Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
File photo

ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು, ಭಯೋತ್ಪಾದನೆಗೆ ಅಂತ್ಯ ಹಾಡಿ: ಪಾಕ್'ಗೆ ಭಾರತ ತಿರುಗೇಟು

HD Kumaraswamy

ಸರ್ಕಾರಿ ಕಡತಗಳೆಲ್ಲಾ ಕನ್ನಡದಲ್ಲಿರಬೇಕು, ಇಲ್ಲದಿದ್ದರೆ ಸಹಿ ಮಾಡಲ್ಲ: ಸಿಎಂ ಕುಮಾರಸ್ವಾಮಿ ಖಡಕ್ ಸಂದೇಶ

File photo

ತೀವ್ರ ಗದ್ದಲದ ನಡುವೆಯೂ ಮಹಿಳಾ ಪ್ರವೇಶವಿಲ್ಲದೇ ಶಬರಿಮಲೆ 6 ದಿನಗಳ ದರ್ಶನ ಮುಕ್ತಾಯ

File photo

ಐಟಿ ಸಿಟಿ ಬೆಂಗಳೂರಿಗೆ ಬರಲಿದೆ 'ಫೇಸ್'ಬುಕ್' ಬೃಹತ್ ಕಚೇರಿ: 2200 ಜನರಿಗೆ ಕೆಲಸ!

CBI infighting: PM Modi summons agency chief Alok Verma, special director Rakesh Asthana

ಸಿಬಿಐ ಒಳಜಗಳ: ತನಿಖಾ ಸಂಸ್ಥೆಯ ನಿರ್ದೇಶಕ, ವಿಶೇಷ ನಿರ್ದೇಶಕರಿಗೆ ಪ್ರಧಾನಿ ಮೋದಿ ಬುಲಾವ್

Gautam Gambhir-Modi-MS Dhoni

ಕುತೂಹಲ ಕೆರಳಿಸಿದ ಮೋದಿ ನಡೆ: 2019ರ ಲೋಕಸಭೆಗೆ ಬಿಜೆಪಿಯಿಂದ ಎಂಎಸ್ ಧೋನಿ, ಗಂಭೀರ್ ಸ್ಪರ್ಧೆ?

Ajinkya  Rahane

2019 ವಿಶ್ವಕಪ್ : ಅಶ್ವಿನ್ , ರಹಾನೆ ಹಾಗೂ ಕಾರ್ತಿಕ್ ಗೆ ಕೊನೆಯ ಅವಕಾಶ ?

I-T department launches major drive against Indians with illegal foreign assets; thousands under scanner

ವಿದೇಶದಲ್ಲಿ ಆಸ್ತಿ ಹೊಂದಿರುವ ಕಾಳಧನಿಕರ ಮೇಲೆ ತೆರಿಗೆ ಇಲಾಖೆ ಕೆಂಗಣ್ಣು, ದೊಡ್ಡ ಪ್ರಮಾಣದ ಕಾರ್ಯಾಚರಣೆ!

Bishop Franco

ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋ ವಿರುದ್ಧ ಹೇಳಿಕೆ ನೀಡಿದ್ದ ಕೇರಳ ಪಾದ್ರಿ ಸಾವು

Activist Rehana Fathima

ಶಬರಿಮಲೆ ವಿವಾದ: ಹೋರಾಟಗಾರ್ತಿ ರೆಹಾನ ಫಾತಿಮಾ ವಿರುದ್ಧ ಬಿಎಸ್ಎನ್ಎಲ್ ಶಿಸ್ತುಕ್ರಮ

Accident photo

ಬಸ್- ಲಾರಿ ಮುಖಾಮುಖಿ ಡಿಕ್ಕಿ : ಒಬ್ಬ ವಿದ್ಯಾರ್ಥಿ ಸಾವು, 20 ಮಂದಿಗೆ ಗಾಯ

Congress president Rahul Gandhi and Ex minister P Chidambaram(File photo)

2019 ಚುನಾವಣೆಗೆ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಿಲ್ಲ: ಚಿದಂಬರಂ

WATCH: Skipper Virat Kohli left in awe as Rohit Sharma almost clears the ropes with a nonchalant flick shot

ವಿಡಿಯೋ: ರೋ'ಹಿಟ್' ಸಿಡಿಸಿದ ಬೌಂಡರಿ ಪರಿ ನೋಡಿ ಅವಾಕ್ಕಾದ ನಾಯಕ ಕೊಹ್ಲಿ!

ಮುಖಪುಟ >> ವಿಶೇಷ

ನಿಮ್ಮ ತಾಯಿಗೆ ಹೇಗೆಲ್ಲಾ ಕೃತಜ್ಞತೆ ಹೇಳಬಹುದು, ಇಲ್ಲಿದೆ ಕೆಲವು ಸಲಹೆಗಳು

Image for representational purpose only.

ಸಾಂದರ್ಭಿಕ ಚಿತ್ರ

ನವದೆಹಲಿ: ತಾಯಿಗಿಂತ ಮಿಗಿಲಾದ ದೇವರಿಲ್ಲ ಎನ್ನುವ ಸಂಸ್ಕೃತಿ ನಮ್ಮದು. ತಾಯಿಯಾದವಳು ಮಕ್ಕಳನ್ನು ಪ್ರೀತಿಸುವಷ್ಟು ಇನ್ನಾರೂ ಪ್ರೀತಿಸುವುದಿಲ್ಲ, ಕಾಳಜಿವಹಿಸುವುದಿಲ್ಲ. 

ಅಂತರಾಷ್ಟ್ರೀಯ ತಾಯಂದಿರ ದಿನ ಹತ್ತಿರವಾಗುತ್ತಿದ್ದಂತೆ ತಾಯಂದಿರನ್ನು ಹೇಗೆಲ್ಲಾ ಸಂತೋಷಪಡಿಸಬಹುದು ಎನ್ನುವ ಕುರಿತಂತೆ ನಾವು ಯೋಚಿಸುತ್ತೇವೆ. ಈ ನಿಟ್ಟಿನಲ್ಲಿ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಡಾಕ್ಸ್ ಅಪ್ಲಿಕೇಷನ್, ಸಹ ಸಂಥಾಪಕ, ಸಿಇಓ ಆದ ಸತೀಶ್ ಕಣ್ಣನ್, ಹಾಗೂ ಅಂಕಿತ್ ಗಾರ್ಗ್, ವಾಕ್ ಫಿಟ್ ಕೋ. ಸಹ ಸಂಸ್ಥಾಪಕ ಸಿಇಓ ಅವರುಗಳು ಈ ಸಲಹೆಗಳನ್ನು ನೀಡಿದ್ದಾರೆ.

ಆರೋಗ್ಯಕರ ಜೀವನ ನೀಡಿ: ನಿಮ್ಮ ತಾಯಿಗೆ ಅಗತ್ಯವಾದ ಆರೋಗ್ಯಕರ ಜೀವನ ನೀಡಿ. ಆಕೆಗೆ ಅಗತ್ಯವಾದ ವೈದ್ಯಕೀಯ ನೆರವು, ಗುಣಮಟ್ಟದ ಪರೀಕ್ಷೆಗಳನ್ನು ಮಾಡಿಸಿ ಉತ್ತಮ ರೀತಿಯಲ್ಲಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಿ. 

ಸುಖನಿದ್ರೆಗೆ ಸಹಕರಿಸಿ: ಹಗಲೆಲ್ಲಾ ದುಡಿಯುವ ತಾಯಿ ಮನೆಗೆಲಸ, ನಿಮ್ಮ ಕಾಳಜಿಯ ಕೆಲಸ ಮಾಡಿ ದಣಿದಿರುತ್ತಾರೆ. ಅವರಿಗೆ ರಾತ್ರಿ ಸುಖನಿದ್ದೆಯ ಅಗತ್ಯವಿದೆ. ಅವರು ಸುಖವಾಗಿ ನಿದ್ರೆ ಮಾಡುವಂತೆ ಆಕೆಯ ಕೋಣೆಯನ್ನು ಸ್ವಚ್ಚವಾಗಿರಿಸಿ. ಅಲ್ಲದೆ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಮಾಡಿ. ತಾಯಿ ಮಲಗುವ ಕೋಣೆಯಲ್ಲಿ ಅವರಿಗಾಗಿ ಉತ್ತಮ ಹಾಸಿಗೆ, ಮಂಚ ಸೇರಿ ಎಸಿ, ಫ್ಯಾನ್ ಗಳ ವ್ಯವಸ್ಥೆ ಇರಲಿ. ಹೀಗೆ ಮಾಡಿದಲ್ಲಿ ಆಕೆ ಉತ್ತಮ ವಿಶ್ರಾಂತಿ ಪಡೆದು ಮರು ದಿನ ಏಳುವಾಗ ಉತ್ತಮ ಆರೋಗ್ಯ ಹೊಂದಿರಲಿದ್ದಾರೆ.

ಕೆಲಸ ಮುಂದುವರಿಸಲು ಪ್ರೋತ್ಸಾಹಿಸಿ: ನಿಮ್ಮ ತಾಯಿ ನಿಮ್ಮನ್ನು ಬೆಳಸಲಿಕ್ಕಾಗಿ ತನ್ನ ವೃತ್ತಿಯನ್ನು ತೊರೆದಿದ್ದಾಳೆ ಎಂದರೆ, ಇದೀಗ ನೀವು ಬೆಳೆದು ಸ್ವಂತ ಬಲದಿಂದ ಜೀವನ ನಡೆಸುವ ಅವಧಿಯಲ್ಲಿ ಆಕೆ ತನ್ನ ವೃತ್ತಿಯನ್ನು ಮುಂದುವರಿಸಲು ಪ್ರೋತ್ಸಾಹ ನೀಡಿ. ಆಕೆಗೆ ತಾನು ಹಿಂದೆ ಮಾಡುತ್ತಿದ್ದ ಕೆಲಸವನ್ನು ಪುನಃ ಪ್ರಾರಂಭಿಸುವುದರಿಂದ ಆಕೆಯಲ್ಲಿನ ಜೀವನೋತ್ಸಾಹ ಸಹ ಇಮ್ಮಡಿಗೊಳ್ಳಬಹುದು.

ತಾಯಿಯ ಆಸೆ ನೆರವೇರಿಸಿ: ತಾಯಿ ನೀವು ಚಿಕ್ಕವರಿದ್ದಾಗ ನೀವು ಆಸೆಪಟ್ಟದ್ದನ್ನೆಲ್ಲಾ ನಿಡಿರುತ್ತಾಳೆ. ಈ ತಾಯಂದಿರ ದಿನ ಆಕೆಯ ಆಸೆಯನ್ನು ನೀವು ನೆರವೇರಿಸಿ. ಆಕೆ ಬೇಕೆಂದರೆ ಸೀರೆ, ಚಿನ್ನಾಭರಣಗಳಂತಹಾ ಉಡುಗೊರೆ ಕೊಡಿಸಿ. ಅವರು ಕಾಣಬೇಕೆಂದು ಬಯಸಿದ ಚಲನಚಿತ್ರ, ನಾಟಕಗಳನ್ನು ತೋರಿಸಿ. ಹೋಗಬೇಕೆಂದು ಆಸೆಪಟ್ಟ ಸ್ಥಳಗಳಿಗೆ ಕರೆದೊಯ್ಯಿರಿ. ಇದರಿಂದ ಆಕೆಯ ಮನಸ್ಸು ಉಲ್ಲಾಸಗೊಳ್ಳುವುದಲ್ಲದೆ ನಿಮ್ಮ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ.

Posted by: RHN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : International Mothers Day, Mother, Thanksgiving, ಅಂತರರಾಷ್ಟ್ರೀಯ ತಾಯಂದಿರ ದಿನ, ತಾಯಿ, ಕೃತಜ್ಞತೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS