Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Jayalalithaa

ಜಯಲಲಿತಾ ಸಾವು ನ್ಯಾಯಾಂಗ ತನಿಖೆಗೆ; ಪೋಯಸ್ ಗಾರ್ಡನ್ ನಿವಾಸ ಸ್ಮಾರಕ: ತಮಿಳುನಾಡು ಸಿಎಂ

Haratalu Halappa

ಅತ್ಯಾಚಾರ ಪ್ರಕರಣದಿಂದ ಮಾಜಿ ಸಚಿವ ಹರತಾಳು ಹಾಲಪ್ಪ ಖುಲಾಸೆ

Rahul Gandhi

ಪ್ರಧಾನಿಗೆ ಸ್ವಚ್ಛ ಭಾರತ ಬೇಕು, ಆದರೆ ನಮಗೆ "ಸಚ್" ಭಾರತ ಬೇಕಾಗಿದೆ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

Ishrat Jahan(File photo)

ಇಶ್ರತ್ ಜಹಾನ್ ಕೇಸ್: ಇಬ್ಬರು ಗುಜರಾತ್ ಪೊಲೀಸ್ ಅಧಿಕಾರಿಗಳಿಗೆ ರಾಜಿನಾಮೆ ನೀಡುವಂತೆ ಸುಪ್ರೀಂ ಆದೇಶ

KS Nissar Ahmed

ನಿತ್ಯೋತ್ಸವ ಕವಿ ಕೆಎಸ್ ನಿಸಾರ್ ಅಹಮದ್ ಅವರಿಂದ ಈ ಬಾರಿ ದಸರಾ ಉದ್ಘಾಟನೆ

Yeddyurappa

ಮೇಟಿ ಸೆಕ್ಸ್ ಸಿಡಿ ಪ್ರಕರಣ: ಸಿಐಡಿಯಿಂದ ಯಡಿಯೂರಪ್ಪ ಆಪ್ತ ಸಹಾಯಕನ ವಿಚಾರಣೆ

Chief Minister Siddaramaiah

ಟ್ವಿಟರ್ ನಲ್ಲಿ ಖಾಸಗಿ ಖಾತೆ ಪ್ರಾರಂಭಿಸಿದ ಸಿಎಂ ಸಿದ್ದರಾಮಯ್ಯ

India, Pakistan

ಪಾಕಿಸ್ತಾನವನ್ನೊಳಗೊಂಡ ಏಷ್ಯಾ ಕಪ್ ಆಯೋಜಿಸಲು ಕೇಂದ್ರದಿಂದ ಅನುಮತಿ ಕೇಳಿದ ಬಿಸಿಸಿಐ

Collector who barred RSS chief Mohan Bhagwat from hoisting national flag in Kerala transferred

ಕೇರಳ: ಮೋಹನ್ ಭಾಗ್ವತ್ ಗೆ ಧ್ವಜಾರೋಹಣ ಮಾಡಲು ನಿರ್ಬಂಧ ವಿಧಿಸಿದ್ದ ಅಧಿಕಾರಿ ವರ್ಗಾವಣೆ

ಭೂಮಿಯ ಮೇಲೆ ಪ್ರಾಣಿಗಳು ಬಂದಿದ್ದು ಹೇಗೆ? ರಹಸ್ಯ ಬಯಲು!

ಭೂಮಿಯ ಮೇಲೆ ಪ್ರಾಣಿಗಳು ಬಂದಿದ್ದು ಹೇಗೆ? ರಹಸ್ಯ ಬಯಲು!

TMC chief Mamata Banerjee

ಪಶ್ಚಿಮ ಬಂಗಾಳ ಪುರಸಭಾ ಚುನಾವಣೆ: ಎಲ್ಲಾ 7 ಸ್ಥಾನ ಗೆದ್ದ ಟಿಎಂಸಿ, ಬಿಜೆಪಿಗೆ 2 ನೇ ಸ್ಥಾನ

10-year-old rape victim Girl delivers baby after SC turned down abortion plea, put under observation

ಗರ್ಭಪಾತಕ್ಕೆ "ಸುಪ್ರೀಂ" ನಕಾರ: ಮಗುವಿಗೆ ಜನ್ಮ ನೀಡಿದ 10 ವರ್ಷದ ಅತ್ಯಾಚಾರ ಸಂತ್ರಸ್ತ ಬಾಲಕಿ

Jammu and Kashmir National Conference president ( JKNC) Farooq Abdullah

ಭಾರತಕ್ಕೆ ಚೀನಾ, ಪಾಕ್'ಗಿಂತ ಆಂತರಿಕ ಬೆದರಿಕೆಯೇ ಹೆಚ್ಚು: ಫರೂಖ್ ಅಬ್ದುಲ್ಲಾ

ಮುಖಪುಟ >> ರಾಜ್ಯ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ರೈಲು ಓಡಾಟದ ಅವಧಿ ರಾತ್ರಿ 11 ಗಂಟೆವರೆಗೂ ವಿಸ್ತರಣೆ!

ವಿವಿಧ ನಿಲ್ದಾಣಗಳ ಕೊನೆ ರೈಲು ಸಮಯ ಬದಲು, ಮೆಜೆಸ್ಟಿಕ್ ನಿಂದ 4 ದಿಕ್ಕುಗಳಿಗೆ ರಾತ್ರಿ 11.25ಕ್ಕೆ ರೈಲು
Good News For Bangaloreans; BMRCLextends purple line timing till 11 pm

ಸಂಗ್ರಹ ಚಿತ್ರ

ಬೆಂಗಳೂರು: ಪೂರ್ಣ ಪ್ರಮಾಣದ ನಮ್ಮ ಮೆಟ್ರೋ ಮೊದಲ ಹಂತ ಲೋಕಾರ್ಪಣೆಗೊಳ್ಳಲು ಕ್ಷಣಗಣನೆ ಆರಂಭವಾಗಿರುವಂತೆಯೇ ಮೆಟ್ರೋ ರೈಲು ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಸಿಹಿ ಸುದ್ದಿ ನೀಡಿದ್ದು, ಮೆಟ್ರೋ ರೈಲು ಸಂಚಾರ ಅವಧಿಯನ್ನು ವಿಸ್ತರಿಸಿದೆ.

ಮೆಟ್ರೋ ರೈಲು ಈ ಮೊದಲು ರಾತ್ರಿ10 ಕ್ಕೆ ಕೊನೆಗೊಳ್ಳುತ್ತಿದ್ದು, ಇನ್ನು ಮುಂದೆ ರಾತ್ರಿ 11.25ರವರೆಗೂ ಲಭ್ಯವಾಗಲಿದೆ ಎಂದು ಅಧಿಕಾಗಿಳು ತಿಳಿಸಿದ್ದಾರೆ. ಆದರೆ ದಿನದ ಈ ಕೊನೆ ರೈಲು ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ  ಮಾತ್ರ (ಮೆಜೆಸ್ಟಿಕ್‌) ಬಿಡಲಿದ್ದು ನಗರದ ನಾಲ್ಕು ದಿಕ್ಕುಗಳಿಗೂ ಸಂಚಾರ ಸಾಧ್ಯವಾಗಲಿದೆ. ಜೂನ್‌ 19ರಿಂದಲೇ ಈ ಸಮಯ ಅನ್ವಯವಾಗಲಿದೆ ಎಂದು ಮೆಟ್ರೋ ನಿಗಮ ಶುಕ್ರವಾರ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಇದೇ ವೇಳೆ ಬೆಳಗ್ಗೆ 6ಕ್ಕೆ ಆರಂಭವಾಗುತ್ತಿದ್ದ ಮೆಟ್ರೋ ಇನ್ನು ಮುಂದೆ ಬೆಳಗ್ಗೆ 5 ಗಂಟೆಗೆ ಆರಂಭವಾಗಲಿದ್ದು, ಬೆಳ್ಳಂಬೆಳಗ್ಗೆ ದೂರದೂರುಗಳಿಗೆ ಪ್ರಯಾಣ ಮಾಡುವವರಿಗೆ ವರದಾನವಾಗಲಿದೆ. ಬೆಳಗ್ಗೆ 5 ಗಂಟೆಗೆ ಕೇವಲ ಮೆಟ್ರೋ  ಪೈಲಟ್‌ ಗಳಿಗೆ (ಚಾಲಕರಿಗೆ) ಮಾತ್ರ ಪ್ರವೇಶಾವಕಾಶವಿದ್ದ ರೈಲಿನಲ್ಲಿ ಇನ್ನು ಮುಂದೆ ಸಾರ್ವಜನಿಕರ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ಈ ರೈಲು ಉಳಿದ ಅವಧಿಯಷ್ಟು ವೇಗವಾಗಿ ಸಂಚರಿಸುವುದಿಲ್ಲ ಎಂದು  ಹೇಳಲಾಗುತ್ತಿದೆ.

ಈ ಮೊದಲು ಮೆಟ್ರೋ ರೈಲು ಬೆಂಗಳೂರಿನಲ್ಲಿ ಆರಂಭಗೊಂಡು ಇದೀಗ 6 ವರ್ಷಗಳಾಗಿದ್ದು, ಬೆಳಗ್ಗೆ 6ಕ್ಕೆ ಮೊದಲ ಮೆಟ್ರೋ ರೈಲು ಸಂಚಾರವಿತ್ತು. ಸಂಪಿಗೆ ರಸ್ತೆ ಮತ್ತು ನಾಗಸಂದ್ರ ನಡುವೆ ಸಂಚರಿಸುವ ರೈಲು ಮಾತ್ರ ಪೀಣ್ಯ  ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಅನುಕೂಲವಾಗುವಂತೆ ಬೆಳಗ್ಗೆ 5.30ಕ್ಕೆ ಸಂಚಾರ ಆರಂಭಿಸುತ್ತಿತ್ತು. ರಾತ್ರಿ 10ಕ್ಕೆ ಮೆಟ್ರೋ ಕೊನೆ ರೈಲು ನಿಲ್ದಾಣಗಳಿಂದ ಬಿಡುತ್ತಿತ್ತು. ಆದರೆ ಇನ್ನು ಮುಂದೆ ಮೆಜೆಸ್ಟಿಕ್‌ ನಿಲ್ದಾಣದಿಂದ  ಪೂರ್ವದ ಬೈಯ್ಯಪ್ಪನಹಳ್ಳಿ, ಇಂದಿರಾನಗರ, ಎಂಜಿ ರಸ್ತೆ, ಪಶ್ಚಿಮದ ಮೈಸೂರು ರಸ್ತೆ ವಿಜಯನಗರ, ಅತ್ತಿಗುಪ್ಪೆ, ಉತ್ತರದ ನಾಗಸಂದ್ರ, ಜಯನಗರ, ಕೆ.ಆರ್‌.ಮಾರುಕಟ್ಟೆ, ದಕ್ಷಿಣದ ಪೀಣ್ಯ, ನಾಗಸಂದ್ರ ಕಡೆಗೆ ರಾತ್ರಿ  11.25ರವರೆಗೂ ಮೆಟ್ರೋ ಮಾರ್ಗಗಳಲ್ಲಿ ಪ್ರಯಾಣಿಸಬಹುದಾಗಿದೆ ಎಂದು ತಿಳಿದುಬಂದಿದೆ.

ಕೆಂಪೇಗೌಡ ನಿಲ್ದಾಣ ಹೊರತಾಗಿ ನಗರದ 4 ದಿಕ್ಕುಗಳಿಂದ ಆರಂಭಗೊಳ್ಳುವ ಮೆಟ್ರೋ ಮಾರ್ಗಗಳಲ್ಲಿ ಬೇರೆ ಬೇರೆ ಅವಧಿಗೆ ಮೆಟ್ರೋ ಕೊನೆ ರೈಲು ಸಂಚರಿಸಲಿದೆ. ರಾತ್ರಿ 10.50ಕ್ಕೆ ನಾಗಸಂದ್ರದಿಂದ ಯಲಚೇನಹಳ್ಳಿಗೆ ಕೊನೆ  ರೈಲು ಇದ್ದು, ಬೈಯ್ಯಪ್ಪನಹಳ್ಳಿ ಮತ್ತು ಯಲಚೇನಹಳ್ಳಿ ನಿಲ್ದಾಣದಿಂದ ಕೊನೆ ರೈಲು ರಾತ್ರಿ 11ಕ್ಕೆ ರಾತ್ರಿ ಹೊರಡಲಿದೆ. ನಾಯಂಡಹಳ್ಳಿಯಿಂದ ಕೊನೆಯ ರೈಲು ರಾತ್ರಿ 11.05ಕ್ಕೆ ಬಿಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟಣೆ ವೇಳೆ 4 ನಿಮಿಷಕ್ಕೊಂದು ರೈಲು

ಎರಡೂ ಮಾರ್ಗಗಳಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇರುವ ಸಮಯದಲ್ಲಿ ಎರಡು ರೈಲುಗಳ ನಡುವಿನ ಅಂತರವನ್ನು 20 ನಿಮಿಷದವರೆಗೆ  ಹೆಚ್ಚಿಸಲಾಗುತ್ತದೆ.   ಸಾಮಾನ್ಯ ಅವಧಿಯಲ್ಲಿ ಪ್ರತಿ 10 ನಿಮಿಷಗಳಿಗೊಂದು ರೈಲು ಸಂಚರಿಸಲಿದೆ.

ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Bengaluru, Namma Metro, phase-1 Launch, Pranab Mukherjee, BMRCL, ಬೆಂಗಳೂರು, ನಮ್ಮ ಮೆಟ್ರೋ, ಮೊದಲ ಹಂತದ ಉದ್ಘಾಟನೆ, ಪ್ರಣಬ್ ಮುಖರ್ಜಿ, ಬಿಎಂಆರ್ ಸಿಎಲ್
English summary
The BMRCL, which will throw green line operational from June 18 is all set to expand the purple line timings till 11 pm in the night.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement