Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
UPA to blame for HAL

ರಾಫೆಲ್ ಡೀಲ್ ನಿಂದ ಎಚ್ಎಎಲ್ ಕೈಬಿಟ್ಟಿದ್ದು ಯುಪಿಎ ಸರ್ಕಾರವೇ: ಸೀತಾರಾಮನ್

Asia Cup 2018: India vs Hong Kong Live India set target of 286 for Hong Kong to chase

ಏಷ್ಯಾ ಕಪ್: ಶಿಖರ್ ಧವನ್ ಆಕರ್ಷಕ ಶತಕ, ಭಾರತ 285/7

ಸಂಗ್ರಹ ಚಿತ್ರ

ತೆಲಂಗಾಣ ಮರ್ಯಾದಾ ಹತ್ಯೆ ಆರೋಪಿ ಮೊಹಮ್ಮದ್ ಅಬ್ದುಲ್ ಹಿನ್ನಲೆ ಬಲು ರೋಚಕ, ಭಯಾನಕ!

Baba Ramdev offers to sell petrol, diesel at Rs 35-40, won

35-40 ರೂ.ಗೆ ಪೆಟ್ರೋಲ್‌, ಡೀಸೆಲ್: ಬಾಬಾ ರಾಮ್‌ದೇವ್‌ ಹೊಸ ಆಫರ್, ಆದರೆ ಷರತ್ತುಗಳು ಅನ್ವಯ!

Karunanidhi

ಕರುಣಾನಿಧಿ ಸಮಾಧಿ ಸ್ಥಳ ಅಣ್ಣಾ ಡಿಎಂಕೆ ನೀಡಿದ ಭಿಕ್ಷೆ: ಎಐಎಡಿಎಂಕೆ ಸಚಿವ

As many as 140 stocks hit their respective 52-week low levels

ಷೇರು ಸೂಚ್ಯಾಂಕ ಪತನ: ಎರಡು ದಿನಗಳ ಕುಸಿತದಲ್ಲಿ 2.72 ಲಕ್ಷ ಕೋಟಿ ನಷ್ಟ!

K Chandrasekhar

ಬೇಹು ಪ್ರಕರಣ: ನಿರಪರಾಧಿ ಎಂಬ ತೀರ್ಪು ಬರುವ ಮುನ್ನವೇ ಕೊನೆಯುಸಿರೆಳೆದ ಇಸ್ರೋ ವಿಜ್ಞಾನಿ!

Abdul Wahid Tanveer

ಆಫ್ರಿಕಾ ಬೈಕ್ ರೇಸ್ ನಲ್ಲಿ ಮೊದಲಿಗ, ವಿದೇಶದಲ್ಲಿ ಕನ್ನಡ ಕೀರ್ತಿ ಪತಾಕೆ ಹಾರಿಸಿದ ಮೈಸೂರು ಯುವಕ

Rahul Gandhi

ಸಿಬಿಎಸ್ಇ ಟಾಪರ್ ಗ್ಯಾಂಗ್ ರೇಪ್: ಪ್ರಧಾನಿ ಮೌನವನ್ನು ಒಪ್ಪಿಕೊಳ್ಳಲಾಗುವುದಿಲ್ಲ-ರಾಹುಲ್ ಗಾಂಧಿ

There is no crisis in Karnataka coalition government, speculations in media baseless says Siddaramaiah

ಕಾಂಗ್ರೆಸ್ ನಲ್ಲಿ ಭಿನ್ನಮತ ಇಲ್ಲ, ಸಚಿವ ಸ್ಥಾನ ಕೇಳೋದು ತಪ್ಪಾ?: ಸಿದ್ದರಾಮಯ್ಯ

Anna Malhotra

ಸ್ವತಂತ್ರ ಭಾರತದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಅನ್ನಾ ಮಲ್ಹೋತ್ರಾ ನಿಧನ

RSS never asks its volunteers to work for a particular party: Bhagwat

ನಿರ್ಧಿಷ್ಟ ಪಕ್ಷದ ಪರವಾಗಿ ಕೆಲಸ ಮಾಡುವಂತೆ ಆರ್ ಎಸ್ಎಸ್ ಯಾವತ್ತೂ ತನ್ನ ಕಾರ್ಯಕರ್ತರಿಗೆ ಸೂಚಿಸಿಲ್ಲ: ಭಾಗವತ್

ಮುಖ್ತಾರ್ ಅಹಮ್ಮದ್ ಮಲಿಕ್

ಹೇಡಿ ಉಗ್ರರ ನೀಚ ಕೃತ್ಯ: ಪತ್ರಕರ್ತರ ಸೋಗಿನಲ್ಲಿ ಬಂದು ಮಗನ ಮೃತದೇಹದ ಮುಂದೆ ಅಳುತ್ತಿದ್ದ ಯೋಧನಿಗೆ ಗುಂಡು!

ಮುಖಪುಟ >> ರಾಷ್ಟ್ರೀಯ

ತಾಜ್ ಮಹಲ್ ರಕ್ಷಣೆಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ, ಸುಪ್ರೀಂ ಕೋರ್ಟ್ ತರಾಟೆ

Taj Mahal

ತಾಜ್ ಮಹಲ್

ನವದೆಹಲಿ: ವಿಶ್ವ ಪ್ರಸಿದ್ಧ ಪಾರಂಪರಿಕ  ತಾಣ ತಾಜ್ ಮಹಲ್ ರಕ್ಷಣೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಆಡಳಿತ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ.

ತಾಜ್ ಮಹಲ್  ಸಂರಕ್ಷಿಸುವಲ್ಲಿ ಕೇಂದ್ರಸರ್ಕಾರ ಹಾಗೂ ಭಾರತೀಯ ಪುರಾತತ್ವ  ಸಮೀಕ್ಷೆ   ಇಲಾಖೆ ನಿರ್ಲಕ್ಷ್ಯ ವಹಿಸಿವೆ ಎಂದು ಕಿಡಿಕಾರಿದ ಸುಪ್ರೀಂಕೋರ್ಟ್, ತಾಜ್ ಮಹಲ್ ಗತವೈಭವವನ್ನು ಮರುಸ್ಥಾಪಿಸಿ ಇಲ್ಲವೇ ಅದನ್ನು ಕೆಡವಿ ಎಂದು  ಕೇಂದ್ರಸರ್ಕಾರಕ್ಕೆ ತಾಕೀತು ಮಾಡಿದೆ.

ಐಪೆಲ್ ಟವರ್ ಗಿಂತಲೂ ತಾಜ್ ಮಹಲ್ ಸುಂದರವಾಗಿದೆ. ಟಿವಿ ಟವರ್ ನಂತಿರುವ  ಐಪೆಲ್ ಟವರ್ ನ್ನು 80 ಮಿಲಿಯನ್ ಪ್ರವಾಸಿಗರು ವೀಕ್ಷಿಸುತ್ತಾರೆ. ಆದರೆ, ನಮ್ಮ ತಾಜ್ ಮಹಲ್ ಅದಕ್ಕಿಂತಲೂ ಸುಂದರವಾಗಿದೆ . ಆದರೆ,ಕೇಂದ್ರಸರ್ಕಾರದ ನಿರಾಸಕ್ತಿಯಿಂದಾಗಿ ದೇಶಕ್ಕೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ನ್ಯಾಯಾಲಯ ಕಿಡಿಕಾರಿದೆ.

ಮೊಘಲ್ ಚಕ್ರವರ್ತಿ ಷಹಜಾನ್ ತನ್ನ ಮಡದಿಗೋಸ್ಕರ್ ಕಟ್ಟಿಸಿದ ತಾಜ್ ಮಹಲ್ ಸಂರಕ್ಷಣೆಗಾಗಿ ದೃಷ್ಟಿ ದಾಖಲೆ  ಕರಡು ರೂಪಿಸುವಲ್ಲಿ ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಹೇಳಿಕೆ ಸುಪ್ರೀಂಕೋರ್ಟ್ ಗೆ ಹೇಳಿಕೆ ನೀಡಿತ್ತು. ಆದರೆ. ಅದನ್ನು ನ್ಯಾಯಾಧೀಶರ ಮುಂದೆ ಮಂಡಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾದ್ದರಿಂದ  ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

 ಕಲುಷಿತ ಅನಿಲದಿಂದಾಗಿ ತಾಜ್ ಮಹಲ್ ಸುತ್ತಮುತ್ತಲಿನ ಪ್ರದೇಶದಲ್ಲಿನ ಪರಿಸರ ಹಾಳಾಗಿದ್ದು, ಇದನ್ನು ರಕ್ಷಿಸಬೇಕೆಂದು   ಪರಿಸರ ತಜ್ಞ ಎಂ. ಜಿ. ಮೆಹ್ತಾ  ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

 ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ  ಎಂ. ಬಿ. ಲೊಕುರ್ ಮತ್ತು ದೀಪಕ್ ಗುಪ್ತಾ ಅವರಿದ್ದ  ದ್ವಿಸದಸ್ಯ ಪೀಠ, ತಾಜ್ ಮಹಲ್ ರಕ್ಷಣೆ ಕುರಿತ ಸಂಸದೀಯ ಸಮಿತಿ ವರದಿ ಹೊರತುಪಡಿಸಿ ಕೇಂದ್ರಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿತು.

ತಾಜ್ ಮಹಲ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ವಾಯುಮಾಲಿನ್ಯ ಪ್ರಮಾಣ ಕುರಿತು ವರದಿ ನೀಡಲು ಕಾನ್ಪುರದಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ ಹೇಳಲಾಗಿದ್ದು,  ಇನ್ನೂ ನಾಲ್ಕು ತಿಂಗಳೊಳಗೆ ವರದಿ ನೀಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.

ಅಲ್ಲದೇ ವಾಯುಮಾಲಿನ್ಯದಿಂದ ರಕ್ಷಣೆಗಾಗಿ ಸಲಹೆ ನೀಡಲು ವಿಶೇಷ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ಜುಲೈ 31 ರಿಂದ ಈ ವಿಷಯದ ವಿಚಾರಣೆಯನ್ನು ದಿನದಿಂದ ದಿನಕ್ಕೆ ನಡೆಸುವುದಾಗಿ  ಸುಪ್ರೀಂಕೋರ್ಟ್ ಪೀಠ ಹೇಳಿಕೆ ನೀಡಿದೆ.

ಸಂಬಂಧಿಸಿದ್ದು...
Posted by: ABN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Supreme court, Taj Mahal, Center, ನವ ದೆಹಲಿ, ಸುಪ್ರೀಂ ಕೋರ್ಟ್, ತಾಜ್ ಮಹಲ್, ಕೇಂದ್ರ ಸರ್ಕಾರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS