Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
SC judgement on Aadhaar historic; scheme helps government save Rs 90,000 crore annually: Jaitley

ಆಧಾರ್ ತೀರ್ಪು ಐತಿಹಾಸಿಕ, ತಂತ್ರಜ್ಞಾನ ನಿರಾಕರಿಸುವಂತಿಲ್ಲ: ಅರುಣ್ ಜೇಟ್ಲಿ

Bengaluru Magistrate court rejects Actor Duniya Vijay

ಅಪಹರಣ, ಹಲ್ಲೆ ಪ್ರಕರಣ: ದುನಿಯಾ ವಿಜಯ್ ಜಾಮೀನು ಅರ್ಜಿ ವಜಾಗೊಳಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್

Supreme Court allows live streaming of court proceedings, says,

ನ್ಯಾಯಾಲಯಗಳ ಕಲಾಪ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ

Asia Cup 2018: worst Umpiring Costs india

ಏಷ್ಯಾ ಕಪ್ 2018: ಅಂಪೈರ್ ತಪ್ಪು ತೀರ್ಪಿನಿಂದಾಗಿ ಭಾರತಕ್ಕೆ ತಪ್ಪಿದ ಜಯ!

ಸಂಗ್ರಹ ಚಿತ್ರ

ಮುಸ್ಲಿಂ ವ್ಯಕ್ತಿ ವಿವಾಹವಾದ ಕೋಪ; ತಮ್ಮನಿಂದ 13 ವರ್ಷ ಬಳಿಕ ಮನೆಗೆ ಬಂದ ಅಕ್ಕ-ಬಾವನ ಬರ್ಬರ ಕೊಲೆ!

File Image

ನವದೆಹಲಿ: ಅ.9ಕ್ಕೆ ದೇಶದ ಮೊದಲ 'ಇಂಡಿಯಾ ಸ್ಟಾರ್ಟ್ ಅಪ್ ಡೇ’ ಗೆ ಪೇನ್ ಬುಕ್ ತಯಾರಿ

File Image

ಬೆಂಗಳೂರು: 2 ಸಾವಿರ ಕೋಟಿ ರು. ಮೌಲ್ಯದ ಬೃಹತ್ ಜಿಎಸ್‌ಟಿ ಹಗರಣ ಬೆಳಕಿಗೆ, ವಂಚಕ ದುಗಾಲ್ ಸೆರೆ

File Image

ಬೆಂಗಳೂರು: ಕಾಂಗ್ರೆಸ್ ನಾಯಕನ ಹತ್ಯೆ ಆರೋಪಿಗಳ ಮೇಲೆ ಪೋಲೀಸ್ ಫೈರಿಂಗ್!

Ravi Channannavar-Virat Kohli

ವಿರಾಟ್ ಕೊಹ್ಲಿಗೆ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ ಡಿಸಿಪಿ ರವಿ ಚನ್ನಣ್ಣನವರ್, ಯಾಕೆ ಗೊತ್ತ!

Rambha

ಮೂರನೇ ಮಗುವಿಗೆ ತಾಯಿಯಾದ ನಟಿ ರಂಭಾ

ಸಂಗ್ರಹ ಚಿತ್ರ

'ನಮೋ' ಎಫೆಕ್ಟ್; ಬಿಜೆಪಿ ಸೇರಿದ ಇಬ್ಬರು ಕೇರಳದ ಕೈಸ್ತ ಪಾದ್ರಿಗಳು!

Terrorist killed in Jammu and Kashmir encounter identified as top LeT commander

ಕಾಶ್ಮೀರ: ಎನ್ ಕೌಂಟರ್ ಗೆ ಬಲಿಯಾದ ಉಗ್ರ ಎಲ್ ಇಟಿ ಕಮಾಂಡರ್

ಸಂಗ್ರಹ ಚಿತ್ರ

ಅಯ್ಯೋ, ಟೀಂ ಇಂಡಿಯಾ ವಿರುದ್ಧ ಆಫ್ಘಾನಿಸ್ತಾನವೇ ಗೆಲ್ಲಬೇಕಿತ್ತು, ಭಾರತೀಯ ಕ್ರಿಕೆಟ್ ಪ್ರೇಮಿಗಳು ಬಯಸಿದ್ದೇಕೆ!

ಮುಖಪುಟ >> ರಾಜಕೀಯ

ಪ್ರತಿಭೆ ಇರುವವರಿಗೆ ಮನ್ನಣೆ, ಸ್ವಜನ ಪಕ್ಷಪಾತ ಮಾಡುವುದಿಲ್ಲ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

Dinesh Gundu Rao and Eshwar Khandre took charge as KPCC president and working president.

ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನೇಶ್ ಗುಂಡೂರಾವ್ ಹಾಗೂ ಈಶ್ವರ ಖಂಡ್ರೆ. ಕಾಂಗ್ರೆಸ್ ನಾಯಕರು ಹಾಜರಿದ್ದರು.

ಬೆಂಗಳೂರು: ಪಕ್ಷದಲ್ಲಿ ಸ್ವಜನ ಪಕ್ಷಪಾತ ತೋರಿಸದೆ ಉತ್ತಮ ಕೆಲಸ ಮಾಡುವ ಅರ್ಹತೆ ಇರುವ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅವರು ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ನಂತರ ಮಾತನಾಡಿ, ಸಾಮಾನ್ಯವಾಗಿ ರಾಜಕೀಯ ನಾಯಕರ ಜತೆ ಗುರುತಿಸಿಕೊಂಡವರು, ಅವರ ಒಡನಾಟ ಹೊಂದಿರುವವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ.  ಆದರೆ ರಾಜ್ಯ ಕಾಂಗ್ರೆಸ್ ನಲ್ಲಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ, ಪ್ರತಿಭೆ ಹೊಂದಿರುವವರಿಗೆ ಸ್ಥಾನಮಾನ ನೀಡಲಾಗುವುದು ಎಂದರು.

ಹಿಂದಿನ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಮೇಲೆ ನಂಬಿಕೆಯಿಟ್ಟು ಪಕ್ಷದ ಹೈಕಮಾಂಡ್ ಜವಾಬ್ದಾರಿಯುತ ಸ್ಥಾನ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಮುಂದಿನ ದಿನಗಳಲ್ಲಿ ತಮ್ಮ ಯೋಜನೆಗಳು ಏನೇನು ಎಂಬುದನ್ನು ಕೂಡ ತಿಳಿಸಿದರು.

ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದವರನ್ನು ಸುಮ್ಮನೆ ಬಿಡುವುದಿಲ್ಲ. ರಾಜ್ಯದಲ್ಲಿನ ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ತಾಳ್ಮೆಯನ್ನು ತೋರಿಸಬೇಕು ಮತ್ತು ತ್ಯಾಗ ಮಾಡಲು ಸಿದ್ಧರಿರಬೇಕು. ಸಚಿವ ಹುದ್ದೆಗಾಗಿ ಮತ್ತು ನಿಗಮ-ಮಂಡಳಿಗಳಲ್ಲಿ ನೇಮಕಾತಿಗಾಗಿ ಹಲವು ನಾಯಕರು ಪ್ರಯತ್ನಿಸುತ್ತಿದ್ದಾರೆ. ಆದರೆ ಪಕ್ಷದ ವಿಚಾರ ಬಂದಾಗ ಯಾವುದೇ ಸ್ಥಾನಮಾನ, ಅಧಿಕಾರ ಸಿಗಲಿ, ಬಿಡಲಿ ಪಕ್ಷಕ್ಕಾಗಿ ದುಡಿಯಬೇಕು. ಪಕ್ಷಕ್ಕೆ ದ್ರೋಹವೆಸಗುವ ಕೆಲಸ ಮಾಡಿದವರನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಮಾತನಾಡಿ, ನೂತನ ಅಧ್ಯಕ್ಷರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು.  ನಿನ್ನೆಯ ಕಾರ್ಯಕ್ರಮಕ್ಕೆ ರಾಜ್ಯದ ಹಲವು ಭಾಗಗಳಿಂದ ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಈಶ್ವರ ಖಂಡ್ರೆ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಇನ್ನು ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದ ಡಿ ಕೆ ಶಿವಕುಮಾರ್, ಬಿಕೆ ಹರಿಪ್ರಸಾದ್, ಕೆ ಎಚ್ ಮುನಿಯಪ್ಪ, ಎಂಬಿ ಪಾಟೀಲ್ ಕಾರ್ಯಕ್ರಮದಲ್ಲಿ ಹಾಜರಾಗಿ ಪಕ್ಷದೊಳಗೆ ನಾಯಕರ ಮಧ್ಯೆ ಯಾವುದೇ ಮುನಿಸು ಇಲ್ಲ, ಎಲ್ಲರೂ ಚೆನ್ನಾಗಿದ್ದಾರೆ ಎಂದು ತೋರಿಸಿಕೊಡುವ ಪ್ರಯತ್ನ ಮಾಡಿದರು.

ನಮ್ಮ ಸರ್ಕಾರದ ಕಾರ್ಯಕ್ರಮಗಳು ಜನಪರವಾಗಿದ್ದರೂ ಸಹ ಚುನಾವಣೆಯಲ್ಲಿ ಬಿಜೆಪಿಯ ಮತಗಳನ್ನು ಧ್ರುವೀಕರಣ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಮುಂದೆಯಾದರೂ ಬಿಜೆಪಿಯನ್ನು ಸೋಲಿಸಲು ಮತ್ತು ಪಕ್ಷವನ್ನು ಅಧಿಕಾರಕ್ಕೆ ತರಲು ತಳಮಟ್ಟದಿಂದ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ಸುಗಮ ಆಡಳಿತಕ್ಕೆ ಸಹಕಾರ ನೀಡುವುದು ಮತ್ತು ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಯತ್ನಿಸುವುದು ಮತ್ತು ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದು ನಾಯಕರ ಮಾತಿನಲ್ಲಿ ಹೆಚ್ಚು ಪ್ರಸ್ತಾಪವಾಯಿತು. ಉತ್ತರ ಕರ್ನಾಟಕ ಭಾಗದ ಜನರ ಮತ್ತು ಲಿಂಗಾಯತ ಸಮುದಾಯಗಳಿಗೆ ಆದ್ಯತೆ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನವನ್ನು ಈಶ್ವರ ಖಂಡ್ರೆಯವರಿಗೆ ಪಕ್ಷದ ಹೈಕಮಾಂಡ್ ವಹಿಸಿದೆ.

Posted by: SUD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Dinesh Gundu Rao, KPCC, Congress, EShwar Khandre, ದಿನೇಶ್ ಗುಂಡೂರಾವ್, ಕೆಪಿಸಿಸಿ, ಕಾಂಗ್ರೆಸ್, ಈಶ್ವರ ಖಂಡ್ರೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS