Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Karnataka CM Siddaramaiah demands use of ballot papers for state Assembly polls

ವಿಧಾಸಭೆ ಚುನಾವಣೆಯಲ್ಲಿ ಇವಿಎಂ ಬೇಡ, ಬ್ಯಾಲೆಟ್‌ ಪೇಪರ್ ಗಾಗಿ ಪತ್ರ ಬರೆಯುತ್ತೇವೆ: ಸಿಎಂ ಸಿದ್ದರಾಮಯ್ಯ

Cabinet clears the Triple Talaq Bill making it a criminal offence.

ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು

BJP coffers have gained Rs 80,000 crore in last five months: Anna Hazare

ಕಳೆದ ಐದು ತಿಂಗಳಲ್ಲಿ ಬಿಜೆಪಿ ಬೊಕ್ಕಸಕ್ಕೆ 80 ಸಾವಿರ ಕೋಟಿ ರು. ಬಂದಿದೆ: ಅಣ್ಣಾ ಹಜಾರೆ

Don

'ಬೆಗ್' ಮಾಡಬೇಡಿ, ಇದು ಸ್ವತಂತ್ರ ಭಾರತ: ಸಚಿವರಿಗೆ ವೆಂಕಯ್ಯ ನಾಯ್ಡು ಸಲಹೆ

Digital payments

2,000 ರೂಪಾಯಿಗಳವರೆಗಿನ ಡೆಬಿಟ್ ಕಾರ್ಡ್ ವಹಿವಾಟಿಗೆ ಶುಲ್ಕ ಇಲ್ಲ!

Jayalalithaa

ಜಯಲಲಿತಾ ಅವರನ್ನು ಉಸಿರುಗಟ್ಟಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು: ಅಪೋಲೋ ಆಸ್ಪತ್ರೆ ಉಪಾಧ್ಯಕ್ಷೆ

Government okays Rs 2,600 crore package for leather, footwear industry

ಲೆದರ್, ಪಾದರಕ್ಷೆ ಉದ್ಯಮಕ್ಕೆ 2,600 ಕೋಟಿ ರೂ ಪ್ಯಾಕೇಜ್ ಗೆ ಸರ್ಕಾರದ ಒಪ್ಪಿಗೆ

Aarushi murder case

ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿ ಖುಲಾಸೆ ಪ್ರಶ್ನಿಸಿ ಹೇಮ್ ರಾಜ್ ಪತ್ನಿಯಿಂದ ಸುಪ್ರೀಂ ಗೆ ಮೇಲ್ಮನವಿ

Britain

ಮೇ 19ಕ್ಕೆ ನಟಿ ಮೇಘನ್‌ ಮಾರ್ಕೆಲ್ ಜತೆ ಬ್ರಿಟನ್‌ ರಾಜಕುಮಾರ ಹ್ಯಾರಿ ಮದುವೆ

SC extends Aadhaar linkage deadline for welfare schemes, bank accounts and mobile services to March 31

ಯೋಜನೆಗಳಿಗೆ ಮತ್ತು ಸೇವೆಗಳಿಗೆ ಆಧಾರ್ ಜೋಡಣೆಗೆ ಮಾರ್ಚ್ 31 ಅಂತಿಮ ಗಡುವು: ಸುಪ್ರೀಂ ಆದೇಶ

Ajinkya Rahane

ಕಾರು ಅಪಘಾತ: ಕ್ರಿಕೆಟಿಗ ಅಜಿಂಕ್ಯ ರೆಹಾನೆ ತಂದೆ ಬಂಧನ

Nik Gugger

ಉಡುಪಿಯ ಅನಾಥ ಮಗು ಸ್ವಿಜರ್ಲೆಂಡ್‌ ಸಂಸದನಾದ ಕಥೆ!

Let Prabhakar Bhat contest against me and prove himself, challenges Ramanath rai

ತಾಕತ್ತಿದ್ದರೆ ಪ್ರಭಾಕರ್ ಭಟ್‌ ನನ್ನ ವಿರುದ್ಧ ಸ್ಪರ್ಧಿಸಿ, ಠೇವಣಿ ಉಳಿಸಿಕೊಳ್ಳಲಿ: ರಮಾನಾಥ ರೈ ಸವಾಲು

ಮುಖಪುಟ >> ಕ್ರೀಡೆ

ರಾಫೆಲ್‌ ನಡಾಲ್‌ ಮುಡಿಗೆ 10ನೇ ಫ್ರೆಂಚ್‌ ಓಪನ್‌ ಪ್ರಶಸ್ತಿ ಗರಿ!

ಫೈನಲ್ ನಲ್ಲಿ ಸ್ವಿಸ್ ಸ್ಟಾನ್ ವಾವ್ರಿಂಕಾ ವಿರುದ್ಧ 6-2, 6-3, 6-1 ನೇರ ಸೆಟ್ ಗಳ ಜಯ
Rafael Nadal demolishes Stan Wawrinka to lift record 10th French Open title

ಚಾಂಪಿಯನ್ ನಡಾಲ್

ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ನಿರೀಕ್ಷೆಯಂತೆಯೇ ರಾಫೆಲ್ ನಡಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಏಕಪಕ್ಷೀಯವಾಗಿದ್ದ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ಸ್ವಿಸ್ ನ ಸ್ಟ್ಯಾನ್ ವಾವ್ರಿಂಕಾ ವಿರುದ್ಧ 6-2, 6-3, 6-1 ನೇರ ಸೆಟ್ ಗಳ ಭರ್ಜರಿ ಜಯ ಸಾಧಿಸಿದ್ದಾರೆ. ಭಾರೀ ಕುತೂಹಲ ಮೂಡಿಸಿದ್ದ ಫೈನಲ್‌ ಪಂದ್ಯದಲ್ಲಿ ರಾಫೆಲ್  ನಡಾಲ್ ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ನಡಾಲ್‌ 6-2, 6-3, 6-1 ಸೆಟ್‌ಗಳ ಅಂತರದಲ್ಲಿ ಗೆದ್ದು ಬೀಗಿದರು. ಇದಲ್ಲದೇ ಫ್ರೆಂಚ್‌ ಓಪನ್‌ ನಲ್ಲಿ ಫೈನಲ್‌ ಪ್ರವೇಶಿಸಿದಾಗಲೆಲ್ಲಾ ಪ್ರಶಸ್ತಿಯೊಂದಿಗೆ  ಹಿಂದಿರುಗಿರುವ ದಾಖಲೆಯನ್ನೂ ನಡಾಲ್‌ ಮುಂದುವರಿಸಿದರು. 2015ರಲ್ಲಿ ಚಾಂಪಿಯನ್‌ ಆಗಿದ್ದ ವಾವ್ರಿಂಕಾ, 2ನೇ ಫ್ರೆಂಚ್‌ ಓಪನ್‌ ಗೆಲ್ಲುವ ಕನಸು ನುಚ್ಚು ನೂರಾಯಿತು. ಅಲ್ಲದೇ 3 ಗ್ರ್ಯಾಂಡ್‌ ಸ್ಲಾಂ ಗೆದ್ದಿರುವ ವಾವ್ರಿಂಕಾ, ಇದೇ  ಮೊದಲ ಬಾರಿಗೆ ಗ್ರ್ಯಾಂಡ್‌ ಸ್ಲಾಂ ಫೈನಲ್‌ನಲ್ಲಿ ಸೋಲುಂಡರು.

ವಿಶೇಷವೆಂದರೆ ಈ ಬಾರಿ ಪಂದ್ಯಾವಳಿಯ ಪ್ರಶಸ್ತಿ ಮೊತ್ತವನ್ನು 15.13 ಕೋಟಿಗೆ ಹೆಟ್ಟಿಸಲಾಗಿತ್ತು. ತಮ್ಮ ಹತ್ತನೇ ಪ್ರಶಸ್ತಿ ಪಡೆದ ನಡಾಲ್ ಈ ಭಾರಿ ಬಹುಮಾನದ ಮೊತ್ತವನ್ನು ಪಡೆದರು. ಅಂತೆಯೇ ರನ್ನರ್‌-ಅಪ್‌ ಪ್ರಶಸ್ತಿಗೆ  ತೃಪ್ತಿ ಪಟ್ಟಸ್ವಿಜರ್‌ ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ ರು.7.64 ಕೋಟಿ ಬಹುಮಾನ ಪಡೆದರು.

10ನೇ ಬಾರಿಗೆ ಸಿಂಗಲ್ಸ್‌ ಚಾಂಪಿಯನ್‌ ಪಟ್ಟಅಲಂಕರಿಸಿದ ರಾಫೆಲ್‌ ನಡಾಲ್‌

ತಮ್ಮ 13 ವರ್ಷಗಳ ಟೆನ್ನಿಸ್ ವೃತ್ತಿ ಬದುಕಿನಲ್ಲಿ ನಡಾಲ್ 10 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2005ರಲ್ಲಿ ಮೊದಲ ಬಾರಿಗೆ ಫ್ರೆಂಚ್‌ ಓಪನ್‌ ಗೆದ್ದಿದ್ದ ನಡಾಲ್‌ 2006, 2007, 2008ರಲ್ಲೂ ಜಯಿಸಿ ಸತತ 4 ಬಾರಿ ಪ್ರಶಸ್ತಿ ಗೆದ್ದ  ದಾಖಲೆ ಬರೆದಿದ್ದರು. ಆನಂತರ 2008, 2010, 2011, 2012, 2013, 2014ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಪ್ರಶಸ್ತಿ ಗೆಲ್ಲುವ ಮೂಲಕ ಸ್ಪೇನ್‌ನ ದಿಗ್ಗಜ 15ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗೆ ಮುತ್ತಿಟ್ಟರು. 18  ಗ್ರ್ಯಾಂಡ್‌ಸ್ಲಾಂ ಗೆದ್ದಿರುವ ರೋಜರ್‌ ಫೆಡರರ್‌ ನಂತರ ಅತಿಹೆಚ್ಚು ಪ್ರಶಸ್ತಿ ಗೆದ್ದ ಆಟಗಾರ ಎನ್ನುವ ದಾಖಲೆಗೆ ನಡಾಲ್‌ ಪಾತ್ರರಾಗಿದ್ದಾರೆ. ಅಲ್ಲದೇ 14 ಗ್ರ್ಯಾಂಡ್‌ಸ್ಲಾಂ ಗೆದ್ದಿದ್ದ ಅಮೆರಿಕದ ದಿಗ್ಗಜ ಪೀಟ್‌ ಸ್ಯಾಂಪರಾಸ್‌ ದಾಖಲೆಯನ್ನು  ನಡಾಲ್‌ ಮುರಿದರು. ಒಂದೇ ಗ್ರ್ಯಾಂಡ್‌ಸ್ಲಾಂನಲ್ಲಿ 10 ಗೆಲುವು ಸಾಧಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೂ ನಡಾಲ್‌ ಪಾತ್ರರಾದರು.

Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Paris, Sports, Tennis, French Open, Rafael Nadal, ಪ್ಯಾರಿಸ್, ಕ್ರೀಡೆ, ಟೆನ್ನಿಸ್, ಫ್ರೆಂಚ್ ಓಪನ್, ರಾಫೆಲ್ ನಡಾಲ್
English summary
Rafael Nadal coasted to a record 10th French Open title on Sunday, demolishing Stan Wawrinka in a brutally one-sided final which also earned the Spaniard a 15th Grand Slam crown. Nadal, 31, triumphed 6-2, 6-3, 6-1 to become the first man in history to win the same major 10 times. His collection of Slams now stands just three behind great rival Roger Federer, a staggering statistic coming just a year after he quit Roland Garros with a wrist injury.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement