Kannadaprabha The New Indian Express
ಅಫ್ಘಾನ್ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ: ಟೆಸ್ಟ್ ತಂಡದ ನಾಯಕ ಅಜಿಂಕ್ಯಾ ರೆಹಾನೆ 
By select 
13 Jun 2018 12:00:00 AM IST

ಬೆಂಗಳೂರು: ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡುತ್ತಿರುವ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಹಾಗೂ ನಂ.1 ಆಗಿರುವ ಭಾರತ ಕ್ರಿಕೆಟ್ ತಂಡದ ನಡುವಿನ ಐತಿಹಾಸಿಕ ಟೆಸ್ಟ್ ಸರಣಿ ಬೆಂಗಳೂರಿನಲ್ಲಿ ನಡೆಯಲಿದ್ದು, ಅಫ್ಘಾನಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಟೆಸ್ಟ್ ತಂಡದ ನಾಯಕ ಅಜಿಂಕ್ಯ ರೆಹಾನೆ ಹೇಳಿದ್ದಾರೆ. 

ಅಫ್ಘಾನಿಸ್ತಾನ ತಂಡವನ್ನು ಉತ್ತಮವಾದ ತಂಡ ಎಂದು ಹೇಳಿರುವ ಅಜಿಂಕ್ಯ ರೆಹಾನೆ, ನಾವು ನಮ್ಮ ಎದುರಾಳಿ ತಂಡವನ್ನು ಗೌರವಿಸುತ್ತೇವೆ, ಆದರೆ ಅವರನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ, ನಮ್ಮ ತಂಡದಲ್ಲಿ ಜಡೇಜಾ ಹಾಗೂ ಕುಲ್ದೀಪ್ ಇಬ್ಬರೂ ಅತ್ಯುತ್ತಮ ಸ್ಪಿನ್ನರ್ ಗಳಿದ್ದಾರೆ ಎಂದು ಅಜಿಂಕ್ಯಾ ರೆಹಾನೆ ಹೇಳಿದ್ದಾರೆ. 

"ಬೆಂಗಳೂರಿನಲ್ಲಿ ನಾವು ಅಭ್ಯಾಸ ಮಾಡಿದ್ದೇವೆ, ಐಪಿಎಲ್ ಮನಸ್ಥಿತಿಯಿಂದ ಹೊರಬಂದು ಟೆಸ್ಟ್ ಮನಸ್ಥಿತಿಗೆ ಹೊಂದಿಕೊಳ್ಳುವುದು ಅತ್ಯಂತ ಸವಾಲಿನ ಸಂಗತಿಯಾಗಿತ್ತು ಎಂದು ಸರಣಿಗೆ ಸನ್ನದ್ಧವಾಗಿರುವ ಟೆಸ್ಟ್ ತಂಡದ ನಾಯಕ ರೆಹಾನೆ ಅಭಿಪ್ರಾಯಪಟ್ಟಿದ್ದಾರೆ. 

Copyright � 2012 Kannadaprabha.com