Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Ambareesh

ನಾಳೆ ಅಂಬರೀಶ್ ಅಂತ್ಯ ಸಂಸ್ಕಾರ: ಬೆಂಗಳೂರು ನಗರದಾದ್ಯಂತ ಬಿಗಿ ಬಂದೋಬಸ್ತ್

Virat Kohli

ಆಸ್ಟ್ರೇಲಿಯಾ ವಿರುದ್ಧ 3 ನೇ ಟಿ20 ಪಂದ್ಯದಲ್ಲಿ ಗೆದ್ದ ಭಾರತ: ಸರಣಿ ಸಮಬಲ

Jaffer Sharief

ನಟ ಅಂಬರೀಶ್ ಬೆನ್ನಲ್ಲೇ ಮತ್ತೋರ್ವ ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ವಿಧಿವಶ!

ಆಸ್ಟ್ರೇಲಿಯಾ ವಿರುದ್ಧದ 3 ನೇ ಟಿ20 ಪಂದ್ಯದಲ್ಲಿ ದಾಖಲೆ ನಿರ್ಮಿಸಿದ ಸ್ಪಿನ್ನರ್ ಕೃನಾಲ್ ಪಾಂಡ್ಯ

ಆಸ್ಟ್ರೇಲಿಯಾ ವಿರುದ್ಧದ 3 ನೇ ಟಿ20 ಪಂದ್ಯದಲ್ಲಿ ದಾಖಲೆ ನಿರ್ಮಿಸಿದ ಸ್ಪಿನ್ನರ್ ಕೃನಾಲ್ ಪಾಂಡ್ಯ

Sri Lanka, England

20 ವರ್ಷಗಳ ಹಿಂದಿನ ದಾಖಲೆ ಮುರಿದ ಇಂಗ್ಲೆಂಡ್, ಶ್ರೀಲಂಕಾ ಸ್ಪಿನ್ನರ್‌ಗಳು!

File Image

ಅರುಣಾಚಲ ಪ್ರದೇಶ: ಸಜೀವ ಶಲ್ ಸ್ಪೋಟಗೊಂಡು ಮೂರು ಮಕ್ಕಳು ಸಾವು

At least 30 drown in Uganda pleasure boat disaster

ಉಗಾಂಡಾ: ದೋಣಿ ಮುಳುಗಿ ಕನಿಷ್ಠ 30 ಮಂದಿ ಸಾವು, ಸಂಭ್ರಮದ ವಿಹಾರದಲ್ಲಿದ್ದವರ ಕೈ ಬೀಸಿ ಕರೆದ ಜವರಾಯ

Saina Nehwal, Sameer Verma

ಸೈಯದ್ ಮೋದಿ ಚಾಂಪಿಯನ್ ಶಿಪ್:ಚಾಂಪಿಯನ್ ಪಟ್ಟ ಉಳಿಸಿಕೊಂಡ ಸಮೀರ್, ಸೈನಾಗೆ ರನ್ನರ್ ಅಪ್ ಸ್ಥಾನ

Nine people dead, 25 injured as bus falls into Jalal river in Himachal Pradesh

ಹಿಮಾಚಲ ಪ್ರದೇಶದಲ್ಲಿ ಭೀಕರ ಬಸ್ ಅಪಘಾತ: 9 ಸಾವು, 25 ಮಂದಿಗೆ ಗಾಯ

Australian women beat England by eight wickets, breeze to fourth Women

ಮಹಿಳಾ ವಿಶ್ವ ಟಿ20: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 8ವಿಕೆಟ್ ಜಯ, 4ನೇ ಬಾರಿ ಚಾಂಪಿಯನ್ ಆದ ಕಾಂಗರೂ ಪಡೆ

Bhagwat

ಸುಪ್ರೀಂ ಕೋರ್ಟ್ ಗೆ ರಾಮ ಮಂದಿರ ಆದ್ಯತೆ ಅಲ್ಲದಿದ್ದರೆ ಸರ್ಕಾರ ಕಾನೂನು ಜಾರಿಗೊಳಿಸಲಿ: ಭಾಗ್ವತ್ ಆಗ್ರಹ

Modi

ರಾಹುಲ್ ಗಾಂಧಿ ತಂದೆ ಎಲ್ಲರಿಗೂ ಗೊತ್ತು ಆದರೆ ಮೋದಿ ತಂದೆಯ ಬಗ್ಗೆ ಯಾರಿಗೂ ಗೊತ್ತಿಲ್ಲ: ಕಾಂಗ್ರೆಸ್ ನ ಮಾಜಿ ಸಚಿವ

BJP

ರಾಮ ಭಕ್ತರಿಗಾಗಿ ಬಿಜೆಪಿ ಯುವ ಮೋರ್ಚಾದಿಂದ ರಾಮ್ ಧನ್ ರಿಂಗ್ ಟೋನ್

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಎಲ್ಲಾ ಭಾಷೆ, ವೀಕ್ಷಕರಿಗೆ ತಲುಪುವ ಚಿತ್ರ ರಾಜು ಕನ್ನಡ ಮೀಡಿಯಂ: ನರೇಶ್ ಕುಮಾರ್

Artist in Raju Kannada medium

ರಾಜು ಕನ್ನಡ ಮೀಡಿಯಂನ ಕಲಾವಿದರು

ಫಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನರೇಶ್ ಕುಮಾರ್ ಅವರ ರಾಜು ಕನ್ನಡ ಮೀಡಿಯಂ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇದೀಗ ತೆಲುಗಿನಲ್ಲಿ ರಿಮೇಕ್ ಸಿನಿಮಾ ತಯಾರಿಸಲು ನಿರ್ದೇಶಕರು ಮುಂದಾಗಿದ್ದಾರೆ.

ಕನ್ನಡ ಚಿತ್ರವೊಂದು ಇನ್ನೊಂದು ಭಾಷೆಯಲ್ಲಿ ತಯಾರಾಗುವುದು ನಮಗೆ ಖುಷಿಯ ವಿಚಾರ. ಮತ್ತು ಅದೇ ನಿರ್ದೇಶಕರನ್ನು ಇನ್ನೊಂದು ಭಾಷೆಯ ರಿಮೇಕ್ ಚಿತ್ರದಲ್ಲಿ ಮಾಡಿಸುತ್ತಿರುವುದು ಇನ್ನೂ ಸಂತಸದ ಸಂಗತಿ ಎನ್ನುತ್ತಾರೆ ನರೇಶ್ ಕುಮಾರ್.

ಫಸ್ಟ್ ರ್ಯಾಂಕ್ ರಾಜು ಚಿತ್ರದಲ್ಲಿ ನಟಿಸಿದ ನಟ ಗುರು ನಂದನ್, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಮತ್ತು ಛಾಯಾಗ್ರಹಣ ಶೇಖರ್ ಚಂದ್ರ ಕೂಡ ರಾಜು ಕನ್ನಡ ಮೀಡಿಯಂನಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಇರುವ ಇತರರು ಪ್ರಮುಖರೆಂದರೆ ನಿರ್ಮಾಪಕ ಕೆ.ಸುರೇಶ್, ನಟಿಯರಾದ ಆವಂತಿಕಾ ಶೆಟ್ಟಿ ಮತ್ತು ಆಶಿಕಾ ರಂಗನಾಥ್.

ಗ್ರಾಮದಿಂದ ನಗರಕ್ಕೆ ವರ್ಗಾವಣೆಯಾಗುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಜೀವನ ಮತ್ತು ಅದನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಕೂಡ ಚಿತ್ರದಲ್ಲಿ ತೋರಿಸಲಾಗಿದೆ. ನನ್ನ ಮೊದಲ ಚಿತ್ರದ ಮುಂದುವರಿದ ಪಾತ್ರವೇ ರಾಜು. ಚಿತ್ರದಲ್ಲಿ ರಾಜುವಿನ ಪಾತ್ರ ಕವಿಯಾಗಿದ್ದು, ಕನ್ನಡ ಭಾಷೆಯ ಬಗ್ಗೆ ಅದಮ್ಯ ಪ್ರೀತಿ ಇರುವವನಾಗಿದ್ದಾನೆ. ಕಾಸ್ಮೊಪಾಲಿಟನ್ ನಗರ ಬೆಂಗಳೂರಿಗೆ ಬಂದು ಬದುಕಲು ಕಷ್ಟ ಪಡುವುದನ್ನು ರಾಜು ಕನ್ನಡ ಮೀಡಿಯಂನಲ್ಲಿ ತೋರಿಸಲಾಗಿದೆ.

ಚಿತ್ರದಲ್ಲಿ ಕರ್ನಾಟಕದ ಕೆಲವು ಗೊತ್ತಿಲ್ಲದ ಜನರಿಗೆ ಚಿರಪರಿಚಿತವಲ್ಲದ ತಾಣಗಳನ್ನು ನಿರ್ದೇಶಕರು ಇಲ್ಲಿ ತೋರಿಸಿದ್ದಾರಂತೆ. 

ಚಿತ್ರದ ಮತ್ತೊಂದು ಧನಾತ್ಮಕ ಅಂಶ ಸ್ಟಾರ್ ನಟ ಸುದೀಪ್ ಅವರನ್ನು ಕರೆತಂದಿರುವುದು. ಹಲವು ಬಾರಿ ಯೋಚಿಸಿ ಚಿತ್ರದ ಕಥೆ ಸಿದ್ದವಾದ ನಂತರ ಸುದೀಪ್ ರನ್ನು ಭೇಟಿ ಮಾಡಿದೆವು. ಆ ಪಾತ್ರಕ್ಕೆ ಅವರು ಹೊಂದಿಕೆಯಾಗುತ್ತಾರೆಂದು ಗೊತ್ತಾದ ನಂತರ ಒಪ್ಪಿದರು. ಚಿತ್ರದಲ್ಲಿ ಸುದೀಪ್ ಅವರು ದೊಡ್ಡ ಯಶಸ್ವಿ ಉದ್ಯಮಿಯಾಗಿದ್ದು ಅವರೊಂದು ಮಾರ್ಗದರ್ಶಕರಾಗಿ ಸ್ಫೂರ್ತಿಯಾಗಿ ಕಾಣಿಸಿಕೊಳ್ಳುತ್ತಾರೆ.

ಕರ್ನಾಟಕ ಮತ್ತು ಕನ್ನಡವನ್ನು ಪ್ರೀತಿಸುವವರು ರಾಜು ಕನ್ನಡ ಮೀಡಿಯಂನ್ನು ಇಷ್ಟಪಡುತ್ತಾರೆ. ಇದೊಂದು ಸಂಪೂರ್ಣ ಮನರಂಜನಾ ಚಿತ್ರವಾಗಿದ್ದು ಎಲ್ಲಾ ಭಾಷೆಗಳ ಮತ್ತು ಎಲ್ಲಾ ಪ್ರೇಕ್ಷಕರನ್ನು ತಲುಪಲಿದೆ ಎಂಬ ವಿಶ್ವಾಸ ನಿರ್ದೇಶಕ ನರೇಶ್ ಕುಮಾರ್ ಅವರದ್ದು.
Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Raju Kannada Medium, Sudeep, Naresh Kumar, ರಾಜು ಕನ್ನಡ ಮೀಡಿಯಂ, ಸುದೀಪ್, ನರೇಶ್ ಕುಮಾರ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS