Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
5 State Election Counting Begins, PM Modi

ಪಂಚ ರಾಜ್ಯ ಚುನಾವಣೆ: ಮತ ಎಣಿಕೆ ಕಾರ್ಯ ಆರಂಭ!

Vijay Malya

ಭಾರತಕ್ಕೆ ಗಡಿಪಾರು ತೀರ್ಪು ದುರದೃಷ್ಟಕರ- ವಿಜಯ್ ಮಲ್ಯ

Arun jaitly

ಯುಪಿಎ ಅವಧಿಯಲ್ಲಿ ಲಾಭ ಪಡೆದಿದ್ದ ಅಪರಾಧಿಯನ್ನು ಪ್ರಕರಣದಡಿ ಎನ್ ಡಿಎ ಕರೆತರುತ್ತಿದೆ - ಜೇಟ್ಲಿ

ಗೌರ್ನರ್ ಉರ್ಜಿತ್ ಪಟೇಲ್

ಆರ್ ಬಿಐ- ಕೇಂದ್ರದ ನಡುವಣ ತಿಕ್ಕಾಟ: ವೈಯಕ್ತಿಕ ಕಾರಣ ನೀಡಿ ಗೌರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ

Modi-Urjit Patel

ಉರ್ಜಿತ್ ಪಟೇಲ್ ರಾಜೀನಾಮೆ ಬಗ್ಗೆ ಪ್ರಧಾನಿ, ಜೇಟ್ಲಿ, ರಘುರಾಮ್ ರಾಜನ್, ಸ್ವಾಮಿ ಹೇಳಿದ್ದು ಹೀಗೆ

Agni-5

ಸ್ವದೇಶಿ ನಿರ್ಮಿತ ಅಗ್ನಿ -5 ಖಂಡಾಂತರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Casual Photo

ಬೆಂಗಳೂರು: ಹನಿಟ್ರಾಪ್ ಮೂಲಕ ಉದ್ಯಮಿ ವಂಚಿಸಿದ ಮಹಿಳೆ ಸೆರೆ

Dr. Manmohan singh

ಉರ್ಜಿತ್ ಪಟೇಲ್ ರಾಜೀನಾಮೆಯಿಂದ ಆರ್ಥಿಕತೆ ಮೇಲೆ ತೀವ್ರ ಹೊಡೆತ- ಮನ್ ಮೋಹನ್ ಸಿಂಗ್

I do not need any certificate from Yeddyurappa, says Karnataka Chief Minister Kumaraswamy

ಬಿಎಸ್ ವೈಯಿಂದ ನನಗೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲ: ಸಿಎಂ ಕುಮಾರಸ್ವಾಮಿ

Shashi Tharoor

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಿದ ಶಶಿ ತರೂರ್

Adelaide win brought back memories of 2003: Sachin Tendulkar

ಅಡಿಲೇಡ್ ಟೆಸ್ಟ್ ಗೆಲುವು 2003 ರ ನೆನಪುಗಳನ್ನು ಮರುಕಳಿಸಿತು: ಸಚಿನ್ ತೆಂಡೂಲ್ಕರ್

Bihar retired IGP’s doctor daughter jumps to her death a day before wedding with IAS officer

ಬಿಹಾರ: ಐಎಎಸ್ ಅಧಿಕಾರಿ ಜತೆ ಮದುವೆಗೆ 1 ದಿನ ಬಾಕಿ ಇರುವಾಗಲೇ ನಿವೃತ್ತ ಐಜಿಪಿ ಪುತ್ರಿ ಸಾವು

ಮುಖಪುಟ >> ಭವಿಷ್ಯ-ಆಧ್ಯಾತ್ಮ

ಈ 6 ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವೇ ಇಲ್ಲ!

Lord Brahma at Pushkar in Rajasthan

ರಾಜಸ್ಥಾನದ ಪುಷ್ಕರ್ ನಲ್ಲಿರುವ ಬ್ರಹ್ಮನ ದೇವಾಲಯ

ಶನಿ ಶಿಂಗ್ಣಾಪುರ, ಶಬರಿಮಲೆ ಅಯ್ಯಪ್ಪ ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲವೆಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡಿದ್ದವು. ಈ ದೇವಾಲಯಗಳಲ್ಲಿ ಮಹಿಳೆಯರ ಪ್ರವೇಶಕ್ಕಾಗಿ ಆಗ್ರಹಿಸಿ ಕಾನೂನು ಸಮರ, ಸಾಮಾಜಿಕ ಹೋರಾಟವನ್ನೂ ನಡೆಸಲಾಗಿತ್ತು. ದೇವಾಲಯಗಳಲ್ಲಿ ಈ ರೀತಿಯ ನಿರ್ಬಂಧ ಕೇವಲ ಸ್ತ್ರೀಯರಿಗೆ ಮಾತ್ರ ಸೀಮಿತವಾಗಿಲ್ಲ. 

ದೇವಾಲಯಗಳಲ್ಲಿ ಸಾಮಾನ್ಯವಾಗಿ ಪುರುಷರೇ ಅರ್ಚಕರಾಗಿದ್ದರೂ  ಭಾರತದಲ್ಲಿ ಪುರುಷರಿಗೂ ಪ್ರವೇಶ ಇಲ್ಲದಿರುವ ಹಲವು ದೇವಾಲಯಗಳಿವೆ.  ಆ ದೇವಾಲಯಗಳ ಬಗ್ಗೆ ಮಾಹಿತಿ ಹೀಗಿವೆ. 

1. ಅಟಕುಲ್ ಭಗವತಿ ದೇವಾಲಯ: ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶಕ್ಕೆ ನಿಷೇಧವಿದೆಯೋ ಅದೇ ರಾಜ್ಯದಲ್ಲಿರುವ ಅಟಕುಲ್ ಭಗವತಿ ದೇವಾಲಯದಲ್ಲಿ ಪುರುಷರಿಗೂ ನಿರ್ಬಂಧವಿದೆ. ದೇವಾಲಯದಲ್ಲಿ ನಡೆಯುವ ಪೊಂಗಾಲ ಹಬ್ಬದಲ್ಲಿ  ಸಾವಿರಾರು ಮಂದಿ ಮಹಿಳೆಯರು ಭಾಗವಹಿಸುತ್ತಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೇಯರು ಸೇರುವ ಕಾರಣಕ್ಕೆ ಈ ಹಬ್ಬ ಗಿನ್ನೀಸ್ ಪುಸ್ತಕದಲ್ಲೂ ದಾಖಲಾಗಿದೆ.  ಫ್ರೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಸುಮಾರು 10 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಭಗವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ದೇವಾಲಯಕ್ಕೆ ಮಾತ್ರ ಪುರುಷರು ಪ್ರವೇಶ ಮಾಡುವಂತಿಲ್ಲ. 

2. ಚಕ್ಕುಲಥುಕವು ದೇವಾಲಯ: ಪುರುಷರಿಗೆ ಪ್ರವೇಶ ನಿರ್ಬಂಧಿಸಿರುವ ಕೇರಳದ ಮತ್ತೊಂದು ದೇವಾಲಯವೆಂದರೆ ಅದು ದುರ್ಗಾ ಮಾತೆಯನ್ನು ಆರಾಧಿಸುವ ಚಕ್ಕುಲಥುಕವು ದೇವಾಲಯ. ಕೇರಳದ ಈ ದೇವಸ್ಥಾನದಲ್ಲಿ ನಾರಿ ಪೂಜೆ ಎಂಬ ವಿಶೇಷ  ಪೂಜೆ ನಡೆಯುತ್ತದೆ. ಇದಲ್ಲದೆ ಧನು ಎಂಬ ವಿಶೇಷ ಧಾರ್ಮಿಕ ವಿಧಿ 10 ದಿನಗಳ ಕಾಲ ನಡೆಯುತ್ತದೆ. ಇದರಲ್ಲಿ ಮಹಿಳಾ ಭಕ್ತರು ಮಾತ್ರ ಪಾಲ್ಗೊಳ್ಳುವುದು ವಿಶೇಷತೆಯಾಗಿದೆ.

3. ಸಂತೋಷಿ ಮಾ ದೇವಾಲಯ: ದೇಶದ ವಿವಿಧ ಪ್ರದೇಶಗಳಲ್ಲಿ ಸಂತೋಷಿ ಮಾ ದೇವಾಲಯಗಳನ್ನು ನೋಡಬಹುದಾಗಿದೆ. ಮಹಿಳೆಯರು ಹಾಗೂ ಅವಿವಾಹಿತ ಯುವತಿಯರು ಮಾತ್ರ ಪೂಜಿಸಿರುವ ದೇವಿಯಾಗಿದ್ದು, ಪುರುಷರು ದೇವಾಲಯವನ್ನು ಪ್ರವೇಶಿಸಬಹುದಾದರೂ ಅಲ್ಲಿ ದೇವಿಯನ್ನು ಪೂಜಿಸುವುದಿಲ್ಲ. 

4.  ಪುಷ್ಕರ್ ನಲ್ಲಿರುವ ಬ್ರಹ್ಮನ ದೇವಾಲಯ:  ಮೇಲೆ ಹೇಳಿದ ಅಷ್ಟೂ ದೇವಾಲಯಗಳಲ್ಲಿ ಶಕ್ತಿ ಸ್ವರೂಪಿಣಿಯಾದ ದೇವಿಯ ಆರಾಧನೆ ನಡೆಯಲಿದ್ದು ಪುರುಷರ ಪ್ರವೇಶಕ್ಕೆ ನಿರ್ಬಂಧವಿದೆ. ಆದರೆ  ರಾಜಸ್ಥಾನದ ಪುಷ್ಕರ್ ನಲ್ಲಿರುವ ಸೃಷ್ಠಿಕರ್ತ ಬ್ರಹ್ಮನ ದೇವಾಲಯವಿದ್ದು ವಿವಾಹಿತ ಪುರುಷರಿಗೆ ಇಲ್ಲಿ ಪ್ರವೇಶವಿಲ್ಲ. ಕಾರ್ತಿಕ ಪೂರ್ಣಿಮೆಯ ದಿನದಂದು ಇಲ್ಲಿ ಬ್ರಹ್ಮನಿಗೆ ವಿಶೇಷ ಪೂಜೆ ನಡೆಯುತ್ತದೆ. 

5. ಕನ್ಯಾ ಕುಮಾರಿಯಲ್ಲಿರುವ ಭಗವತಿ ಮಾ ದೇವಾಲಯ: ಶಿವನನ್ನು ಪಡೆಯುವ ಹಠದಿಂದ ತಪಸ್ಸಿಗಾಗಿ ಪಾರ್ವತಿ ದೇವಿ ಏಕಾಂಗಿಯಾಗಿ ಸಮುದ್ರದ ಮಧ್ಯಕ್ಕೆ ತೆರಳಿದ ಪ್ರದೇಶ ಇದು ಎಂಬ ನಂಬಿಕೆ ಇದೆ. ಆದ್ದರಿಂದ ಕನ್ಯಾಕುಮಾರಿಯಲ್ಲಿರುವ ಭಗವತಿ ಮಾ ದೇವಾಲಯದಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶವಿದ್ದು, ಪುರುಷರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. 

6. ಮಾತಾ ದೇವಾಲಯ: ಬಿಹಾರದ ಮುಜಾಫರ್ ಪುರದಲ್ಲಿರುವ ದೇವಾಲಯದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಪ್ರವೇಶವಿದೆ. ಆದರೆ ನಿರ್ದಿಷ್ಟ ಅವಧಿಯಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶವಿದ್ದು, ಆ ಅವಧಿಯಲ್ಲಿ ದೇವಾಲಯದ ಪೂಜಾರಿಗೂ ಸಹ ಪ್ರವೇಶವನ್ನು ನಿರ್ಬಂಧಿಸಲಾಗಿರುತ್ತದೆ. 
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Temples, India, Men, Entry Prohibited, ದೇವಾಲಯ, ಪುರುಷರು, ನಿರ್ಬಂಧ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS