Kannadaprabha The New Indian Express
ಮಾರಿಷಸ್ 50ನೇ ಸ್ವಾತಂತ್ರೋತ್ಸವಕ್ಕೆ ಪ್ರಧಾನಿ ಮೋದಿ ಮುಖ್ಯ ಅತಿಥಿ 
By select 
12 Jan 2018 02:00:00 AM IST

ಬೆಂಗಳೂರು: ಮಾರಿಷಸ್ ನ 50ನೇ ಸ್ವಾತಂತ್ರೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗುವುದು ಎಂದು ಮಾರಿಷಸ್ ಉಪಾಧ್ಯಕ್ಷ ಪರಮಶಿವಂ ಪಿಳ್ಳಯ್ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಿಳ್ಳಯ್ ಅವರು, ಮಾರಿಷಸ್ ಬೆಂಗಳೂರಿನ ಐಟಿ ಉದ್ಯಮದ ಸಹಯೋಗದೊಂದಿಗೆ ಕೆಲಸ ಮಾಡಲು ಬಯಸುತ್ತಿದೆ. ಐಟಿ ಹೊರತಾಗಿಯೂ ವೈದ್ಯಕೀಯ, ಪ್ರವಾಸೋದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲೂ ಹೂಡಿಕೆ ಮಾಡಲು ಬಯಸಿದೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದ್ವೀಪ ರಾಷ್ಟ್ರ ಮಾರಿಷಸ್ ಗೆ ಭೇಟಿ ನೀಡಿದ ಬಳಿಕ ಭಾರತದೊಂದಿಗಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ತಾವು ಸೇರಿದಂತೆ ಶೇ,50ರಷ್ಟು ಭಾರತೀಯರು ಮಾರಿಷಸ್ ನಲ್ಲಿದ್ದಾರೆ ಎಂದರು.

ನಾಳೆ ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠ ಕಾಲೇಜ್ ನಲ್ಲಿ ನಡೆಯಲಿರುವ ಕೃಷಿ ಉತ್ಸವದಲ್ಲಿ ಮಾರಿಷಸ್ ಉಪಾಧ್ಯಕ್ಷರು ಭಾಗವಹಿಸುತ್ತಿದ್ದಾರೆ.

Copyright � 2012 Kannadaprabha.com