Kannadaprabha The New Indian Express
ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನು ಕೆನಡಾದಲ್ಲಿ ಅಭಿಮಾನಿಗಳು ಅವಮಾನಿಸಿದ್ದು ಯಾಕೆ! 
By select 
11 Jul 2018 12:00:00 AM IST

ಒಟ್ಟಾವಾ: ದ-ಬ್ಯಾಂಗ್ ಕಾನ್ಸರ್ಟ್ ಗಾಗಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಕೆನಡಾಗೆ ಹೋಗಿದ್ದರು. ಅಲ್ಲಿ ಯುವತಿಯರು ನಡುಬೀದಿಯಲ್ಲೇ ಕತ್ರಿನಾ ಕೈಫ್ ರನ್ನು ಅಭಿಮಾನಿಗಳು ಅವಮಾನಿಸಿದ್ದಾರೆ. 

ಕಾರ್ಯಕ್ರಮ ಮುಗಿಸಿಕೊಂಡು ಕತ್ರಿನಾ ತನ್ನ ಕಾರಿನ ಬಳಿ ಹೋಗುತ್ತಿದ್ದಾಗ ಅಲ್ಲಿ ಇದ್ದ ಯುವತಿಯರು ನಡುರಸ್ತೆಯಲ್ಲೇ ನಿಂತು ಕತ್ರಿನಾ ನಮಗೆ ನಿಮ್ಮ ಜೊತೆ ಫೋಟೋ ಬೇಡ ಎಂದು ಕಿರುಚಾಡಿದ್ದರೆ. ಇದಕ್ಕೆ ಕೋಪಗೊಂಡ ಕತ್ರಿನಾ ನಿಮಗೆ ಒಂದು ವಿಷಯ ಗೊತ್ತಾ? ನೀವು ಹೀಗೆ ಮಾಡಬಾರದು. ನಾನು ಒಂದು ದೊಡ್ಡ ಕಾರ್ಯಕ್ರಮ ಮುಗಿಸಿ ಆಯಾಸಗೊಂಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು. 

ಜನರು ನಿಮ್ಮನ್ನು ನಟಿ ಎಂದು ಕರೆಯುತ್ತಾರೆ. ನೀವು ಒಳ್ಳೆಯ ಸ್ವಭಾವ ಬೆಳೆಸಿಕೊಳ್ಳಬೇಕು. ಜನರು ನಿಮ್ಮ ಹತ್ತಿರ ಬಂದಾಗ ನೀವು ಅವರನ್ನು ದೂರ ಮಾಡುತ್ತೀರಿ ಎಂದಾಗ ಕತ್ರಿನಾ ಕಾಮ್ ಡೌನ್(ಸಮಾಧಾನ) ಎಂದು ಹೇಳಿದ್ದಾರೆ. ಆಗ ಯುವತಿ ನಾನು ಪಬ್ಲಿಕ್ ಪ್ರಾರ್ಪಟಿ ಅಲ್ಲ. ನೀವು ನನಗೆ ಸಮಾಧಾನ ಎಂದೂ ಹೇಳೋಕ್ಕೆ ಆಗಲ್ಲ ಎಂದು ಮರು ಉತ್ತರ ನೀಡಿದ್ದಾಳೆ. 

ಯುವತಿಯರು ಕತ್ರಿನಾ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಕಾದಿದ್ದರು. ಆದರೆ ಕತ್ರಿನಾ ಕಾರ್ಯಕ್ರಮದಲ್ಲಿ ತುಂಬಾ ಆಯಾಸಗೊಂಡಿದ್ದ ಕಾರಣ ಅವರು ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಲು ಸ್ವಲ್ಪ ತಡ ಮಾಡಿದ್ದರು. ಇದರಿಂದ ಯುವತಿಯರು ಕೋಪಗೊಂಡು ಅಲ್ಲಿಂದ ಹೊರಟು ಹೋದರು. ಇದರಿಂದ ಕೋಪಗೊಂಡ ಯುವತಿಯರು ಕತ್ರಿನಾರನ್ನು ಹಿಂಬಾಲಿಸಿ ಅವಮಾನ ಮಾಡಿದ್ದಾರೆ.

ವಿಡಿಯೋ ಕೃಪೆ: ಯೂಟ್ಯೂಬ್

Copyright � 2012 Kannadaprabha.com