Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Narendra Modi

ಮೈಸೂರು-ಉದಯಪುರ 'ಪ್ಯಾಲೆಸ್ ಕ್ವೀನ್ ಹಮ್ ಸಫರ್' ರೈಲು ಸಂಚಾರಕ್ಕೆ ಮೋದಿ ಚಾಲನೆ

Mohammed Haris Nalapad

ವಿದ್ವತ್ ಹಲ್ಲೆ ಪ್ರಕರಣ: ಆರೋಪಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ಪೊಲೀಸರಿಗೆ ಶರಣು

Dhasvanth

ಹಸೀನಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಧಸ್ವಂತ್ ದೋಷಿ , ಮಹಿಳಾ ನ್ಯಾಯಾಲಯ ತೀರ್ಪು

Jasprit Bumrah

ಬುಮ್ರಾ ಅದ್ಭುತವಾಗಿ ಡೈವ್ ಮಾಡಿ ಸಿಕ್ಸರ್ ತಡೆದರು ಪ್ರಯೋಜನವಾಗಲಿಲ್ಲ! ಕಾರಣ ಈ ವಿಡಿಯೋ ನೋಡಿ

Maya Singh

ಕಾಂಗ್ರೆಸ್‌ಗೆ ಮತ ಹಾಕಿದರೆ ಕೇಂದ್ರದ ಯಾವುದೇ ಯೋಜನೆಯ ಸೌಲಭ್ಯ ಸಿಗುವುದಿಲ್ಲ: ಮಧ್ಯಪ್ರದೇಶ ಸಚಿವೆ

MS Dhoni is key to the perfection of Indian cricket at the moment, says former Cricketer Kiran More

'ಧೋನಿಯಿಂದ ಯಾರಾದರೂ ಅತೀ ಹೆಚ್ಚು ಲಾಭ ಪಡೆದಿದ್ದಾರೆ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ'

Journalist who wrote about Manohar Parrikar

ಪರಿಕ್ಕರ್ ಆರೋಗ್ಯದ ಬಗ್ಗೆ ವರದಿ ಮಾಡಿದ್ದ ಪತ್ರಕರ್ತನಿಗೆ ಗೋವಾ ವಿಧಾನಸಭೆ ಪ್ರವೇಶಕ್ಕೆ ನಿಷೇಧ

The FutureSkills platform is expected to impart the skills required for new age IT professionals. (Representational image)

ಫ್ಯೂಚರ್ ಸ್ಕಿಲ್ಸ್ ವೇದಿಕೆಗೆ ಪ್ರಧಾನಿ ಮೋದಿ ಚಾಲನೆ, 4 ದಶಲಕ್ಷ ತಾಂತ್ರಿಕ ಉದ್ಯೋಗಿಗಳಿಗೆ ಕೌಶಲ್ಯ ತರಬೇತಿ

Aicc president Rahulgandhi photo

ಪ್ರಧಾನಿ ಮೋದಿ ದೇಶವನ್ನು ಲೂಟಿ ಮಾಡಿದ್ದಾರೆ: ಪಿಎನ್‏ಬಿ ವಂಚನೆ ಪ್ರಕರಣ ಕುರಿತು ರಾಹುಲ್ ಟ್ವೀಟ್

Representative image

ಮಾಲೀಕನ ಪತ್ನಿಯೊಂದಿಗೆ ಓಡಿ ಹೋಗಿದ್ದಕ್ಕೆ ಕಣ್ಣಿಗೆ ಆ್ಯಸಿಡ್ ಹಾಕಿ ಶಿಕ್ಷೆ...!

Canadian PM Justin Trudeau visits the magnificent Akshardham Mandir in Gandhinagar. Seen here with his sons.

ಸಬರಮತಿ ಆಶ್ರಮ, ಅಕ್ಷರಧಾಮ ದೇವಸ್ಥಾನಕ್ಕೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ, ಕುಟುಂಬ ಭೇಟಿ

Aparajita Mohanty

'ಕೈ' ಬಿಟ್ಟು ಕಮಲ ಹಿಡಿದ ನಟಿ ಅಪರಾಜಿತಾ ಮೊಹಂತಿ

Virat Kohli

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಗಾಯದ ಸಮಸ್ಯೆ?

ಮುಖಪುಟ >> ಕ್ರೀಡೆ

ಇಂಡಿ 500 ರೇಸ್ ವೇಳೆ ಭೀಕರ ಅಪಘಾತ: ಚಾಲಕ ಡಿಕ್ಸನ್ ಪವಾಡ ಸದೃಶ ಪಾರು!

ಢಿಕ್ಕಿ ಹೊಡೆದ ರಭಸಕ್ಕೆ ಆಗಸಕ್ಕೆ ಚಿಮ್ಮಿ, ಮೂರು ಸುತ್ತು ಗಿರಕಿ ಹಾಕಿ ರಕ್ಷಣಾ ತಡೆಗೋಡೆ ಮೇಲೆ ಬಿತ್ತು
Scary crash at Indianapolis 500, Scott Dixon out of race

ಅಪಘಾತಕ್ಕೀಡಾದ ಸ್ಕಾಟ್ ಡಿಕ್ಸನ್ ಕಾರು

ಇಂಡಿಯಾನಾಪೊಲಿಸ್: ಪ್ರತಿಷ್ಠಿತ ಇಂಡಿ500 ರೇಸ್ ಭಾನುವಾರ ಭೀಕರ ಅಪಘಾತವೊಂದಕ್ಕೆ ಸಾಕ್ಷಿಯಾಗಿದ್ದು, ನ್ಯೂಜಿಲೆಂಡ್ ಮೂಲದ ಚಾಲಕ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ.

ಇಂಡಿಯಾನಾಪೊಲಿಸ್ 500 ರೇಸ್ ಅಥವಾ ಇಂಡಿ 500 ಎಂದೇ ಖ್ಯಾತಿ ಗಳಿಸಿರುವ ಓವಲ್ ರೇಸ್ ನಲ್ಲಿ ನ್ಯೂಜಿಲೆಂಡ್ ಮೂಲದ ಚಾಲಕ ಸ್ಕಾಟ್ ಡಿಕ್ಸನ್ ಕಾರು ಅಫಘಾತಕ್ಕೀಡಾಗಿದ್ದು, ಅಪಘಾತದ ರಭಸಕ್ಕೆ ಇಡೀ ಕಾರು  ಚಿಂದಿಯಾಗಿದೆ. ಪಂದ್ಯದ 53ನೇ ಲ್ಯಾಪ್ ವೇಳೆ ಡಿಕ್ಸನ್ ತಮ್ಮ ಎದುರಿಗಿದ್ದ ಬ್ರಿಟೀಷ್ ಚಾಲಕ ಜೇ ಹೋವರ್ಡ್ ಅವರನ್ನು ಹಿಂದಿಕ್ಕಲು ಯತ್ನಿಸುತ್ತಿದ್ದಾಗ ಕಾರು ಆಕಸ್ಮಿಕವಾಗಿ ಪರಸ್ಪರ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ  ಕಾರು ಆಗಸಕ್ಕೆ ಚಿಮ್ಮಿದ್ದು, ಆಗಸದಲ್ಲೇ ಮೂರು ಸುತ್ತು ಗಿರಕಿ ಹೊಡೆದು ಪಕ್ಕದಲ್ಲಿದ್ದ ರಕ್ಷಣಾ ತಡೆಗೋಡೆ ಮೇಲೆ ಬಿದ್ದಿದೆ. ಈ ವೇಳೆ ಕಾರಿನ ಬಹುತೇಕ ಭಾಗಗಳು ತಿಂದಿಯಾಗಿದೆ.

ಈ ಭೀಕರ ಅಪಘಾತದಲ್ಲಿ ಕಾರು ಚಾಲಕ ಡಿಕ್ಸನ್ ಗಂಭೀರರಾಗಿರಬಹುದು ಎಂದೇ ಎಲ್ಲರೂ ಎಣಿಸಿದ್ದರು. ಆದರೆ ಕೂಡಲೇ ಸ್ಥಳಕ್ಕಾಗಮಿಸಿದ ಆ್ಯಂಬುಲೆನ್ಸ್ ಹಾಗೂ ರಕ್ಷಣಾ ಸಿಬ್ಬಂದಿಗಳು ಡಿಕ್ಸನ್ ರನ್ನು ಹೊರೆಗೆಳೆದಿದ್ದಾರೆ.  ಅದೃಷ್ಟವಶಾತ್ ಡಿಕ್ಸನ್ ಸಣ್ಣ ಪುಟ್ಟಗಾಯಗಳಿಂದ ಬಚಾವ್ ಆಗಿದ್ದಾರೆ. ಕಾರಿನ ಚಾರ್ಸಿ ಗಂಭೀರವಾಗಿ ಹಾನಿಯಾಗಿದ್ದು, ಎರಡು ಭಾಗವಾಗಿ ಛಿದ್ರವಾಗಿತ್ತು. ಆದರೂ ಡಿಕ್ಸನ್ ಪಾರಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.  ಕಾರಿನಲ್ಲಿದ್ದ ರಕ್ಷಣಾ ವ್ಯವಸ್ಥೆಯಿಂದಾಗಿ ಡಿಕ್ಸನ್ ಬಚಾವ್ ಆಗಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಪಘಾತ ಪರಿಣಾಮ ಡಿಕ್ಸನ್ ಹಾಗೂ ಜೇ ಹೊವರ್ಡ್ ರೇಸ್ ನಿಂದ ಹೊರಗುಳಿಯಬೇಕಾಯಿತು. ಸ್ಟಾಕ್ ಡಿಕ್ಸನ್ 2008ರಲ್ಲಿ ಚಾಂಪಿಯನ್ ಆಗಿದ್ದರು. ಈ ಭೀಕರ ಅಫಘಾತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಂಡಿ500 ರೇಸ್ ಗಾಗಿ ಮೊನಾಕೋ ಗ್ರಾಂಡ್ ಪ್ರಿಕ್ಸ್ ತೊರೆದಿದ್ದ ಆಲಾನ್ಸೋಗೆ ಸೋಲು

ಇನ್ನು ಈ ಪ್ರತಿಷ್ಠಿತ ರೇಸ್ ಗಾಗಿ ಎಫ್ 1 ನಂಬರ್ 1 ಚಾಲಕ ಫರ್ನಾಂಡೋ ಆಲಾನ್ಸೋ ಮೊನಾಕೋ ಗ್ರಾಂಡ್ ಪ್ರಿಕ್ಸ್ ಅನ್ನು ತೊರೆದಿದ್ದರು. ಆದರೆ ನಿನ್ನೆಯ ರೇಸ್ ನಲ್ಲಿ ಅಲಾನ್ಸೋ 179ನೇ  ಲ್ಯಾಪ್ ವೇಳೆ ರೇಸ್ ನಿಂದ  ಹೊರಗುಳಿಯಬೇಕಾಯಿತು. ಎಂಜಿನ್ ನಲ್ಲಿನ ತಾಂತ್ರಿಕ ದೋಷದಿಂದಾಗಿ ಆಲಾನ್ಸೋ ಅನಿವಾರ್ಯವಾಗಿ ರೇಸ್ ನಿಂದ ಹೊರಗುಳಿದರು. ಇನ್ನು ಈ ಪ್ರತಿಷ್ಠಿತ ರೇಸ್ ನಲ್ಲಿ ಜಪಾನ್ ಚಾಲಕ ಟಕುಮಾ ಸಾಟೋ ಪ್ರಶಸ್ತಿ ಗಳಿಸಿದರು.

Posted by: SVN | Source: Associated Press

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Oval, Sports, Race, Indianapolis 500, Accident, Scott Dixon, ಓವಲ್, ಕ್ರೀಡೆ, ರೇಸ್, ಇಂಡಿಯಾನಾ ಪೊಲಿಸ್ 500, ಅಪಘಾತ, ಸ್ಕಾಟ್ ಡಿಕ್ಸನ್
English summary
2008 winner Scott Dixon, who emerged largely unscathed after crashing heavily on lap 53. Dixon's Chip Ganassi Racing car was flipped high into the air and came down.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement