Kannadaprabha The New Indian Express
ವಿಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್‌ಗೆ ಭಾರತ ತಂಡ: ಮಯಾಂಕ್ ಗೆ ಕೈತಪ್ಪಿದ ಅವಕಾಶ 
By select 
11 Oct 2018 12:00:00 AM IST

ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾ ತಂಡ ಪ್ರಕಟವಾಗಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರದಿಂದ ಪ್ರಾರಂಭಗೊಳ್ಳುವ ಪಂದ್ಯಕ್ಕೆ ತಂಡ ಪ್ರಕಟಗೊಂಡಿದ್ದು ಕರ್ನಾಟಕದ ಮಯಾಂಕ್ ಗೆ ಸ್ಥಾನ ಸಿಕ್ಕಿಲ್ಲ.

ಹನ್ನೆರಡು ಸದಸ್ಯರ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿದ್ದು ಉಳಿದಂತೆ ರಾಜ್‌ಕೋಟ್‌ ಟೆಸ್ಟ್ ತಂಡದಲ್ಲಿ ಯಾವ ಬದಲಾವಣೆ ಆಗಿಲ್ಲ. ಹೀಗಾಗಿ ಶಾರ್ದೂಲ್ ಠಾಕೂರ್ ಸಹ ಹನ್ನೆರಡನೇಯವರಾಗಿ ತಂಡದಿಂದ ಹೊರಗುಳಿಯಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾ ತಂಡ ಹೀಗಿದೆ-

ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಬ್ ಪಂತ್, ರವೀಂದ್ರ ಜಡೇಜಾ, ಆರ್. ಅಶ್ವಿನ್ ,ಕುಲ್‌ದೀಪ್ ಯಾದವ್ ,ಉಮೇಶ್ ಯಾದವ್,  ಮೊಹಮ್ಮದ್ ಶಮಿ 

ಇನ್ನು ತಂಡಕ್ಕೆ ಸೇರ್ಪಡೆಯಾಗುವ ನಿರೀಕ್ಷೆ ಇದ್ದೂ ಸ್ಥಾನವಂಚಿತರಾದವರ ಹೆಆರುಗಳನ್ನು ಹೀಗೆ ಗುರುತಿಸಬಹುದು-

ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ಶಾರ್ದೂಲ್ ಠಾಕೂರ್ ಮತ್ತು ಹನುಮ ವಿಹಾರಿ. 

ರಾಜ್‌ಕೋಟ್‌ನಲ್ಲಿ ನಡೆದ ಪ್ರಥಮ ಟೆಸ್ಟ್ ನಲ್ಲಿ ವಿಡೀಸ್ ವಿರುದ್ದ ಭಾರತ ಇನ್ನಿಂಗ್ಸ್ ಹಾಗೂ 272 ರನ್  ಭರ್ಜರಿ ಜಯ ಸಾಧಿಸಿತ್ತು.

Copyright � 2012 Kannadaprabha.com