Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Amritsar train accident: PM Narendra Modi approves financial relief of Rs 2 lakh to kin of dead in tragedy

ಅಮೃತಸರ್ ರೈಲು ದುರಂತ: ಮೃತ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರಕ್ಕೆ ಪ್ರಧಾನಿ ಅನುಮೋದನೆ

ಸಂಗ್ರಹ ಚಿತ್ರ

ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿ ತೆರೆ

Two Women Agree To Return Amid Priests

'ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ಮುಚ್ಚಿ ಬಿಡುತ್ತೇವೆ'; ಅರ್ಚಕರ ಪ್ರತಿಭಟನೆಗೆ ಮಣಿದ ಪತ್ರಕರ್ತೆಯರು ಕೊನೆಗೂ ವಾಪಸ್!

DV Sadananda Gowda

#MeToo ಸುಳಿಯಲ್ಲಿ ಸದಾನಂದಗೌಡ? ಇದಕ್ಕೆ ಕೇಂದ್ರ ಸಚಿವರ ಪ್ರತಿಕ್ರಿಯೆ!

amitabh bachchan

ಉತ್ತರ ಪ್ರದೇಶದ 850 ರೈತರ ಸಾಲ ತೀರಿಸಲಿದ್ದಾರೆ 'ಬಾಲಿವುಡ್ ಬಿಗ್ ಬಿ' ಅಮಿತಾಬ್ ಬಚ್ಚನ್!

Azhar Ali

ಪಾಕ್‌ನ ಅಜರ್ ಫನ್ನಿ ರನೌಟ್ ಬಳಿಕ ಮತ್ತೊಂದು ಫನ್ನಿ ರನೌಟ್, ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

File Image

ಗಿಡ ಬೆಳೆಸಿ ಅಂಕ ಗಳಿಸಿ! ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಲು ಅರಣ್ಯ ಇಲಾಖೆ ಹೊಸ ಯೋಜನೆ

The Villain

ಕನ್ನಡ ಚಿತ್ರರಂಗದ ದಾಖಲೆಗಳೆಲ್ಲಾ ಧೂಳಿಪಟ ಮಾಡಿದ ದಿ ವಿಲನ್, ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತ?

File Image

ಬೆಂಗಳೂರು: ಸ್ನೇಹಿತೆಯನ್ನು ಕೆಣಕಿದ್ದಕ್ಕೆ ವಿರೋಧ, ಬಿಯರ್ ಬಾಟಲಿಯಿಂದ ಕತ್ತು ಸೀಳಿ ಯುವಕನ ಬರ್ಬರ ಹತ್ಯೆ!

Mahesh Babu

ಟಾಲಿವುಡ್‍ ಪ್ರಿನ್ಸ್ ಮಹೇಶ್ ಬಾಬುಗೆ ಕನ್ನಡ, ಕನ್ನಡಿಗರೆಂದರೆ ಅಷ್ಟೊಂದು ತಿರಸ್ಕಾರವೇಕೆ?

Vishalakshidevi

ರಾಜಮಾತೆ ಪ್ರಮೋದಾದೇವಿ ಒಡೆಯರ್ ನಾದಿನಿ ವಿಶಾಲಾಕ್ಷಿದೇವಿ ನಿಧನ

Prime Minister Modi at Shirdi Sai Baba Mandir

ಸಾಯಿಬಾಬಾ ಸಮಾಧಿಸ್ಥರಾಗಿ 100 ವರ್ಷ: ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದ ಪ್ರಧಾನಿ

Amy Jackson

'ಸ್ಯಾಂಡಲ್ವುಡ್' ಬದಲಿಗೆ 'ಕಾಲಿವುಡ್' ಎಂದು ಟ್ವೀಟಿಸಿ ಕನ್ನಡಿಗರಿಂದ ಮಂಗಳಾರತಿ ಮಾಡಿಸಿಕೊಂಡ ಆ್ಯಮಿ ಜಾಕ್ಸನ್!

ಮುಖಪುಟ >> ಕ್ರಿಕೆಟ್

ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೂ ವಾಟ್ಸನ್ ಕ್ರಿಕೆಟ್ ಜೀವನವೇ ಮುಕ್ತಾಯವಾಗುತ್ತಿತ್ತು, ಐಪಿಎಲ್ ಫೈನಲ್ ನಲ್ಲಿ ಆಗಿದ್ದೇನು?

ಶತಕ ಸಿಡಿಸಿ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಶೇನ್ ವಾಟ್ಸನ್ ಇಡೀ ಪಂದ್ಯದುದ್ದಕ್ಕೂ ಒಂದೇ ಕಾಲಿನಲ್ಲಿ ಆಡಿದರಾ?
Shane Watson batted on one leg, says Dwayne Bravo as CSK become IPL champions

ಮೈದಾನದಲ್ಲಿ ಭಾವುಕರಾದ ವಾಟ್ಸನ್

ಮುಂಬೈ: ಐಪಿಎಲ್ ಫೈನಲ್ ಪಂದ್ಯದ ಹೀರೋ ಶೇನ್ ವಾಟ್ಸನ್ ಶತಕ ಸಿಡಿಸಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಆದರೆ ಅದೇ ಪಂದ್ಯದಲ್ಲಿ ಶೇನ್ ವಾಟ್ಸನ್ ಕ್ರಿಕೆಟ್ ಜೀವನವನ್ನೇ ಹಾಳುಮಾಡಬಲ್ಲ ಘಟನೆ ಕೂಡ ನಡೆದಿದೆ.

ಹೌದು.. ಕೇವಲ 57 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 11 ಬೌಂಡರಿಗಳ ಮೂಲಕ 117 ರನ್ ಚಚ್ಚಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಂತೆ ಮಾಡಿದ್ದ ಶೇನ್ ವಾಟ್ಸನ್ ಫೈನಲ್ ಪಂದ್ಯದ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಅಷ್ಟು ಮಾತ್ರವಲ್ಲದೇ ಇಡೀ ಪಂದ್ಯದುದಕ್ಕೂ ಒಂದೇ ಕಾಲಿನಲ್ಲಿ ಆಡಿದ್ದರು. ವಾಟ್ಸನ್ ಬ್ಯಾಟಿಂಗ್ ಅನ್ನು ಯಾರಾದರೂ ಸೂಕ್ಷ್ಮವಾಗಿ ಗಮನಿಸಿದ್ದರೆ ಈ ಅಂಶ ತಿಳಿಯುತ್ತದೆ. ಒಂಟಿ ರನ್ ಓಡಲು ಪರದಾಡುತ್ತಿದ್ದ ವಾಟ್ಸನ್ ಓಡುವ ರನ್ ಗಳ ಬದಲಿಗೆ ಬೌಂಡರಿ ಸಿಕ್ಸರ್ ಗಳ ಮೂಲಕವೇ ರನ್ ಗಳಿಸಲು ಮುಂದಾಗಿದ್ದರು.

ಅವರ ಒಟ್ಟು 117 ರನ್ ಗಳ ಪೈಕಿ 92 ರನ್ ಗಳು ಬೌಂಡರಿ ಮತ್ತು ಸಿಕ್ಸರ್ ಗಳಿಂದಲೇ ಬಂದಿದ್ದು ಇದಕ್ಕೆ ಸಾಕ್ಷಿ. ಹೌದು ಪಂದ್ಯದ ವೇಳೆ ಶೇನ್ ವಾಟ್ಸನ್ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇನಿಂಗ್ಸ್​ ಆರಂಭದಲ್ಲೇ ಸ್ನಾಯುಸೆಳೆತಕ್ಕೆ ಒಳಗಾದ ವಾಟ್ಸನ್ ನೋವಿನಲ್ಲೇ ಬ್ಯಾಟಿಂಗ್ ಮುಂದುವರೆಸಿದರು.  ಆರಂಭದಲ್ಲೇ ನೋವಿಗೆ ತುತ್ತಾಗಿ ರನ್ ಗಳಿಸಲು ಪರದಾಡುತ್ತಾ ಇದ್ದ ವಾಟ್ಸನ್ ಕ್ರೀಸ್​​​​ನಲ್ಲಿ ನೆಲೆ ನಿಲ್ಲೋದಕ್ಕೆ ತಡಬಡಾಯಿಸುತ್ತಿದ್ದರು. ಆದರೆ ಬಳಿಕ ಲಯ ಕಂಡುಕೊಂಡ ಆಸಿಸ್ ಕ್ರಿಕೆಟಿಗ ಬಳಿಕ ಹೈದರಾಬಾದ್ ಬೌಲರ್ ಗಳ ಮೇಲೆ ಸವಾರಿ ಮಾಡಿದರು. 

ಪವರ್​​ ಪ್ಲೇನಲ್ಲಿ ಶಾಂತವಾಗಿದ್ದ ಅವರು, ಪವರ್​​​ ಪ್ಲೇ ಮುಗಿಯುತ್ತಿದ್ದಂತೆಯೇ ಎದುರಾಳಿಗಳ ಮೇಲೆ ಎರಗಿದರು. ಬೌಂಡರಿ, ಸಿಕ್ಸರ್ ಗಳ ಮೂಲಕ ಅರ್ಧಶತಕ ಸಿಡಿಸಿದ ವಾಟ್ಸನ್, ಬಳಿಕ ನೋಡ ನೋಡುತ್ತಿದ್ದಂತೆಯೇ ಶತಕ ಕೂಡ ಸಿಡಿಸಿದರು. ಇದು ಟೂರ್ನಿಯಲ್ಲಿ ಅವರ 2ನೇ ಶತಕವಾಗಿತ್ತು. ಅಂತೆಯೇ ತಂಡದ ಪರ ಕೊನೆಯ ಎಸೆತದವರೆಗೂ ಕ್ರೀಸ್ ನಲ್ಲಿ ನಿಂತು ಗೆಲುವು ತಂದುಕೊಟ್ಟರು. 

ಮೈದಾನದಲ್ಲೇ ವಾಟ್ಸನ್ ಅತ್ತಿದ್ದೇಕೆ
ಗೆಲುವಿನ ನಂತರ ಗಾಯದ ನಡುವೆಯೂ ಅದ್ಭುತ ಇನಿಂಗ್ಸ್​ ಕಟ್ಟಿದ ವಾಟ್ಸನ್​ ಸಂತೋಷಕ್ಕೆ, ಪಾರವೇ ಇರಲಿಲ್ಲ. ಫೈನಲ್​ ಪಂದ್ಯದಲ್ಲಿ ವಾಟ್ಸನ್​ ಸಿಡಿಸಿದ ಸೆಂಚುರಿ ಎಲ್ಲರ ಗಮನ ಸೆಳೆಯಿತಾದರೂ, ಈ ಶತಕದ ಹಿಂದಿದ್ದ ನೋವು, ವಾಟ್ಸನ್​ ಒಬ್ಬರಿಗೇ ಗೊತ್ತು. ಕಾಲಿನ ಸ್ನಾಯು ನೋವಿನ ನಡುವೆಯೇ ಒಂದು ಕಾಲಿನ ನೆರವಿನಿಂದ ಬ್ಯಾಟಿಂಗ್ ಮಾಡಿದ ವಾಟ್ಸನ್ ಗೆ ತಂಡವನ್ನು ಗೆಲುವಿನ ದಡ ಸೇರಿಸಿದ ತೃಪ್ತಿ ಇತ್ತು. ಇದೇ ಕಾರಣಕ್ಕೆ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಮೈದಾನದಲ್ಲೇ ಗಳಗಳನೆ ಅತ್ತರು. ಭಾವುಕರಾಗಿದ್ದ ವಾಟ್ಸನ್ ರನ್ನು ಸಹ ಆಟಗಾರರು ಸಂತೈಸಿದರು.

ನೋವಿನ ವಿಚಾರ ಬಹಿರಂಗ ಪಡಿಸಿದ ಬ್ರಾವೋ
ಇನ್ನು ವಾಟ್ಸನ್ ಮೈದಾನದಲ್ಲಿ ಕಣ್ಣೀರು ಹಾಕಿದ್ದು ಎಲ್ಲರಿಗೂ ತಿಳಿದ ವಿಚಾರವೇ ಆದರೂ, ಅವರ ಕಣ್ಣೀರಿನ ಕಥೆ ಬಹಿರಂಗ ಮಾಡಿದ್ದು ಮಾತ್ರ ಸಹ ಆಟಗಾರ ಡ್ವೇಯ್ನ್ ಬ್ರಾವೋ. ಪಂದ್ಯದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಬ್ರಾವೋ, ಬ್ಯಾಟಿಂಗ್ ವೇಳೆ ವಾಟ್ಸನ್ ಸ್ನಾಯು ಸೆಳೆತಕ್ಕೆ ತುತ್ತಾಗಿದ್ದ ವಿಚಾರವನ್ನು ಹೇಳಿದರು. ಅಲ್ಲದೇ ಇಡೀ ಇನ್ನಿಂಗ್ಸ್ ಉದ್ದಕ್ಕೂ ಒಂದು ಕಾಲಿನ ನೆರವಿನಿಂದ ಬ್ಯಾಟಿಂಗ್ ಮಾಡಿದರು ಎಂದು ಹೇಳಿದ್ದರು. ಬ್ರಾವೋ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ವಾಟ್ಸನ್ ಸಾಹಸಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. 
ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Mumbai, Cricket Offbeat, IPL 2018, Shane Watson, Leg injury, Dwayne Bravo, ಮುಂಬೈ, ಕ್ರಿಕೆಟ್ ಸ್ವಾರಸ್ಯ, ಐಪಿಎಲ್ 2018, ಶೇನ್ ವಾಟ್ಸನ್, ಕಾಲಿನ ಗಾಯ, ಡ್ವೇಯ್ನ್ ಬ್ರಾವೋ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS