Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಬಿಜೆಪಿ ದ್ವೇಷ, ಅಸ್ಪೃಷ್ಯತೆಗೆ ಗುರಿಯಾಗಿದೆ, ದೂರದೃಷ್ಟಿ, ಕಠಿಣ ಶ್ರಮದಿಂದ ಬದಲಾವಣೆ ಸಾಧ್ಯ; ವಿಕಾಸವೇ ನಮ್ಮ ಮಂತ್ರ: ಮೋದಿ

ರಾಜಕೀಯ ದ್ವೇಷಕ್ಕೆ ಬಿಜೆಪಿ ಗುರಿ; ದೂರದೃಷ್ಟಿ, ಕಠಿಣ ಶ್ರಮದಿಂದ ಬದಲಾವಣೆ ಸಾಧ್ಯ; ವಿಕಾಸವೇ ನಮ್ಮ ಮಂತ್ರ: ಮೋದಿ

5 members of a family killed after a massive road accident at Bengaluru

ನಡುರಾತ್ರಿಯಲ್ಲಿ ಜವರಾಯನ ಅಟ್ಟಹಾಸ: ಬೆಂಗಳೂರಿನ ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ಐವರು ದುರ್ಮರಣ

Maldives may be Modi

ಎನ್ ಡಿಎ-2: ಯಾವ ದೇಶಕ್ಕೆ ಈ ಬಾರಿ ಮೊದಲ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಮೋದಿ: ಇಲ್ಲಿದೆ ಮಾಹಿತಿ

Rakul Preet Singh

ಸಖತ್ ಹಾಟ್: ಹೆಚ್ಚು ಟ್ರೋಲ್ ಆದ ರಾಕುಲ್ ಪ್ರೀತ್ ಮತ್ತೇ ಪ್ಯಾಂಟ್‌ಗೆ ಜಿಪ್ ಹಾಕದೆ ಟ್ರೋಲ್, ಫೋಟೋ ವೈರಲ್!

Nanak palace

ಪಾಪಿಗಳ ಕೃತ್ಯ: ಪಾಕ್ ನಲ್ಲಿದ್ದ ಐತಿಹಾಸಿಕ ನಾನಕ್ ಪ್ಯಾಲೇಸ್ ಧ್ವಂಸ

Narendra Modi-Anurag Kashyap

ಅನುರಾಗ್ ಕಶ್ಯಪ್ ನಿನ್ನ ಮಗಳನ್ನು ರೇಪ್ ಮಾಡ್ತೀವಿ: ಮೋದಿ ಬೆಂಬಲಿಗರಿಂದ ಬೆದರಿಕೆ, ದೂರು ದಾಖಲು!

ಸಂಗ್ರಹ ಚಿತ್ರ

ದಾವಣಗೆರೆ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳು: ಕನ್ನಡ ಅಧ್ಯಾಪಕನಿಗೆ ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿಗಳು!

Siddaramaiah

ಸರ್ಕಾರದ ಪುನರಚನೆ, ಸಂಪುಟ ವಿಸ್ತರಣೆ ಯಾವುದೂ ಇಲ್ಲ: ಸಿದ್ದರಾಮಯ್ಯ

Representational image

ರೈಲ್ವೆಯಲ್ಲಿ ಟಿಕೆಟ್ ಖರೀದಿಸದೆ ಪ್ರಯಾಣಿಸುವವರ ಸಂಖ್ಯೆ ಶೇ.60ರಷ್ಟು ಅಧಿಕ

Apurvi Chandela

ಶೂಟಿಂಗ್ ವಿಶ್ವಕಪ್: ವರ್ಷದ ಎರಡನೇ ಸ್ವರ್ಣಪದಕ ಗೆದ್ದ ಅಪೂರ್ವಿ

Broadway

ಕೊಚ್ಚಿಯ ಬ್ರಾಡ್ ವೇ ರಸ್ತೆ ಬಳಿ ಅಗ್ನಿ ದುರಂತ; ಮೂರು ಮಳಿಗೆಗಳು ಸಂಪೂರ್ಣ ಭಸ್ಮ

Trust, terror-free atmosphere vital for peace: modi to imran

ದೂರವಾಣಿ ಕರೆಯಲ್ಲಿ ಇಮ್ರಾನ್ ಪ್ರಸ್ತಾವನೆಗೆ ಮೋದಿ ಪ್ರತಿಕ್ರಿಯೆ ಏನಿತ್ತು ಗೊತ್ತೇ?

Rahul Gandhi paid respect to Pandit Jawaharlal Nehru

ಭಾರತ ಸೇರಿದಂತೆ ಹಲವು ಪ್ರಜಾಸತ್ತಾತ್ಮಕ ರಾಷ್ಟ್ರಗಳು ಸರ್ವಾಧಿಕಾರದತ್ತ ವಾಲುತ್ತಿವೆ: ರಾಹುಲ್ ಗಾಂಧಿ ಕಳವಳ

ಮುಖಪುಟ >> ಸಿನಿಮಾ >> ಬಾಲಿವುಡ್

ನಿರ್ದೇಶನದ ಜೊತೆಗೆ ನಟನೆಗೂ ಜೈ ಎಂದ ಆರ್ ಜಿವಿ, 'ಕೋಬ್ರಾ'ದಲ್ಲಿ ಮೊದಲ ಬಾರಿಗೆ ನಟನೆ

ವರ್ಮಾ ಹೊಸ ಅವತಾರಕ್ಕೆ ಬಿಗ್ ಬಿ, ಕಿಚ್ಚಾ ಸುದೀಪ್ ಅಭಿನಂದನೆ, ಮೂರು ಭಾಷೆಗಳಲ್ಲಿ ಕೋಬ್ರಾ ಬಿಡುಗಡೆ?
Ram Gopal Varma to make acting debut with

ಆರ್ ಜಿವಿ ಕೋಬ್ರಾ

ಮುಂಬೈ: ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ನೂತನ ಸಾಹಸವೊಂದಕ್ಕೆ ಕೈ ಹಾಕಿದ್ದು, ಕ್ಯಾಮೆರಾ ಹಿಂದೆ ನಿಲ್ಲುತ್ತಿದ್ದ ಆರ್ ಜಿವಿ ಇದೀಗ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ.

ಹೌದು.. ಸಾಕಷ್ಟು ವಿವಾದಾತ್ಮಕ ಚಿತ್ರಗಳ ಮೂಲಕ ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನಟರಾಗಲು ಹೊರಟಿದ್ದಾರೆ. ಇಷ್ಟು ಕಾಲ ನಟರಿಗೆ ಪಾಠ ಮಾಡುತ್ತಿದ್ದ ವರ್ಮಾ ಅವರು ಇದೀಗ ಸ್ವತಃ ತಾವೇ ಬಣ್ಣ ಹಚ್ಚಿಕೊಂಡು ಕ್ಯಾಮರಾ ಮುಂದೆ ನಿಲ್ಲಲು ಸಜ್ಜಾಗಿದ್ದಾರೆ. ನೈಜ ಕಥೆಯಾಧಾರಿತ ಚಿತ್ರ ಕೋಬ್ರಾದಲ್ಲಿ ಆರ್ ಜಿವಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಈ ಬಗ್ಗೆ ಅವರೇ ಟ್ವೀಟ್ ಮಾಡಿದ್ದು, ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನಾನು ಕ್ಯಾಮೆರಾ ಮುಂದೆ ಬರುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆರ್ಜಿವಿ 'ಗನ್ ಶಾಟ್ಸ್ ಫಿಲ್ಮ್ಸ್ ಪ್ರೊಡಕ್ಷನ್ಸ್ ಬ್ಯಾನರ್'ನಲ್ಲಿ 'ಕೋಬ್ರಾ' ಅನ್ನೋ ಸಿನಿಮಾ ಅನೌನ್ಸ್ ಮಾಡಿದ್ದು, ನಿರ್ದೇಶಕ ಅಗಸ್ತ್ಯ ಮಂಜು ಜೊತೆ ಸೇರಿ ಮುಂಬರುವ 'ಕೋಬ್ರಾ' ಸಿನಿಮಾ ನಿರ್ದೇಶನದೊಂದಿಗೆ ನಟನೆ ಕೂಡ ಮಾಡಲಿದ್ದಾರೆ.

ಅವರೇ ಹೇಳಿಕೊಂಡಿರುವಂತೆ ಆರ್ ಜಿವಿ ಈ ಕೋಬ್ರಾ ಚಿತ್ರದಲ್ಲಿ ಇಂಟೆಲಿಜೆನ್ಸ್ ಆಫೀಸರ್ ಪಾತ್ರದಲ್ಲಿ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಾಗಿದೆ. ಈಗಾಗಲೇ 'ಕೋಬ್ರಾ' ಫಿಲ್ಮ್ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದ್ದು, ಗನ್ ಹಿಡಿದುಕೊಂಡು ರಾಮ್ ಗೋಪಾಲ್ ವರ್ಮಾ ಅವರು ಖಡಕ್ ಲುಕ್ ಕೊಟ್ಟಿದ್ದಾರೆ. ತೆಲಂಗಾಣದ ಮೋಸ್ಟ್ ಡೇಂಜರಸ್ ಕ್ರಿಮಿನಲ್ ಕಥೆಯನ್ನ ಕೋಬ್ರಾ ಸಿನಿಮಾದಲ್ಲಿ ವರ್ಮಾ ಹೇಳಲು ಹೊರಟಿದ್ದಾರಂತೆ. ಈ ಕೋಬ್ರಾ ಸಿನಿಮಾದಲ್ಲಿ ತೆಲಂಗಾಣ ಸಿಎಂ ಕೆಸಿಆರ್ ಪಾತ್ರ ಸಹ ಇರಲಿದೆ ಎನ್ನಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎಂ ಕೀರವಾಣಿ ಕೋಬ್ರಾ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. 

ಹೀಗಾಗಿ, ವರ್ಮಾ ಹೇಳಲು ಹೊರಟಿರುವ ಆ ಕ್ರಿಮಿನಲ್ ಯಾರು ಎನ್ನುವ ಚರ್ಚೆ ಟಾಲಿವುಡ್ ಅಂಗಳದಲ್ಲಿ ಶುರುವಾಗಿದೆ. ಅವರೇ ಹೇಳಿಕೊಂಡಿರುವಂತೆ ಕೋಬ್ರಾ ಚಿತ್ರ ತೆಲಂಗಾಣದ ನಟೋರಿಯಸ್ ರೌಡಿ ಶೀಟರ್, ನಕ್ಸಲೈಟ್, ಪೊಲೀಸ್ ಇನ್ ಫಾರ್ಮರ್, ಗ್ಯಾಂಗ್ ಸ್ಟರ್ ಆಗಿದ್ದ ಓರ್ವ ಕ್ರಿಮಿನಲ್ ಕಥೆಯಂತೆ. ಅವನು ಸಾಯುವವರೆಗೂ ಆತ ಯಾರು? ಆತ ಎಷ್ಟು ಭಯಾನಕ ವ್ಯಕ್ತಿಯಾಗಿದ್ದ ಎಂದು ಯಾರಿಗೂ ತಿಳಿದಿರಲಿಲ್ಲ ಎಂದು ಆರ್ ಜಿವಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಈ ಚಿತ್ರದ ಕುರಿತ ಕುತೂಹಲನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಇನ್ನು ಆರ್ ಜಿವಿ ಬೆಳ್ಳಿ ಪರದೆ ಪ್ರವೇಶಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಕಿಚ್ಚಾ ಸುದೀಪ್ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಬಾಲಿವುಡ್ ಬಿಗ್ ಬಿ, ಸುದೀಪ್ ಟ್ವೀಟ್ ಮಾಡಿ 'ಆರ್ಜಿವಿ'ಗೆ ಸ್ವಾಗತ ಕೋರಿದ್ದಾರೆ. "ಫೈನಲಿ ಸರ್ಕಾರ್ ಸರಿಯಾದ ವೃತ್ತಿ ಆರಿಸಿಕೊಂಡಿದ್ದಾರೆ. ಆಲ್ ದಿ ಬೆಸ್ಟ್ ಸರ್ಕಾರ್. ನನಗೆ ಮತ್ತೊಬ್ಬ ಕಾಂಪಿಟೇಟರ್ .." ಎಂದು ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿ ವರ್ಮಾಗೆ ವಿಶ್ ಮಾಡಿದ್ದಾರೆ. ವರ್ಮಾ ನಿರ್ದೇಶನದ ರಣ್, ಫೂಂಕ್, ರಕ್ತಚರಿತ್ರ ಸಿನಿಮಾಗಳಲ್ಲಿ ಅಭಿನಯಿಸಿರುವ ಸುದೀಪ್, ಅಮಿತಾಬ್ ಬಚ್ಚನ್ ಟ್ವೀಟ್ನ ರೀಟ್ವೀಟ್ ಮಾಡಿ ಆರ್ಜಿವಿಗೆ ಶುಭಾಶಯ ತಿಳಿಸಿದ್ದಾರೆ.

ಅವರಿಬ್ಬರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ವರ್ಮಾ "ನೀವು, ಅಮಿತಾಬ್ ಹೇಳ್ತಿರೋದು ನೋಡ್ತಿದ್ರೆ, ನನಗೆ ಭಯವಾಗ್ತಿದೆ" ಅಂತ ಟ್ವೀಟ್ ಮಾಡಿದ್ದಾರೆ. 
Posted by: SVN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Mumbai, Bollywood, Ram Gopal Varma, Acting Debut, Cobra Movie, ಮುಂಬೈ, ಬಾಲಿವುಡ್, ರಾಮ್ ಗೋಪಾಲ್ ವರ್ಮಾ, ನಟನೆಗೆ ಪದಾರ್ಪಣೆ, ಕೋಬ್ರಾ ಚಿತ್ರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS