Kannadaprabha The New Indian Express
ವಿಮಾನದಲ್ಲಿ ಭೇಟಿಯಾಗಲು ಹೆದರುತ್ತಿದ್ದ ಅಭಿಮಾನಿಯನ್ನು ಕರೆದು ಅನಿಲ್ ಕುಂಬ್ಳೆ ಏನು ಮಾಡಿದ್ರು ಗೊತ್ತ? 
By select 
11 Oct 2018 12:00:00 AM IST

ನವದೆಹಲಿ: ಟೀಂ ಇಂಡಿಯಾದ ಮಾಜಿ ಬಲಗೈ ಸ್ಪಿನ್ನರ್ ಅನಿಲ್ ಕುಂಬ್ಳೆ ವಿಮಾನದಲ್ಲಿ ಭೇಟಿಯಾಗಲು ಹೆದರುತ್ತಿದ್ದ ಅಭಿಮಾನಿಯನ್ನು ಕರೆದು ಮಾತನಾಡಿರುವ ಮೂಲಕ ಕ್ರೀಡಾಭಿಮಾನಿಗಳ ಹೃದಯ ಗೆದ್ದಿದ್ದಾರೆ. 

ಟೀಂ ಇಂಡಿಯಾದ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ಟೀಂ ಇಂಡಿಯಾ ತಂಡದಲ್ಲಿ ಅತ್ಯಂತ ಶಿಸ್ತು ಬದ್ಧ ಕ್ರಿಕೆಟಿಗ ಎಂದೆನಿಸಿಕೊಂಡಿದ್ದರು. ಕ್ರಿಕೆಟ್ ಬಳಿಕ ತಂಡ ಕೋಚ್ ಆಗಿದ್ದ ಅವರು ತಮ್ಮ ಹುದ್ದೆಯಲ್ಲೂ ಇದೇ ನಿಷ್ಠೆಯನ್ನು ಪ್ರದರ್ಶಿಸಿದ್ದರು. ಮೈದಾನದ ಹೊರಗೆಡೆಯೂ ಸಭ್ಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. 

ಇನ್ನು ಇತ್ತೀಚೆಗಷ್ಟೇ ಕುಂಬ್ಳೆ ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ತೆರಳುತ್ತಿದ್ದಾಗ ಅವರ ಅಭಿಮಾನಿ ಸೊಹಿನಿ ಎಂಬುವರು ಅನಿಲ್ ಕುಂಬ್ಳೆ ಅವರಿಗೆ ಟ್ಯಾಗ್ ಮಾಡಿ ಜಂಜೋ ಸಾಧನೆಗಳನ್ನು ಉಲ್ಲೇಖಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ದವಡೆ ಮುರಿದುಕೊಂಡರೂ ಛಲವಾದಿ ಕುಂಬ್ಳೆ ಭಾರತ ತಂಡಕ್ಕಾಗಿ ನೀಡಿರುವ ಸೇವೆಯನ್ನು ನೆನಪಿಸಿಕೊಂಡರು. 

ಮತ್ತೊಂದು ಟ್ವೀಟ್ ನಲ್ಲಿ ಸೊಹಿನಿ ಕುಂಬ್ಳೆ ತಮಗೆ ನೀಡಿರುವ ಎಲ್ಲ ಗೆಲುವು, ಸ್ಮರಣೆ ಹಾಗೂ ಸಂತೋಷಗಳಿಗೆ ಧನ್ಯವಾದಗಳನ್ನು ಹೇಳಲಿಚ್ಛಿಸುವುದಾಗಿ ತಿಳಿಸಿದ್ದರು. 

ಕುಂಬ್ಳೆ ವಿಮಾನದಲ್ಲಿದ್ದಾಗ ಇದನ್ನು ಗಮನಿಸಿ ವಿಮಾನ ಟೇಕ್ ಆಫ್ ಆದ ಬಳಿಕ ತಮ್ಮನ್ನು ಭೇಟಿಯಾಗುವಂತೆ ಸೂಚಿಸಿದ್ದರು.ಬಳಿಕ ಸೊಹಿನಿ ಬೋರ್ಡಿಂಗ್ ಪಾಸ್ ನಲ್ಲೇ ಆಟೋಗ್ರಾಫ್ ನೀಡಿರುವ ಮೂಲಕ ಗಮನ ಸೆಳೆದರು. ಇದನ್ನು ಟ್ವೀಟ್ ಮಾಡಿರುವ ಸೊಹಿನಿ, ತಾವು ಕೂಡಾ ಕುಂಬ್ಳೆ ಅವರಿಂದ ವಿನಯತೆಯನ್ನು ಕಲಿಯಲು ಬಯಸುವುದಾಗಿ ತಿಳಿಸಿದರು.

Copyright � 2012 Kannadaprabha.com