Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Terrorists kill all three cops abducted in Shopian

ಅಪಹರಣ ಮಾಡಿದ್ದ ಮೂವರು ಪೊಲೀಸ್ ಸಿಬ್ಬಂದಿಗಳ ಹತ್ಯೆಗೈದ ಉಗ್ರರು!

11 Lions Found Dead In Gujarat

ಗುಜರಾತ್: ಗಿರ್ ಅರಣ್ಯ ಪ್ರದೇಶದಲ್ಲಿ ಕ್ರೂರ ಕಾದಾಟಕ್ಕೆ 11 ಸಿಂಹಗಳ ಸಾವು!

Pakistan Foreign Minister Shah Mehmood Qureshi (Left) and Indian External Affairs minister Sushma Swaraj (Right)

ಶಾಂತಿ ಮಾತುಕತೆ: ಪಾಕಿಸ್ತಾನ ಪ್ರಧಾನಿ ಪ್ರಸ್ತಾವನೆಗೆ ಭಾರತ ಒಪ್ಪಿಗೆ!

Hima Das

ರೈತನ ಮಗಳ ಪ್ರಸಿದ್ಧಿ, ಚಿನ್ನದ ಹುಡುಗಿ 'ಹಿಮಾದಾಸ್' ಹೆಸರು ಅಡಿಡಾಸ್ ಶೂ ಮೇಲೆ: ಫೋಟೋ ವೈರಲ್

Dinesh Gundu Rao

ಕೆಲ ಚಾನೆಲ್ ಗಳು ಬಿಜೆಪಿ ವಕ್ತಾರರಂತೆ ಕೆಲಸ ಮಾಡುತ್ತಿವೆ: ದಿನೇಶ್ ಗುಂಡೂರಾವ್ ಕಿಡಿ

Cristiano Ronaldo

ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲೇ ಗೋಳಾಡಿ, ಕಣ್ಣೀರಿಟ್ಟಿದ್ದೇಕೆ?

Nivedith Alva

ಅಕ್ಟೋಬರ್ 4 ರಂದು ವಿಧಾನ ಪರಿಷತ್ ಚುನಾವಣೆ: ಮುಂಚೂಣಿಯಲ್ಲಿ ನಿವೇದಿತ್ ಆಳ್ವ ಎಂ,ಸಿ ವೇಣುಗೋಪಾಲ್

Mirabai Chan, Virat Kohli

ಕ್ರೀಡಾಕ್ಷೇತ್ರದ ಪ್ರಶಸ್ತಿ: ವಿರಾಟ್ ಕೊಹ್ಲಿ, ಮೀರಾಬಾಯಿ 'ಖೇಲ್ ರತ್ನ', ನೀರಜ್ ಚೋಪ್ರಾ, ಹಿಮಾ ದಾಸ್ ಗೆ ಅರ್ಜುನ ಪುರಸ್ಕಾರ!

Asia Cup 2018: Mashrafe Mortaza disappointed with Super Four schedule

ಏಷ್ಯಾಕಪ್ 2018: ಸೂಪರ್ 4 ಹಂತದ ವೇಳಾಪಟ್ಟಿಗೆ ಬಾಂಗ್ಲಾ ತೀವ್ರ ಅಸಮಾಧಾನ

Asia Cup 2018: Afghanistan beat Bangladesh by 136 run

ಏಷ್ಯಾಕಪ್: ಬಾಂಗ್ಲಾ ವಿರುದ್ಧ ಆಫ್ಘಾನಿಸ್ತಾನಕ್ಕೆ 136 ರನ್ ಬೃಹತ್ ಜಯ

ನನ್ನ ಪಕ್ಕದಲ್ಲಿ ಕುಳಿತ ವ್ಯಕ್ತಿಯ ಮೂಗಿನಲ್ಲಿ ರಕ್ತ ಬರುತ್ತಿತ್ತು: ಜೆಟ್ ಏರ್ ವೇಸ್ ಪ್ರಯಾಣಿಕ

Sadashiva Brahmavar

ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ವಿಧಿವಶ

Fuike Image

ಬೆಂಗಳೂರು: ಪೋಲೀಸ್ ಠಾಣೆ ಕಟ್ಟಡದಿಂದ ಬಿದ್ದು ಆರೋಪಿ ಸಾವು!

ಮುಖಪುಟ >> ಅಂತಾರಾಷ್ಟ್ರೀಯ

ಹಫೀಜ್ ಸಯ್ಯೀದ್, ಅಜರ್ ಮಸೂದ್ ರಂತಹವರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದರೆ 10 ವರ್ಷ ಜೈಲು: ಪಾಕಿಸ್ತಾನ

ಉಗ್ರ ಹಫೀಜ್ ಸಯ್ಯೀದ್ ಜೆಯುಡಿ ಉಗ್ರ ಸಂಘಟನೆ ಸೇರಿದಂತೆ 71 ಸಂಘಟನೆಗಳ ಕಪ್ಪು ಪಟ್ಟಿಗೆ ಸೇರಿಸಿದ್ದ ಪಾಕ್ ಸರ್ಕಾರ
Those funding Hafiz Saeed, Azhar outfits face up to 10 years jail: Pakistan

ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆಯಂತೆ ಅಮೆರಿಕ ಸರ್ಕಾರದಿಂದ ಛೀಮಾರಿ ಹಾಕಿಸಿಕೊಂಡು ಆರ್ಥಿತ ಮತ್ತು ಭದ್ರತಾ ನೆರವು ಅಮಾನತು ಮಾಡಿಸಿಕೊಂಡಿರುವ ಪಾಕಿಸ್ತಾನ ಇದೀಗ ಹಫೀಜ್ ಸಯ್ಯೀದ್,  ಅಜರ್ ಮಸೂದ್ ರಂತಹವರ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದರೆ 10 ವರ್ಷ ಜೈಲು ಶಿಕ್ಷೆ ನೀಡುವುದಾಗಿ ಎಚ್ಚರಿಕೆ ನೀಡಿದೆ.

ಇತ್ತೀಚೆಗಷ್ಟೇ ಪಾಕಿಸ್ತಾನದ ಉಗ್ರಪರ ನಿಲುವುಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದ ಅಮೆರಿಕ ತನ್ನ ಆರ್ಥಿಕ ಮತ್ತು ಭದ್ರತಾ ನೆರವನ್ನು ಸ್ಥಗಿತಗೊಳಿಸಿತ್ತು. ಅಲ್ಲದೆ ಮುಂದಿನ ದಿನಗಳಲ್ಲಿ ಪಾಕ್ ಸರ್ಕಾರ ಉಗ್ರರ ವಿರುದ್ಧ ಕ್ರಮ  ಕೈಗೊಳ್ಳದಿದ್ದರೆ ಮತ್ತಷ್ಟು ಕಠಿಣ ನಿಲುವು ತಳೆಯುವುದಾಗಿ ಎಚ್ಚರಿಕೆ ನೀಡಿತ್ತು. ಅಮೆರಿಕ ಎಚ್ಚರಿಕೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಸರ್ಕಾರ ನಿನ್ನೆಯಷ್ಟೇ ಹಫೀಜ್ ಸಯ್ಯೀದ್, ಅಜರ್ ಮಸೂದ್ ಅವರ ಸಂಘಟನೆಗಳು  ಸೇರಿದಂತೆ ಒಟ್ಟು 72 ಉಗ್ರ ಸಂಘಟನೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿತ್ತು.

ಇದರ ಬೆನ್ನಲ್ಲೇ ಇಂದು ಅದರ ಮುಂದುವರಿದ ಭಾಗ ಎಂಬಂತೆ ಪಾಕಿಸ್ತಾನ ಸರ್ಕಾರ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ಉಗ್ರ ಸಂಘಟನೆಗಳಿಗೆ ಆರ್ಥಿಕ  ನೆರವು ನೀಡುವವರಿಗೆ 10 ವರ್ಷ ಜೈಲು ಮತ್ತು 10 ಮಿಲಿಯನ್ ಹಣವನ್ನು ದಂಡವಾಗಿ ವಿಧಿಸುತ್ತೇನೆ ಎಂದು ಎಚ್ಚರಿಕೆ ನೀಡಿದೆ.

ಇನ್ನು ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕ್ ವಿರುದ್ಧ ಕಿಡಿಕಾರಿ ಟ್ವೀಟ್ ಮಾಡಿದ ಬೆನ್ನಲ್ಲೇ, ಪಾಕಿಸ್ತಾನದ ವಿರುದ್ಧ ಕೆಂಡಕಾರಿರುವ ಅಮೆರಿಕ ಸರ್ಕಾರ, ಉಗ್ರ ಸಂಘಟನೆಗಳನ್ನು ನಾಶ ಮಾಡಿ ಎಂದು ಖಡಕ್  ಎಚ್ಚರಿಕೆ ನೀಡಿದೆ. ತಾಲಿಬಾನ್‌ ಮತ್ತು ಹಖ್ಖಾನಿ ಉಗ್ರ ಜಾಲವನ್ನು ನಿರ್ನಾಮ ಮಾಡಬೇಕೆಂದು ಪಾಕಿಸ್ಥಾನಕ್ಕೆ ಮನವರಿಕೆ ಮಾಡವಲ್ಲಿನ ಕ್ರಮವಾಗಿ ಭದ್ರತಾ ನೆರವನ್ನು ನಿಲ್ಲಿಸುವ ಮಾರ್ಗವಲ್ಲದೆ ಬೇರೆ ಉಪಾಯಗಳೂ ತಮ್ಮಲ್ಲಿ  ಇವೆ ಎಂದು ಅಮೆರಿಕ ಸ್ಪಷ್ಟಪಡಿಸಿತ್ತು. ಭವಿಷ್ಯದಲ್ಲಿ ಪಾಕಿಸ್ತಾನದ ನಡೆಯನ್ನು ಗಮನಿಸಿ ಅದರ ಆಧಾರದ ಮೇಲೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿತ್ತು.
ಸಂಬಂಧಿಸಿದ್ದು...
Posted by: SVN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Islamabad, Pakistan, Anti Terrorism Project, Hafiz Saeed, Azhar Masood, ಇಸ್ಲಾಮಾಬಾದ್, ಪಾಕಿಸ್ತಾನ, ಉಗ್ರ ನಿಗ್ರಹ ಯೋಜನೆ, ಹಫೀಜ್ ಸಯ್ಯೀದ್, ಅಜರ್ ಮಸೂದ್
English summary
Pakistan on Saturday said that those providing funds to banned groups, including the so-called charities run by Mumbai attack mastermind Hafiz Saeed, will face up to 10 years in prison along with a hefty fine. The warning was part of a countrywide advertisement in Urdu, which has been published in all major local newspapers of the country. The advertisement lists 72 groups, including Jamat-ud-Dawa, Falah-e-Insaniyat Foundation and Lashkar-e-Taybia of Saeed and Jaish-e-Mohammad of Masood Azhar. It said that according to Anti-Terrorism Act of 1997 of Pakistan and under United Nations Security Council act of 1948 it was a crime to provide funding to those groups which have been banned or are on the watchlist.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS