Kannadaprabha The New Indian Express
ಮಾಲಿನ್ಯದಿಂದ ಉಂಟಾಗುವ ಸಾವು: ಜಾಗತಿಕ ಪಟ್ಟಿಯಲ್ಲಿ ಭಾರತ ಮುಂಚೂಣಿ 
By select 
20 Oct 2017 02:00:00 AM IST

ನವದೆಹಲಿ: ವಿವಿಧ ರೀತಿಯ ಮಾಲಿನ್ಯದಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ ವರದಿಯೊಂದು ಪ್ರಕಟವಾಗಿದ್ದು, ಜಾಗತಿಕ ಪಟ್ಟಿಯಲ್ಲಿ ಭಾರತ ಮುಂಚೂಣಿ ಸ್ಥಾನದಲ್ಲಿದೆ.

ಲ್ಯಾನ್ಸೆಟ್ ಜರ್ನಲ್ ವರದಿಯ ಪ್ರಕಾರ 2015 ರಲ್ಲಿ ಭಾರತದಲ್ಲಿ ವಾಯುಮಾಲಿನ್ಯ, ಜಲ ಮಾಲಿನ್ಯ ಮುಂದಾದವುಗಳಿಂದ  2.5 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಅತಿ ಹೆಚ್ಚು ಸಾವುಗಳು ಮಾಲಿನ್ಯದಿಂದ ಉಂಟಾಗುವ ಹೃದಯ ಸಮಸ್ಯೆ, ಸ್ಟ್ರೋಕ್, ಶ್ವಾಸಕೋಶ ಕ್ಯಾನ್ಸರ್ ಹಾಗೂ ಸಿಒಪಿಡಿಯಿಂದ ಸಂಭವಿಸಿದೆ ಎಂದು ಸಂಶೋಧರು ಅಭಿಪ್ರಾಯಪಟ್ಟಿದ್ದಾರೆ.

2015 ರಲ್ಲಿ ವಿಶ್ವಾದ್ಯಂತ ಸಂಭವಿಸಿರುವ 6.5 ಮಿಲಿಯನ್ ಸಾವಿಗೆ ವಾಯುಮಾಲಿನ್ಯ ಪ್ರಮುಖ ಕಾರಣವಾಗಿದ್ದರೆ, ಜಲಮಾಲಿನ್ಯದಿಂದ 1.8 ಮಿಲಿಯನ್ ಜನತೆ ಸಾವನ್ನಪ್ಪಿದ್ದಾರೆ ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಹೇಳಿದ್ದು, ಭಾರತ ಮುಂಚೂಣಿಯಲ್ಲಿದ್ದು, ವಾರ್ಷಿಕ 1.8 ಮಿಲಿಯನ್ ಸಾವಿನ ಸಂಖ್ಯೆ ಹೊಂದಿರುವ ಚೀನಾ 2 ನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ. 

Copyright � 2012 Kannadaprabha.com