Kannadaprabha The New Indian Express
ಆರ್‌ಸಿಬಿ ಅಭಿಮಾನಿಗಳಿಗೆ ಎಬಿ ಡಿವಿಲಿಯರ್ಸ್ ಸಿಹಿ ಸುದ್ದಿ! 
By select 
11 Jul 2018 12:00:00 AM IST

ನವದೆಹಲಿ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಬೆನ್ನಲ್ಲೇ ಅವರ ಅಭಿಮಾನಿಗಳಿಗೆ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುತ್ತಾರೋ ಇಲ್ಲವೋ ಎನ್ನುವ ಆತಂಕವಿತ್ತು. 

ಆದರೆ ಇದೀಗ ಈ ಎಲ್ಲಾ ಆತಂಕ ದೂರವಾಗಿದ್ದು ಇನ್ನೂ ಕೆಲವು ವರ್ಷಗಳ ಕಾಲ ಐಪಿಎಲ್ ನಲ್ಲಿ ಆಡಬೇಕೆಂದುಕೊಂಡಿದ್ದೇನೆ ಎಂದು ಎಬಿಡಿ ತಿಳಿಸಿದ್ದಾರೆ. 

ಎಬಿ ಡಿವಿಲಿಯರ್ಸ್ ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಸಂದರ್ಭದಲ್ಲಿ ಐಪಿಎಲ್ ಆಡುವುದರ ಕುರಿತಂತೆ ಸ್ಪಷ್ಟನೆ ನೀಡಿರಲಿಲ್ಲ. 

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಪರ ಆಡುತ್ತಿರುವ ಎಬಿಡಿ ಐಪಿಎಲ್ ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿರುವುದರಿಂದ ಇನ್ನಷ್ಟು ವರ್ಷಗಳ ಕಾಲ ಆರ್ಸಿಬಿ ಅಭಿಮಾನಿಗಳು ಎಬಿಡಿ ಅವರ ಸ್ಫೋಟಕ ಆಟವನ್ನು ಕಣ್ತುಂಬಿಕೊಳ್ಳಬಹುದು.

Copyright � 2012 Kannadaprabha.com