Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Cauvery Management Board: Karnataka slams Centre, says state

ಕಾವೇರಿ ನಿರ್ವಹಣಾ ಮಂಡಳಿ ರಚನೆ; ನಮ್ಮ ಹಕ್ಕು ಕಿತ್ತುಕೊಳ್ಳಲಾಗಿದೆ: ಕೇಂದ್ರದ ವಿರುದ್ಧ ಸಿಎಂ ಆಕ್ರೋಶ

Congress never trusted strength of the country and people: Modi

ದೇಶ ಮತ್ತು ಜನರ ಸಾಮಾರ್ಥ್ಯದ ಬಗ್ಗೆ ಕಾಂಗ್ರೆಸ್ ಗೆ ನಂಬಿಕೆ ಇಲ್ಲ: ಪ್ರಧಾನಿ ಮೋದಿ

Batting With Virat Kohli is very Difficult says Cricketer KL Rahul

ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟ: ಕೆಎಲ್ ರಾಹುಲ್

Virat kohli

ಇಂಗ್ಲೆಂಡ್, ಐರ್ಲ್ಯಾಂಡ್ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡ ಪ್ರಯಾಣ: ಆಲ್ ದ ಬೆಸ್ಟ್ ಟೀಂ ಇಂಡಿಯಾ!

Donald trump

ಇಬಿ-5 ವೀಸಾ ಸುಧಾರಣೆ ಅಥವಾ ರದ್ದು ಮಾಡುವಂತೆ ಅಮೆರಿಕಾ ಕಾಂಗ್ರೆಸ್ ಗೆ ಟ್ರಂಪ್ ಆಡಳಿತ ಆಗ್ರಹ

Pregnant woman thrown into river by husband, survives

ಹಾವೇರಿ: ಗರ್ಭೀಣಿ ಮಹಿಳೆಯನ್ನು ನದಿಗೆ ತಳ್ಳಿದ ಪತಿ, ಬದುಕಿಬಂದ ಪತ್ನಿ

23 Air India flights delayed due to software malfunction

ಸಾಫ್ಟ್ ವೇರ್ ಸಮಸ್ಯೆ: 23 ಏರ್ ಇಂಡಿಯಾ ವಿಮಾನಗಳ ಹಾರಾಟ ವಿಳಂಬ

Mini supermarkets planned to boost rural employment

ರಾಜ್ಯ ಸರ್ಕಾರದಿಂದ ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭ

Throws mother photo

ಭೂಮಿ ಉಳುಮೆ ನಿಲ್ಲಿಸುವಂತೆ ಟ್ರಾಕ್ಟರ್ ಮುಂದೆ ತನ್ನ ತಾಯಿಯನ್ನೆ ಎಸೆದ ಮಗ !

HD Kumaraswamy, G Parameswar

ಜುಲೈ 5ಕ್ಕೆ ಕುಮಾರಸ್ವಾಮಿ ಮೊದಲ ಬಜೆಟ್: ಸಹಕಾರ ಬ್ಯಾಂಕುಗಳಲ್ಲಿನ ರೈತರ ಕೃಷಿ ಸಾಲ ಮನ್ನಾ ಸಾಧ್ಯತೆ

ಬಂಧನಕ್ಕೊಳಗಾಗಿರುವ ಮಹಿಳೆ

ಕಪ್ಪಗಿದ್ದಾಳೆಂದು ಲೇವಡಿ: ಸಮಾರಂಭಕ್ಕೆ ಬಂದಿದ್ದ ಸಂಬಂಧಿಕರಿಗೆ ವಿಷ ಹಾಕಿದ ಮಹಿಳೆ; 5 ಸಾವು, 80 ಮಂದಿ ಅಸ್ವಸ್ಥ

AC temperature

ಹವಾನಿಯಂತ್ರಕದ ತಾಪಮಾನ 24 ಡಿಗ್ರಿ ನಿಗದಿಗೆ ಇಂಧನ ಸಚಿವಾಲಯದ ಸಲಹೆ

Representational image

ಪಶ್ಚಿಮ ಬಂಗಾಳ: ಒಂದೇ ಆವರಣದಲ್ಲಿ ದೇವಸ್ಥಾನ, ಮಸೀದಿ ನಿರ್ಮಿಸಿ ಕೋಮು ಸಾಮರಸ್ಯ ಮೆರೆದ ಜನ

ಮುಖಪುಟ >> ರಾಷ್ಟ್ರೀಯ

2018ರಲ್ಲಿ ಕಣಿವೆ ರಾಜ್ಯದಲ್ಲಿ 60 ಗಲಭೆ, ಭಯೋತ್ಪಾದಕ ಕೃತ್ಯಗಳು; 17 ಉಗ್ರರ ಹತ್ಯೆ

ಲೋಕಸಭೆಗೆ ಕೇಂದ್ರ ಗೃಹ ಸಚಿವಾಲಯದಿಂದ ಮಾಹಿತಿ, 15 ಸೈನಿಕರು ಹುತಾತ್ಮ
60 incidents of terror violence in JK in 2018; 15 security men killed

ಸಂಗ್ರಹ ಚಿತ್ರ

ನವದೆಹಲಿ: 2018ರಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 60 ಗಲಭೆ ಹಾಗೂ ಭಯೋತ್ಪಾದಕ ಹಿಂಸಾಕೃತ್ಯಗಳು ನಡೆದಿದ್ದು, ಈ ಪೈಕಿ ಒಟ್ಟು 17 ಉಗ್ರರು ಹತರಾಗಿ, 15 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಇಂದು ಕೇಂದ್ರ ರಕ್ಷಣಾ ಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿದ್ದು, ಕೇಂದ್ರ ಗೃಹ ಸಚಿವಾಲಯದ ರಾಜ್ಯಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಅವರು ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಅವರು, 2018ರ ಜನವರಿಯಿಂದ ಮಾರ್ಚ್ ತಿಂಗಳವರೆಗೂ ಕಣಿವೆ ರಾಜ್ಯದಲ್ಲಿ ಒಟ್ಟು 60 ಗಲಭೆ ಹಾಗೂ ಭಯೋತ್ಪಾದಕ ಹಿಂಸಾಕೃತ್ಯಗಳು ನಡೆದಿದ್ದು, ಈ ಘಟನೆಗಳಿಂದಾಗಿ ಒಟ್ಟು 17 ಉಗ್ರರು ಹತರಾಗಿದ್ದು, ಅಂತೆಯೇ 15 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ.

ಅಂತೆಯೇ ಈ ವರ್ಷ ಮಾರ್ಚ್ 4ರವರೆಗೂ ನಡೆದ ವಿವಿಧ ದಾಳಿಗಳಲ್ಲಿ 17 ಉಗ್ರರನ್ನು ಹತ್ಯೆ ಮಾಡಲಾಗಿದ್ದು, 15 ಸೈನಿಕರು ಹುತಾತ್ಮರಾಗಿದ್ದಾರೆ. ಅಂತೆಯೇ ಈ ದಾಳಿಗಳಲ್ಲಿ ಒಟ್ಟು ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಮಾರ್ಚ್ 4ರವರೆಗಿನ ಅಂಕಿಅಂಶಗಳನ್ನು ಲೋಕಸಭೆಗೆ ನೀಡಿದ ಅಹಿರ್ ಅವರು, ಕಳೆದ ವರ್ಷ ಇಂತಹ 39 ಘಟನೆಗಳ ನಡೆದಿದ್ದವು. ಅಂತೆಯೇ ಇದೇ ಸಮಯದಲ್ಲಿ ಕಳೆದ ವರ್ಷ 26 ಉಗ್ರರು ಸಾವನ್ನಪ್ಪಿ, 10 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಅಲ್ಲದೆ ನಾಲ್ವರು ನಾಗರಿಕರು ಸಾವನ್ನಪ್ಪಿದ್ದರು ಎಂದು ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಅವರು, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಯೋಜಿತ ಭಯೋತ್ಪಾದನೆಯಿಂದ ಸಾಕಷ್ಟು ಅನಾನುಕೂಲಗಳು ಸಂಭವಿಸುತ್ತಿದ್ದು, ಉಗ್ರರಿಗೆ ಗಡಿಯಾಚೆಗೆ ಆರ್ಥಿಕ ಮತ್ತು ಇತರೆ ನೆರವು ದೊರೆಯುತ್ತಿವೆ. ಗಡಿಯಾಚೆಗಿನ ನೆರವಿನಿಂದಾಗಿಯೇ ಉಗ್ರರ ಅಕ್ರಮ ಒಳನುಸುಳುವಿಕೆ ಹೆಚ್ಚಾಗುತ್ತಿದೆ. ಜನವರಿ ಒಂದೇ ತಿಂಗಳಲ್ಲಿ ಇಂತಹ ಸುಮಾರು 16 ಪ್ರಯತ್ನಗಳು ನಡೆದಿದ್ದು, ಈ ಪೈಕಿ ಭದ್ರತಾ ಪಡೆಗಳು ನಾಲ್ಕು ಮಂದಿ ಉಗ್ರರನ್ನು ಸದೆಬಡೆದಿದೆ ಎಂದು ಹೇಳಿದರು.

ಎರಡೇ ತಿಂಗಳಲ್ಲಿ 633 ಬಾರಿ ಕದನವಿರಾಮ ಉಲ್ಲಂಘಿಸಿದ ಪಾಕ್ ಸೇನೆ
ಇದೇ ವೇಳೆ ಪಾಕಿಸ್ತಾನ ಸೇನೆ ವಿರುದ್ಧ ಕಿಡಿಕಾರಿದ ಅಹಿರ್ ಅವರು, 2018ರಲ್ಲಿ ಕೇವಲ 2 ತಿಂಗಳ ಅವಧಿಯಲ್ಲಿ ಪಾಕಿಸ್ತಾನ ಸೇನೆ ಬರೊಬ್ಬರಿ 633 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದರಿಂದಾಗಿ ಒಟ್ಟು 10 ಸೈನಿಕರು ಹುತಾತ್ಮರಾಗಿದ್ದು, 12 ನಾಗರಿಕರು ಕೂಡ ಸಾವನ್ನಪ್ಪಿದ್ದಾರೆ. ಎಲ್ ಒಸಿ ಒಂದರಲ್ಲೇ 432 ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿದ್ದು, ಅಂತಾರಾಷ್ಟ್ರೀಯ ಗಡಿಯಲ್ಲಿ 201 ಪ್ರಕರಣಗಳು ನಡೆದಿವೆ. 2017ರಲ್ಲಿ ಎಲ್ ಒಸಿಯಲ್ಲಿ 860 ಕದನವಿರಾಮ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ಅಂತೆಯೇ 111 ಪ್ರಕರಣಗಳು ಅಂತಾರಾಷ್ಟ್ರೀಯ ಗಡಿಯಲ್ಲಿ ಸಂಭವಿಸಿತ್ತು ಎಂದು ಲಿಖಿತ ಮಾಹಿತಿ ನೀಡಿದ್ದಾರೆ.
Posted by: SVN | Source: PTI

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : New Delhi, Parliement, Indian Army, Home Ministry, ನವದೆಹಲಿ, ಸಂಸತ್ತು, ಭಾರತೀಯ ಸೇನೆ, ಗೃಹ ಸಚಿವಾಲಯ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement