Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಬೆಂಗಳೂರು: ಏರೋ ಇಂಡಿಯಾ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ, 150ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲು!

ಕಾಶ್ಮೀರಕ್ಕೆ ಹೆಚ್ಚುವರಿ ಸೇನಾ ಸಿಬ್ಬಂದಿ ರವಾನೆ, ಪ್ರತ್ಯೇಕತಾವಾದಿಗಳಿಗೆ ಆರ್ಟಿಕಲ್ 35ಎ ರದ್ದತಿ ಭೀತಿ!

Mohammad Yasin Malik

ಭದ್ರತೆ ವಾಪಸ್ ಬೆನ್ನಲ್ಲೇ ಪ್ರತ್ಯೇಕತವಾದಿ ಮೊಹಮ್ಮದ್ ಯಾಸೀನ್ ಮಲಿಕ್ ಸೇರಿ 12 ಮಂದಿ ಬಂಧನ

ಬಿಎಸ್ ಯಡಿಯೂರಪ್ಪ-ಕೆಎಚ್ ಮುನಿಯಪ್ಪ

ಕೋಲಾರ: ಅತೃಪ್ತ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆ!

JDS logo

ಮೈಸೂರು ಜಿಲ್ಲಾ ಪಂಚಾಯಿತಿ ಜೆಡಿಎಸ್ ತೆಕ್ಕೆಗೆ: ಅಧ್ಯಕ್ಷರಾಗಿ ಪರಿಮಳಾ ಶ್ಯಾಮ್ ಅವಿರೋಧ ಆಯ್ಕೆ

Pulwama attack probe: The car terrorist used was red Maruti Eeco, 2010-11 make

ಪುಲ್ವಾಮ ದಾಳಿ ತನಿಖೆ: ಉಗ್ರರು ಆತ್ಮಾಹುತಿಗೆ ಬಳಸಿದ್ದು ರೆಡ್ ಮಾರುತಿ ಕಾರು

Shah Rukh Khan

ಪಾಕ್ ಕಲಾವಿದರನ್ನು ನಿಷೇಧಿಸಿದರೆ ದೇಶ ಬಿಡ್ತೀನಿ: ಶಾರುಖ್ ಖಾನ್ ಹೇಳಿಕೆಯ ವೈರಲ್ ಸುದ್ದಿ ಸುಳ್ಳು!

Siddharudha mutt

ಹುಬ್ಬಳ್ಳಿಯ ಸಿದ್ಧಾರೂಡ ಮಠದಲ್ಲಿ ರಾಜಕೀಯದ ಬಗ್ಗೆ ಮಾತನಾಡುವಂತಿಲ್ಲ!

A Still from  Yajamana

'ಸಿನಿಮಾ ನಿರ್ದೇಶನ ನನಗೆ ಹೊಸತಲ್ಲ, ರವಿಚಂದ್ರನ್ ಬಳಿ 10 ವರ್ಷ ಕೆಲಸ ಮಾಡಿದ್ದೇನೆ'

Rahul Gandhi

ಉದ್ಯೋಗ ಬಿಕ್ಕಟ್ಟನ್ನು ಮೋದಿ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ - ರಾಹುಲ್ ಗಾಂಧಿ

Ko Channabasappa

ಕುವೆಂಪು ಮಾರ್ಗದಲ್ಲಿ ನಡೆದ ಕನ್ನಡ ಸಾರಸ್ವತ ಲೋಕದ ನಕ್ಷತ್ರ ‘ಕೋಚೆ’

ಸಂಗ್ರಹ ಚಿತ್ರ

ಮೆದುಳು ನಿಷ್ಕ್ರಿಯ: ಇಬ್ಬರ ಅಂಗದಾನ 12 ಜನರ ಬಾಳಿಗೆ ಹೊಸ ಬೆಳಕು!

Casual Photo

ತಮಿಳುನಾಡು: ಟಿಕ್ ಟಾಕ್ ವಿಡಿಯೋ ವಿಚಾರವಾಗಿ ಸ್ನೇಹಿತನಿಂದಲೇ ಹತ್ಯೆಯಾದ ಯುವಕ!

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ನಮಗೆ ಯಾರನ್ನೂ ನೋಯಿಸುವ ಉದ್ದೇಶ ಇಲ್ಲ, ಯಾರಿಗೆ ಏನನ್ನಿಸುತ್ತೋ, ಅದನ್ನು ಮಾಡಲಿ: ಭಾರತಿ ವಿಷ್ಣುವರ್ಧನ್

Bharati Vishnuvardan in press meet

ಪತ್ರಿಕಾಗೋಷ್ಠಿಯಲ್ಲಿ ನೋವು ಹಂಚಿಕೊಂಡ ಭಾರತಿ ವಿಷ್ಣುವರ್ಧನ್

ಬೆಂಗಳೂರು: ನಮಗೆ ಯಾವುದೇ ಕಾರಣಕ್ಕೂ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿಲ್ಲ, ನಮಗೆ ಅದರ ಅಗತ್ಯವೂ ಇಲ್ಲ, ನಮ್ಮ ಯಜಮಾನ್ರು ವಿಷ್ಣುವರ್ಧನ್ ಸ್ಮಾರಕ ನಿರ್ಮಿಸುವುದಾದರೆ ಮೈಸೂರಿನಲ್ಲಿ ನಿರ್ಮಾಣ ಮಾಡಿ. ಅಲ್ಲಿ ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆ ಆರಂಭವಾಗಿದೆ, ಇಲ್ಲದಿದ್ದರೆ ಅಭಿಮಾನ್ ಸ್ಟುಡಿಯೋದಲ್ಲೇ ಮಾಡಿ. ನಮ್ಮದೇನೂ ವಿರೋಧವಿಲ್ಲ. ಆದರೆ ಯಾವುದೋ ಕಾರಣ ಕೊಟ್ಟು ಸುಮ್ಮನಿರಬಾರದು ಎಂದು ಭಾರತಿ ವಿಷ್ಣುವರ್ಧನ್ ಸರ್ಕಾರವನ್ನು ಕೋರಿಕೊಂಡಿದ್ದಾರೆ.

ವಿಷ್ಣುವರ್ಧನ್ ಸ್ಮಾರಕ ವಿಳಂಬವಾಗುತ್ತಿರುವ ಬಗ್ಗೆ ನಿನ್ನೆ ತಮ್ಮ ಪುತ್ರಿ ಕೀರ್ತಿ ಮತ್ತು ಅಳಿಯ ಅನಿರುದ್ಧ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಅವರು,  ನಮ್ಮ ಯಜಮಾನರು ತೀರಿಕೊಂಡು 9 ವರ್ಷಗಳಾದವು, ಸ್ಮಾರಕ ನಿರ್ಮಾಣ ಮಾಡುವ ವಿಚಾರವಾಗಿ ಹಲವು ಮುಖ್ಯಮಂತ್ರಿಗಳನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ಮನವಿಗಳನ್ನು ಕೊಟ್ಟು ಸಾಕಾಗಿ ಹೋಗಿದೆ, ಸರ್ಕಾರ ಇನ್ನೂ ಕೂಡ ಈ ಬಗ್ಗೆ ತೀರ್ಮಾನಕ್ಕೆ ಬಂದಿಲ್ಲ, ಬರಲು ಸಾಧ್ಯವಾಗುತ್ತಿಲ್ಲ ಎಂದಾದರೆ ಏನರ್ಥ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ವಿಷ್ಣುವರ್ಧನ್ ಗೆ ಸ್ಮಾರಕವೇ ಬೇಕಾಗಿಲ್ಲ. ನನ್ನ ಯಜಮಾನ್ರು ಎಲ್ಲಿ ಇದ್ದರೂ ಎಲ್ಲರ ಹೃದಯದಲ್ಲೂ ಶಾಶ್ವತವಾಗಿ ಇರುತ್ತಾರೆ. ಅವರ ನಿಜವಾದ ಅಭಿಮಾನಿಗಳಿಗೆ ಎಷ್ಟು ವರ್ಷಗಳಾದರೂ ಅವರ ಮೇಲಿನ ಪ್ರೀತಿ, ಅಭಿಮಾನ ಕಡಿಮೆಯಾಗುವುದಿಲ್ಲ. ಅಷ್ಟಕ್ಕೂ ನಮ್ಮ ಲಾಭಕ್ಕೆ ಸ್ಮಾರಕ ನಿರ್ಮಾಣವನ್ನು ನಾವು ಕೇಳುತ್ತಿಲ್ಲ ಎಂದು ಹೇಳಿದರು.

ಅಭಿಮಾನ್ ಸ್ಟುಡಿಯೋದ ವಿಚಾರ ನ್ಯಾಯಾಲಯದಲ್ಲಿ ಇದೆ. ಅದು ಇತ್ಯರ್ಥ ಆಗುವುದು ಯಾವ ಕಾಲಕ್ಕೋ. ಇಲ್ಲಾ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕಾ ಅಲ್ಲೇ ಮಾಡಿ. ಅದನ್ನು ಬಿಟ್ಟು ಅನಾವಶ್ಯಕವಾಗಿ ಕಾಲ ಕಳೆಯಬೇಡಿ. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಂತ್ಯಸಂಸ್ಕಾರದ ಬಳಿಕ ಸ್ಮಾರಕದ ಬಗ್ಗೆ ಯಾರು ಮಾತನಾಡಿರಲಿಲ್ಲ. ಇದರಿಂದಾಗಿ ನನಗೆ ತುಂಬಾ ಸಂಕಟವಾಗಿತ್ತು. ಬಳಿಕ ನಾನೇ 7 ಲಕ್ಷ ರೂ, ಖರ್ಚು ಮಾಡಿ ಸ್ವಂತ ಹಣದಲ್ಲಿ ಪುಣ್ಯಭೂಮಿ ನಿರ್ಮಿಸಿದ್ದೇವು. ಅಲ್ಲಿ ಆರೋಗ್ಯ ಶಿಬಿರ, ಸಾಂಸ್ಕೃತಿಕ ಚಟುವಟಿಕೆ ನಡೆಸಿ ವಿಷ್ಣುವರ್ಧನ್ ಪುಣ್ಯಭೂಮಿ ಇದೆ ಅಂತಾ ಜನರಿಗೆ ಗೊತ್ತಾಯಿತು ಎಂದು ನೋವು ತೋಡಿಕೊಂಡರು.

ವಿಷ್ಣುಗೆ ಮೈಸೂರು ಅಂದರೆ ತುಂಬಾ ಇಷ್ಟ ಹೀಗಾಗಿ ಮೈಸೂರಿನಲ್ಲಿ ಸ್ಮಾರಕ ಮಾಡಿ ಅಂತ ಕೇಳಿಕೊಳುತ್ತಿದ್ದೇವೆ ಅಷ್ಟೇ. ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಸಿಗದ ಕಾರಣಕ್ಕೆ ಸರ್ಕಾರವೇ ಮೈಸೂರಿನಲ್ಲಿ ಜಾಗ ಗೊತ್ತುಪಡಿಸಿದೆ. ಹೀಗಾಗಿ ನಾವು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದೇವೆ. ಅಲ್ಲಿಯೂ ಕೂಡ ಅಡ್ಡಿಯಾಗುತ್ತಿದೆ. ಈ ಜಾಗ ನಮಗೆ ಜಾಗಬೇಕು ಎಂದು ರೈತರು ಅಂತಿದ್ದಾರೆ. ಯಾರೊಬ್ಬರೂ ಕಾಳಜಿ ತೆಗೆದುಕೊಳ್ಳದಿದ್ದರೆ ಹೇಗೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸರ್ಕಾರವನ್ನ ಪ್ರಶ್ನೆ ಮಾಡಿದರು.

ಕೊನೆಯದಾಗಿ, ಇದರಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ, ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ, ಯಾರಿಗೆ ಏನನ್ನಿಸುತ್ತೋ ಏನೋ ಅದನ್ನು ಮಾಡಲಿ ಎಂದರು.

ಇದೇ ವೇಳೆ ಮಾತನಾಡಿದ ವಿಷ್ಣುವರ್ಧನ್ ಪುತ್ರಿ ಕೀರ್ತಿ, ಮೊದಲು ನಮ್ಮ ತಂದೆಯನ್ನು ಟಾರ್ಗೆಟ್ ಮಾಡುತ್ತಿದ್ದರು. ಈಗ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಯಾಕ್ ಸರ್..ನಾವು ಒಂಬತ್ತು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದೇವೆ. ಅಂಬರೀಷ್ ಅಂಕಲ್ ಸಮಾಧಿ ಮಾಡಲು ಸುಮಲತಾ ಅವರ ಬಳಿ ಕೇಳಿ ಕಂಠೀರವ ಸ್ಟುಡಿಯೋ ಜಾಗ ಆಯ್ಕೆ ಮಾಡಿದರು, ನಮಗೆ ಮಾತ್ರ ಯಾಕೆ ಎಲ್ಲಾ ಕಚೇರಿ ಸುತ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 9 ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ನೀಡುತ್ತಲೇ ಬಂದಿದ್ದೇವೆ. ಅಪ್ಪನ ಸ್ಮಾರಕದ ಯಾರೊಬ್ಬರೂ ಮಾತನಾಡಲಿಲ್ಲ. ಸಿಎಂ ಗಳು ಬದಲಾಗುತ್ತಾ ಬಂದರೇ ಹೊರತು, ಯಾರೊಬ್ಬರೂ ಸ್ಮಾರಕದ ಬಗ್ಗೆ ಯೋಚನೆ ಮಾಡಲಿಲ್ಲ. ಕುಮಾರಸ್ವಾಮಿ ಅವರು ಈಗ ನೀಡಿರುವ ಭರವಸೆಯನ್ನು ಈ ಹಿಂದೆಯೇ ನೀಡಬಹುದಿತ್ತು. ನಮ್ಮನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಿದರು. ಸ್ಮಾರಕ ನಿರ್ಮಾಣ ಮಾಡಿದರೆ ನಮಗೆ ಏನು ಸಿಗುತ್ತದೆ. ನಾವೇನು ಅಲ್ಲಿಯೇ ಇರುತ್ತೀವಾ? ಕೆಲವರು ಅಪ್ಪಾಜಿಯನ್ನು ಕಡೆಗಣಿಸುತ್ತಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡುವವರು ನಮ್ಮ ಜೊತೆಗೆ ಕುಳಿತು ಚರ್ಚೆ ಮಾಡಲಿ. ಪರಿಸ್ಥಿತಿ ಏನು ಎನ್ನುವುದು ಅರ್ಥವಾಗುತ್ತದೆ ಎಂದು ಹೇಳಿದರು.

ವಿಷ್ಣು ಸ್ಮಾರಕದ ಬಗ್ಗೆ ತಾವು ನೀಡಿದ್ದ ಹೇಳಿಕೆ ವಿವಾದವೆದ್ದ ಹಿನ್ನಲೆಯಲ್ಲಿ ನಿನ್ನೆ ಮಾತನಾಡಿದ ನಟ ಅನಿರುದ್ಧ, ನಾನು ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಥವಾ ಬೇರೆ ಸಿಎಂಗಳ ವಿರುದ್ಧ ವೈಯಕ್ತಿಕವಾಗಿ ಹೇಳಿದ್ದಲ್ಲ, ನಮಗಾದ ನೋವು, ಅನ್ಯಾಯದ ಬಗ್ಗೆ ಮಾತನಾಡುವಾಗ ಉದ್ವೇಗದಿಂದ ಆ ಪದ ಬಳಕೆ ಬಂತು. ಇದರಿಂದ ಸಿಎಂ ಕುಮಾರಸ್ವಾಮಿಯವರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಮುಖ್ಯಮಂತ್ರಿಗಳ ಕ್ಷಮೆ ಕೋರುತ್ತೇನೆ ಎಂದರು.

ಅಪ್ಪಾಜಿ ಸ್ಮಾರಕ ನಿರ್ಮಾಣ ಮೈಸೂರಿನಲ್ಲಿ ಆಗುವ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ಮತ್ತು ಆ ಜಾಗದ ಸಮಸ್ಯೆ ಇತ್ಯರ್ಥಪಡಿಸುವುದಕ್ಕೆ ಡಿಸೆಂಬರ್ 30ರವರೆಗೆ ಗಡುವು ನೀಡುತ್ತೇವೆ. ಆ ನಂತರವೂ ಯಾವುದೇ ಮುಂದಡಿಯಿಡದಿದ್ದರೆ ಅಭಿಮಾನಿಗಳ ಜೊತೆ ಹೋರಾಟಕ್ಕೆ ಮುಂದಾಡುತ್ತೇವೆ ಎಂದರು.

Posted by: SUD | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Vishnuvardan memorial, Bharati Vishnuvardan, ವಿಷ್ಣುವರ್ಧನ್ ಸ್ಮಾರಕ, ಭಾರತಿ ವಿಷ್ಣುವರ್ಧನ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS