಲ್ಲಿ ಕೇವಲ 2 ವಿಕೆಟ್ ಗಳನ್ನು ಕಳೆದುಕೊಂಡು ಭರ್ಜರಿ 142  ರನ್ ಕಲೆ ಹಾಕಿತ್ತು. ಈ ಹಂತದಲ್ಲಿ ಬೌಲಿಂಗ್ ನಲ್ಲಿ ಬದಲಾವಣೆ ತಂದ ನಾಯಕ ಕೊಹ್ಲಿ ಜಾದವ್ ಕೈಗೆ ಚೆಂಡನ್ನಿತ್ತರು.  ಜಾದವ್ ಕೈಗೆ  ಬಾಲ್ ಬಂದಿದ್ದೇ ತಡ ಬಾಂಗ್ಲಾದೇಶ ರನ್ ವೇಗಕ್ಕೆ ಕಡಿವಾಣ ಬಿತ್ತು. ನಾಯಕನ ಭರವಸೆಯಂತೆ ಬೌಲಿಂಗ್‌ ಮಾಡಿದ ಜಾಧವ್‌ ಮೈದಾನದಲ್ಲಿ ಭರ್ಜರಿಯಾಗಿ ಆಡುತ್ತಿದ್ದ ತಮೀಮ್‌ ಹಾಗೂ ರಹೀಮ್‌ ವಿಕೆಟ್‌ ಪಡೆದು ಪಂದ್ಯದ  ಮೇಲೆ ಭಾರತ ಹಿಡಿತ ಸಾಧಿಸುವಂತೆ ಮಾಡಿದ್ದರು.

1 ರಿಂದ 25ನೇ ಓವರ್ ವರೆಗೂ ಬಾಂಗ್ಲಾದೇಶ 5.68 ಸರಾಸರಿಯಲ್ಲಿ ರನ್  ಗಳಿಸಿದ್ದರೆ, 25ನೇ ಓವರ್ ನಿಂದ 50ನೇ ಓವರ್ ವರೆಗೂ ಬಾಂಗ್ಲಾದೇಶ ತಂಡ ಕೇವಲ 3.73ರ ಸರಾಸರಿಯಲ್ಲಿ 122 ರನ್ ಗಳಿಕೆ ಮಾಡಿತ್ತು. ಅಂತಿಮ  ಹಂತದ ಓವರ್ ಗಳಲ್ಲಿಯಂತೂ ಬಾಂಗ್ಲಾದೇಶ ರನ್ ಗಳಿಸಲು ಪರದಾಡಿದ್ದಂತೂ ಸತ್ಯ. ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶ ಕವೇಲ 6 ರನ್ ಗಳಿಸಿದ್ದು ಇದಕ್ಕೆ ಸ್ಪಷ್ಟ ನಿದರ್ಶನ. ಒಂದು ಹಂತದಲ್ಲಿ ಬಾಂಗ್ಲಾದೇಶ 300ರ ಗಡಿ  ದಾಟಬಹುದು ಎಂದು ಎಣಿಸಲಾಗಿತ್ತು. ಆದರೆ  ಜಾದವ್ ಜಾದೂ ಭಾರತಕ್ಕೆ ಆನೆ ಬಲ ತಂದಿತ್ತು. ಇಂದಿನ ಪಂದ್ಯದಲ್ಲಿ ಕೇದಾರ್ ಜಾದವ್ ಅತ್ಯಂತ ಕಡಿಮೆ ರನ್ ನೀಡಿದ (ಮೋಸ್ಟ್ ಎಕನಾಮಿಕ್) ಬೌಲರ್ ಎಂಬ ಕೀರ್ತಿಗೂ  ಭಾಜನರಾದರು.

ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : London, Cricket Offbeat, ICC Champions Trophy, Kedar Jadhav, MS Dhoni, India, Virat Kohli, ಲಂಡನ್, ಕ್ರಿಕೆಟ್ ಸ್ವಾರಸ್ಯ, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಕೇದಾರ್ ಜಾದವ್, ವಿರಾಟ್ ಕೊಹ್ಲಿ, ಎಂಎಸ್ ಧೋನ
English summary
If Kedar Jadhav turned the game for India, it was only after the former skipper advised Virat Kohli to try a part-timer.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement