Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PNB scam: Gili

ಪಿಎನ್ ಬಿ ವಂಚನೆ ಪ್ರಕರಣ: ಗಿಲಿ ನಿರ್ದೇಶಕರ ನಿವಾಸ, ನೀರವ್ ಮೋದಿಯ 9 ಐಶಾರಾಮಿ ಕಾರುಗಳ ಜಪ್ತಿ!

Convicted Khalistani terrorist invited for Trudeau reception in Delhi; Canadian High Commission rescinds invite after media reports

ಕೆನಡಾ ಪ್ರಧಾನಿ ಪತ್ನಿಯೊಂದಿಗೆ ಖಾಲಿಸ್ತಾನ್ ಉಗ್ರ: ಫೋಟೋ ವೈರಲ್

Ball sails for six after hitting bowler

ಬೌಲರ್ ತಲೆಗೆ ಬಡಿದ ಚೆಂಡು ಸಿಕ್ಸರ್ ಗೆ, ಕೂದಲೆಳೆ ಅಂತರದಲ್ಲಿ ಪಾರಾದ ಬೌಲರ್: ವಿಡಿಯೋ ವೈರಲ್

Avani Chaturvedi

ಇತಿಹಾಸ ನಿರ್ಮಿಸಿದ ಅವನಿ ಚತುರ್ವೇದಿ; ಯುದ್ಧ ವಿಮಾನ ಚಲಾಯಿಸಿದ ಮೊದಲ ಮಹಿಳಾ ಪೈಲಟ್

Karnataka Engineering students says they created a

ಕರ್ನಾಟಕದ ವಿದ್ಯಾರ್ಥಿಗಳಿಂದ ಬ್ಲೂಟೂತ್ ಆಧಾರಿತ ರೂಟ್ ಗೈಡೆಡ್ ಹೆಲ್ಮೆಟ್ ಆವಿಷ್ಕಾರ!

Short Circuit: Kannada Bigboss House catches fire in Innovative film city

ಇನ್ನೋವೇಟಿವ್ ಫಿಲ್ಮಿ ಸಿಟಿಯಲ್ಲಿ ಭಾರಿ ಅಗ್ನಿ ಅವಘಡ, ಬಿಗ್ ಬಾಸ್ ಮನೆಗೂ ತಗುಲಿದೆ ಬೆಂಕಿ

Mohammed Haris

ಮತ್ತಿನಲ್ಲಿದ್ದ ಶಾಸಕ ಹ್ಯಾರಿಸ್ ಪುತ್ರನಿಂದ ವಿದ್ವತ್ ಮೇಲೆ ಹಲ್ಲೆ? ನಗರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಗಾಂಜಾ ಮಾರಾಟ!

HD Devegowda, Ramakrishna Hegde Is My Political Guru Says CM Siddaramaiah

ನನ್ನ ಗುರು ಎಚ್ ಡಿ ದೇವೇಗೌಡ ಅಲ್ಲ ರಾಮಕೃಷ್ಣ ಹೆಗಡೆ: ಸಿಎಂ ಸಿದ್ದರಾಮಯ್ಯ

Amitabh Bachchan

ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ನಾಯಕರ ಅನುಸರಣೆ: ಅಮಿತಾಬ್ ಬಚ್ಚನ್ ಬಗ್ಗೆ ಅಭಿಮಾನಿಗಳಲ್ಲಿ ಮೂಡಿದ ಕುತೂಹಲ

Saras aircraft completes second successful flight

ಬೆಂಗಳೂರು: ಸಾರಸ್ ಲಘು ವಿಮಾನದ ಎರಡನೇ ಪರೀಕ್ಷಾರ್ಥ ಹಾರಾಟ ಯಶಸ್ವಿ

Jaya Prada

ಚಿತ್ರರಂಗದಲ್ಲಿ ಯಶಸ್ಸು ಪಡೆದ ಪ್ರತಿಯೊಬ್ಬರು ರಾಜಕೀಯಕ್ಕೆ ಬರಬೇಕು: ಜಯಪ್ರದಾ

Representational image

ಕೊಡಗಿನಲ್ಲಿ ಮುಂದುವರೆದ ನಕ್ಸಲ್ ಕಾರ್ಯಾಚರಣೆ

BJP chief Amit Shah

ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು; ರಾಜ್ಯ ಪ್ರವಾಸ ಅಂತ್ಯ

ಮುಖಪುಟ >> ಕ್ರೀಡೆ

ಗ್ರೇಟ್ ಖಲಿ ಬಳಿಕ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಆದ ಎರಡನೇ ಭಾರತೀಯ ಜಿಂದರ್ ಮಹಲ್

13 ಬಾರಿ ಚಾಂಪಿಯನ್‌ ರಾರ‍ಯಂಡಿ ಒರ್ಟನ್‌ ಮಣಿಸಿ ಚಾಂಪಿಯನ್ ಆದ ಜಿಂದರ್ ಮಹಲ್
Jinder Mahal 2nd Indian To win WWE Championship!

ಸಂಗ್ರಹ ಚಿತ್ರ

ನವದೆಹಲಿ: ಖ್ಯಾತ ರೆಸ್ಲಿಂಗ್ ಟೂರ್ನಿ ಡಬಲ್ಯೂಡಬಲ್ಯೂಇ ನೂತನ ಚಾಂಪಿಯನ್ ಆಗಿ ಭಾರತದ ಜಿಂದರ್ ಮಹಲ್ ಹೊರಹೊಮ್ಮಿದ್ದು, ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ನಡೆದ ಡಬಲ್ಯೂಡಬಲ್ಯೂಇ ಸ್ಮ್ಯಾಕ್ ಡೌನ್ ಚಾಂಪಿಯನ್ ಷಿಪ್ ಪಂದ್ಯದಲ್ಲಿ 13 ಬಾರಿ ಚಾಂಪಿಯನ್‌ ರಾರ‍ಯಂಡಿ ಓರ್ಟನ್ ಅವರನ್ನು ಮಣಿಸುವ ಮೂಲಕ ಮಹಲ್ ಪ್ರಶಸ್ತಿ ಬೆಲ್ಟ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಈ ಪ್ರಶಸ್ತಿ ಗೆದ್ದ ಭಾರತದ 2ನೇ ವೃತ್ತಿಪರ ರೆಸ್ಲರ್ ಎಂಬ ಖ್ಯಾತಿಗೂ ಮಹಲ್ ಪಾತ್ರರಾಗಿದ್ದಾರೆ. ಈ ಹಿಂದೆ 2007ರಲ್ಲಿ ಭಾರತದ ಗ್ರೇಟ್ ಖಲಿ ಹೆವಿ ವೇಯ್ಟ್ ಚಾಂಪಿಯನ್ ಷಿಪ್ ಬೆಲ್ಟ್ ಗೆದ್ದಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಂದರ್ ಮಹಲ್, ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವುದೇ ದೊಡ್ಡ ಗೌರವ. ಅದೂ ಕೂಡ ಪ್ರಶಸ್ತಿಯೊಂದಿಗೆ ನಿಲ್ಲುವುದು ನನ್ನ ಕನಸಾಗಿತ್ತು. ಇದೀಗ ಅದು ನನಸಾಗಿದೆ ಎಂದು ಮಹಲ್ ತಿಳಿಸಿದ್ದಾರೆ. "ಈ ಫಲಿತಾಂಶಕ್ಕಾಗಿ ಸತತ 15 ವರ್ಷಗಳ ಪರಿಶ್ರಮ ವಹಿಸಿದ್ದು, ಕೊನೆಗೂ ತಮ್ಮ ಕನಸು ನನಸಾಗಿದೆ. 15 ವರ್ಷ ವಯಸ್ಸಿದ್ದಾಗ ಪ್ರತಿ ದಿನ ಒಂದೂವರೆ ಗಂಟೆಗಳ ಕಾಲ ಬಸ್‌ ಪ್ರಯಾಣ ಮಾಡಿ ಕುಸ್ತಿ ಅಖಾಡಕ್ಕೆ ತೆರಳುತ್ತಿದ್ದೆ. ಅಲ್ಲಿ 20-30 ವರ್ಷ ವಯಸ್ಸಿನ ಹಿರಿಯ ಕುಸ್ತಿ ಪಟುಗಳ ಜತೆ ಅಭ್ಯಾಸ ನಡೆಸುತ್ತಿದ್ದೆ. ಅಭ್ಯಾಸದ ವೇಳೆ ಎಷ್ಟೇ ಏಟಾದರೂ, ಗಾಯಗೊಂಡರೂ ಒಂದು ದಿನವೂ ಅಭ್ಯಾಸ ತಪ್ಪಿಸಿಕೊಳ್ಳುತ್ತಿರಲಿಲ್ಲ ಎಂದು ಮಹಲ್ ಹೇಳಿದ್ದಾರೆ.

ಡಬ್ಲುಡಬ್ಲುಇನ ಆರಂಭದ ದಿನಗಳಲ್ಲಿ ಯಶಸ್ಸು ಸಾಧಿಸಿದ್ದ ಅವರನ್ನು ಆನಂತರ ದಿಢೀರನೆ ಕೈಬಿಡಲಾಗಿತ್ತು. ಆದರೆ ಕಳೆದ ವರ್ಷವಷ್ಟೇ ಅವರು ಮತ್ತೊಮ್ಮೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಕೇವಲ ಒಂದು ವರ್ಷ ಅವಧಿಯಲ್ಲಿ ಮಹಲ್‌ ಚಾಂಪಿಯನ್‌ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ‘‘ಮೊದಲ ಅವಕಾಶದಲ್ಲಿ ಆದ ಗೊಂದಲಗಳು, ಅವಮಾನಗಳಿಂದ ಕುಗ್ಗಿ ಹೋಗಿದ್ದೆ, ಆದರೆ 2ನೇ ಅವಕಾಶವನ್ನು ಕೈಚೆ­ಲ್ಲಲು ನಾನು ಸಿದ್ಧನಿರಲಿಲ್ಲ. ಛಲ ಬಿಡದೆ ಹೋರಾಡಿದೆ. ಪರಿಶ್ರಮ ನನ್ನ ಕೈಹಿಡಿಯಿತು'' ಎಂದು ಮಹಲ್‌ ತಮ್ಮ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Sports, Wrestling, WWE Championship, Jinder Mahal, ನವದೆಹಲಿ, ಕ್ರೀಡೆ, ರೆಸ್ಲಿಂಗ್, ಡಬಲ್ಯೂ ಡಬಲ್ಯೂಇ, ಜಿಂದರ್ ಮಹಲ್
English summary
Indian-origin wrestler Jinder Mahal clinched the WWE Championship after beating Randy Orton at pay-per-view event Backlash.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement