Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Taj Mahal

ತಾಜ್ ಮಹಲ್ ನಿರ್ಮಾಣದ ಹಿಂದೆ ಭಾರತೀಯ ಕಾರ್ಮಿಕರ ರಕ್ತ, ಬೆವರಿನ ಶ್ರಮವಿದೆ: ಯೋಗಿ ಆದಿತ್ಯನಾಥ್

Sreesanth

ಶ್ರೀಶಾಂತ್ ಅಜೀವ ನಿಷೇಧ ತೆರವಿಗೆ ತಡೆ; ಬಿಸಿಸಿಐ ಮನವಿ ಎತ್ತಿಹಿಡಿದ ಕೇರಳ ಹೈಕೋರ್ಟ್

BCCI slammed over Anil Kumble birthday post

ಬರ್ತ್ ಡೇ ಬಾಯ್ ಅನಿಲ್ ಕುಂಬ್ಳೆಗೆ ಬಿಸಿಸಿಐನಿಂದ ಅವಮಾನ?

Indian Army

ಚೀನಾ ಸೇನೆಯ ಬೆದರಿಕೆ ನಿಭಾಯಿಸಲು ಭಾರತ ಸನ್ನದ್ಧವಾಗಿದೆ: ರಕ್ಷಣಾ ತಜ್ಞ

Virat Kohli-Arijit Singh

ಗಾಯಕ ಅರ್ಜಿತ್ ಸಿಂಗ್ ಭೇಟಿಯಾದಾಗ ನಾನು ಅಭಿಮಾನಿಯಾದಂತಹ ಭಾವ: ಕೊಹ್ಲಿ

Aadhaar can be sole ID proof for voting: Ex-CEC Krishnamurthy

ಆಧಾರ್‌ ಮತದಾನಕ್ಕೆ ಏಕೈಕ ಗುರುತು ಪತ್ರವಾಗಿ ಬಳಸಬಹುದು: ಮಾಜಿ ಸಿಇಸಿ ಕೃಷ್ಣಮೂರ್ತಿ

Extra vigilant

ಹಬ್ಬಗಳ ಸಂದರ್ಭದಲ್ಲಿ ಹೆಚ್ಚುವರಿ ಭದ್ರತೆಗೆ ರಾಜ್ಯಗಳಿಗೆ ಕೇಂದ್ರ ಸೂಚನೆ

Time for a

ಆಯುರ್ವೇದದ ಮೂಲಕ 'ಆರೋಗ್ಯ ಕ್ರಾಂತಿ' ಮಾಡುವ ಸಮಯ ಬಂದಿದೆ: ಪ್ರಧಾನಿ ಮೋದಿ

Vidhana soudha

ವಿಧಾನಸೌಧ ವಜ್ರ ಮಹೋತ್ಸವ: ಚಿನ್ನ, ಬೆಳ್ಳಿ ಉಡುಗೊರೆ ಪ್ರಸ್ತಾವನೆ ಹಿಂಪಡೆದ ಸರ್ಕಾರ!

Pakistan seeks extension of Mumbai terror attacks mastermind Hafiz Saeed

ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಬಂಧನ ಅವಧಿ ವಿಸ್ತರಣೆ ಕೋರಿದ ಪಾಕ್

selfie

ದೊಡ್ಡಬಳ್ಳಾಪುರ: ಬೆಟ್ಟದ ಮೇಲಿಂದ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸಾವು

ಸಂಸತ್ ಭವನ- ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ಕೇಂದ್ರದ ಪರ ಶೇ.85 ಜನತೆಗೆ ವಿಶ್ವಾಸ, ಶೇ.27 ಮಂದಿಗೆ ದೃಢ ನಾಯಕತ್ವ ಬೇಕು: ಪ್ಯೂ ಸಮೀಕ್ಷೆ

BJ Puttaswamy threatens stir if ACB fails to file FIR against CM

ಎಸಿಬಿ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸದಿದ್ದರೆ ಧರಣಿ ಮಾಡುತ್ತೇನೆ: ಪುಟ್ಟಸ್ವಾಮಿ ಎಚ್ಚರಿಕೆ

ಮುಖಪುಟ >> ವಿಶೇಷ

34 ಬಾರಿ ಹಾವು ಕಡಿದರೂ ಯುವತಿ ಜೀವಂತ, ಇದು "ಸಾಮಾನ್ಯ" ಎನ್ನುವ ತಂದೆ!

ಕಳೆದ ಮೂರು ವರ್ಷಗಳಲ್ಲಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡಿರುವ ಹಿಮಾಚಲ ಪ್ರದೇಶದ ಯುವತಿ
Girl survives 34 snakebites over 3 years, father says it’s

ಹಾವಿನಿಂದ ಕಚ್ಚಿಸಿಕೊಂಡ ಯುವತಿ

ಶಿಮ್ಲಾ: ಹಿಮಾಚಲದ ಯುವತಿಯೊಬ್ಬಳು ಬರೊಬ್ಬರಿ 34 ಬಾರಿ ಹಾವುಗಳಿಂದ ಕಚ್ಚಿಸಿಕೊಂಡರೂ ಪ್ರಾಣಾಪಾಯದಿಂದ ಪಾರಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಹಿಮಾಚಲ ಪ್ರದೇಶದ ಸಿರ್ಮಾರ್ ಪ್ರದೇಶದ ನಿವಾಸಿ 18 ವರ್ಷ ವಯಸ್ಸಿನ ಮನೀಶಾ ಎಂಬ ಯುವತಿ ಕಳೆದ ಮೂರು ವರ್ಷಗಳಿಂದ ಸುಮಾರು 34 ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾಳೆ. ಶಾಲೆಗೆ ತೆರಳುವ ವೇಳೆ, ಅಡುಗೆ  ಮಾಡುವ ವೇಳೆ, ಅಂಗಡಿಗೆ ತೆರಳಿದ್ದ ವೇಳೆ ಹೀಗೆ ಮನೀಷಾ ತೆರಳಿದ ಜಾಗಕ್ಕೆಲ್ಲಾ ಬರುವ ಹಾವುಗಳು ಆಕೆಯನ್ನು ಕಚ್ಚಿವೆಯಂತೆ. ಮನೀಶಾಗೆ ಹಾವು ಕಚ್ಚುವ ವಿಚಾರ ಅವರ ಕುಟುಂಬ ವರ್ಗಕ್ಕೆ ಸಾಮಾನ್ಯ ಎಂಬಂತಾಗಿ ಬಿಟ್ಟಿವೆ.  ಹಾವು ಕಚ್ಚಿದಾಗಲೆಲ್ಲಾ ಆಕೆಯನ್ನು ಆಸ್ಪತ್ರೆಗೆ ಸೇರಿಸುವುದು ಸಾಮಾನ್ಯವಾಗಿ ಬಿಟ್ಟಿದೆ ಎಂದು ಅವರ ತಂದೆ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಸ್ವತಃ ಮಾತನಾಡಿರುವ ಯುವತಿ ಕಳೆದ ಮೂರು ವರ್ಷದಿಂದ ನಾನು 30ಕ್ಕೂ ಅಧಿಕ ಬಾರಿ ಕಚ್ಚಿಸಿಕೊಂಡಿದ್ದೇನೆ. ಮೊದಲ ಬಾರಿಗೆ ನಾನು ಹಾವಿನ ಕಡಿತಕ್ಕೊಳಗಾಗಿದ್ದು, ನೀರು ತರಲು ನದಿಗೆ ತೆರಳಿದ್ದಾಗ. ನೀರು  ತರುತ್ತಿದ್ದಾಗ ಕಾಲಿಗೆ ಹಾವು ಕಚ್ಚಿತ್ತು. ಆಗಿಂದ ಹಾವು ಕಡಿಕ ಸಾಮಾನ್ಯವಾಗಿ ಬಿಟ್ಟಿದ್ದು, ಹಾವುಗಳನ್ನು ನೋಡುತ್ತಿದ್ದಂತೆಯೇ ನಾನು ಸ್ತಬ್ದಳಾಗಿ ಬಿಡುತ್ತೇನೆ. ಅವು ನನ್ನು ಕಚ್ಚಿ ಹೊರಟು ಹೋಗುತ್ತವೆ. ಒಂದೇ ದಿನ 2-3 ಬಾರಿ ಹಾವು  ಕಚ್ಚಿದ್ದೂ ನನಗೆ ನೆನಪಿದೆ. ಈ ಬಗ್ಗೆ ಹಲವು ಜ್ಯೋತಿಷಿಗಳನ್ನು ವಿಚಾರಿಸಿದಾಗ ನಾಗದೋಷದ ಕುರಿತು ಹೇಳಿದ್ದಾರೆ. ಇದಕ್ಕಾಗಿ ಸಾಕಷ್ಟು ಪೂಜೆಗಳನ್ನು ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಯುವತಿ ಅಳಲು  ತೋಡಿಕೊಂಡಿದ್ದಾಳೆ.

ಇನ್ನು ಈಕೆಗೆ ಹಾವು ಕಚ್ಚಿದ ಪ್ರತೀ ಬಾರಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆಯಾದರೂ ಅಂತಹ ಪ್ರಭಾವಿ ವಿಷದ ಅಂಶಗಳು ಕಂಡು ಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಅಂತೆಯೇ ಮನೀಶಾಳ ಹಾವಿನ ಸಮಸ್ಯೆ ಕುರಿತಂತೆ  ಕೇಳಿದಾಗ ನಾಗದೋಷ ಇತ್ಯಾದಿಗಳನ್ನು ಅಲ್ಲ ಗಳೆಯುವ ವೈದ್ಯರು, ಪ್ರಪಂಚದಲ್ಲಿರುವ ಹಾವುಗಳ ಪೈಕಿ ಶೇ.80ರಷ್ಟು ಹಾವುಗಳ ಸಂಪೂರ್ಣ ವಿಷಕಾರಿಗಳಲ್ಲ. ಕೇವಲ 20 ರಷ್ಟು ಹಾವುಗಳು ಮಾತ್ರ ವಿಷಕಾರಕ ಎಂದು ವೈಎಸ್  ಪಾರ್ಮರ್ ವೈದ್ಯಕೀಯ ಕಾಲೇಜು ಸೂಪರಿಂಟೆಂಡ್, ಅಕೆಯ ಒಟ್ಟಾರೆ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಗೆ ಕಚ್ಚಿದ ಹಾವುಗಳ ಪೈಕಿ ಬಹುತೇಕ ಹಾವುಗಳು ವಿಷಕಾರಿಯಲ್ಲ. ಅಥವಾ ಕಡಿಮೆ ವಿಷದಿಂದ ಕೂಡಿದ ಹಾವುಗಳು  ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಮನೀಶಾ ಅವರ ತಂದೆ ಹಾವು ಕಡಿತ ಸಾಮಾನ್ಯವಾಗಿ ಬಿಟ್ಟಿದೆ. ಈ ಬಗ್ಗೆ ಹಲವು ಜ್ಯೋತಿಷಿಗಳನ್ನು ಕಂಡು ಪರಿಹಾರದ ಪೂಜೆ ಮಾಡಿಸಿದ್ದೇನೆ. ನಾನಾ ದೇವಾಲಯಗಳನ್ನು ಸುತ್ತಿದ್ದೇನೆ.  ಇಷ್ಟು  ಸಾಲದೇ ಮನೆಯಲ್ಲೇ ಮಗಳಿಗಾಗಿ ಒಂದು ನಾಗಿನಿಯ ಪುಟ್ಟ ದೇವಾಲಯವನ್ನೂ ಕೂಡ ಕಟ್ಟಿಸಿದ್ದೇನೆ. ಆದರೂ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರತಿರೋಧಕ ಔಷಧಿಗಳಿಂದ ಆಕೆ ಬಚಾವ್ ಆಗುತ್ತಿರಬಹುದು

ಪ್ರತೀ ಬಾರಿ ಆಕೆಗೆ ಹಾವು ಕಚ್ಚಿದಾಗಲೂ ಹಾವಿನ ವಿಷ ತಲೆಗೆ ಏರದಂತೆ ತಡೆಯಲು ಪ್ರತಿರೋಧಕ ಔಷಧಿಗಳನ್ನು ನೀಡಲಾಗುತ್ತಿತ್ತು. ಬಹುಶಃ ಇದೇ ಕಾರಣಕ್ಕೇನೋ ಆಕೆ 34 ಬಾರಿ ಹಾವು ಕಚ್ಚಿದರೂ ಜೀವಂತವಾಗಿದ್ದಾಳೆ. ಆದರೆ  ಕಚ್ಚುವ ಪ್ರತಿಯೊಂದು ಹಾವೂ ವಿಷಕಾರಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹಿಮಾಚಲ ಪ್ರದೇಶದ ಅರಣ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ.ರೋಹಿತ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ವಿಡಿಯೋ
Posted by: SVN | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Shimla, Special, Snake Bite, Himachal Pradesh, ಶಿಮ್ಲಾ, ವಿಶೇಷ, ಹಾವು ಕಡಿತ, ಹಿಮಾಚಲ ಪ್ರದೇಶ
English summary
What kind of girl gets bitten by snakes 34 times and lives to tell the tale? Meet 18-year-old Manisha from Himachal Pradesh. In the last three years, many snakes have made futile attempts at her life, however, the eighteen year-old says whenever she sees a snake she gets enchanted.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement