Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Retired IAS officer S.M.Jamdar

ಲಿಂಗಾಯತರು ವೀರಶೈವ ಮಹಾಸಭಾವನ್ನು ಬಹಿಷ್ಕರಿಸಬೇಕು: ಜಾಗತಿಕ ಲಿಂಗಾಯತ ಸಮುದಾಯ

BJP

ರಾಜ್ಯಸಭೆ ಸೋಲಿನಿಂದ ಮಾಯಾವತಿ ನಿರಾಶೆಗೊಂಡಿದ್ದಾರೆ: ಬಿಜೆಪಿ

Chandrabhabunaidu, Amit sha

ಅಮಿತ್ ಶಾ ಆಂಧ್ರಪ್ರದೇಶದ ಜನತೆಯನ್ನು ಅವಮಾನಿಸಿದ್ದಾರೆ : ಬಿಜೆಪಿ ವಿರುದ್ಧ ಚಂದ್ರಬಾಬುನಾಯ್ಡು ವಾಗ್ದಾಳಿ

Representational image

ಕಾವೇರಿ ಜಲ ವಿವಾದ ಪರಿಹರಿಸಲು ಸಮಿತಿ ರಚನೆಗೆ ಕರ್ನಾಟಕ ಒಲವು

File photo

ಜಮ್ಮು-ಕಾಶ್ಮೀರ: ಬುದ್ಗಾಂನಲ್ಲಿ ಎನ್'ಕೌಂಟರ್- ಓರ್ವ ಉಗ್ರನನ್ನು ಸದೆಬಡಿದ ಸೇನೆ

Rahul Gandhi

ಜೆಡಿಎಸ್ ಎಂದರೆ 'ಜನತಾದಳ ಸಂಘ ಪರಿವಾರ' ಬಿಜೆಪಿಯ 'ಬಿ' ಟೀಂ ಜೆಡಿಎಸ್: ರಾಹುಲ್ ಗಾಂಧಿ

Virat Kohli-Deepika Padukone

ದೀಪಿಕಾ ಜತೆ ಜಾಹೀರಾತಿನಲ್ಲಿ ನಟಿಸಲ್ಲ ಎಂದ ಕೊಹ್ಲಿ: ಆರ್‌ಸಿಬಿಗೆ 11 ಕೋಟಿ ನಷ್ಟ?

Accident

ಕಲಬುರಗಿ: ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದ ಟಿಪ್ಪರ್, 4 ದುರ್ಮರಣ

Gangrape

ಅಸ್ಸಾಂ: 5ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿ ಕೊಲೆ

Elephant

ಆಹಾರ ಅರಸಿ ದೇವಸ್ತಾನಕ್ಕೆ ಬಂದ ಗಜರಾಜ

Sachin Tendulkar-Vinod Kambli

ಕ್ರಿಕೆಟ್ ದೇವರು ಸಚಿನ್ ಕಾಲಿಗೆ ಬಿದ್ದ ವಿನೋದ್ ಕಾಂಬ್ಳಿ!

Amit Shah

ಪಾಕಿಸ್ತಾನದ ಪ್ರತಿ ಬುಲೆಟ್ ಗೂ ಒಂದು ಬಾಂಬ್ ಮಾತ್ರವೇ ಪರಿಹಾರ: ಅಮಿತ್ ಶಾ

karti chidabaram

ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಏಪ್ರಿಲ್ 16ರವರೆಗೂ ಬಂಧನದಿಂದ ಪಾರು

ಮುಖಪುಟ >> ಜೀವನಶೈಲಿ

ಅಗ್ಗದ ಬೆಲೆಯ ಸೌಂದರ್ಯ ವರ್ಧಕಗಳ ಬಗ್ಗೆ ಹುಷಾರಾಗಿರಿ!

Representational image

ಸಾಂದರ್ಭಿಕ ಚಿತ್ರ

ಬೆಂಗಳೂರು: ಉತ್ತಮ ತ್ವಚೆ ಹೊಂದುವುದು ಪ್ರತಿಯೊಬ್ಬ ಯುವತಿಯರ ಮತ್ತು ಹೆಂಗಳೆಯರ ಆಸೆಯಾಗಿದೆ. ಇದಕ್ಕಾಗಿ ಬಳಸುವ ಸೌಂದರ್ಯ ವರ್ಧಕಗಳು 100 ರೂಪಾಯಿಯಿಂದ ಸಾವಿರಾರು ರೂಪಾಯಿಗಳವರೆಗೂ ಇರುತ್ತದೆ.ಸ್ಟೆರಾಯ್ಡ್ ಆಧಾರಿತ  ಸೌಂದರ್ಯವರ್ಧಕಗಳು 100 ರೂಪಾಯಿಗಿಂತಲೂ ಕಡಿಮೆಗೆ ಸಿಗುತ್ತದೆ. ಮುಖ ಸೌಂದರ್ಯ ಕಾಣಲೆಂದು ಕಡಿಮೆ ಬೆಲೆಯ ಸೌಂದರ್ಯ ವರ್ಧಕ ಬಳಸುವ ಮುನ್ನ ಎಚ್ಚರ.

ಕಾಲೇಜಿಗೆ ಹೋಗುವ ಯುವತಿಯರು ಈ ಕಾಸ್ಮೆಟಿಕ್ಸ್ ಗಳನ್ನು ಖರೀದಿಸಲು ಬಯಸುತ್ತಾರೆ. ಸ್ವಲ್ಪ ದಿನಗಳವರೆಗೆ ಇದು ಸುಂದರವಾಗಿ ಕಾಣುತ್ತದೆ. ಆದರೆ ಸೌಂದರ್ಯವರ್ಧಕಗಳನ್ನು ಹಾಕಲು ಆರಂಭಿಸಿ 15 ದಿನಗಳ ನಂತರ ಅಪಾಯಗಳ ಸೂಚನೆ ಕಂಡುಬರುತ್ತದೆ. 

ಗೀತಾ(ಹೆಸರು ಬದಲಿಸಲಾಗಿದೆ) ಆಕೆಯ ಮದುವೆ ದಿನ ಸೊಗಸಾಗಿ ಕಾಣಬೇಕೆಂದು ಬಯಸಿದಳು. ಬ್ಯೂಟಿ ಪಾರ್ಲರ್ ಗೆ ಫೇಶಿಯಲ್ ಕ್ಲೀನ್ ಅಪ್ ಗೆಂದು ಹೋದಳು. ಅಲ್ಲಿ ಬ್ಯೂಟಿಷಿಯನ್ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ತೋರುವ ಫೇರ್ ನೆಸ್ ಕ್ರೀಮ್ ಬಳಸಲು ಹೇಳಿದಳು. ಅದರಂತೆ ಗೀತಾ ಕ್ರೀಮ್ ಬಳಸಲು ಆರಂಭಿಸಿದ ಒಂದು ತಿಂಗಳ ಬಳಿಕ ಅವಳ ಮುಖದಲ್ಲಿ ಮೊಡವೆ, ಕೂದಲು ಬೆಳೆಯಲು ಆರಂಭಿಸಿತು. ಅದೇ ಬ್ಯೂಟಿ ಪಾರ್ಲರ್ ಗೆ ಹೋಗಿ ಗೀತಾ ಕೇಳಿದಾಗ ತಮ್ಮ ಸೂಕ್ಷ್ಮ ಚರ್ಮದಿಂದ ಹೀಗಾಗಿದೆ ಎಂದು ಹೇಳಿ ಬ್ಯೂಟಿಷಿಯನ್ ಜಾರಿಕೊಂಡುಬಿಟ್ಟಳು.

ಚರ್ಮರೋಗ ತಜ್ಞರಲ್ಲಿ ಹೋಗಿ ಕೇಳಿದಾಗ ಮುಖಕ್ಕೆ ಸ್ಟಿರಾಯ್ಡ್ ಬಳಸುತ್ತಿದ್ದ ಕಾರಣ ಕೂದಲು ಬೆಳೆದಿದೆ ಎಂದರು. ಹೊಳೆಯುವ ಚರ್ಮದ ಕಾಂತಿಗೆಂದು ಸ್ಟಿರಾಯ್ಡ್ ನ್ನು ಜನರು ಬಳಸುತ್ತಾರೆ. ಅದನ್ನು ಸರಿಯಾಗಿ ಬಳಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ  ಎನ್ನುತ್ತಾರೆ ಚರ್ಮರೋಗ ತಜ್ಞ ಬಿಎಸ್ ಚಂದ್ರಶೇಖರ್. 

ತಪ್ಪು ಗ್ರಹಿಕೆ: ಸ್ಟಿರಾಯ್ಡ್ ನಿಜಕ್ಕೂ ಚರ್ಮಕ್ಕೆ ಹಾನಿ ಎನ್ನುತ್ತಾರೆ ಚಂದ್ರಶೇಖರ್.  ವಾಣಿ ರೈ ಎಂಬುವವರು ಕಳೆದ ವರ್ಷ ಬೆಂಗಳೂರಿಗೆ ಬಂದು ನೆಲೆಸಿದ್ದರು.  ಕಡಿಮೆ ಕ್ರಯದ ಫೇಶಿಯಲ್ ಕ್ರೀಮ್ ಬಳಸಿದ್ದರು. ಒಂದು ತಿಂಗಳು ಆಗುವಾಗ ಮುಖದಲ್ಲಿ ಸಣ್ಣ ಸಣ್ಣ ಕಲೆಗಳು ಬರಲಾರಂಭಿಸಿದವು. ಜನರು ಬೇಗನೆ ತಮ್ಮ ತ್ವಚೆ ಸುಂದರವಾಗಬೇಕೆಂದು ಸ್ಟಿರಾಯ್ಡ್ ಮಾದರಿಯ ಕ್ರೀಮ್ ಗಳನ್ನು ಬಳಸುತ್ತಾರೆ. ಆದರೆ ಇದರಿಂದ ಆ ಮೇಲೆ ಸಮಸ್ಯೆಗಳು ತಲೆದೋರುತ್ತವೆ. ಸ್ನೇಹಿತರು, ಅಕ್ಕಪಕ್ಕದ ಮನೆಯವರು, ಜಾಹಿರಾತು ಮತ್ತು ಸೌಂದರ್ಯತಜ್ಞರನ್ನು ಸಂಪರ್ಕಿಸುವ ಮುನ್ನ ನುರಿತ ವೃತ್ತಿಪರರ ಸಲಹೆ ಪಡೆದು ಸೌಂದರ್ಯ ವರ್ಧಕಗಳನ್ನು ಬಳಸಬೇಕು ಎನ್ನುತ್ತಾರೆ ಚರ್ಮರೋಗ ವೈದ್ಯ ಡಾ. ವೆಂಕಟರಮಣ. ಇವರು ಸ್ಟಿರಾಯ್ಡ್ ನ್ನು ದುರುಪಯೋಗಪಡಿಸಿಕೊಳ್ಳದಂತೆ ಕಳೆದ ಮೂರು ವರ್ಷಗಳಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. 

ಸ್ಚಿರಾಯ್ಡ್ ಗೆ ಸಂಬಂಧಪಟ್ಟಂತೆ 15ರಿಂದ 23 ವರ್ಷಗಳವರೆಗೆ ಮತ್ತು 35ರಿಂದ 45 ವರ್ಷಗಳವರೆಗಿನವರಿಗೆ ಚರ್ಮದಲ್ಲಿ ತೊಂದರೆ ಕಾಣಿಸಿಕೊಳ್ಳುವುದು ಹೆಚ್ಚು.
Posted by: SUD | Source: TNIE

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Cosmetics, Cheap rate, steroid, ಸೌಂದರ್ಯವರ್ಧಕ, ಅಗ್ಗದ ಬೆಲೆ, ಸ್ಟಿರಾಯ್ಡ್
English summary
Fair skin, that national obsession, is an expensive pursuit. Creams that promise a lighter tone can cost anywhere from a few hundreds to thousands. But there are cheaper options, steroid-based ones that cost less than Rs 100, and young adults like college goers are tempted to buy them.In the short term, everything goes reasonably ‘fair’ and dandy and after 15 days, things take an alarming turn.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement