Kannadaprabha The New Indian Express
ಸಲ್ಮಾನ್ ಖಾನ್'ಗೆ ಜೀವ ಬೆದರಿಕೆ ಕರೆ: ಶೂಟಿಂಗ್ ಸ್ಥಳದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ 
By select 
12 Jan 2018 02:00:00 AM IST

ಮುಂಬೈ: ಕೃಷ್ಣಮೃಗ ಹತ್ಯೆ ಪ್ರಕರಣ ಸಂಬಂಧ ವಿಚಾರಣೆಗಾಗಿ ಇತ್ತೀಚೆಗಷ್ಟೇ ರಾಜಸ್ತಾನದ ನ್ಯಾಯಾಲಯಕ್ಕೆ ಹಾಜರಾದ ವೇಳೆ ನ್ಯಾಯಾಲಯದ ಆವರಣದಲ್ಲೇ ರೌಡಿಯೊಬ್ಬ ಜೀವ ಬೆದರಿಕೆ ಹಾಕಿದ್ದ ಬೆನ್ನಲ್ಲೇ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಹುಡುಕಿಕೊಂಡು ರೇಸ್-3 ಚಿತ್ರದ ಚಿತ್ರೀಕರಣದ ಸ್ಥಳಕ್ಕೆ ಕೆಲ ಅನಾಮಧೇಯ ವ್ಯಕ್ತಿಗಳು ಬಂದು ಹತ್ಯೆಗೆ ಸಂಚು ರೂಪಿಸಿದ್ದರು ಎಂದು ವರದಿಗಳು ತಿಳಿಸಿವೆ. 

ಹತ್ಯೆ ಸಂಚು ರೂಪಿಸಿದ್ದ ಹಿನ್ನಲೆಯಲ್ಲಿ ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು, ಚಿತ್ರೀಕರಣವನ್ನು ಮುಂದಕ್ಕೆ ಹಾಕುವಂತೆ ತಿಳಿಸಿದ್ದಾರೆ. ಪೊಲೀಸರ ನಿರ್ದೇಶನದ ಮೇರೆಗೆ ನಿರ್ಮಾಪಕ ರಮೇಶ್ ತೌರಾನಿಯವರು ಚಿತ್ರೀಕರಣವನ್ನು ಮುಂಡಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಸಲ್ಮಾನ್ ಅವರನ್ನು ತಮ್ಮ ಭದ್ರತೆಯಲ್ಲೇ ಮುಂಬೈನ ಬಾಂದ್ರಾ ನಿವಾಸಕ್ಕೆ ಕರೆದೊಯ್ದಿರುವ ಪೊಲೀಸರು ಸಲ್ಮಾನ್ ಅವರ ನಿವಾಸಕ್ಕೆ ಭದ್ರತೆ ಕಲ್ಪಿಸಿದ್ದಾರೆಂದು ಹೇಳಳಾಗುತ್ತಿದೆ. 

ಆದರೆ, ಈ ವರದಿಗಳನ್ನು ತಳ್ಳಿಹಾಕಿರುವ ಪೊಲೀಸರು, ಇಂತಹ ಯಾವುದೇ ರೀತಿಯ ಘಟನೆಗಳು ನಡೆದಿಲ್ಲ. ಈ ಬಗ್ಗೆ ಯಾವುದೇ ರೀತಿಯ ದೂರುಗಳು ದಾಖಲಾಗಿಲ್ಲ. ನಾವು ಯಾವುದೇ ಚಿತ್ರೀಕರಣವನ್ನು ನಿಲ್ಲಿಸುವಂತೆ ಸೂಚಿಸಿಲ್ಲ ಎಂದು ಉಪ ಪೊಲೀಸ್ ಆಯುಕ್ತ ವಿನಯ್ ರಾಥೋಡ್ ಅವರು ಹೇಳಿದ್ದಾರೆ. 

Copyright � 2012 Kannadaprabha.com