Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Former PM Manmohan Singh rejects Modi

ಉಗ್ರ ದಾಳಿ ನಂತರವೂ ಆಹ್ವಾನವಿಲ್ಲದೆ ಪಾಕ್ ಗೆ ಹೋಗಿದ್ದು ಏಕೆ?: ಮೋದಿಗೆ ಮನಮೋಹನ್‌ ಸಿಂಗ್‌ ಟಾಂಗ್‌

Rahul Gandhi elected Indian National Congress president unopposed, to take charge on December 16

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವಿರೋಧ ಆಯ್ಕೆ, ಡಿ.16ಕ್ಕೆ ಅಧಿಕಾರ ಸ್ವೀಕಾರ

SBI changes IFSC codes of around 1,300 branches

ಎಸ್ ಬಿಐ 1,300 ಶಾಖೆಗಳ ಐಎಫ್‌ಎಸ್‌ಸಿ ಕೋಡ್ ಬದಲು

Five Pakistani terrorists neutralised in J-K

ಜಮ್ಮು-ಕಾಶ್ಮೀರ: ಭಾರಿ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಗುಂಡಿಗೆ 5 ಉಗ್ರರು ಹತ

ಸೌಧಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್

35 ವರ್ಷಗಳ ಬಳಿಕ ಸೌದಿಯಲ್ಲಿ ಸಿನಿಮಾ ಮೇಲಿನ ನಿಷೇಧ ತೆರವು: ಸರ್ಕಾರ

Prasanna

ಹಿರಿಯ ರಂಗಭೂಮಿ ಕಲಾವಿದ ಪ್ರಸನ್ನ ಗೆ ಜೀವಮಾನ ಸಾಧನೆ ಪುರಸ್ಕಾರ

15 year old Indian girl drowns in Australia, 4 Others also in Rescue

ಆಸ್ಟ್ರೇಲಿಯಾ: ಭಾರತೀಯ ಮೂಲದ ಫುಟ್ಬಾಲ್ ಆಟಗಾರ್ತಿ ಸಮುದ್ರದಲ್ಲಿ ಮುಳುಗಿ ಸಾವು

Karwar bandh turns violent as protesters set fire to IGP Nimbalkar

ಕಾರವಾರ ಬಂದ್: ಕುಮಟಾದಲ್ಲಿ ಉದ್ವಿಗ್ನ ಪರಿಸ್ಥಿತಿ, ಐಜಿಪಿ ನಿಂಬಾಳ್ಕರ್ ಕಾರಿಗೆ ಬೆಂಕಿ

kiccha sudeep Meets CM Siddaramaiah Over Vishnuvardhan Memorial Issue

ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ನಟ ಕಿಚ್ಚಾ ಸುದೀಪ್, ವಿಷ್ಣು ಸ್ಮಾರಕಕ್ಕಾಗಿ ಮನವಿ!

WhatsApp

ವಾಟ್ಸ್ ಆಪ್ ಹೊಸ ವೈಶಿಷ್ಟ್ಯ: ಒಂದು ಟಚ್ ನಲ್ಲಿ ಅನ್ ಬ್ಲಾಕ್, ಗುಂಪಿನಲ್ಲಿದ್ದರೂ ಖಾಸಗಿಯಾಗಿ ಮೆಸೇಜ್ ಕಳಿಸಬಹುದು

In first winter stay, 1,800 Chinese troops camping at Doklam

ಡೊಕ್ಲಾಂ ನಲ್ಲಿ ಚೀನಾ ಕ್ಯಾತೆ; ವಿವಾದಿತ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಸೇನೆ ನಿಯೋಜನೆ

Anand Sharma

ಪಾಕಿಸ್ತಾನ-ಕಾಂಗ್ರೆಸ್ ಷಡ್ಯಂತ್ರದ ಕುರಿತ ಹೇಳಿಕೆಗೆ ಮೋದಿ ಕ್ಷಮೆಯಾಚಿಸಲು ಕಾಂಗ್ರೆಸ್ ಪಟ್ಟು

Narendra Modi-Rahul Gandhi

ಗುಜರಾತ್: ಪ್ರಧಾನಿ ಮೋದಿ, ರಾಹುಲ್ ಗಾಂಧಿ ರೋಡ್ ಶೋಗೆ ಬ್ರೇಕ್

ಮುಖಪುಟ >> ಕ್ರೀಡೆ

ಭಾರತೀಯ ಬಾಕ್ಸಿಂಗ್ ನ ರಾಷ್ಟ್ರೀಯ ವೀಕ್ಷಕ ಹುದ್ದೆಗೆ ಮೇರಿ ಕೋಮ್ ರಾಜಿನಾಮೆ

MC Mary Kom

ಎಂ.ಸಿ.ಮೇರಿ ಕೋಮ್

ನವದೆಹಲಿ: ಸಕ್ರಿಯ ಕ್ರೀಡಾಪಟುಗಳು ಹುದ್ದೆಯನ್ನು ಹೊಂದಿರಬಾರದು ಮತ್ತು ಆ ಹುದ್ದೆಗೆ ಸಕ್ರಿಯ ಕ್ರೀಡಾಪಟುಗಳನ್ನು ಪರಿಗಣಿಸುವಂತಿಲ್ಲ ಎಂದು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ ನಂತರ ಭಾರತೀಯ ಬಾಕ್ಸಿಂಗ್ ನ ರಾಷ್ಟ್ರೀಯ ವೀಕ್ಷಕ ಹುದ್ದೆಗೆ ಐದು ಬಾರಿ ಚಾಂಪಿಯನ್ ಆಗಿರುವ ಎಂಸಿ ಮೇರಿ ಕೋಮ್ ರಾಜಿನಾಮೆ ನೀಡಿದ್ದಾರೆ.

ನಾನು ರಾಷ್ಟ್ರೀಯ ವೀಕ್ಷಕ ಹುದ್ದೆಗೆ 10 ದಿನಗಳ ಹಿಂದೆ ರಾಜಿನಾಮೆ ನೀಡಿದ್ದೇನೆ. ಆ ಸ್ಥಾನವನ್ನು ಪಡೆದುಕೊಳ್ಳಲು ನಾನು ಮನವಿ ಮಾಡಿಕೊಂಡಿದ್ದೆ, ಆದರೆ ನಾನು ಕೇಳಿದ್ದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಮೇರಿ ಕೋಮ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಭಾರತೀಯ ಬಾಕ್ಸಿಂಗ್ ನ ವೀಕ್ಷಕ ಹುದ್ದೆಯ ಪ್ರಸ್ತಾಪ ಬಂದಾಗ ಅಂದಿನ ಕ್ರೀಡಾ ಕಾರ್ಯದರ್ಶಿ ಇಂಜೆಟಿ ಶ್ರೀನಿವಾಸ್ ಅವರಲ್ಲಿ ವಿಚಾರಿಸಿದ್ದೆ. ಸಕ್ರಿಯ ಕ್ರೀಡಾಪಟುಗಳು ಹುದ್ದೆಯನ್ನು ಹೊಂದಬಹುದೇ ಎಂದು ಕೂಡ ಕೇಳಿದ್ದೆ. ಆದರೂ ಕೂಡ ನನಗೆ ಆ ಸ್ಥಾನವನ್ನು ನೀಡಲಾಯಿತು. ಕ್ರೀಡಾ ಸಚಿವಾಲಯದ ಒತ್ತಾಯದ ಮೇರೆಗೆ ನಾನು ಹುದ್ದೆ ವಹಿಸಿಕೊಂಡೆ. ನಾನು ಕೇಳದಿರುವುದನ್ನು ಪಡೆದುಕೊಂಡು ಈಗ ಅನವಶ್ಯಕ ವಿವಾದ ಹುಟ್ಟುಹಾಕಿಕೊಳ್ಳುವ ಅವಶ್ಯಕತೆ ನನಗಿಲ್ಲ ಎಂದು ಮೇರಿ ಕೋಮ್ ಹೇಳಿದರು.

ಕಳೆದ ಮಾರ್ಚ್ ತಿಂಗಳಲ್ಲಿ ಅಂದಿನ ಕ್ರೀಡಾ ಸಚಿವ ವಿಜಯ್ ಗೊಯೆಲ್, 12 ಮಂದಿಯನ್ನು ಕ್ರೀಡಾ ಇಲಾಖೆಯಡಿ ವೀಕ್ಷಕರಾಗಿ ನೇಮಿಸಿದ್ದರು.

12 ಮಂದಿ ಪಟ್ಟಿಯಲ್ಲಿ ಅಭಿನವ್ ಬಿಂದ್ರಾ, ಸುಶಿಲ್ ಕುಮಾರ್ ಮತ್ತು ಮಾಜಿ ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತ ಅಖಿಲ್ ಕುಮಾರ್ ಇದ್ದಾರೆ. ಅವರಲ್ಲಿ ಸುಶಿಲ್ ಕುಮಾರ್ ಮತ್ತು ಮೇರಿ ಕೊಮ್ ಸಕ್ರಿಯರಾಗಿದ್ದಾರೆ. ಪಟ್ಟಿಯಲ್ಲಿರುವವರಲ್ಲಿ ಅಖಿಲ್ ಕುಮಾರ್ ರಾಷ್ಟ್ರೀಯ ತಂಡದಲ್ಲಿಲ್ಲ.

''ನನಗೆ ಸರ್ಕಾರ ನೀಡಿದ ಈ ಸ್ಥಾನದಲ್ಲಿ ಆಸಕ್ತಿಯಿಲ್ಲ. ಹೀಗಾಗಿ ರಾಜಿನಾಮೆ ನೀಡುತ್ತೇನೆ. ನನ್ನ ಬಳಿ ಮಾಡಲು ಬೇರೆ ತುಂಬಾ ಕೆಲಸಗಳಿವೆ ಎನ್ನುತ್ತಾರೆ ಮೇರಿ ಕೊಮ್. ಮುಂದಿನ ವರ್ಷ ಕಾಮನ್ ವೆಲ್ತ್ ಮತ್ತು ಏಷ್ಯನ್ ಗೇಮ್ ಗಳ ಮೇಲೆ ಚಿತ್ತ ಹರಿಸಿದ್ದಾರೆ.
Posted by: SUD | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Mary Kom, Boxing, National observer, Resign, ಮೇರಿ ಕೊಮ್, ಬಾಕ್ಸಿಂಗ್, ರಾಷ್ಟ್ರೀಯ ವೀಕ್ಷಕ ಸ್ಥಾನ, ರಾಜಿನಾಮೆ
English summary
Five-time world champion M C Mary Kom has resigned as the national observer for Indian boxing after Sports Minister Rajyavardhan Singh Rathore made it clear that active sportspersons will not be considered for the position. "I resigned as national observer 10 days ago after having a word with Mr Rathore. I had been requested to take up the position, it was not something I had asked for," Mary Kom, who claimed her fifth Asian Championships gold medal last month, told PTI today.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement