Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Security Forces

ಜಮ್ಮು-ಕಾಶ್ಮೀರ : ಕುಲ್ಗಾಂನಲ್ಲಿ ಮೂವರು ಉಗ್ರರ ಹತ್ಯೆ, ಎನ್ ಕೌಂಟರ್ ಪ್ರಗತಿಯಲ್ಲಿ

Ramkumar Ramanathan

ಹಾಲ್ ಆಫ್ ಫೇಮ್ ಓಪನ್ : ಟಿಮ್ ಸ್ಮಿಕ್ಜೆಕ್ ಸೋಲಿಸಿದ ರಾಮ್ ಕುಮಾರ್ ರಾಮನಾಥನ್ ಫೈನಲ್ ಪ್ರವೇಶ

Interim finance minister Piyush Goyal chaired the GST council meet in which the decision to reduce GST rates on 100 items was taken.

100 ಉತ್ಪನ್ನಗಳ ಮೇಲೆ ಜಿಎಸ್ ಟಿ ಇಳಿಕೆ; ಯಾವ್ಯಾವುದಕ್ಕೆ ಎಷ್ಟೆಷ್ಟು? ಇಲ್ಲಿದೆ ಮಾಹಿತಿ

Madras high court

ಭಾರತದ ಗುರುತುಪತ್ರಗಳು ವಿದೇಶಿಯರಿಗೆ ಪೌರತ್ವ ನೀಡುವುದಿಲ್ಲ: ಮದ್ರಾಸ್ ಹೈಕೋರ್ಟ್

BJP president Amit Shah

ನಕಲಿ ಸುದ್ದಿ ಕಡಿವಾಣ ಹಾಕಿ ನೇರ ಮಾಹಿತಿ ನೀಡಲು ದೆಹಲಿ ಬಿಜೆಪಿಯಿಂದ ವಾಟ್ಸಾಪ್ ಗ್ರೂಪ್ ರಚನೆ; ಅಮಿತ್ ಶಾ ಅದರಲ್ಲಿ ಸದಸ್ಯ

Mithun, Uthappa go big in KPL auctio

ಕೆಪಿಎಲ್ ಹರಾಜು: ದಾಖಲೆ ಮೊತ್ತ ಪಡೆದ ಅನುಭವಿ ರಾಬಿನ್ ಉತ್ತಪ್ಪ, ಮಿಥುನ್

Casual photo

ಬೆಂಗಳೂರು :ವೀಸಾ ಅವಧಿ ಮುಗಿದಿದ್ದರೂ ಹೆಚ್ಚು ದಿನದಿಂದ ನೆಲೆಸಿದ 107 ಅಪ್ರಿಕನ್ ಪ್ರಜೆಗಳ ಬಂಧನ

Villagers seen traveling by boats in Bagalkot on Saturday

ಬೆಳಗಾವಿಯಲ್ಲಿ ಪ್ರವಾಹ ಭೀತಿ: ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮಕ್ಕೆ ಸಚಿವರ ಸೂಚನೆ

BJP president B S Yedyurappa

ಸಮ್ಮಿಶ್ರ ಸರ್ಕಾರ ರಾಜ್ಯವನ್ನು ಹಣಕಾಸು ಬಿಕ್ಕಟ್ಟಿಗೆ ತಳ್ಳುತ್ತಿದೆ: ಬಿಎಸ್ ವೈ ಆರೋಪ

Siddaramaiah

ಲೋಕಸಭೆ ಸಮರಕ್ಕೆ ಸಿದ್ಧರಾಗಿ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ

R V Deshpande

44 ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ: ದೇಶಪಾಂಡೆ

Karnataka: Former minister Vimalabai Deshmukh passes away

ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ್ ಇನ್ನಿಲ್ಲ

H.D Kumaraswamy

ಎಲ್ಲದಕ್ಕೂ ಸಬ್ಸಿಡಿ ಬೇಕು ಎಂದರೆ ಹೇಗೆ ಸಾಧ್ಯ? ಉಚಿತ ಬಸ್ ಪಾಸ್ ಬೇಡಿಕೆ ತಳ್ಳಿ ಹಾಕಿದ ಕುಮಾರ ಸ್ವಾಮಿ

ಮುಖಪುಟ >> ವಿಶೇಷ

ಮತದಾನವೆಂಬ ಪರೀಕ್ಷೆಗೆ ಸಿದ್ಧತೆ ಹೇಗೆ?

Be prepared for a poll test as its like a one more exam

ಸಾಂದರ್ಭಿಕ ಚಿತ್ರ

ನಾವೀಗ ಇನ್ನೊಂದು ಚುನಾವಣೆಯ ಹೊಸ್ತಿಲಲ್ಲಿದ್ದೇವೆ. ಮೇ 12ರಂದು ಕರ್ನಾಟಕ ವಿಧಾನಸಭೆಗಾಗಿ ಚುನಾವಣಾ ಮತದಾನ ನಡೆಯಲಿದೆ. ಪ್ರತೀ ವರ್ಷ ಮಾರ್ಚ್ ತಿಂಗಳು ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷಾ ಸಮಯವಾಗಿರುತ್ತದೆ. ಹಾಗೆಯೇ ಈ ವರ್ಷ ವಿದ್ಯಾರ್ಥಿಗಳ ಜತೆಗೆ ಕರ್ನಾಟಕ ಮತದಾರರಿಗೆ ಸಹ ಪರೀಕ್ಷೆ ಇದೆ ಎನ್ನಬಹುದು. ಈ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗಬೇಕು, ಯಾರು ಅನುತ್ತೀರ್ಣಗೊಳ್ಳಬೇಕೆನ್ನುವುದನ್ನು ರಾಜ್ಯದ ಏಳು ಕೋಟಿ ಪ್ರಜೆಗಳು ನಿರ್ಧರಿಸಬೇಕಿದೆ. 

ಒಬ್ಬ ಹತ್ತನೇ ತರಗತಿ ವಿದ್ಯಾರ್ಥಿ ಪಬ್ಲಿಕ್ ಪರೀಕ್ಷೆಗೆ ಕುಳಿತುಕೊಳ್ಳುವ ಮುನ್ನ ಎಷ್ಟು ತಯಾರಿ ನಡೆಸುತ್ತಾನೆ, ಇನ್ನು ಸಾರ್ವಜನಿಕ ಸೇವೆಗಳಿಗಾಗಿ ನಡೆಯುವ ಐ.ಎ.ಎಸ್., ಕೆ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳುವವರಂತೂ ವರ್ಷಪೂರ್ತಿ ಎಷ್ಟು ಶಿಸ್ತಿನಿಂದ ಅಭ್ಯಾಸ ಮಾಡಿರುತ್ತಾರೆ ಎನ್ನುವುದು ನಮಗೆ ಗೊತ್ತು. ಆದರೆ ನಮ್ಮನ್ನಾಳುವ ನಾಯಕರನ್ನು ಆಯ್ಕೆ ಮಾಡುವ ಮುನ್ನ ನಾವು, ಅಂದರೆ, ಪ್ರಜೆಗಳು ಎಷ್ಟು ತಯಾರಿ ನಡೆಸುತ್ತೇವೆ? ಎಷ್ಟು ಮುತುವರ್ಜಿ ವಹಿಸಿ ಅಭ್ಯರ್ಥಿಗಳನ್ನು ಆರಿಸಿ ಕಳಿಸುತ್ತೇವೆ? ಚುನಾವಣೆಗಳೆಲ್ಲಾ ಮುಗಿದು ಯಾರೋ ಅಭ್ಯರ್ಥಿಗಳನ್ನು ಆರಿಸಿ ಕಳಿಸಿ ಅವನೇನೋ ಭ್ರಷ್ಟಾಚಾರ, ಹಗರಣಗಳಲ್ಲಿ ಸಿಕ್ಕಿಬಿದ್ದಾಗ ಬೈಯ್ಯುವ, ಅವರ ವಿರುದ್ಧ ಸುಮ್ಮನೆ ಬಾಯಿ ಮಾತಿನಲ್ಲಿ ಆವೇಶದಿಂದ ಅರಚುವುದರಿಂದ ಏನೂ ಪ್ರಯೋಜನವಿಲ್ಲವಷ್ಟೆ! ಅದಕ್ಕಾಗಿಯೇ ಚುನಾವಣಾ ಸಮಯವಾದ ಈಗಲೇ ನಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿಕೊಂಡು ಯೋಗ್ಯ ಹಾಗೂ ಪ್ರಾಮಾಣಿಕರಾದವರನ್ನೇ ಆರಿಸಿ ಸ್ವಸ್ಥ, ಆರೋಗ್ಯಪೂರ್ಣ ಪ್ರಜಾತಂತ್ರಕ್ಕೆ ನಾಂದಿ ಹಾಡೋಣ.. 

ಐದು ವರ್ಷಗಳಿಗೊಮ್ಮೆ ಎದುರಾಗುವ ಈ ಪ್ರಕ್ರಿಯೆ ಪ್ರಜಾತಂತ್ರದ ಅಳಿವು ಉಳಿವಿನ ಮಾನದಂಡ. ಹೀಗಾಗಿಯೇ ಪ್ರತಿಯೊಬ್ಬ ಪ್ರಜೆಯೂ ತಾವು ಯಾರನ್ನು, ಯಾವ ಕಾರಣಕ್ಕಾಗಿ ಬೆಂಬಲಿಸುತ್ತಿದ್ದೇವೆ ಎನ್ನುವುದನ್ನು ಸರಿಯಾಗಿ ಅರಿತುಕೊಂಡು ಮತ ಚಲಾಯಿಸಬೇಕಾಗುತ್ತದೆ. ಹಾಗಾಗದೇ ಹೋದಾಗ ಮುಂದೊದಗುವ ಎಲ್ಲಾ ಬಗೆಯ ಅನಾಹುತಗಳಿಗೂ ಅವನೇ ಬಾಧ್ಯಸ್ಥನಾಗುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮಿಂದ ಚುನಾಯಿತವಾದ ಪಕ್ಷಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ಮತ್ತು ಸರ್ಕಾರಗಳ ಸಾಧನೆಗಳನ್ನು ಪರಾಮರ್ಶಿಸಿ ಸಂವಿಧಾನಿಕ ಹಕ್ಕಿನ ಮೂಲಕ ತೀರ್ಪು ನೀಡುವ ಸಾರ್ವತ್ರಿಕ ಮತದಾನ, ಪ್ರಜಾತಾಂತ್ರಿಕ ವ್ಯವಸ್ಥೆಯ ಪ್ರಮುಖ ಅಂಗ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಅಭ್ಯರ್ಥಿಗಳನ್ನು ಆರಿಸುವ ಸಮಯದಲ್ಲಿ ಯಾವುದೇ ಆಸೆ ಆಮಿಷಗಳಿಗೆ ಸಿಲುಕದೆ, ಯಾವುದೇ ಬಗೆಯ ಒತ್ತಡಕ್ಕೆ ಒಳಗಾಗದೆ ಮತ ಹಾಕುವುದು ಬಹು ಮುಖ್ಯ ಕರ್ತವ್ಯವಾಗುತ್ತದೆ.

ಇನ್ನು ಕಳೆದೆಲ್ಲಾ ಚುನಾವಣೆಗಳಿಗಿಂತಲೂ ಈ ಬಾರಿಯ ಚುನಾವಣೆಯು ಸಾಮಾನ್ಯ ಜನರ ಪಾಲಿಗೆ ಅತ್ಯಂತ ಮಹತ್ವದ್ದು ಎನ್ನಬೇಕು. ರಾಜಕೀಯ ಪಕ್ಷಗಳ ನೈತಿಕತೆಯ ಬಗ್ಗೆಯೇ ಸಂಶಯ ಮೂಡುವಂತೆ, ಸಂಸತ್ತು ಎಂದರೆ ಗೂಂಡಾ ವರ್ತನೆ ತೋರುವವರ ಅಖಾಡವೆಂಬಂತೆಲ್ಲಾ ನಡೆದುಕೊಂಡ ಆ ಮೂಲಕ ವಿಧಾನಸಭೆಯ  ಘನತೆಗೆ ಕುಂದು ಬರುವಂತೆ ವರ್ತಿಸುವವರನ್ನೇ ಆರಿಸುವುದರಲ್ಲಿ ಅರ್ಥವಿಲ್ಲ. ರಾಜ್ಯದಲ್ಲಿನ ಸಮಸ್ಯೆಗಳಿಗೆಲ್ಲಾ ಪರಿಹಾರ ಮಾರ್ಗಗಳೇ ಇಲ್ಲ. ಅವೆಲ್ಲವೂ ಸ್ವಾಭಾವಿಕ ಮತ್ತು ಅನಂತ. ಹೀಗಾಗಿ ಕೊಂಚ ಸಹಿಸಿಕೊಳ್ಳಿ ಎನ್ನುವಂತಹವರಿಂದ ಯಾರಾದರೂ ಏನನ್ನು ಸಹ ನಿರೀಕ್ಷಿಸಲು ಬರುವುದಿಲ್ಲ. ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳು ಅದರ ಮುಂದುವರಿದ ಭಾಗವಾಗಿ ರೈತರ ಆತ್ಮಹತ್ಯೆ, ಸಮುದಾಯಗಳಲ್ಲಿ ಒಡಕು ಮೂಡಿಸುವ ಕಾರ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಇನ್ನೂ ಅನೇಕ ಸಮಸ್ಯೆಗಳ ಸರಮಾಲೆ ಇದೆ., ಅದರಿಂದ ಈ ಎಲ್ಲಾ ಸಮಸ್ಯೆಗಳೂ ಪ್ರತಿಯೊಬ್ಬ ಕನ್ನಡಿಗನನ್ನು ಕಾಡುತ್ತಿವೆ.

ಇಷ್ಟೆಲ್ಲದರ ನಡುವೆ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳ ನಾಯಕರುಗಳು ಪ್ರಜೆಗಳ ಮೂಗಿಗೆ ತುಪ್ಪ ಸವರುವಂತಹ ಪ್ರಣಾಳಿಕೆಗಳೆಂಬ ಸಾಧನವನ್ನಿಟ್ಟಿಕೊಂಡು ಮನೆ ಮನೆಗೆ ಧಾವಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದದ್ದಾದರೆ ಉಚಿತ ಅಕ್ಕಿ ನೀಡುತ್ತೇವೆ,, ಮನೆ ಮನೆಗೆ ಬಣ್ಣದ ಟಿವಿ ದೊರಕಿಸುತ್ತೇವೆ ಎಂದು ಮೊದಲಾಗಿ ಸಾಮಾನ್ಯ ನಾಗರಿಕರಿಗೆ ತಾವು ಅಂಗೈನಲ್ಲಿ ಆಕಾಶವನ್ನು ತೋರಿಸುವ ಇಂತಹ ಪ್ರತಿ ನಿಧಿಗಳಿಗೆ ಈ ಸಮಯದಲ್ಲಿ ಪ್ರಜ್ಞಾವಂತ ನಾಗರಿಕನಾದವನು ತಾನು ಜನಪ್ರತಿನಿಧಿಗಳಿಂದ ಭಿಕ್ಷೆ ಬೇಡುತ್ತಿಲ್ಲ ಎನ್ನುವುದನ್ನು ಅವರಿಗೆ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕಿದೆ.

ಪ್ರಜಾಪ್ರತಿನಿಧಿಯಾದವರು, ಅವರು ಯಾವ ರಾಜಕೀಯ ಪಕ್ಷದವರಾಗಲೀ ಜನರಿಗೆ ಇಂತಹ ಕ್ಷುಲ್ಲಕ ಆಮಿಷಗಳನ್ನು ಒಡ್ಡುವುದರ ಬದಲಿಗೆ ರಾಜುಅದಲ್ಲಿನ  ಗಂಭೀರ ಸಮಸ್ಯೆಗಳ ಪರಿಹಾರದ ಕುರಿತ ಭರವಸೆಯನ್ನು ನೀಡಬೇಕಿದೆ. ರಾಜಕೀಯದಲ್ಲಿರುವವರು ತಮ್ಮ ತಮ್ಮ ನಡುವೆ ಪರಸ್ಪರ ದೋಷಾರೋಪಣೆಯಲ್ಲಿ ತೊಡಗದೆ ಜನರ ನಡುವಿನ ಜ್ವಲಂತ ಸಮಸ್ಯೆಗಳ ಕುರಿತು ಗಮನ ಹರಿಸಿ ಅದರ ಪರಿಹಾರ ಮಾರ್ಗೋಪಾಯಗಳನ್ನು ಕಂಡುಹುಡುಕ ಬೇಕಿದೆ. ಅಂತೆಯೇ ಈ ರಾಜ್ಯದ ಸತ್ಪ್ರಜೆಗಳು ತಾವು ಮುಂದೆ ಯಾವ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಎನ್ನುವುದನ್ನು ಚಿಂತಿಸುವುದಕ್ಕಿಂತ ಮುಂಬರುವ ಸರ್ಕಾರದ ನೀತಿಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎನ್ನುವುದರ ಕುರಿತು ಆಲೋಚಿಸಿ ಮತ ಹಾಕಬೇಕು.

ಚುನಾವಣೆ ಎನ್ನುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆಯ ಬತ್ತಳಿಕೆಯಲ್ಲಿರುವ ಒಂದು ಮಹಾನ್ ಅಸ್ತ್ರ. ಹಣದ ಪ್ರಭಾವದಿಂದ ಸದಾ ಕಾಲವೂ ಜನತೆಯ ಬಳಿಯಿರುವ ಆ ಅಸ್ತ್ರವನ್ನು ನಿಷ್ಫಲಗೊಳಿಸಲು ಬರುವುದಿಲ್ಲ. ದುಡಿಯುವ ಜನಸಮುದಾಯದ, ಶೋಷಿತ ವರ್ಗಗಳ ಸಹನೆಯ ಮಿತಿ ಮೀರಿದಾಗ ಆಕ್ರೋಶ ಹೊರಹೊಮ್ಮಲೇಬೇಕು. ಆ ಸತ್ಯವನ್ನು ನಮ್ಮನ್ನು ಪ್ರತಿನಿಧಿಸುವ ನಾಯಕರುಗಳು ಇನ್ನಾದರೂ ಕಂಡುಕೊಳ್ಳಬೇಕಿದೆ. ಹಾಗಾದಲ್ಲಿ ಮಾತ್ರವೇ ಪ್ರಜಾತಂತ್ರ ವ್ಯವಸ್ಥೆಯು ಗಟ್ಟಿಯಾಗುತ್ತದೆ . ಮುಂದಿನ ಚುನಾವಣೆಯಲ್ಲಿ ಮತ ಹಾಕುವ ಪ್ರತಿಯೊಬ್ಬರೂ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕಿದೆ, ಆ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಿದೆ. ಪ್ರಸಕ್ತ ಚುನಾವಣೆಯು ಈ ಒಂದು ಬದಲಾವಣೆಗೆ ನಾಂದಿಯಾಗುವುದೆನ್ನುವ ಆಶಯದೊಡನೆ ಮತದಾನವೆಂಬ ಪ್ರಜಾಪ್ರಭುತ್ವದ ದಿವ್ಯ ಪರೀಕ್ಷೆಯನ್ನು ಬರೆಯೋಣ.

- ರಾಘವೇಂದ್ರ ಅಡಿಗ ಎಚ್ಚೆನ್
Posted by: RHN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Karnataka Election, Vote, ಕರ್ನಾಟಕ ಚುನಾವಣೆ, ಮತದಾನ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS