Kannadaprabha The New Indian Express
ಇಂದಿರಾ ಗಾಂಧಿ ಪಾತ್ರದಲ್ಲಿ ವಿದ್ಯಾಬಾಲನ್ 
By select 
11 Jan 2018 02:00:00 AM IST

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಜೀವನಾಧಾರಿತ ಇಂದಿರಾ: ಇಂಡಿಯಾಸ್ ಮೋಸ್ಟ್ ಪವರ್ ಪುಲ್ ಪ್ರೈಮ್ ಮಿನಿಸ್ಟರ್ ಪ್ರಾಜೆಕ್ಟ್ ನಲ್ಲಿ ಬಾಲಿವುಡ್ ನಟಿ ವಿದ್ಯಾಬಾಲನ್ ಇಂದಿರಾ ಪಾತ್ರಧಾರಿಯಾಗಿ ಮಿಂಚಲಿದ್ದಾರೆ. 

ಲೇಖಕಿ ಹಾಗೂ ಪತ್ರಕರ್ತೆ ಸಾಗರಿಕಾ ಘೋಷ್ ಬರೆದಿರುವ "Indira: India's Most Powerful Prime Minister" ಪುಸ್ತಕ ಆಧಾರಿತ ಈ ಪ್ರಾಜೆಕ್ಟ್ ನಲ್ಲಿ ನಟಿಸಲು ನನಗೆ ಬಹಳ ಹೆಮ್ಮೆ ಎನ್ನಿಸುತ್ತಿದೆ ಎಂದು ವಿದ್ಯಾಬಾಲನ್ ಹೇಳಿಕೊಂಡಿದ್ದಾರೆ. 

ಇಂದಿರಾ ಪ್ರಾಜೆಕ್ಟ್ ಸಿನಿಮಾವಾಗಿ ಅಥವಾ ವೆಬ್ ಸಿರೀಸ್ ರೂಪದಲ್ಲಿ ಹೊರತರಬೇಕೇ ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಪ್ರಾಜೆಕ್ಟ್ ನಲ್ಲಿ ಇಂದಿರಾಗಾಂಧಿ ಅವರ ಜೀವನದ ಕೆಲವು ಪ್ರಮುಖ ಘಟ್ಟಗಳನ್ನು ಚಿತ್ರೀಕರಿಸಲಾಗುತ್ತದೆ. 

Copyright � 2012 Kannadaprabha.com