Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Christian Michel, AgustaWestland Middleman, To Be Extradited says Dubai Court

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ: ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕಲ್‌ ಗಡೀಪಾರಿಗೆ ದುಬೈ ಕೋರ್ಟ್ ಆದೇಶ

LK Advani likely to contest Lok Sabha polls from Gandhinagar

ಲೋಕಸಭೆ ಚುನಾವಣೆ: ಗುಜರಾತ್ ಗಾಂಧಿ ನಗರದಿಂದ ಎಲ್ ಕೆ ಅಡ್ವಾಣಿ ಸ್ಪರ್ಧೆ?

Asia Cup 2018: All You need to know About India

ಗೆಲುವಿನ ಟ್ರ್ಯಾಕ್ ನಲ್ಲಿದ್ದ ಹಾಂಕಾಂಗ್ ಗೆ ಮುಳುವಾದ ವೇಗಿ ಖಲೀಲ್​ ಅಹ್ಮದ್​ ಯಾರು ಗೊತ್ತಾ?

ಬೇಕಿದ್ರೆ ಶೂಟ್ ಮಾಡಿ, ಆದ್ರೆ ಸೇನಾ ಮಾಹಿತಿ ಕೇಳಬೇಡಿ: ಉಗ್ರರಿಂದ ಹತ್ಯೆಯಾದ ವೀರ ಯೋಧನ ಕೊನೆಯ ಮಾತು!

CM H D Kumaraswamy and union minister Rajanath Singh

ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿಲ್ಲ; ರಾಜನಾಥ್ ಸಿಂಗ್

KB Koliwad’

ಜಿಲ್ಲಾ ಪಂಚಾಯತ್ ಕಟ್ಟಡಕ್ಕೆ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ್ ಹೆಸರಿಡಲು ಸಾಧ್ಯವಿಲ್ಲ!

KC Venugopal

ಮುಂದುವರಿದ ಸಂಪುಟ ವಿಸ್ತರಣೆ ಕಗ್ಗಂಟು: ಅಕ್ಟೋಬರ್ 3ರ ನಂತರ ಸಾಧ್ಯತೆ

UPA to blame for HAL

ರಾಫೆಲ್ ಡೀಲ್ ನಿಂದ ಎಚ್ಎಎಲ್ ಕೈಬಿಟ್ಟಿದ್ದು ಯುಪಿಎ ಸರ್ಕಾರವೇ: ಸೀತಾರಾಮನ್

Asia Cup 2018: Spirited Hong Kong go down by 26 runs against India

ಏಷ್ಯಾ ಕಪ್:ಸಮಬಲದ ಹೋರಾಟ ನಡೆಸಿ ಮಣಿದ ಹಾಂಗ್ ಕಾಂಗ್, ಟೀಂ ಇಂಡಿಯಾಗೆ 26 ರನ್ ಜಯ!

Representational image

ಅಸ್ಥಿರವಾಗಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ; ಇಂದು ಬಿಜೆಪಿ ವಿಶೇಷ ಸಭೆ

ಸಂಗ್ರಹ ಚಿತ್ರ

ತೆಲಂಗಾಣ ಮರ್ಯಾದಾ ಹತ್ಯೆ ಆರೋಪಿ ಮೊಹಮ್ಮದ್ ಅಬ್ದುಲ್ ಹಿನ್ನಲೆ ಬಲು ರೋಚಕ, ಭಯಾನಕ!

Minister H D Revanna(File photo)

ದೇವೇಗೌಡ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ: ತನಿಖೆಗೆ ಒತ್ತಾಯಿಸಿದ ಬಿಜೆಪಿ

Baba Ramdev offers to sell petrol, diesel at Rs 35-40, won

35-40 ರೂ.ಗೆ ಪೆಟ್ರೋಲ್‌, ಡೀಸೆಲ್: ಬಾಬಾ ರಾಮ್‌ದೇವ್‌ ಹೊಸ ಆಫರ್, ಆದರೆ ಷರತ್ತುಗಳು ಅನ್ವಯ!

ಮುಖಪುಟ >> ರಾಷ್ಟ್ರೀಯ

ಹರ್ಯಾಣ: ಸಿಬಿಎಸ್ ಇ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಯುವತಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ!

ಹರ್ಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ಘಟನೆ, ಅರೆ ನಗ್ನಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವತಿ ರಕ್ಷಣೆ
CBSE topper kidnapped, gang-raped in Haryana

ಸಾಂದರ್ಭಿಕ ಚಿತ್ರ

ಮಹೇಂದ್ರಗಢ: 2018ನೇ ಸಾಲಿನ ಸಿಬಿಎಸ್ ಇ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಅಗ್ರ ಸ್ಥಾನ ಪಡೆದಿದ್ದ ಹರ್ಯಾಣ ಮೂಲದ ಯುವತಿಯನ್ನು ದುಷ್ಕರ್ಮಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದು ಬಸ್ ನಿಲ್ದಾಣದಲ್ಲಿ ಎಸೆದು ಹೋಗಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ಸಿಬಿಎಸ್‌ಇ ಪರೀಕ್ಷೆಯಲ್ಲಿ ದೇಶಕ್ಕೇ ಟಾಪರ್ ಆಗಿ, ರಾಷ್ಟ್ರಪತಿಗಳಿಂದ ಸನ್ಮಾನ ಸ್ವೀಕರಿಸಿದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹರ್ಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ಗುರುವಾರ ನಡೆದಿದ್ದು, ಗುರಗಾಂವ್ ನಿಂದ 116 ಕಿಲೋಮೀಟರ್ ದೂರದ ಬಸ್‌ ನಿಲ್ದಾಣವೊಂದರಲ್ಲಿ ಅರೆ ನಗ್ನ ಸ್ಥಿತಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದಾಳೆ. ಕೂಡಲೇ ಸ್ಥಳೀಯರು ಆಕೆಯನ್ನು ಅಪಚರಿಸಿ ಆಸ್ಪತ್ರೆಗೆ ದಾಖಲು ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸಾಮೂಹಿಕ ಅತ್ಯಾಚಾರ ವಿಚಾರ ಬೆಳಕಿಗೆ ಬಂದಿದೆ.

ಸಂತ್ರಸ್ಥ ಯುವತಿ ಹೇಳಿಕೊಂಡಿರುವಂತೆ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿಯಾದ ಈಕೆ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ದುಷ್ಕರ್ಮಿಗಳು ಆಕೆಯನ್ನು ಅಪಹರಿಸಿ, ನಿರ್ಜನ ಪ್ರದೇಶದಲ್ಲಿದ್ದ ಹೊಲಕ್ಕೆ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಪಹರಣಕಾರರು ಮಾತ್ರವಲ್ಲದೇ, ಹೊಲದಲ್ಲಿ ಮೊದಲೇ ಇದ್ದ ಹಲವು ಮಂದಿ ಕೂಡಾ ಈಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರಿಗಳೆಲ್ಲರೂ ತನ್ನ ಗ್ರಾಮದವರೇ ಎಂದು ಯುವತಿ ದೃಢಪಡಿಸಿದ್ದಾಳೆ.

ಪೊಲೀಸರು ದೂರು ಸ್ವೀಕರಿಸಲು ಮತ್ತು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಯುವತಿಯ ತಂದೆ- ತಾಯಿ ಆಪಾದಿಸಿದ್ದಾರೆ. ಒಂದಲ್ಲ ಒಂದು ಠಾಣೆಯಲ್ಲಿ ದೂರು ಸ್ವೀಕರಿಸಬಹುದು ಎಂಬ ನಿರೀಕ್ಷೆಯಲ್ಲಿ ಅಲೆದಾಡುತ್ತಿದ್ದು, ಪ್ರಕರಣವನ್ನು ಮುಂದುವರಿಸದಂತೆ ಆರೋಪಿಗಳಿಂದ ಬೆದರಿಕೆಯೂ ಇದೆ ಎಂದು ಅವರು ದೂರಿದ್ದಾರೆ.

ಮಹಿಳೆಯ ದೂರಿನ ಮೇರೆಗೆ 'ಝೀರೊ ಎಫ್‌ಐಆರ್' ದಾಖಲಿಸಲಾಗಿದ್ದು, ಮಹೇಂದ್ರಗಢ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಝೀರೊ ಎಫ್‌ಐಆರ್ ಎಂದರೆ ದೂರು ಸ್ವೀಕರಿಸಿದ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿರುವುದಿಲ್ಲ. ಆದರೆ ಪ್ರಕರಣ ದಾಖಲಿಸಿದ ಬಳಿಕ ಸೂಕ್ತ ಠಾಣೆಗೆ ಈ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ  ಎಂದು ರೇವಾರಿ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. 
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Gurgaon, Crime, Gang Rape, CBSE Topper, Haryana, ಗುರಗಾಂವ್, ಅಪರಾಧ, ಸಾಮೂಹಿಕ ಅತ್ಯಾಚಾರ, ಸಿಬಿಎಸ್ ಇ ಟಾಪರ್, ಹರ್ಯಾಣ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS