Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
HD Devegowda mocks PM Modi over NDA running coalition governments in many states

ನನಗೆ 86 ವರ್ಷ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ದೇವೇಗೌಡ

ಗೋವಾ ಸಿಎಂ ಪ್ರಮೋದ್ ಸಾವಂತ್

ಗೋವಾ ಸಿಎಂ ಪ್ರಮೋದ್ ಸಾವಂತ್ ಅಧಿಕಾರ ಸ್ವೀಕಾರ; ನಾಳೆ ವಿಶ್ವಾಸಮತ ಯಾಚನೆ

PCB pays USD 1.6 million compensation to BCCI

ಬಿಸಿಸಿಐಗೆ 1.6 ಮಿಲಿಯನ್ ಪರಿಹಾರ ನೀಡಿದ ಪಿಸಿಬಿ

Radhakrishna Vikhe Patil

ಮಹಾರಾಷ್ಟ್ರ ಕಾಂಗ್ರೆಸ್ ಗೆ ಬಿಗ್ ಶಾಕ್: ರಾಧಾಕೃಷ್ಣ ವಿಖೆ ಪಾಟೀಲ್ ರಾಜಿನಾಮೆ

Ajit Doval

ಪುಲ್ವಾಮಾ ಪ್ರತೀಕಾರ ಇನ್ನೂ ಮುಗಿದಿಲ್ಲ, ಪಾಕ್ ಗೆ ಮತ್ತಷ್ಟು ಸರ್ಜಿಕಲ್ ಸ್ಟ್ರೈಕ್ ಎಚ್ಚರಿಕೆ ಕೊಟ್ಟ ಅಜಿತ್ ಧೋವಲ್!

prashanth Kishore And Chandrababu Naidu

ಬಿಹಾರದ ಡಕಾಯಿತ ಎಂಬ ನಾಯ್ಡು ಟೀಕೆಗೆ ಪ್ರಶಾಂತ್ ಕಿಶೋರ್ ಪ್ರತ್ಯುತ್ತರ!

Cheating case Filed against actress Pooja Gandhi

ಹೋಟೆಲ್​ ಬಿಲ್​ ಕೊಡದೆ ಕಾಲ್ಕಿತ್ತ 'ಮಳೆ ಹುಡುಗಿ'; ನಟಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲು!

Despite Sheila Dikshit

ಶೀಲಾ ದೀಕ್ಷಿತ್ ವಿರೋಧದ ನಡುವೆಯೂ ಆಪ್ ಜತೆ ಮೈತ್ರಿಗೆ ಮುಂದಾದ ಕಾಂಗ್ರೆಸ್

Amit Shah

ಯುವಜನತೆಯ ಸ್ವಾತಂತ್ರ್ಯವನ್ನು ಹತ್ತಿಕ್ಕಬೇಡಿ; ಬೆಂಗಳೂರಿನಲ್ಲಿ ಟೆಕ್ಕಿಗಳ ಬಂಧನಕ್ಕೆ ಅಮಿತ್ ಶಾ ಕಿಡಿ

Anil vij

ನಿಮ್ಮ ಹೆಸರಿನ ಜೊತೆಗೆ #ಪಪ್ಪು ಎಂದು ಸೇರಿಸಿಕೊಳ್ಳಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಹರ್ಯಾಣ ಸಚಿವ ಸಲಹೆ

IPL will be crucial for World Cup selection: BCCI

ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆಗೆ ಐಪಿಎಲ್ ನಿರ್ಣಾಯಕ: ಬಿಸಿಸಿಐ

yogi adityanath

ನನ್ನ ಸರ್ಕಾರದ ಆಡಳಿತಾವಧಿ ಉತ್ತರ ಪ್ರದೇಶದಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ: ಯೋಗಿ ಆದಿತ್ಯನಾಥ್

Ericsson payout case: Mukesh Ambani comes to brother Anil

ಎರಿಕ್ಸನ್‌ ಇಂಡಿಯಾ ಪ್ರಕರಣ: ನೆರವು ನೀಡಿದ ಸಹೋದರ ಮುಖೇಶ್ ಅಂಬಾನಿಗೆ ಅನಿಲ್ ಅಂಬಾನಿ ಧನ್ಯವಾದ!

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

#MeToo ಆರೋಪ ಮಾಡಿದ್ದವರು ಅವಕಾಶಕ್ಕಾಗಿ ಖ್ಯಾತನಾಮರೊಂದಿಗೆ ಅರೆಬೆತ್ತಲಾಗಿ ಕುಳಿತಿದ್ದರು: ಹರ್ಷಿಕಾ ಗಂಭೀರ ಆರೋಪ

2 ಕೈ ಸೇರಿದರೆ ಚಪ್ಪಾಳೆ, MeToo ದುರ್ಬಳಕೆಯಾಗುತ್ತಿದ್ದು, ಇದರ ವಿರುದ್ಧ ಪುರುಷರು #ವಿಟೂ ಮಾಡುವ ಸಮಯ
MeToo Actress were found half Nude with famous people says Harshika Poonacha

ಸಂಗ್ರಹ ಚಿತ್ರ

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ಮೀಟೂ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು, ನಟ ಅರ್ಜುನ್ ಸರ್ಜಾ ಪರ ನಿಂತಿದ್ದ ನಟಿ ಹರ್ಷಿಕಾ ಪೂಣಚ್ಛ ಇದೀಗ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಪ್ರಸ್ತುತ #MeToo ಆರೋಪ ಮಾಡುತ್ತಿರುವರು ಈ ಹಿಂದೆ ಅವಕಾಶಕ್ಕಾಗಿ ಖ್ಯಾತನಾಮರೊಂದಿಗೆ ಅರೆಬೆತ್ತಲಾಗಿ ಕುಳಿತಿದ್ದರು ಎಂದು ಹರ್ಷಿಕಾ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಸುಧೀರ್ಘವಾಗಿ ಬರೆದಿರುವ ಹರ್ಷಿಕಾ, 'ನಾನು ಈಗ ನಡೆಯುತ್ತಿರುವ ಮೀಟೂ ಅಭಿಯಾನದ ಬಗ್ಗೆ ನೋಡುತ್ತಿದ್ದೇನೆ. ನಾನು ಒಂದು ಸದೃಢ ಮಹಿಳೆಯಾಗಿ ನಾನು ಚಿತ್ರರಂಗವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಮಹಿಳೆಯರಿಗೆ ಗೌರವ ನೀಡುವುದು ಸರಿ. ಆದರೆ ಕೆಲವು ನಟಿಯರು ತಮ್ಮ ಫೆಮಿನಿಟಿ ಬಳಸಿ ಪಬ್ಲಿಸಿಟಿ ಪಡೆಯುತ್ತಿದ್ದಾರೆ. ಪಬ್ಲಿಸಿಟಿ ಪಡೆಯುವುದು ಒಳ್ಳೆಯದು. ಆದರೆ ಅದಕ್ಕೆ ಒಂದು ಮಿತಿ ಇರುತ್ತದೆ. ಒಬ್ಬರ ಕುಟುಂಬ ಒಡೆದು, ಅವರ ಪತ್ನಿ, ಮಕ್ಕಳಿಗೆ ನಾಚಿಕೆಯಾಗುವಂತೆ ಮಾಡುತ್ತಾರೆ. 15-20 ವರ್ಷದಿಂದ ಆ ನಟರು ಚಿತ್ರರಂಗದಲ್ಲಿ ಕಷ್ಟಪಟ್ಟು ಸಂಪಾದಿಸಿದ್ದ ಹೆಸರನ್ನು ಕ್ಷಣಮಾತ್ರದಲ್ಲಿ ಒಂದು ಹೇಳಿಕೆ ಮೂಲಕ ಹಾಳು ಮಾಡುತ್ತಾರೆ ' ಎಂದು ಹೇಳಿದ್ದಾರೆ.

ಅಲ್ಲದೆ, 'ನಾನು 10 ವರ್ಷದಿಂದ  ಚಿತ್ರರಂಗದಲ್ಲಿದ್ದೀನಿ. ನನ್ನ ಕಣ್ಣಿನಿಂದ ನಾನು ಎಲ್ಲವನ್ನೂ ನೋಡಿದ್ದೇನೆ. ಸಾಕಷ್ಟು ನಟಿಯರು ಚಿತ್ರರಂಗದಲ್ಲಿ ಮೇಲೆ ಬರಲು ಏನು ಬೇಕಾದರು ಮಾಡುತ್ತಾರೆ. ಪುರುಷರಿಗೆ ಎಲ್ಲ ಸ್ವಾತ್ರಂತ್ಯ ಕೊಟ್ಟು ಅವರ ಜೊತೆ ನಗುತ್ತಾ, ಸಲುಗೆಯಿಂದ ತಿರುಗಾಡುತ್ತಾರೆ. ನಂತರ ಪಬ್ಲಿಸಿಟಿಗಾಗಿ ಅವರ ಮೇಲೆ ಆರೋಪ ಮಾಡುತ್ತಾರೆ. ಆರೋಪ ಮಾಡುವ ನಟಿಯರು ಈ ಹಿಂದೆ ಗಾಂಜಾ ಸೇವಿಸಿ, ವಿದೇಶದಲ್ಲಿ ಹಾಡಿನ ಶೂಟಿಂಗ್ ಇದ್ದಾಗ ನಟ ಅಥವಾ ಖ್ಯಾತ ವ್ಯಕ್ತಿ ಮೈಮೇಲೆ ಬೀಳುವುದ್ದನ್ನು ನಾನು ಸ್ವತಃ ನೋಡಿದ್ದೇನೆ. ಕೆಲವು ವಿಷಯಗಳನ್ನು ನಾನು ಹೇಳುವುದನ್ನು ಇಷ್ಟಪಡುವುದಿಲ್ಲ'.

'ಚಿತ್ರರಂಗದಲ್ಲಿ ಹೆಸರು ಮಾಡುವವರೆಗೂ ಅವರು ಏನೂ ಮಾಡಿದರು ನಿಮಗೆ ಸರಿ ಎಂದು ಎನಿಸುತಿತ್ತು. ಚಿತ್ರರಂಗದಲ್ಲಿ ಹೆಸರು ಮಾಡಿದ ಮೇಲೆ ಇನ್ನಷ್ಟು ಯಶಸ್ಸಿಗಾಗಿ ನೀವು ಅವರ ಮೇಲೆ ಆರೋಪ ಮಾಡುತ್ತೀರಿ. ಕೆಲ ವರ್ಷಗಳ ಹಿಂದೆ ಈ ರೀತಿ ನಡೆಯುವಾಗ ನಿಮಗೆ ಮೀಟೂ ಏನಾಗಿತ್ತು. ಆ ಸಮಯದಲ್ಲಿ ನಿಮಗೆ ಇದೆಲ್ಲ ಸರಿ ಅನ್ನಿಸಿತ್ತು. ಆದರೆ ಈಗ ನಿಮಗೆ ಮಹಿಳೆಯರನ್ನು ಈ ಪುರುಷರಿಂದ ರಕ್ಷಿಸಬೇಕು ಎಂದು ಅನಿಸುತ್ತಿದ್ದೆ ಅಲ್ವಾ. ನಾನ್ಸೆನ್ಸ್, ಇದು ಅಟ್ಟರ್ ನಾನ್ಸೆನ್ಸ್' ಎಂದು ಹರ್ಷಿಕಾ ಪೋಸ್ಟ್ ಮಾಡಿದ್ದಾರೆ.

ಅಂತೆಯೇ ತಮ್ಮ ಪೋಸ್ಟ್ ನಲ್ಲಿ ನಟಿ ಹರ್ಷಿಕಾ, 'ಹೆಸರಾಂತ ನಿರ್ಮಾಪಕರೊಬ್ಬರು ನನಗೆ ಒಂದು ವಿಡಿಯೋವನ್ನು ತೋರಿಸಿದ್ದರು. ಆ ವಿಡಿಯೋದಲ್ಲಿ ಈಗ ಮೀಟೂ ಎಂದು ಅಭಿಯಾನ ಮಾಡುತ್ತಿರುವ ನಟಿಯರು ಖ್ಯಾತ ವ್ಯಕ್ತಿ ಭುಜದ ಮೇಲೆ ಮಲಗಿ ಖುಷಿಯಾಗಿ ಗಾಂಜಾ ಹೊಡೆಯುತ್ತಾ ಇನ್ನೊಬ್ಬರ ಹೆಸರನ್ನು ಹೇಗೆ ಹಾಳು ಮಾಡಬೇಕೆಂದು ಮಾತನಾಡಿರುವುದನ್ನು ನೋಡಿದ್ದೇನೆ. ಅಲ್ಲದೇ ಮತ್ತೊಂದು ವಿಡಿಯೋದಲ್ಲಿ ಆ ಖ್ಯಾತ ನಟನೇ ಅರ್ಧ ನಗ್ನಳಾಗಿರುವ ನಟಿಯ ವಿಡಿಯೋ ಮಾಡುತ್ತಿರುತ್ತಾರೆ. ಆ ವಿಡಿಯೋದಲ್ಲಿ ನಟಿಯೊಬ್ಬಳು ನಗುತ್ತಾ ನಿನ್ನ ಮುಂದಿನ ಚಿತ್ರದಲ್ಲೂ ನಾನೇ ನಟಿ ಓಕೆನಾ ಎಂದು ಹೇಳುತ್ತಾಳೆ. ನಾನು 10 ವರ್ಷದಿಂದ ಚಿತ್ರರಂಗದಲ್ಲಿ ಇದ್ದೇನೆ. ಇದೂವರೆಗೂ ಯಾರೂ ನನ್ನನ್ನು ಬೆರಳು ಮಾಡಿ ತೋರಿಸಲಿಲ್ಲ. ನಾನು ಈಗಲೂ ಕ್ಲೀನ್ ಹಾಗೂ ಪ್ಯೂರ್ ಆಗಿದ್ದೀನಿ. ನಾನು ದೊಡ್ಡ ನಟರ ಜೊತೆ ಹಲವು ಚಿತ್ರಗಳನ್ನು ಮಿಸ್ ಮಾಡಿಕೊಂಡೆ. ಆದರೆ ನಾನು ಈಗ ಖುಷಿಯಾಗಿದ್ದೇನೆ. ಅಲ್ಲದೇ ಎಲ್ಲ ಚಿತ್ರರಂಗದ ಕಲಾವಿದರ ಜೊತೆ ನನ್ನ ಬಾಂಧವ್ಯ ಚೆನ್ನಾಗಿದೆ.

'ನಾನು ಈಗ ಹೇಳಿರುವುದನ್ನು ಕೆಲವರು ವಿರೋಧಿಸಬಹುದು. ಆದರೆ ಇದು ನಿಜ. ಕೆಲವು ಪುರುಷರು ಕೆಟ್ಟವರು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅವರು ನಿಮ್ಮನ್ನು ರೇಪ್ ಮಾಡುವುದಿಲ್ಲ. ನೀವು ಧೈರ್ಯವಾಗಿ ಇಲ್ಲ ಎಂದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗುತ್ತದೆ. ಈಗ ಪುರುಷರು #ವಿಟೂ ಮಾಡುವ ಸಮಯ. ಏಕೆಂದರೆ ಸಾಕಷ್ಟು ನಟಿಯರು ಹೆಸರು ಪಡೆಯಲು ಖ್ಯಾತ ವ್ಯಕ್ತಿಗಳನ್ನು ಬಳಸಿಕೊಂಡಿದ್ದಾರೆ. ಅವರಿಗೆ ಬೇಕಾಗಿದ್ದು ಸಿಕ್ಕಿದ ನಂತರ ಅವರನ್ನು ದೂರ ತಳ್ಳಿ ಅವರ ಮೇಲೆಯೇ ಮೀಟೂ ಆರೋಪ ಮಾಡುತ್ತಿದ್ದಾರೆ ಎಂದು ಹರ್ಷಿಕಾ ಹೇಳಿದ್ದಾರೆ.
ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Bengaluru, Sandalwood, MeToo, Arjun Sarja, Sruthi Hariharan, Harshika Poonacha, ಬೆಂಗಳೂರು, ಸ್ಯಾಂಡಲ್ ವುಡ್, ಮೀಟೂ, ಅರ್ಜುನ್ ಸರ್ಜಾ, ಶೃತಿ ಹರಿಹರನ್, ಹರ್ಷಿಕಾ ಪೂಣಚ್ಛ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS