Kannadaprabha The New Indian Express
ಗುಜರಾತ್ ನಲ್ಲಿ 'ಪದ್ಮಾವತ್' ಬಿಡುಗಡೆಗೆ ಅನುಮತಿ ಇಲ್ಲ: ಸಿಎಂ ರೂಪಾನಿ 
By select 
12 Jan 2018 02:00:00 AM IST

ಗಾಂಧಿನಗರ: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಾತ್ಮಕ ಬಾಲಿವುಡ್ ಚಿತ್ರ ಪದ್ಮಾವತ್ ಜನವರಿ 25ರಂದು ರಾಜ್ಯದಲ್ಲಿ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಶುಕ್ರವಾರ ಘೋಷಿಸಿದ್ದಾರೆ.

ಇದಕ್ಕು ಮುನ್ನ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಸಹ ರಾಜಸ್ಥಾನದಲ್ಲಿ ಪದ್ಮಾವತ್ ಚಿತ್ರ ಬಿಡುಗಡೆಗೆ ಅನುಮತಿ ನೀಡವುದಿಲ್ಲ ಎಂದು ಹೇಳಿದ್ದರು.

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಅಭಿನಯದ ಪದ್ಮಾವತಿ ಚಿತ್ರಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಚಿತ್ರದ ಹೆಸರು ಪದ್ಮಾವತ್ ಎಂದು ಹಾಗೂ ಇತರೆ ಬದಲಾವಣೆ ಮಾಡಿದ ನಂತರ ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ.

Copyright � 2012 Kannadaprabha.com