Kannadaprabha The New Indian Express
ನ್ಯಾನೋ ಕಾರು ರಸ್ತೆಯಿಂದ ವಿಮುಖವೇ ? ಜೂನ್ ತಿಂಗಳಲ್ಲಿ ಕೇವಲ 1 ಘಟಕದಲ್ಲಿ ಉತ್ಪಾದನೆ 
By select 
05 Jul 2018 12:00:00 AM IST

ಮುಂಬೈ: ಟಾಟಾ ಮೋಟರ್ಸ್ ಅವರ ನ್ಯಾನೋ ಕಾರು  ಜೂನ್  ತಿಂಗಳಲ್ಲಿ ಕೇವಲ ಒಂದೇ ಒಂದು ಘಟಕದಲ್ಲಿ ಉತ್ಪಾದನೆಯಾಗುತ್ತಿದ್ದು, ಈ ಕಾರು ಇನ್ನೂ ರಸ್ತೆಯಿಂದ ವಿಮುಖವಾಗಲಿದೆಯೇ ಅನ್ನೋ  ಮಾತುಗಳು ಕೇಳಿಬರುತ್ತಿದೆ.

ಆದಾಗ್ಯೂ  ಈ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸುವ ಬಗ್ಗೆ  ಕಂಪನಿ ಯಾವುದೇ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ದ್ವಿಚಕ್ರ ವಾಹನಗಳ ಮೇಲೆ ಸವಾರಿ ಮಾಡುವ ಕುಟುಂಬಗಳಿಗೆ ಸುರಕ್ಷಿತ ಮತ್ತು ಒಳ್ಳೆಯ ಪರ್ಯಾಯವನ್ನು ನೀಡುತ್ತಿದ್ದ  ರತನ್ ಟಾಟಾ ಅವರ ಮೆಚ್ಚುಗೆಯ ಕಡಿಮೆ ದರದ ನ್ಯಾನೋ ಕಾರು  ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಮೂರು ಘಟಕಗಳನ್ನು ಮಾರಾಟ ಮಾಡಿದೆ.

ಈ ವರ್ಷದ ಜೂನ್ ವರೆಗೂ ನ್ಯಾನೋ ಕಾರುಗಳ ಮಾರಾಟವಿರಲಿಲ್ಲ ಕಳೆದ ವರ್ಷದ ಇದೇ ತಿಂಗಳು  25 ಘಟಕಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಟಾಟಾ ಮೋಟಾರ್ಸ್ ಹೇಳಿದೆ.

ಕಳೆದ ವರ್ಷ ಜೂನ್ ತಿಂಗಳು ಇದ್ದ  275 ಘಟಕಗಳು ಈ ವರ್ಷದ ಜೂನ್ ವೇಳೆಗೆ ಕೇವಲ 1 ಘಟಕಕ್ಕೆ ಕುಸಿದಿದೆ.  ಜೂನ್ ತಿಂಗಳಲ್ಲಿ ಮೂರು ಘಟಕಗಳನ್ನು ಮಾರಾಟ ಮಾಡಲಾಗಿದೆ.  ಇದಕ್ಕೂ ಮುನ್ನ 167 ಘಟಕಗಳನ್ನು ಮಾರಾಟ ಮಾಡಲಾಗಿತ್ತು .

ಸದ್ಯದ ಪರಿಸ್ಥಿತಿಯಲ್ಲಿ 2019 ರವರೆಗೂ ಮುಂದುವರೆಸಲು ಸಾಧ್ಯವಿಲ್ಲ . ಆದಾಗ್ಯೂ, ಉತ್ಪಾದನೆ ನಿಲ್ಲಿಸುವ ಸಂಬಂಧ ಇನ್ನೂ  ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

Copyright � 2012 Kannadaprabha.com