Kannadaprabha The New Indian Express
ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟೆಸ್ಟ್: ಶಿಖರ್ ಧವನ್ ಬದಲು ಕೆಎಲ್ ರಾಹುಲ್‌ ಆಡುವ ಸಾಧ್ಯತೆ 
By select 
12 Jan 2018 02:00:00 AM IST

ಸೆಂಚೂರಿಯನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಸೋಲಿನ ಬಳಿಕ ಟೀಂ ಇಂಡಿಯಾ ಆಟಗಾರರ ಆಯ್ಕೆ ಬಗ್ಗೆಯೇ ಹೆಚ್ಚಿನ ಟೀಕೆಗಳು ಕೇಳಿಬಂದಿದ್ದು ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೆ ಹಲವು ಆಟಗಾರರ ಬದಲಾವಣೆಗೆ ಟೀಂ ಮ್ಯಾನೇಜ್ ಮೆಂಟ್ ನಿರ್ಧರಿಸಿದೆ. 

ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ವೈಫಲ್ಯದಿಂದಾಗಿ ಅವರ ಜಾಗದಲ್ಲಿ ಕೆಎಲ್ ರಾಹುಲ್ ಆಡುವುದು ಬಹುತೇಕ ಖಚಿತವಾಗಿದೆ. ಇನ್ನು ರೋಹಿತ್ ಶರ್ಮಾ ಗೆ ಮತ್ತೊಂದು ಅವಕಾಶ ಸಿಕ್ಕಿದ್ದು ಎರಡನೇ ಪಂದ್ಯದಲ್ಲಿ ಆಡಲಿದ್ದಾರೆ. 

ಶಿಖರ್ ಧವನ್ ಅನವಶ್ಯಕ ಹೊಡೆತದಿಂದಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಔಟಾಗಿದ್ದರು. ಧವನ್ ಬದಲು ತಾಂತ್ರಿಕವಾಗಿ ನಿಪುಣರಾಗಿರುವ ಕೆಎಲ್ ರಾಹುಲ್ ರನ್ನು ಸೆಂಚೂರಿಯನ್ ನಲ್ಲಿ ಆಡಿಸಲು ಟೀಂ ಮ್ಯಾನೇಜ್ ಮೆಂಟ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Copyright � 2012 Kannadaprabha.com