Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Pakistan PM Imran Khan writes to PM Modi, calls for resumption of peace dialogue

ಪ್ರಧಾನಿ ಮೋದಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪತ್ರ: ಶಾಂತಿ ಮಾತುಕತೆ ಪುನಾರಂಭಕ್ಕೆ ಕರೆ

CM HD Kumaraswamy visits Shivakumar in hospital

ಆಸ್ಪತ್ರೆಗೆ ಭೇಟಿ ನೀಡಿ ಡಿಕೆಶಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಸಿಎಂ

More bang for your buck: Interest rate hikes for small savings schemes

ಸಿಹಿ ಸುದ್ದಿ: ಪಿಪಿಎಫ್‌ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಳ!

CM HD Kumaraswamy Warns BS Yaddyurappa Over His Denotifacation Case

ಇದು ನಮ್ಮದೇ ಸರ್ಕಾರ, ಒಂದೇ ದಿನದಲ್ಲಿ ಏನು ಬೇಕಾದರೂ ಆಗಬಹುದು: ಬಿಎಸ್ ವೈಗೆ ಸಿಎಂ ಎಚ್ ಡಿಕೆ ಎಚ್ಚರಿಕೆ

Jet airways

ಕ್ಯಾಬಿನ್ ಒತ್ತಡ ನಿರ್ವಹಿಸುವುದು ಮರೆತ ಜೆಟ್ ಏರ್ ವೇಸ್ ಸಿಬ್ಬಂದಿ: 30 ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತಸ್ರಾವ

BSY to release documents against Deve Gowda family today

ದೇವೇಗೌಡ ಕುಟುಂಬದ ಹಗರಣಗಳ ದಾಖಲೆ ಬಿಡುಗಡೆ ಮಾಡುವೆ: ಬಿಎಸ್ ವೈ

ನನ್ನ ಹತ್ತಿರ ಕುಳಿತ ವ್ಯಕ್ತಿಯ ಮೂಗಿನಲ್ಲಿ ರಕ್ತ ಬರುತ್ತಿತ್ತು: ಜೆಟ್ ಏರ್ ವೇಸ್ ಪ್ರಯಾಣಿಕ

File photo

5 ತಿಂಗಳಿಗೂ ಹೆಚ್ಚು ಸ್ತನ್ಯಪಾನ ಮಾಡಿಸುವ ಹೆಣ್ಣು ಮಕ್ಕಳಲ್ಲಿ ಸಂತಾನ ಶಕ್ತಿ ಹೆಚ್ಚು

Union Defence Minister Nirmala Sitharaman (left) and Congress President Rahul Gandhi

ರಫೇಲ್: 'ಹೆಚ್ಎಎಲ್ ಸಾಮರ್ಥ್ಯ' ಕುರಿತು ಸುಳ್ಳು ಹೇಳಿದ್ದ ರಕ್ಷಣಾ ಸಚಿವರು ರಾಜಿನಾಮೆ ನೀಡಲಿ- ರಾಹುಲ್

Jarkiholi brother

ಮಧ್ಯಸ್ಥಿಕೆಯ ಅಗತ್ಯವಿಲ್ಲ: ಜಾರಕಿಹೊಳಿ ಸಹೋದರರಿಗೆ ಕಠಿಣ ಸಂದೇಶ ರವಾನಿಸಿದ ಬಳ್ಳಾರಿ ಶಾಸಕರು!

file photo

ಯೋಧನ ಶಿರಚ್ಛೇದಗೊಳಿಸಿದ ಪಾಕ್ ವಿರುದ್ಧ ಗುಡುಗಿದ ಭಾರತ

Identify The Husband: Virender Sehwag

ಪತಿ ಯಾರೆಂದು ಗುರುತಿಸಿ: ವೈರಲ್ ಆಯ್ತು ವಿರೇಂದ್ರ ಸೆಹ್ವಾಗ್ ಅಪ್ಲೋಡ್ ಮಾಡಿದ್ದ ಫೋಟೋ!

BJP snubs Shatrughan Sinha; Sushil Modi to contest from Patna Sahib seat

ನಟ ಶತೃಘ್ನ ಸಿನ್ಹಾ ಪಕ್ಷ ವಿರೋಧಿ ನಿಲುವು: ಸುಶೀಲ್ ಮೋದಿಗೆ ಪಟ್ನಾ ಸಾಹಿಬ್ ಕ್ಷೇತ್ರದ ಬಿಜೆಪಿ ಟಿಕೆಟ್!

ಮುಖಪುಟ >> ಅಂತಾರಾಷ್ಟ್ರೀಯ

'ಭಾರತದ ಪ್ರಧಾನಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೆ, ನಾವು ಪಾಕಿಸ್ತಾನದಲ್ಲಿ ಕುಳಿತು ಕೈ ಕೈ ಹಿಸುಕಿಕೊಳ್ಳುತ್ತಿದ್ದೇವೆ'

ಅನೇಕ ವಿಭಾಗಗಳಲ್ಲಿ ಭಾರತ ದೇಶ ಪಾಕಿಸ್ತಾನವನ್ನು ಹಿಂದಿಕ್ಕಿದೆ: ನವಾಜ್ ಷರೀಫ್ ಸಹೋದರನ ಹೇಳಿಕೆ
While Pakistan is a by-stander, PM Modi attends G20 meet, rues Nawaz Sharif

ಸುದ್ದಿಗೋಷ್ಟಿಯಲ್ಲಿ ಶೆಹಬಾಜ್ ಶರೀಫ್

ಇಸ್ಲಾಮಾಬಾದ್: ಭಾರತ ದೇಶ ಅನೇಕ ವಿಭಾಗಗಳಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದ್ದು, ಪ್ರಧಾನಿ ಮೋದಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೆ, ನಾವು ಪಾಕಿಸ್ತಾನದಲ್ಲಿ ಕುಳಿತು ಕೈ ಕೈ ಹಿಸುಕಿಕೊಳ್ಳುತ್ತಿದ್ದೇವೆ ಎಂದು ಪಾಕಿಸ್ತಾನ ದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಶರೀಫ್ ಹೇಳಿದ್ದಾರೆ.

ಪನಾಮಾ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಪ್ ಬಂಧನಕ್ಕೆ ಪಾಕ್ ಸುಪ್ರೀಂ ಕೋರ್ಟ್ ಆದೇಶ ನೀಡಿದ ಪರಿಣಾಮ ಪಾಕಿಸ್ತಾನದ ಪಿಎಂಎಲ್ ಎನ್ ಪಕ್ಷ ಸೂತ್ರ ಹರಿದ ಗಾಳಿಪಟದಂತಾಗಿತ್ತು. ಇದೀಗ ಆ ಪಕ್ಷದ ಉಸ್ತುವಾರಿಯನ್ನು ನವಾಜ್ ಶರೀಫ್ ಸಹೋದರ ಶೆಹಬಾಜ್ ಶರೀಫ್ ವಹಿಸಿಕೊಂಡಿದ್ದು, ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಭಾರತವನ್ನು ಉದ್ದೇಶಿಸಿ ತಮ್ಮದೇ ದೇಶದ ರಾಜಕೀಯ ಮುಖಂಡರ ಕುರಿತು ತೀವ್ರ ವಾಗ್ದಾಳಿ ನಡೆಸಿದರು.

'ಭಾರತ ದೇಶ ಸಾಕಷ್ಟು ವಿಭಾಗಗಳಲ್ಲಿ ಪಾಕಿಸ್ತಾನಕ್ಕಿಂತ ಮುಂದಿದೆ. ನಮ್ಮ ಕೈಯಲ್ಲಿದ್ದ ಬಾಂಗ್ಲಾದೇಶ ಭಾರತದಿಂದಾಗಿ ಕೈ ಜಾರಿದೆ. ನಮ್ಮದೇ ಯೊಜನೆಗಳಿಂದ ಸ್ಪೂರ್ತಿ ಪಡೆದ ಶ್ರೀಲಂಕಾ, ಸಿಂಗಾಪುರ, ಚೀನಾ ದೇಶಗಳು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ನಾವು ಮಾತ್ರ ಆ ದೇಶಗಳ ಹಿಂದೆ ಬಿದ್ದಿದ್ದೇವೆ. ಈಗಲಾದರೂ ನಾವು ಪಾಠ ಕಲಿಯದಿದ್ದರೇ ಹೇಗೆ. ಇಂದು ಹಿಂದೂಸ್ತಾನ (ಭಾರತ) ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದೆ. ಭಾರತದ ಪ್ರಧಾನಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ನಾವು ಟಿವಿಯಲ್ಲಿ ನೋಡಿ ಕೈ ಕೈ ಹಿಸುಕಿಕೊಳ್ಳುತ್ತಿದ್ದೇವೆ. ಕನಿಷ್ಠ ಪಕ್ಷ ಈ ಅವಕಾಶವನ್ನಾದರೂ ಸದುಪಯೋಗ ಪಡಿಸಿಕೊಂಡು ಇಕ್ಬಾಲ್ ರ ಕನಸಿನ ಪಾಕಿಸ್ತಾನವನ್ನಾಗಿ ಮಾಡೋಣ. ಇದು ನ್ಯಾಯ ಮತ್ತು ನಿರ್ಭೀತ ಚುನಾವಣೆಯಿಂದ ಮಾತ್ರ ಸಾಧ್ಯ ಎಂದು ಶೆಹಬಾದ್ ಶರೀಫ್ ಹೇಳಿದ್ದಾರೆ.

ಇದೇ ವೇಳೆ ಭ್ರಷ್ಟಾಚಾರದ ಕುರಿತು ಮಾತನಾಡಿದ ಶೆಹಬಾಜ್ ಶರೀಫ್ ಭಾರತದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸಿದ ಮಾಜಿ ಪ್ರಧಾನಿ ನರಸಿಂಹರಾವ್, ಮಾಜಿ ಸಿಎಂ ಜಯಲಲಿತಾ ಅವರಂತಹ ಘಟಾನುಘಟಿಗಳನ್ನೇ ಜೈಲಿಗೆ ಅಟ್ಟಿದ್ದರು. ಆದರೆ ನಮ್ಮ ದೇಶದಲ್ಲಿ ಪ್ರಜೆಗಳ ಸಾವಿರಾರು ಕೋಟಿ ರೂಗಳನ್ನು ಲೂಟಿ ಮಾಡಿದ ಜನರು ಬಹಿರಂಗವಾಗಿ ತಿರುಗಾಡುತ್ತಿರುವುದು ಮಾತ್ರವಲ್ಲದೇ ಇಂದು ಅಧಿಕಾರಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನಮ್ಮ ಆರ್ಥಿಕತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಷೇರುಮಾರುಕಟ್ಟೆ ಸಾಧನೆ ಕಳಪೆಯಾಗಿದ್ದು. ನಮ್ಮ ದೇಶದ ಹೂಡಿಕೆದಾರರು ಲಂಡನ್ ಮತ್ತು ದುಬೈ ನತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಇಷ್ಟೇಲ್ಲಾ ಸಮಸ್ಯೆಗಳ ನಡುವೆ ದೇಶದ ಜನ ಜುಲೈ 25ರಂದು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ನನ್ನಲ್ಲೂ ಕುತೂಹಲ ಮೂಡಿಸಿದೆ ಎಂದು ಶೆಹಬಾಜ್ ಶರೀಫ್ ಹೇಳಿದ್ದಾರೆ.

Posted by: SVN | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Islamabad, Pakistan Election 2018, PMLN, Nawaz Sharif, Shehbaz Sharif, ಇಸ್ಲಾಮಾಬಾದ್, ಪಾಕಿಸ್ತಾನ ಚುನಾವಣೆ 2018, ಪಿಎಂಎಲ್ ಎನ್, ನವಾಜ್ ಶರೀಫ್, ಶೆಹಬಾಜ್ ಶರೀಫ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS