Kannadaprabha The New Indian Express
ವಿಂಬಲ್ಡನ್ 2018: ರೋಜರ್ ಫೆಡರರ್ ಗೆ ಶಾಕ್ ನೀಡಿದ ಕೆವಿನ್ ಆ್ಯಂಡರ್ಸನ್ 
By select 
11 Jul 2018 12:00:00 AM IST

ಲಂಡನ್: ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ 2018ರ ಟೂರ್ನಿಯಲ್ಲಿ ವಿಶ್ವದ 2ನೇ ಶ್ರೇಯಾಂಕದ ಆಟಗಾರ ಮತ್ತು ಮಾಜಿ ಚಾಂಪಿಯನ್ ರೋಜರ್ ಫೆಡರರ್ ಆಘಾತ ಅನುಭವಿಸಿದ್ದು, ಕೆವಿನ್ ಆಂಡರ್ಸನ್ ವಿರುದ್ಧ ರೋಚಕ ಸೋಲು ಕಂಡಿದ್ದಾರೆ.

ಲಂಡನ್ ನಲ್ಲಿ ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ ಆಶ್ಚರ್ಯಕರ ರೀತಿಯಲ್ಲಿ ಫೆಡರರ್ ಸೋಲು ಅನುಭವಿಸಿದ್ದಾರೆ. ತೀವ್ರ ಕುತೂಹ ಕೆರಳಿಸಿದ್ದ ಪಂದ್ಯದಲ್ಲಿ ಸ್ವಿಸ್ ಆಟಗಾರ ಫೆಡರರ್ 2-6, 6-7 (5/7), 7-5, 6-4, 13-11 ಅಂತರದ ರೋಚಕ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಇನ್ನು ಹಾಲಿ ಚಾಂಪಿಯನ್ ಫೆಡರರ್ ಅವರನ್ನು ಮಣಿಸಿ ಟೂರ್ನಿಯಿಂದಲೇ ಹೊರದಬ್ಬಿದ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ. 

ಫೆಡರರ್ ಗೆ ಇದು 9ನೇ ವಿಂಬಲ್ಡನ್ ಟೂರ್ನಿಯಾಗಿದ್ದು, ಕಳೆದ ಬಾರಿಯ ಚಾಂಪಿಯನ್ ಆಗಿದ್ದ ಫೆಡರರ್ ಅದೇ ಹಮ್ಮಸ್ಸಿನಲ್ಲೇ ಟೂರ್ನಿ ಆರಂಭಿಸಿದ್ದರು. ಆದರೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ್ದಾರೆ.

Copyright � 2012 Kannadaprabha.com