Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Haj

ಪ್ರಸಕ್ತ ವರ್ಷದಿಂದ ಹಜ್ ಯಾತ್ರಿಕರ ಸಬ್ಸಿಡಿ ರದ್ದು: ಮುಕ್ತಾರ್ ಅಬ್ಬಾಸ್ ನಖ್ವಿ

Congress has protected Hindu religion since 70 years says CM Siddaramaiah

ಕಾಂಗ್ರೆಸ್ 70 ವರ್ಷದಿಂದ ಹಿಂದೂ ಧರ್ಮವನ್ನು ರಕ್ಷಿಸಿದೆ: ಸಿಎಂ ಸಿದ್ದರಾಮಯ್ಯ

PM Modi

ಕಾಂಗ್ರೆಸ್-ಬರ ಅವಳಿ ಸಹೋದರರಿದ್ದಂತೆ, ಕಾಂಗ್ರೆಸ್ ಹೋದಲ್ಲೆಲ್ಲಾ ಬರವೂ ಇರುತ್ತೆ: ಮೋದಿ

Prakash Rai tweets over BJP workers cleaning and purifying the stage

ನಾನು ಎಲ್ಲೇ ಹೋದರೂ ಈ ಸ್ವಚ್ಛತೆ, ಶುದ್ಧೀಕರಣ ಮುಂದುವರಿಸುತ್ತೀರಾ?: ಬಿಜೆಪಿಗೆ ಪ್ರಕಾಶ್‌ ರೈ ಪ್ರಶ್ನೆ

Karnataka

ಕುಡಿಯುವ ಉದ್ದೇಶಕ್ಕೆ ನೀರು ಬೇಕು ಎಂದು ಕರ್ನಾಟಕ ಸುಳ್ಳು ಹೇಳುತ್ತಿದೆ: ಗೋವಾ ಸರ್ಕಾರ

Supreme Court

ಮಣಿಪುರ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ: ಸಿಬಿಐ ಎಸ್ಐಟಿ ಬಗ್ಗೆ ಸುಪ್ರೀಂ ಅಸಮಾಧಾನ

South Africa

2 ನೇ ಟೆಸ್ಟ್: ಭಾರತಕ್ಕೆ 287 ರನ್ ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ

Supreme Court Crisis: Chief Justice of India Dipak Misra meets four rebel judges

ಸುಪ್ರೀಂ ಬಿಕ್ಕಟ್ಟು: ಬಂಡಾಯ ನಾಲ್ವರು ನ್ಯಾಯಾಧೀಶರ ಭೇಟಿ ಮಾಡಿದ ಸಿಜೆಐ

Indian captain Virat Kohli fined for breaching ICC code of conduct during Centurion Test

ಅಸಭ್ಯ ವರ್ತನೆ: ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ

Indian Army (file photo)

3,547 ಕೋಟಿ ರೂ ಮೌಲ್ಯದ ಅತ್ಯಾಧುನಿಕ ಉಪಕರಣಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ

Praveen Togadia, Hardik Patel

ವಿಎಚ್‌ಪಿ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಭೇಟಿ ಮಾಡಿದ ಹಾರ್ದಿಕ್ ಪಟೇಲ್

Scribes boycott Dalit leader Jignesh Mevani meet in Chennai after he asks TV channel to leave

ದಲಿತ ನಾಯಕ ಜಿಗ್ನೇಶ್ ಮೇವಾನಿ ಪತ್ರಿಕಾಗೋಷ್ಠಿ ಬಹಿಷ್ಕರಿಸಿದ ಪತ್ರಕರ್ತರು

Attack on couples by khap panchayat illegal: Supreme Court

ಕಾಪ್ ಪಂಚಾಯತ್ ನಿಂದ ದಂಪತಿಗಳ ಮೇಲೆ ಹಲ್ಲೆ ಅಕ್ರಮ: ಸುಪ್ರೀಂ ಕೋರ್ಟ್

ಮುಖಪುಟ >> ರಾಜ್ಯ

ಶೀಘ್ರದಲ್ಲೇ ಪಿಎಫ್ಐ ಸಂಘಟನೆ ನಿಷೇಧ: ಕೇಂದ್ರ ಚಿಂತನೆ

File photo

ಸಂಗ್ರಹ ಚಿತ್ರ

ಬೆಂಗಳೂರು: ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಶೀಘ್ರದಲ್ಲಿಯೇ ನಿಷೇಧಗೊಳ್ಳಲಿದ್ದು, ಈ ಕುರಿತಂತೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 

ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಕೊಲೆ ಹಾಗೂ ಕೋಮುಗಲಭೆಯಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. 

ಪಿಎಫ್ಐ ಸಂಘಟನೆ ಕುರಿತಂತೆ ಈಗಾಗಲೇ ಗೃಹ ವ್ಯವಹಾರಗಳ ಸಚಿವಾಲಯ ಎಲ್ಲಾ ಅಧಿಕಾರಿಗಳು, ರಾಷ್ಟ್ರೀಯ ತನಿಖಾ ತಂಡದೊಂದಿಗೆ ಮಾತುಕತೆ ನಡೆಸಿದ್ದು, ಮಾಹಿತಿಗಳನ್ನು ಕಲೆ ಹಾಕಿದೆ. ಈ ಹಿನ್ನಲೆಯಲ್ಲಿ ಸಂಘಟನೆ ನಿಷೇಧ ಕುರಿತು ಶೀಘ್ರದಲ್ಲೇ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. 

ಕೇರಳ ಹಾಗೂ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಗೃಹ ವ್ಯವಹಾರಗಳ ಸಚಿವಾಲಯ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದೆ ಎನ್ನಲಾಗುತ್ತಿದೆ. 

ಕೇರಳ ಹಾಗೂ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣದಲ್ಲಿ ಪಿಎಫ್ಐ ಸಂಘಟನೆಗೆ ಸೇರಿದ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಇನ್ನು ಕೆಲವರು ಜನರ ಬಲಪಂಥೀಯರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಪ್ರಕರಗಳಲ್ಲಿ ಬಂಧನಕ್ಕೊಳಪಗಾಗಿದ್ದಾರೆ. ಅಲ್ಲದೆ, ಪಿಎಫ್ಐ ಸದಸ್ಯರ ವಿರುದ್ಧ ಕೋಮು ಗಲಭೆ ಸೃಷ್ಟಿಸಿರುವ ಹಲವು ಪ್ರಕರಣಗಳು ಕೂಡ ದಾಖಲಾಗಿವೆ. ಎಲ್ಲಾ ಅಂಶಗಳನ್ನು ಗಮನಿಸಿ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿದೆ ೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಪಿಎಫ್ಐ ವಿರುದ್ಧ ಈ ವರೆಗೂ ದಾಖಲಾಗಿರುವ ಎಲ್ಲಾ ಪ್ರಕರಣಗಳ ವರದಿಯನ್ನು ಈಗಾಗಲೇ ಅಧಿಕಾರಿಗಳು ಸಚಿವಾಲಯಕ್ಕೆ ಸಲ್ಲಿಸಿದ್ದು, ಶೀಘ್ರದಲ್ಲೇ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂತು ತಿಳಿಸಿದ್ದಾರೆ. 

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿರುವ ಸಂದರ್ಭದಲ್ಲಿ ಹಿಂದೂಗಳ ಮನವೊಲಿಸಿ ಮತಗಳನ್ನು ಪಡೆಯಲು ಪಿಎಫ್ಐ ಸಂಘಟನೆ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರುತ್ತದೆ ಎಂಬ ಮಾತುಗಳು ಕೇಳಿಬರತೊಡಗಿವೆ. 
Posted by: MVN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Popular Front of India, PFI, India, Karnataka, Centre government, Ban, ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ, ಪಿಎಫ್ಐ, ಭಾರತ, ಕರ್ನಾಟಕ, ಕೇಂದ್ರ ಸರ್ಕಾರ, ನಿಷೇಧ
English summary
Popular Front of India (PFI), a pro-Muslim outfit, may be staring at a blanket ban on its operations as the Union government is likely to issue an order to this effect soon says sources.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement