Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Aadhaar data secure: UIDAI to Supreme Court

ಆಧಾರ್ ದತ್ತಾಂಶ ಸಂಪೂರ್ಣ ಸುರಕ್ಷಿತವಾಗಿದೆ: ಸುಪ್ರೀಂಗೆ ಯುಐಡಿಎಐ

Mohammed Shami

ಬಿಸಿಸಿಐನಿಂದ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್; ಐಪಿಎಲ್‌ನಲ್ಲಿ ಆಡಬಹುದು!

All CCTV cameras switched off during  former Tamil Nadu CM Jayalalithaa

ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಎಲ್ಲ ಸಿಸಿಟಿವಿ ಬಂದ್​ ಆಗಿದ್ದವು: ಅಪೊಲೊ ಆಸ್ಪತ್ರೆ

Hardik Pandya clarifies derogatory tweet posted by fake account

ನಕಲಿ ಖಾತೆಯಿಂದ ಅಂಬೇಡ್ಕರ್ ಕುರಿತು ಟ್ವೀಟ್: ಹಾರ್ದಿಕ್ ಪಾಂಡ್ಯ ಸ್ಪಷ್ಟನೆ

Yogi Adityanath government to withdraw 131 cases linked to Muzaffarnagar riots

ಉತ್ತರ ಪ್ರದೇಶ: ಮುಜಾಫರ್ ನಗರ ಗಲಭೆಗೆ ಸಂಬಂಧಿಸಿದ 131 ಪ್ರಕರಣ ವಾಪಸ್

At least 14 killed in Mogadishu car bombing

ಮೊಗದಿಶು ನಗರದಲ್ಲಿ ಕಾರ್‌ ಬಾಂಬ್ ಸ್ಫೋಟ, ಕನಿಷ್ಠ 14 ಮಂದಿ ಸಾವು

Zuckerberg

ಭಾರತ, ಬ್ರೆಜಿಲ್ ಚುನಾವಣೆಗು ಮುನ್ನ ಫೇಸ್‌ಬುಕ್‌ನಲ್ಲಿ ಭದ್ರತೆ ಹೆಚ್ಚಳಕ್ಕೆ ಕ್ರಮ: ಜುಕರ್‌ಬರ್ಗ್‌

700 Central Armed Police Forces personnel committed suicide in last six years: Union Home Ministry

ಕಳೆದ 6 ವರ್ಷಗಳಲ್ಲಿ ಕೇಂದ್ರಿಯ ಸಶಸ್ತ್ರ ಪೊಲೀಸ್ ಪಡೆಯ 700 ಸಿಬ್ಬಂದಿ ಆತ್ಮಹತ್ಯೆ

Chandrababu Naidu again demands ban on big currency notes

ಮತ್ತೆ ದೊಡ್ಡ ಮೌಲ್ಯದ ನೋಟುಗಳ ನಿಷೇಧಕ್ಕೆ ಚಂದ್ರಬಾಬು ನಾಯ್ಡು ಒತ್ತಾಯ

Kumar Mangalam Birla to be Chairman of merged Vodafone-Idea entity

ವೊಡಾಫೋನ್-ಐಡಿಯಾ ವಿಲೀನ ಸಂಸ್ಥೆಯ ಅಧ್ಯಕ್ಷರಾಗಿ ಕುಮಾರ್ ಮಂಗಲಂ ಬಿರ್ಲಾ ಆಯ್ಕೆ

Government to now fully fund education of martyrs

ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚ ಭರಿಸಲಿರುವ ಕೇಂದ್ರ ಸರ್ಕಾರ

Farmers owe Maha govt Rs 17,000 cr in power bills: CM

ರೈತರು ಸರ್ಕಾರಕ್ಕೆ 17 ಸಾವಿರ ಕೋಟಿ ರು. ವಿದ್ಯುತ್ ಬಿಲ್ ಪಾವತಿಸಬೇಕು: ಮಹಾ ಸಿಎಂ

Pakistan acquires powerful missile tracking system from China: Report

ಚೀನಾದಿಂದ ಪಾಕಿಸ್ತಾನಕ್ಕೆ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆ!

ಮುಖಪುಟ >> ಕ್ರಿಕೆಟ್

ಅನಿಲ್ ಕುಂಬ್ಳೆಗಾಗಿ ನಾಯಕತ್ವವನ್ನೇ ಪಣವಾಗಿಟ್ಟಿದ್ದ ಸೌರವ್ ಗಂಗೂಲಿ!

ಕುಂಬ್ಳೆಯನ್ನು ಆಯ್ಕೆ ಮಾಡದ ಹೊರತು ಆಯ್ಕೆ ಪಟ್ಟಿಗೆ ಸಹಿ ಹಾಕುವುದಿಲ್ಲ ಎಂದು ಪಟ್ಟು ಹಿಡಿದಿದ್ದ ದಾದಾ
When Saurav Ganguly

ಸೌರವ್ ಗಂಗೂಲಿ ಹಾಗೂ ಅನಿಲ್ ಕುಂಬ್ಳೆ

ಮುಂಬೈ: ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು.. ಇಂತಹ ಗಂಗೂಲಿ ನಮ್ಮ ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ತಮ್ಮ ನಾಯಕತ್ವವನ್ನೇ ಪಣಕ್ಕಿಟ್ಟಿದ್ದ ಘಟನೆ ಇದೀಗ ಬೆಳಕಿಗೆಬಂದಿದೆ.

2003-04ರ ಆಸೀಸ್‌ ಪ್ರವಾಸಕ್ಕಾಗಿ ಗಂಗೂಲಿ ಅನಿಲ್ ಕುಂಬ್ಳೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಪಟ್ಟು ಬಿಡದೇ ಕುಳಿತಿದ್ದರಂತೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವತಃ ಅವರೇ ಈ ಬಗ್ಗೆ ಇತಿಹಾಸವನ್ನು  ಮೆಲುಕು ಹಾಕಿದ್ದು,  ಅನಿಲ್‌ ಕುಂಬ್ಳೆಯನ್ನು ತಂಡದಲ್ಲಿ ಉಳಿಸಿಕೊಳ್ಳಲು ತಾವು ನಾಯಕತ್ವವನ್ನೇ ಪಣವಾಗಿಟ್ಟ ಘಟನೆಯನ್ನು  ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾರೆ.

2003-04ರ ಆಸೀಸ್‌ ಪ್ರವಾಸಕ್ಕೆ ಕುಂಬ್ಳೆಯನ್ನು ಆಯ್ಕೆ ಮಾಡಲು ಬಿಸಿಸಿಐ ಸುತಾರಾಂ ಸಿದ್ಧವಿರಲಿಲ್ಲ..ಆದರೆ ಗಂಗೂಲಿ ತನ್ನ ನಾಯಕತ್ವವನ್ನೇ ಪಣವಾಗಿಟ್ಟ ಪರಿಣಾಮ ಮುಂದೆ ಕುಂಬ್ಳೆ ಆಯ್ಕೆಯಾಗಿದ್ದು ಮಾತ್ರವಲ್ಲ  ವಿಶ್ವ  ದಾಖಲೆಯನ್ನೂ ನಿರ್ಮಿಸಿದ್ದರು ಎಂದು ಗಂಗೂಲಿ ಹೇಳಿಕೊಂಡಿದ್ದಾರೆ. 

ಕಾರ್ಯಕ್ರಮದಲ್ಲಿ ಗಂಗೂಲಿ ಹೇಳಿರುವಂತೆ, "2003-04ರ ಆಸ್ಟ್ರೇಲಿಯಾ ಪ್ರವಾಸ ಅತ್ಯಂತ ಕಠಿಣವಾಗಿತ್ತು. ಬಲಗೈ ಲೆಗ್‌ ಸ್ಪಿನ್ನರ್‌ ಗೆ ಆಸ್ಟ್ರೇಲಿಯನ್ನರು ಉತ್ತಮವಾಗಿ ಆಡುತ್ತಾರೆ, ಆದ್ದರಿಂದ ಎಡಗೈ ಲೆಗ್‌ ಸ್ಪಿನ್ನರನ್ನು ಆಯ್ಕೆ  ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಮುಂದಾಗಿತ್ತು. ಆದರೆ ಇದನ್ನು ಗಂಗೂಲಿ ವಿರೋಧಿಸಿದ್ದರು. ಕುಂಬ್ಳೆಯನ್ನು ತಂಡಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಪಟ್ಟು ಹಿಡಿದರು. ಸತತ 2 ಗಂಟೆಯಾದರೂ ವಿಷಯ ಬಗೆ ಹರಿಯದಾಗ  ಅಂದು ಕೋಚ್‌ ಆಗಿದ್ದ ಜಾನ್‌ ರೈಟ್‌ ಮಧ್ಯಪ್ರವೇಶಿಸಿ, ಬಿಟ್ಟುಬಿಡಿ ಅವರು ಕೊಟ್ಟ ತಂಡದೊಂದಿಗೆ ಆಡೋಣ ಎಂದು ಸೌರವ್‌ ಗೆ ಹೇಳಿದರಂತೆ. ಆದರೆ ಈಗ ಕುಂಬ್ಳೆಯನ್ನು ಬಿಟ್ಟುಬಿಟ್ಟರೆ ಅವರು ಮತ್ತೆಂದೂ ಭಾರತ ತಂಡವನ್ನು  ಪ್ರವೇಶಿಸುವುದಿಲ್ಲವೆಂದು ಗಂಗೂಲಿಗೆ ಅನಿಸಿತು. ಆದ್ದರಿಂದ ಕುಂಬ್ಳೆಯನ್ನು ತಂಡಕ್ಕೆ ಸೇರಿಸಿಕೊಳ್ಳದಿದ್ದರೆ ತಂಡದ ಪಟ್ಟಿಗೆ ಸಹಿ ಹಾಕಲು ಸಾಧ್ಯವೇ ಇಲ್ಲ ಎಂದು ಅವರು ತಮ್ಮ ಹಠವನ್ನು ಮುಂದುವರಿಸಿದರಂತೆ. 

ಗಂಗೂಲಿ ಹಠದ ಬಗ್ಗೆ ಪರಿಚಯವಿದ್ದ ಆಯ್ಕೆ ಮಂಡಳಿ ಸದಸ್ಯರು, ಕಡೆಗೂ ಗಂಗೂಲಿ ಅವರಿಗೆ ಮಣಿದು ಕುಂಬ್ಳೆಯನ್ನು ತಂಡಕ್ಕೆ ಸೇರಿಸಿಕೊಂಡರು. ಆದರೆ ಅದಕ್ಕೊಂದು ಕಠಿಣ ಷರತ್ತನ್ನೂ ವಿಧಿಸಿದ್ದರು. ಒಂದು ವೇಳೆ ಕುಂಬ್ಳೆ ಆ  ಸರಣಿಯಲ್ಲಿ ವಿಫ‌ಲರಾದರೆ, ಭಾರತ ತಂಡ ವಿಫ‌ಲರಾದರೆ ಮೊದಲನೇ ಬಲಿಪಶು ನೀವೇ ಆಗುತ್ತೀರಿ ಗಂಗೂಲಿಗೆ ಎಚ್ಚರಿಸಿದ್ದರಂತೆ. ಇದಕ್ಕೆ ಗಂಗೂಲಿ ತಲೆಯಾಡಿಸಿ ಎದ್ದು ಹೊರಬಂದರು. ಮುಂದೆ ನಡೆದಿದ್ದು ಇತಿಹಾಸ.

ಅಂದು ಆ ಸರಣಿಯನ್ನು ಭಾರತ 1-1ರಿಂದ ಡ್ರಾ ಮಾಡಿಕೊಂಡು ಐತಿಹಾಸಿಕ ಸಾಧನೆ ಮಾಡಿತು. ಈ ಸರಣಿಯಲ್ಲಿ ಅತಿಹೆಚ್ಚು ಅಂದರೆ 24 ವಿಕೆಟ್‌ ಪಡೆದ ಬೌಲರ್‌ ಆಗಿ ಕುಂಬ್ಳೆ ಮೂಡಿಬಂದರು. ಅಷ್ಟು ಮಾತ್ರವಲ್ಲ ಆ ವರ್ಷದಲ್ಲಿ  80 ವಿಕೆಟ್‌ ಪಡೆದು, ವರ್ಷವೊಂದರಲ್ಲಿ ಗರಿಷ್ಠ ವಿಕೆಟ್‌ ಪಡೆದ ವಿಶ್ವದಾಖಲೆ ನಿರ್ಮಿಸಿದರು.

ಗಂಗೂಲಿ ಇದೇ ರೀತಿ ಹಲವು ಆಟಗಾರರನ್ನು ತಮ್ಮ ನಾಯಕತ್ವದಲ್ಲಿ ರಕ್ಷಿಸಿದ್ದಾರೆ. ಆ ಆಟಗಾರರೆಲ್ಲರೂ ಅದ್ಭುತ ರೀತಿಯಲ್ಲಿ ಗಂಗೂಲಿಯ ತೀರ್ಮಾನವನ್ನು ಸಮರ್ಥಿಸಿದ್ದಾರೆನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.  ಅಷ್ಟುಮಾತ್ರವಲ್ಲ ಈ ಹಿಂದೆ ಟೀಂ ಇಂಡಿಯಾ ಕೋಚ್ ಆಯ್ಕೆ ವಿಚಾರದ ಸಂದರ್ಭದಲ್ಲಿಯೂ ಟೀಂ ಇಂಡಿಯಾ ಸಲಹೆಗಾರರಾಗಿರುವ ಸೌರವ್ ಗಂಗೂಲಿ ನೇರವಾಗಿಯೇ ಕುಂಬ್ಳೆ ಬೆನ್ನಿಗೆ ನಿಂತಿದ್ದು ಮಾತ್ರವಲ್ಲದೇ ಅವರನ್ನು ಟೀಂ  ಇಂಡಿಯಾ ಕೋಚ್ ಆಗಿ ಆಯ್ಕೆ ಮಾಡಲು ಪ್ರಮುಖ ಪಾತ್ರವಹಿಸಿದ್ದರು. ಈ ಸಂದರ್ಭದಲ್ಲಿ ಹಾಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕುಂಬ್ಳೆಗೆ ತೀವ್ರ ಪೈಪೋಟಿ ಒಡ್ಡಿದ್ದರು.
ಸಂಬಂಧಿಸಿದ್ದು...
Posted by: SVN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Mumbai, Cricket Offbeat, Saurav Ganguly, Anil Kumble, 2003-04-Australia tour, ಮುಂಬೈ, ಕ್ರಿಕೆಟ್ ಸ್ವಾರಸ್ಯ, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, 2003-04 ಆಸ್ಟ್ರೇಲಿಯಾ ಪ್ರವಾಸ
English summary
The national selectors had made up their mind to drop Anil Kumble from the 2003-2004 Australia tour but former India skipper Saurav Ganguly put his foot down and ensured that the legendary spinner make it to the series. This was disclosed by Ganguly himself during a promotional event here. "I will give you the example of Anil Kumble, who was probably the biggest match-winner India has ever produced in the last 20-25 years. I remember attending a selection meeting before the tour of Australia in 2003. I was the captain of the side and I knew, selectors were not very keen on having Anil in that tour," said Ganguly.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement