Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Goonda act against who instigate communal violence warns CM Siddaramaiah

ಕೋಮು ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಗೂಂಡಾ ಕಾಯ್ದೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

India suffer 135-run defeat in Centurion Test, lose series to South Africa

ಸೆಂಚುರಿಯನ್ ನಲ್ಲಿ ವಿಶ್ವದ ನಂ.1 ತಂಡಕ್ಕೆ ಮುಖಭಂಗ, ಭಾರತಕ್ಕೆ ಸರಣಿ ಸೋಲು

Sensex hits 35,000 mark for the first time as IT stocks lead gains

ಇದೇ ಮೊದಲ ಬಾರಿಗೆ 35 ಸಾವಿರ ಗಡಿ ದಾಟಿದ ಸೆನ್ಸೆಕ್ಸ್

Police seized demonetized currency worth 100 crores from a residential premises in Kanpur, UP

ಕಾನ್ಪುರ: ಬೀಗ ಹಾಕಿದ್ದ ಮನೆಯಲ್ಲಿ ಕೈ ಹಾಕಿದಲ್ಲೆಲ್ಲಾ ರಾಶಿ-ರಾಶಿ ದುಡ್ಡಿನ ಕಂತೆಗಳು!

Gautam Gambhir

ಪಬ್ ಗೆ ಗೌತಮ್ ಗಂಭೀರ್ ಹೆಸರು, ದೆಹಲಿ ಪಬ್ ಗಳಿಗೆ ಹೈಕೋರ್ಟ್ ನೋಟೀಸ್

H D Kumaraswamy

ಗಣಿಗಾರಿಕೆ ಹಗರಣದ ಕುರಿತು ಕುಮಾರಸ್ವಾಮಿ ಆರೋಪ ಅರ್ಧಸತ್ಯ: ಸಚಿವ ವಿನಯ್ ಕುಲಕರ್ಣಿ

All 14 types of Rs 10 coins are valid, legal tender for transactions: RBI

ಎಲ್ಲಾ 14 ಮಾದರಿಯ 10 ರುಪಾಯಿ ನಾಣ್ಯ ನಡೆಯುತ್ತೆ: ಆರ್ ಬಿಐ

Manjunath and Bhagya

ಹಾಸನ: ದಶಕದ ಬಳಿಕ ಒಂದಾದ ಅಣ್ಣ-ತಂಗಿ, ಸಿನಿಮಾ ಕಥೆಯಂತಿದೆ ಇವರ ಜೀವನಗಾಥೆ

India beat Japan by 6-0 in Four Nations Invitational hockey tournament

ಇನ್ವಿಟೇಷನಲ್ ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 6-0 ಅಂತರದ ಜಯ

Kamal Haasan to announce his party

ಫೆಬ್ರವರಿ 21ರಂದು ನಟ ಕಮಲ್ ಹಾಸನ್ ಹೊಸ ಪಕ್ಷದ ಹೆಸರು ಘೋಷಣೆ!

Lalu Prasad Yadav

ಪ್ರಧಾನಿ ಮೋದಿ ತಮ್ಮ ಕಾರ್ಯಗಳಿಂದ ಮುಸಲ್ಮಾನರಿಗೆ ತೊಂದರೆ ನೀಡುತ್ತಿದ್ದಾರೆ: ಲಾಲೂ ಪ್ರಸಾದ್ ಯಾದವ್

High Court

ಲೋಕಾಯುಕ್ತ ರಿಜಿಸ್ಟಾರ್ ವಿರುದ್ಧ ನಿಲುವಳಿ ಸೂಚನೆ: ಅವಿವೇಕದ ಕ್ರಮ ಕೈಗೊಳ್ಳದಂತೆ ವಿಧಾನಸಭೆಗೆ ಹೈಕೋರ್ಟ್ ಸೂಚನೆ

ಹೈಪಾ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಲ್ಲಿ ಭಾರತೀಯರೆ ಹೆಚ್ಚು ; ಇಸ್ರೇಲ್ ಪ್ರಧಾನಿ

ಮುಖಪುಟ >> ಅಂತಾರಾಷ್ಟ್ರೀಯ

ಇಸ್ರೇಲ್ ಪ್ರಧಾನಿ ನೇತನ್ಯಹು ಭಾರತ ಭೇಟಿ; ಚಿತ್ರೋದ್ಯಮ ಜೊತೆ ಸಮಾಲೋಚನೆ

Israel PM Benjamin Netanyahu

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಹು

ಜೆರುಸಲೇಂ: ಜಾಗತಿಕ ಮನರಂಜನಾ ಉದ್ಯಮದಲ್ಲಿ ವಿಶ್ವದಲ್ಲಿ ಸಾಂಸ್ಕೃತಿಕ ಬಹಿಷ್ಕಾರ ಎದುರಿಸುತ್ತಿರುವ ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೇತನ್ಯಹು, ವಿಶೇಷ ಸಂಯೋಜಿತ ಕಾರ್ಯಕ್ರಮ ಶಲೊಮ್ ಬಾಲಿವುಡ್ ನಲ್ಲಿ ಭಾರತೀಯ ಚಿತ್ರೋದ್ಯಮದ ಪ್ರಮುಖರನ್ನು ಭೇಟಿ ಮಾಡಲು ಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನವರಿ 14ರಿಂದ ನಾಲ್ಕು ದಿನಗಳ ಭೇಟಿಗಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್  ನೇತನ್ಯಹು ಭಾರತಕ್ಕೆ ಆಗಮಿಸಲಿದ್ದು, ಜನವರಿ 18ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ಜುಲೈಯಲ್ಲಿ ಇಸ್ರೇಲ್ ನ ತಮ್ಮ ನಿವಾಸದಲ್ಲಿ ಪತ್ನಿ ಸಾರಾ ಜೊತೆಗೆ ಭಾರತ ಪ್ರಧಾನಿ ನರೇಂದ್ರ ಮೋದಿಯವರಿಗೆ ಆತಿಥ್ಯ ನೀಡಿದ್ದ  ನೇತನ್ಯಹು ಜನವರಿ 16ರಂದು ಆಗ್ರಾದ ತಾಜ್ ಮಹಲ್ ಗೆ ಕೂಡ ಭೇಟಿ ನೀಡಲಿದ್ದಾರೆ.

ಇದೇ 15ರಂದು ದೆಹಲಿಯಲ್ಲಿ ಪ್ರಧಾನಿ ಮೋದಿಯವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ  ನೇತನ್ಯಹು ಅವರನ್ನು ಪ್ರಧಾನಿಯವರು ಜನವರಿ 17ರಂದು ಅಹಮದಾಬಾದ್ ಗೆ ಕರೆದೊಯ್ಯಲಿದ್ದಾರೆ.ಅಲ್ಲಿ ಅವರು ಸಬರ್ಮತಿ ಆಶ್ರಮಕ್ಕೆ ಭೇಟಿ ಕೊಡಲಿದ್ದಾರೆ. ಈ ಹಿಂದೆ ಈ ಆಶ್ರಮಕ್ಕೆ ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ಕೊಟ್ಟಿದ್ದರು.

ಇಸ್ರೇಲ್ ಪ್ರಧಾನಿಯವರ ಪ್ರಮುಖ ಭೇಟಿ ಮುಂಬೈಯಲ್ಲಿ ಬಾಲಿವುಡ್ ನ ಪ್ರಮುಖ ನಿರ್ದೇಶಕರು, ನಿರ್ಮಾಪಕರು ಮತ್ತು ನಟರನ್ನು ಭೇಟಿ ಮಾಡಿ ಸಾಂಸ್ಕೃತಿಕ ಲೋಕದ ಬಗ್ಗೆ ಮಾತುಕತೆ ನಡೆಸುವುದಾಗಿದೆ. ಅಲ್ಲದೆ ಅಂದು ಅವರು ಮುಂಬೈಯಲ್ಲಿ ವಾಣಿಜ್ಯೋದ್ಯಮಿಗಳನ್ನು ಕೂಡ ಭೇಟಿ ಮಾಡಲಿದ್ದಾರೆ.

ಭಾರತೀಯ ಚಿತ್ರಗಳನ್ನು  ನೇತನ್ಯಹು ಮತ್ತು ಅವರ ಪತ್ನಿ ಇಷ್ಟಪಡುತ್ತಿದ್ದರೂ ಕೂಡ ಅವರ ಈ ಭೇಟಿ ರಾಜಕೀಯ ಮಟ್ಟದ್ದಾಗಿದೆ ಎನ್ನುತ್ತವೆ ಮೂಲಗಳು. ಇಸ್ರೇಲ್ ವಿರುದ್ಧ ಹೇರಿರುವ ಸಾಂಸ್ಕೃತಿಕ ಬಹಿಷ್ಕಾರದ ವಿರುದ್ಧ ಅವರ ಹೋರಾಟವಾಗಿದೆ ಎನ್ನಲಾಗುತ್ತಿದೆ.
Posted by: SUD | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Israel, Benjamin Netanyahu, Bollywood, India, Visit, ಇಸ್ರೇಲ್, ಬೆಂಜಮಿನ್ ನೆತನ್ಯಾಹು, ಬಾಲಿವುಡ್, ಭಾರತ, ಭೇಟಿ
English summary
As Israel fights cultural boycott in the world of global entertainment business, its Prime Minister Benjamin Netanyahu is planning to meet the whos who of the Indian film industry in a specially-choreographed event, Shalom Bollywood, sources have reported.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement