Kannadaprabha The New Indian Express
ಹಾಕಿ: ಉಗ್ರ ದಾಳಿ ಖಂಡಿಸಿ ಕಪ್ಪು ಪಟ್ಟಿ ಧರಿಸಿ ಅಟವಾಡಿದ ಭಾರತ ತಂಡ! 
By select 
19 Jun 2017 02:00:00 AM IST

ಲಂಡನ್:  ಪಾಕಿಸ್ತಾನದ ತಂಡದ ವಿರುದ್ಧ ಭರ್ಜರಿ ಗೆಲುವ ಸಾಧಿಸುವ ಮೂಲಕ  ದೇಶಗ ಗೌರವ ಕಾಪಾಡಿದ ಭಾರತ ಹಾಕಿ ತಂಡ,  ಪಾಕಿಸ್ತಾನಕ್ಕೆ ತನ್ನ ತಪ್ಪಿನ ಅರಿವು ಮೂಡಿಸುವ ಕೆಲಸವನ್ನೂ ಕೂಡ ಮಾಡಿ ಶ್ಲಾಘನೆಗೆ  ಪಾತ್ರವಾಗಿದೆ.

ಹೌದು..ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ನಿರಂತರ ಉಗ್ರ ದಾಳಿಯನ್ನು ಖಂಡಿಸಿರುವ ಭಾರತ ಹಾಕಿ ತಂಡ ನಿನ್ನೆ ಲಂಡನ್ ನಲ್ಲಿ ವಿಶ್ವಹಾಕಿ ಚಾಂಪಿಯನ್ ಷಿಪ್ ಟೂರ್ನಿ ವೇಳೆ ಕಪ್ಪು ಪಟ್ಟಿ ಧರಿಸಿ ಆಟವಾಡುವ  ಮೂಲಕ ಉಗ್ರ ದಾಳಿಯನ್ನು ಖಂಡಿಸಿದೆ. ಅಲ್ಲದೆ ಭಾರತೀಯ ಹುತಾತ್ಮ ಯೋಧರಿಗೆ ಈ ಮೂಲಕ ಗೌರವ ಸಲ್ಲಿಕೆ ಮಾಡಿದೆ. ಭಾರತ ತಂಡದ ಈ ನಡೆ ಅತ್ತ ಪಾಕಿಸ್ತಾನಕ್ಕೆ ಮುಜುಗರ ಉಂಟು ಮಾಡಿದ್ದು, ಮಾತ್ರವಲ್ಲದೇ  ಗಡಿಯಾಚೆಗೆ ಅ ದೇಶ ನಡೆಸುತ್ತಿರುವ ಉಗ್ರ ದಾಳಿ ಕುರಿತಂತೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದೆ.

ಭಾರತ ಹಾಕಿ ತಂಡದ ಈ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ತಂಡದ ಕೆಲಸಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

Copyright � 2012 Kannadaprabha.com