Kannadaprabha The New Indian Express
ಚುನಾವಣಾ ಫಲಿತಾಂಶದ ಪ್ರತಿ ರಾಜ್ಯಪಾಲರಿಗೆ ಸಲ್ಲಿಕೆ 
By select 
16 May 2018 12:00:00 AM IST

ಬೆಂಗಳೂರು: ನಿನ್ನೆ ಕರ್ನಾಟಕ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಇಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಚುನಾವಣಾ ಫಲಿತಾಂಶದ ಪ್ರತಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. 

ರಾಜಭವನಕ್ಕೆ ಆಗಮಿಸಿದ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ರಾಜ್ಯಪಾಲ ವಜೂಭಾಯ್ ವಾಲಾ ಅವರಿಗೆ ಚುನಾವಣಾ ಫಲಿತಾಂಶದ ಪ್ರತಿಯನ್ನು ಸಲ್ಲಿಸಿದ್ದಾರೆ. 

ಚುನಾವಣಾ ಪ್ರತಿಯಲ್ಲಿ ರಾಜ್ಯದಲ್ಲಿ ನಡೆದ 222 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ, ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹೀಗೆ ಚುನಾವಣಾ ಫಲಿತಾಂಶದ ಸಂಪೂರ್ಣ ಮಾಹಿತಿ ಒಳಗೊಂಡಿರುತ್ತದೆ.

ಸದ್ಯ ಚುನಾವಣಾ ಫಲಿತಾಂಶದ ಪ್ರತಿ ರಾಜ್ಯಪಾಲರ ಕೈಸೇರಿದ್ದು ರಾಜ್ಯಪಾಲರು ಯಾವ ಪಕ್ಷಕ್ಕೆ ಬಹುಮತ ಸಾಬೀತಿಗೆ ಅವಕಾಶ ನೀಡುತ್ತಾರೆ ಎಂಬ ಕುತೂಹಲ ಕೆರಳಿಸಿದೆ.

Copyright � 2012 Kannadaprabha.com