ಬೆಂಗಳೂರು: ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು, ಹಾಡೊಂದರ ಚಿತ್ರೀಕರಣಕ್ಕಾಗಿ ನಟ ಉಪೇಂದ್ರ ಮತ್ತು ರಚಿತಾ ರಾಮ್ ಶೀಘ್ರವೇ ದುಬೈಗೆ ತೆರಳಲಿದ್ದಾರೆ.
ನಿರ್ದೇಶಕ ಆರ್.ಚಂದ್ರು ಈಗಾಗಲೇ ದುಬೈಗೆ ತೆರಳಿದ್ದು, ಲೋಕೇಶನ್ ಹುಡುಕಾಟದಲ್ಲಿದ್ದಾರೆ, ಪ್ರೀತ್ಸೆ ಸಿನಿಮಾದ ಪ್ರೀತ್ಸೆ ಪ್ರೀತ್ಸೆ ಹಾಡಿನ ಕೆಲವು ಸಾಲುಗಳನ್ನು ಇಲ್ಲಿಯೇ ಶೂಟಿಂಗ್ ಮಾಡಲು ಚಂದ್ರು ಪ್ಲಾನ್ ಮಾಡಿದ್ದಾರೆ.
ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ಬರುತ್ತಿದ್ದು, ಸದ್ಯ ಸಿನಿಮಾ ಪೋಸ್ಚ್ ಪ್ರೊಡಕ್ಷನ್ ಹಂತದಲ್ಲಿದೆ, ನಿರ್ದೇಶಕ ಚಂದ್ರು ಅವರೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ, ಫೆಬ್ರವರಿ 8 ರಂದು ಚಂದ್ರು ಹುಟ್ಟುಹಬ್ಬವಿದ್ದು, ಅಂದೇ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ, ಅಧಿಕೃತ ಮಾಹಿತಿ ಮಾತ್ರ ಹೊರಬೀಳಬೇಕಿದೆ.