Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿಗೆ ಸಿಎಂ ಕುಮಾರಸ್ವಾಮಿ ಚಾಲನೆ

Two Women Agree To Return Amid Priests

'ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ಮುಚ್ಚಿ ಬಿಡುತ್ತೇವೆ'; ಅರ್ಚಕರ ಪ್ರತಿಭಟನೆಗೆ ಮಣಿದ ಪತ್ರಕರ್ತೆಯರು ಕೊನೆಗೂ ವಾಪಸ್!

Azhar Ali

ಪಾಕ್‌ನ ಅಜರ್ ಫನ್ನಿ ರನೌಟ್ ಬಳಿಕ ಮತ್ತೊಂದು ಫನ್ನಿ ರನೌಟ್, ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

Mahesh Babu

ಟಾಲಿವುಡ್‍ ಪ್ರಿನ್ಸ್ ಮಹೇಶ್ ಬಾಬುಗೆ ಕನ್ನಡ, ಕನ್ನಡಿಗರೆಂದರೆ ಅಷ್ಟೊಂದು ತಿರಸ್ಕಾರವೇಕೆ?

Prime Minister Modi at Shirdi Sai Baba Mandir

ಸಾಯಿಬಾಬಾ ಸಮಾಧಿಸ್ಥರಾಗಿ 100 ವರ್ಷ: ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದ ಪ್ರಧಾನಿ

Amy Jackson

'ಸ್ಯಾಂಡಲ್ವುಡ್' ಬದಲಿಗೆ 'ಕಾಲಿವುಡ್' ಎಂದು ಟ್ವೀಟಿಸಿ ಕನ್ನಡಿಗರಿಂದ ಮಂಗಳಾರತಿ ಮಾಡಿಸಿಕೊಂಡ ಆ್ಯಮಿ ಜಾಕ್ಸನ್!

Narendra Modi fires the arrow to burn the effigy of Ravana

ದೆಹಲಿ: ರಾಮಲೀಲಾ ಮೈದಾನದಲ್ಲಿ ದಸರಾ ಆಚರಣೆ : ರಾವಣನನ್ನು ದಹಿಸಿದ ಪ್ರಧಾನಿ

Sunil Gavaskar-Hardik Pandya

'ನಾನು ಯೋಗ್ಯನೆ', ತನ್ನನ್ನು ಟೀಕಿಸುವವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಹಾರ್ದಿಕ್ ಪಾಂಡ್ಯ!

we won

'ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯಲ್ಲ, ಕಾನೂನು ಸುವ್ಯವಸ್ಥೆ ರಕ್ಷಣೆಯೇ ನಮಗೆ ಮುಖ್ಯ': ಕೇರಳ ಸಚಿವ

MB Patil Hits Out At Minister DK Shivakumar Over His Remark on Separate Lingayat Row

ಲಿಂಗಾಯತ ಹೋರಾಟದಿಂದ ಚುನಾವಣೆಯಲ್ಲಿ ಸೋಲಾಗಿಲ್ಲ: ಡಿಕೆಶಿ ಹೇಳಿಕೆಗೆ ಎಂಬಿ ಪಾಟೀಲ್ ಗರಂ

Representational image

ಮಹರಾಷ್ಟ್ರ: ಪತ್ನಿಯ ಕಿರುಕುಳ ತಾಳಲಾರದ ಪತಿಯಂದಿರಿಂದ ಶೂರ್ಪನಖಿ ಪ್ರತಿಕೃತಿ ದಹನ

File photo

ಜಮ್ಮು-ಕಾಶ್ಮೀರ: ಬಾರಾಮುಲ್ಲಾದಲ್ಲಿ ಭರ್ಜರಿ ಕಾರ್ಯಾಚರಣೆ, 4 ಉಗ್ರರನ್ನು ಸದೆಬಡಿದ ಸೇನೆ

Representational image

ಉದ್ಯಮ ವಲಯಕ್ಕೂ ಕಾಲಿಟ್ಟ ಮೀ ಟೂ: ಜಾಹೀರಾತು ಸಂಸ್ಥೆಗಳ ಉನ್ನತಾಧಿಕಾರಿಗಳು ರಾಜೀನಾಮೆ

ಮುಖಪುಟ >> ಕ್ರಿಕೆಟ್

ಅಂಡರ್ 19 ಕ್ರಿಕೆಟ್ ವಿಶ್ವಕಪ್: ಪ್ರಬಲ ಆಸ್ಟ್ರೇಲಿಯಾಗೆ 329 ರನ್ ಗಳ ಗುರಿ ನೀಡಿದ ಭಾರತ

ನಾಯಕ ಪೃಥ್ವಿ ಶಾ ಶತಕ ಮಿಸ್, ಆರಂಭಿಕ ಆಟಗಾರ ಮನೋಜ್ ಕಲ್ರಾ 86 ರನ್ ಗಳಿಕೆ
ICC Under 19 World Cup: Australia To Chase 329 Runs Against India

ಪೃಥ್ವಿ ಚೌಹಾಣ್ ಮತ್ತು ಮನೋಜ್ ಕಲ್ರಾ ಜೋಡಿಯ ಜೊತೆಯಾಟ

ಬೇ ಓವಲ್: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ಕ್ರಿಕೆಟ್ ವಿಶ್ವಕಪ್ ನ ತನ್ನ ಚೊಚ್ಚಲ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಬಲ ಆಸ್ಟ್ರೇಲಿಯಾ ತಂಡದ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ.

ಟಾಸ್ ಗೆದ್ದ ಭಾರತ ತಂಡದ ನಾಯಕ ಪೃಥ್ವಿ ಚೌಹಾಣ್ ಬ್ಯಾಟಿಂಗ್ ಆರಿಸಿಕೊಂಡರು. ನಿರೀಕ್ಷೆಯಂತೆಯೇ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಚೌಹಾಣ್ ಮತ್ತು ಮನೋಜ್ ಕಲ್ರಾ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದರು. ಬರೊಬ್ಬರಿ  180 ರನ್ ಗಳ ದಾಖಲೆ ಜೊತೆಯಾಟವಾಡಿದ ಈ ಜೋಡಿಯನ್ನು ವಿಲ್ ಸದರ್ ಲೆಂಡ್ ಬೇರ್ಪಡಿಸಿದರು. 100 ಎಸೆತಗಳಲ್ಲಿ 94 ರನ್ ಸಿಡಿಸಿದ್ದ ಪೃಥ್ವಿ ಶಾ ಶತಕದ ಅಂಚಿನಲ್ಲಿ ಎಡವಿ ಪೆವಿಲಿಯನ್ ಸೇರಿಕೊಂಡರು. ನಾಯಕನಿಗೆ  ಉತ್ತಮ ಸಾಥ್ ನೀಡಿದ್ದ ಕಲ್ರಾ ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೇ 86 ರನ್ ಗಳಿಸಿ ಪರಮ್ ಉಪ್ಪಾಲ್ ಬೌಲಿಂಗ್ ನಲ್ಲಿ ಔಟ್ ಆದರು.

ಬಳಿಕ ಶಬ್ ಮನ್ ಗಿಲ್ ಭಾರತದ ರನ್ ಗಳಿಕೆಯನ್ನು 250ರ ಗಡಿದಾಟಿಸಿದರು. ಏಕಾಂಗ ಹೋರಾಟ ಪ್ರದರ್ಶನ ನೀಡಿದ ಗಿಲ್ ಕೇವಲ 54 ಎಸೆತಗಳಲ್ಲಿ 63 ರನ್ ಸಿಡಿಸಿದರು. ಕಲ್ರಾ ಔಟ್ ಆದ ಬಳಿಕ ಬಂದ ಹಿಮಾಂಶು ರಾಣಾ 14  ರನ್ ಗಳಿಸಿ ಔಟ್ ಆದರು. ಇವರ ಬೆನ್ನಲ್ಲೇ ಗಿಲ್ ಕೂಡ 63 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಕ್ರೀಸ್ ಗೆ ಬಂದ ಯಾವೊಬ್ಬ ಬ್ಯಾಟ್ಸಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ಆದರೂ ಪೃಥ್ವಿ ಚೌಹಾಣ್,  ಕಲ್ರಾ ಮತ್ತು ಗಿಲ್ ಹಾಕಿಕೊಟ್ಟ ಬೃಹತ್ ರನ್ ಗಳ ನೆರವನಿಂದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿತು.

ಆಸಿಸ್ ಪರ ಜಾಕ್ ಎಡ್ವರ್ಡ್ಸ್ 4 ವಿಕೆಟ್ ಪಡೆದರೆ, ಉಪ್ಪಲ್, ಆಸ್ಟಿನ್ ವಾ ಮತ್ತು ಸದರ್ಲೆಂಡ್ ತಲಾ 1 ವಿಕೆಟ್ ಪಡೆದರು.

ಪ್ರಸ್ತುತ ಭಾರತ ನೀಡಿರುವ 329 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಆಸ್ಟ್ರೇಲಿಯಾ 26.2 ಓವರ್ ನಲ್ಲಿ 112 ರನ್ ಗಳಿಸಿದ್ದು, 2 ವಿಕೆಟ್ ಕಳೆದುಕೊಂಡಿದೆ.
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Bay Oval, Cricket, ICC Under 19 World Cup, India vs Australia, New Zealand, ಬೇ ಓವಲ್, ಐಸಿಸಿ ಅಂಡರ್ 19 ವಿಶ್ವಕಪ್, ಭಾರತ ವರ್ಸಸ್ ಆಸ್ಟ್ರೇಲಿಯಾ
English summary
Riding on a record 180-run opening stand between Indian skipper Prithvi Shaw and fellow opener Manjot Kalra, India went on to post 328 for the loss of seven wickets in the opening match of the ICC Under-19 Cricket World Cup 2018 against Australia on Sunday at the Bay Oval, Mount Maunganui.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS