Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Casual Photo

ಶಬರಿಮಲೆ: ಬಿಕ್ಕಟ್ಟು ಪರಿಹಾರ ಮಾತುಕತೆ ವಿಫಲ- ಪಂಡಲಂ ರಾಯಲ್ ಕುಟುಂಬ ಹೇಳಿಕೆ

Women Thrashed Bank manager

ದಾವಣಗೆರೆ: ಸಾಲ ಮಂಜೂರಾತಿಗೆ ಮಂಚಕ್ಕೆ ಕರೆದ ಬ್ಯಾಂಕ್ ಮ್ಯಾನೇಜರ್ ಬಂಧನ!

BS Yeddyurappa himself will get a shock soon says Former CM Siddaramaiah

ಯಡಿಯೂರಪ್ಪಗೇ ದೊಡ್ಡ ಶಾಕ್ ಕಾದಿದೆ: ಸಿದ್ದರಾಮಯ್ಯ

Umesh Yadav

ವೆಸ್ಟ್ಇಂಡೀಸ್ ವಿರುದ್ಧ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ: ಶಾರ್ದೂಲ್ ಬದಲು ಉಮೇಶ್ ಯಾದವ್ ಗೆ ಸ್ಥಾನ

File Image

ಇಂದು ಕಾವೇರಿ ತೀರ್ಥೋದ್ಭವ: ತಲಕಾವೇರಿ ಜಾತ್ರೆಗೆ ಸಕಲ ಸಿದ್ದತೆ

Pranitha Subhash

ಸರ್ಕಾರಿ ಶಾಲೆ ದತ್ತು ಪಡೆದ ಪ್ರಣೀತಾ, ಇತರೆ ಸೆಲಬ್ರಿಟಿಗಳಿಗೆ ಮಾದರಿಯಾದ ನಟಿ!

Ashwini

ಬೆಂಗಳೂರು: ನೇಣು ಬಿಗಿದುಕೊಂಡು ವೈದ್ಯೆ ಆತ್ಮಹತ್ಯೆ!

Saina Nehwal,

ಡೆನ್ಮಾರ್ಕ್ ಓಪನ್: ಕಠಿಣ ಪಂದ್ಯ ಗೆದ್ದ ಸೈನಾ ದ್ವಿತೀಯ ಸುತ್ತಿಗೆ, ಆಘಾತಕಾರಿ ಸೋಲು ಕಂಡ ಸಿಂಧೂ ಹೊರಕ್ಕೆ

#MeToo: Ragini

#MeToo: ಸ್ಯಾಂಡಲ್ ವುಡ್ ಹಿರಿಯ ನಟರ ಮೌನಕ್ಕೆ ಅಚ್ಚರಿ ವ್ಯಕ್ತಪಡಿಸಿದ ರಾಗಿಣಿ

Lata Mangeshkar

#MeToo: ನನ್ನ ವಿಚಾರಕ್ಕೆ ಯಾರೂ ಬಂದಿಲ್ಲ, ಬಂದರೆ ಸುಮ್ಮನಿರಲ್ಲ ಎಂದ ಲತಾ ಮಂಗೇಶ್ಕರ್

Digvijaya Singh

ನಾನು ಪ್ರಚಾರಕ್ಕಿಳಿದರೆ ಕಾಂಗ್ರೆಸ್ ಸೋಲು ಕಾಣಲಿದೆ: ದಿಗ್ವಿಜಯ್ ಸಿಂಗ್ ಗೊಂದಲದ ಹೇಳಿಕೆ

Save daughters from BJP minister: Congress chief Rahul Gandhi

ಬಿಜೆಪಿ ಸಚಿವ, ಶಾಸಕರಿಂದ ಹೆಣ್ಣುಮಕ್ಕಳನ್ನು ಕಾಪಾಡಿ: ರಾಹುಲ್ ಗಾಂಧಿ

J.P. Nadda

ಹಂದಿ ಜ್ವರ, ಜಿಕಾ ವೈರಸ್ ಪರೀಕ್ಷಿಸಲು ಸಾಕಷ್ಟು ಕ್ರಮ- ಕೇಂದ್ರ ಸಚಿವ ಜೆ. ಪಿ. ನಡ್ಡಾ

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

ಸೂರ್ಯನನ್ನೇ ಮುಟ್ಟಲಿರುವ 'ನಾಸಾ'ದ 'ಪಾರ್ಕರ್‌ ಸೋಲಾರ್‌ ಪ್ರೋಬ್‌' ನೌಕೆ!

ಸೂರ್ಯನ ಅಗಾಧ ಶಾಖವನ್ನು ತಡೆದುಕೊಂಡು ಅದನ್ನೇ ಇಂಧನವಾಗಿಸಿಕೊಂಡು ಮುನ್ನುಗ್ಗುವ ನೌಕೆ
Parker Solar Probe: NASA begins countdown to launch of first spacecraft to

ಪಾರ್ಕರ್‌ ಸೋಲಾರ್‌ ಪ್ರೋಬ್‌

ವಾಷಿಂಗ್ಟನ್: ಇಡೀ ಸೌರಮಂಡಲದ ಉಗಮಕ್ಕೆ ಕಾರಣವಾಗಿರುವ ಸೂರ್ಯನನ್ನೇ ಅಧ್ಯಯನ ಮಾಡಲು ಉತ್ಸುಕವಾಗಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯನ ಒಡಲು ಪ್ರವೇಶಿಸಬಲ್ಲ ನೌಕೆಯ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

ಸೌರಮಂಡಲ ಮತ್ತು ಭೂಮಿ ಸೇರಿದಂತೆ ಇತರೆ ಗ್ರಹಗಳ ಉಗಮಕ್ಕೆ ಕಾರಣವಾಗಿರುವ ಮತ್ತು ಅಸಂಖ್ಯಾತ ರಹಸ್ಯಗಳನ್ನು ತನ್ನ ಉರಿಯೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಸೌರಮಂಡಲದ ಕೇಂದ್ರ ಬಿಂದು 'ಸೂರ್ಯ'ನ ನಿಕಟ ಅಧ್ಯಯನಕ್ಕೆ ಮಾನವ ಇತಿಹಾಸದಲ್ಲೇ ಮೊದಲ ಸಾಹಸವೊಂದಕ್ಕೆ ನಾಸಾ ಕೈ ಹಾಕಿದೆ.

ನಾಸಾದ ಈ ಸೂರ್ಯ ಶಿಕಾರಿಗಿ ಶನಿವಾರ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದ್ದು, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ನಿರ್ಮಿಸಿರುವ ಅತ್ಯಾಧುನಿಕ ಮತ್ತು ಪ್ರಬಲ ಪಾರ್ಕರ್‌ ಸೋಲಾರ್‌ ಪ್ರೋಬ್‌ ಎಂಬ ಗಗನನೌಕೆ ಉಡಾವಣೆಗೆ ಸಜ್ಜಾಗಿ ನಿಂತಿದೆ. ಈ ನೌಕೆ ಸೂರ್ಯನ ಅತ್ಯಂತ ದೊಡ್ಡ ಪ್ರಮಾಣದ ಶಾಖವನ್ನು ತಡೆದುಕೊಂಡು ಸೂರ್ಯನ ಅತ್ಯಂತ ಸಮೀಪಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.

ಕೇಪ್‌ ಕೆನವೆರಲ್‌ನಿಂದ ಅಮೆರಿಕ ಕಾಲಮಾನದ ಪ್ರಕಾರ ಶನಿವಾರ ಬೆಳಗ್ಗೆ 3.33ರ ನಂತರದ ಒಂದು ತಾಸಿನ ಅವಧಿಯೊಳಗೆ ಪಾರ್ಕರ್‌ ಸೋಲಾರ್‌ ಪ್ರೋಬ್‌ ಅನ್ನು ಹೊತ್ತ ಡೆಲ್ಟಾ-4 ಬೃಹತ್‌ ರಾಕೆಟ್‌ ನಭಕ್ಕೆ ಜಿಗಿಯಲಿದೆ. ಈ ಐತಿಹಾಸಿಕ ವಿದ್ಯಮಾನಕ್ಕಾಗಿ ವಿಶ್ವವೇ ಎದುರು ನೋಡುತ್ತಿದೆ.

ಪಾರ್ಕರ್‌ ಸೋಲಾರ್‌ ಪ್ರೋಬ್‌ ವೈಶಿಷ್ಟ್ಯತೆಗಳು
ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆಯು ನಾಸಾ ನಿರ್ಮಿತ ಅತ್ಯಂತ ಪ್ರಬಲ ನೌಕೆಯಾಗಿದ್ದು, ಸೂರ್ಯ ನಾಭಿಯಿಂದ 61 ಲಕ್ಷ ಕಿ.ಮೀ.ನಷ್ಟು ಸಮೀಪ ಸಾಗಲಿದೆ. ಈ ನೌಕೆ ಸೂರ್ಯನ ಬಳಿ ತಲುಪಿದ ಬಳಿಕ 7 ವರ್ಷದಲ್ಲಿ 24 ಬಾರಿ ಅದರ ವಾತಾವರಣವನ್ನು ಸುತ್ತಲಿದೆ. ಈ ಸೌರಾಧ್ಯಯನ ಯೋಜನೆಗೆ ಅಮೆರಿಕ ಸರ್ಕಾರ ಅಂದಾಜು 10 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ.  ಸೂರ್ಯ ಸಮೀಪಿಸುತ್ತಿದ್ದಂತೆ ನೌಕೆ  ಗಂಟೆಗೆ 7 ಲಕ್ಷ ಕಿ.ಮೀ ವೇಗದಲ್ಲಿ ಚಲಿಸಲಿದೆ. ಆ ಮೂಲಕ ಇಡೀ ವಿಶ್ವದಲ್ಲಿಯೇ ಅತ್ಯಂತ ವೇಗದ ಮಾನವ ನಿರ್ಮಿತ ನೌಕೆ ಎಂಬ ಕೀರ್ತಿಗೂ ಪಾರ್ಕರ್‌ ಸೋಲಾರ್‌ ಪ್ರೋಬ್‌ ಪಾತ್ರವಾಗಲಿದೆ. 

ಈ ನೌಕೆಯ ಮತ್ತೊಂದು ವಿಶೇಷವೆಂದರೆ ಅದು ಇದರ ತಾಪಮಾನ ತಡೆಯು ಸಾಮರ್ಥ್ಯ. ಒಂದು ಮೂಲದ ಪ್ರಕಾರ ಈ ಪಾರ್ಕರ್‌ ಸೋಲಾರ್‌ ಪ್ರೋಬ್‌ ನಷ್ಟು ತಾಪಮಾನವನ್ನು ತಡೆಯುವ ಮತ್ತೊಂದು ನೌಕೆ ಇಡೀ ವಿಶ್ವದಲ್ಲೇ ಇಲ್ಲ ಎನ್ನಲಾಗಿದೆ. ಏಕೆಂದರೆ ಸೂರ್ಯ ಅಗಾಧ ಪ್ರಮಾಣದ ತಾಪಮಾನ ತಡೆದುಕೊಂಡು ಅಲ್ಲಿ ಅಧ್ಯಯನ ನಡೆಸಬೇಕಾದರೆ ಇಂತಹ ಸಾಮರ್ಥ್ಯದ ಅವಶ್ಯಕತೆ ಇದ್ದೇ ಇರುತ್ತದೆ. ಸೂರ್ಯನ ಹೊರವಲಯದಲ್ಲಿ (ಕೊರೋನಾ) 1 ಕೋಟಿ ಡಿಗ್ರಿ ವರೆಗಿನ ಶಾಖವಿದ್ದು, ನೌಕೆ ಈ ಉಷ್ಣ ತಡೆಯಬೇಕಿದೆ. ಇದೇ ಕಾರಣಕ್ಕೆ ಈ ವಿಶೇಷವಾಗಿ ಈ ನೌಕೆಯನ್ನು ತಯಾರು ಮಾಡಲಾಗಿದೆ.

ಅಧ್ಯಯನದ ಪ್ರಮುಖ ಗುರಿ
ಸೂರ್ಯನಿಂದ ಆಗಾಗ ಭೂಮಿಯತ್ತ ಧಾವಿಸುವ ಉಷ್ಣಗಾಳಿ ಕುರಿತು ಅಧ್ಯಯನ ನಡೆಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಆ ಮೂಲಕ ಸಂಭಾವ್ಯ  ಸೂರ್ಯ ರಶ್ಮಿ ಮತ್ತು ಸೂರ್ಯ ಉಷ್ಣಗಾಳಿ ವಿಕೋಪವನ್ನು ತಡೆಯುವುದು ಈ ಅಧ್ಯಯನದಿಂದ ಸಾಧ್ಯವಾಗುತ್ತದೆ ಎಂಬುದು ಯೋಜನೆಯ ಪ್ರಮುಖ ವಿಜ್ಞಾನಿಯಾದ ಮಿಚಿಗವ್ ವಿವಿಯ ಹಿರಿಯ ಪ್ರೊಫೆಸರ್ ಜಸ್ಟಿನ್ ಕಾಸ್ಪರ್ ಅವರ ಅಭಿಪ್ರಾಯ.
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Washington, NASA, Sun, Parker Solar Probe, ವಾಷಿಂಗ್ಟನ್, ನಾಸಾ, ಸೂರ್ಯ, ಪಾರ್ಕರ್ ಸೋಲಾರ್ ಪ್ರೋಬ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS